Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, July 11, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 192/2016 ಕಲಂ. 279, 338, ಐಪಿಸಿ
ದಿನಾಂಕ:- 11-07-2016 ರಂದು ಬೆಳಗಿನ ಜಾವ 00:15 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮಾರುತಿ ತಂದೆ ಮೋಹನಸಾ ದಲಬಂಜನ್ ವಯಸ್ಸು: 28 ವರ್ಷ ಜಾತಿ: ಕ್ಷತ್ರೀಯ ಉ: ಮೆಕಾನಿಕ್ ಸಾ: 1ನೇ ವಾರ್ಡ ಶ್ರೀರಾಮನಗರ ತಾ: ಗಂಗಾವತಿ. ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ನಿನ್ನೆ ದಿನಾಂಕ: 10-07-2016 ರಂದು ರಾತ್ರಿ 8:15 ಗಂಟೆಯ ಸುಮಾರಿಗೆ ನಾನು ಶ್ರೀರಾಮನಗರದ ಬಸ್ ನಿಲ್ದಾಣದ ಹತ್ತಿರ ಇರುವಾಗ ಯಾರೋ ಒಬ್ಬರು ನಿಮ್ಮ ತಮ್ಮ ವಿನಾಯಕ ಮತ್ತು ಹುಲಿಗೇಶ ತಂದೆ ಪಂಪಣ್ಣ ವಯಸ್ಸು: 28 ವರ್ಷ ಇಬ್ಬರೂ ಮೋಟಾರ ಸೈಕಲ ಸಮೇತ ಈಶ್ವರ ಗುಡಿ ಹತ್ತಿರ ರಸ್ತೆಯ ಅಪಘಾತದಿಂದ ಗಾಯಗೊಂಡು ಬಿದ್ದಿರುತ್ತಾರೆ ಅಂತಾ ತಿಳಿಸಿದ್ದು ಕೂಡಲೇ ನಾನು ಮತ್ತು ನಮ್ಮ ಮಾವನಾದ ಮೋತಿಲಾಲ ತಂದೆ ಮುರಾರಿಸಾ ವಯಸ್ಸು: 40 ವರ್ಷ ಇಬ್ಬರೂ ಕೂಡಿ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ತಮ್ಮನಿಗೆ ತಲೆ ಬಲಗಡೆ ಹಣೆಯ ಹತ್ತಿರ ಮತ್ತು ಬಲಗಡೆ ಹುಬ್ಬಿನ ಹತ್ತಿರ ತೀವ್ರ ರಕ್ತ ಗಾಯವಾಗಿ ಸರಿಯಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ ನಂತರ ಹುಲಿಗೇಶ ಎಂಬಾತನಿಗೆ ಬಲಗೈ ಮುಂಗೈ ಹತ್ತಿರ ತೀವ್ರ ಒಳಪೆಟ್ಟಾಗಿ ಅಲ್ಲಲ್ಲಿ ತೆರಚಿದ ಗಾಯಗಳಾಗಿದ್ದು ಆತನಿಗೆ ವಿಚಾರಿಸಲು “ ರಾತ್ರಿ 8:00 ಗಂಟೆಯ ಸುಮಾರಿಗೆ ನಾನು ಮತ್ತು ವಿನಾಯಕ ಇಬ್ಬರೂ ಕೂಡಿ ಪೆಟ್ರೋಲ್ ಬಂಕದಿಂದ ಪೆಟ್ರೋಲ್ ಹಾಕಿಸಿಕೊಂಡು ಗಂಗಾವತಿ-ಸಿಂಧನೂರ ಮುಖ್ಯ ರಸ್ತೆಯಲ್ಲಿ ಶ್ರೀರಾಮನಗರದಲ್ಲಿ ಗಂಗಾವತಿ ಕಡೆಯಿಂದ ಸಿಂಧನೂರ ಕಡೆಗೆ ಅಂಗಡಿಗೆ ಹೋಗುತ್ತಿರುವಾಗ ವಿನಾಯಕ ಈತನು ತನ್ನ ಸುಜುಕಿ ಫಿರೋ ಮೋಟಾರ ಸೈಕಲ ನಂ: ಕೆ.ಎ-37/ಹೆಚ್-9873 ನೇದ್ದನ್ನು ಈಶ್ವರ ಗುಡಿಯ ಹತ್ತಿರ ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಹೋಗಿ ರಸ್ತೆಯ ತಿರುವಿನಲ್ಲಿ ವೇಗವನ್ನು ನಿಯಂತ್ರಿಸಲು ಆಗದೇ ರಸ್ತೆಯ ಪಕ್ಕ ಗಟಾರ ಹತ್ತಿರ ಸಿಮೆಂಟ್ ರಿಂಗ್ ಗೆ ಟಕ್ಕರು ಕೊಟ್ಟು ಅಪಘಾತ ಮಾಡಿದ್ದರಿಂದ ಇಬ್ಬರೂ ಗಾಯಗೊಂಡಿರುತ್ತೇವೆ ” ಅಂತಾ ತಿಳಿಸಿದನು. ಕೂಡಲೇ ಯಾರೋ ಒಬ್ಬರು 108 ವಾಹನಕ್ಕೆ ಪೋನ್ ಮಾಡಿದ್ದು ವಾಹನ ಬಂದ ಅದರಲ್ಲಿ ಹುಲಿಗೇಶ ಈತನನ್ನು ಚಿಕಿತ್ಸೆ ಕುರಿತು ಗಂಗಾವತಿಗೆ ಕಳುಹಿಸಿಕೊಟ್ಟಿದ್ದು ನನ್ನ ತಮ್ಮನನ್ನು ಓಮಿನಿ ವಾಹನದಲ್ಲಿ ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ. ನನ್ನ ತಮ್ಮನಿಗೆ ಚಿಕಿತ್ಸೆ ಮಾಡಿದ ವೈಧ್ಯರು ಸಿಟಿ ಸ್ಕ್ಯಾನ್ ಮಾಡಿಸಿಕೊಂಡು ಬರಲು ತಿಳಿಸಿದ್ದರಿಂದ ಸಿಟಿ ಸ್ಕ್ಯಾನ್ ಮಾಡಿಸಿಕೊಂಡು ಬಂದು ಈಗ ತಡವಾಗಿ ಠಾಣೆಗೆ ಬಂದು ಈ ದೂರನ್ನು ಸಲ್ಲಿಸಿರುತ್ತೇನೆ. ಆದರೆ ಹುಲಿಗೇಶ ಈತನು ಚಿಕಿತ್ಸೆಗಾಗಿ ಯಾವ ಆಸ್ಪತ್ರೆಗೆ ಹೋಗಿರುತ್ತಾರೆ ಅನ್ನುವದು ತಿಳಿದುಬಂದಿರುವದಿಲ್ಲಾ. ಈ ಅಪಘಾತಕ್ಕೆ ನನ್ನ ತಮ್ಮನಾದ ವಿನಾಯಕ ಈತನೇ ಕಾರಣರಾಗಿದ್ದು ಮಾನ್ಯರು ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ." ಅಂತಾ ಮುಂತಾಗಿ ನೀಡಿದ ಹೇಳಿಕೆ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಕನೂರು ಪೊಲೀಸ್ ಠಾಣೆ ಗುನ್ನೆ ನಂ. 75/2016 ಕಲಂ. ಮನುಷ್ಯ ಕಾಣೆ.
ದಿನಾಂಕ:10-07-2016 ರಂದು 6.00 ಪಿ.ಎಂ.ಕ್ಕೆ ಪಿರ್ಯಾದಿದಾರಳಾದ ಪರವಿನಭಾನು ಗಂಡ ಖಾಜಾಹುಸೇನ ಕಾತರಕಿ @ ಉಳ್ಳಾಗಡ್ಡಿ, ವಯಾ:20 ವರ್ಷ, ಜಾ:ಮುಸ್ಲಿಂ, ಉ:ಕೂಲಿಕೆಲಸ, ಸಾ:ಕುಕನೂರ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ತನ್ನ ಗಂಡನಾದ ಖಾಜಾಹುಸೇನ ತಂದೆ ಚಾಂದಭಾಷಾ ಕಾತರಕಿ @ ಉಳ್ಳಾಗಡ್ಡಿ, ವಯಾ 27, ಜಾ: ಮುಸ್ಲಿಂ, ಉ:ಡ್ರೈವರ್, ಸಾ: ವಿನೋಭನಗರ, ಕುಕನೂರ ಈತನು ದಿನಾಂಕ: 26-02-2014 ರಂದು ಬೆಳಿಗ್ಗೆ ತನ್ನನ್ನು ತನ್ನ ತವರು ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ವಾಪಾಸ್ಸು ಕುಕನೂರಿಗೆ ಬಂದು ತನ್ನ ಬಟ್ಟೆಗಳನ್ನು ತೆಗೆದುಕೊಂಡು 7-30 ಪಿ.ಎಂ.ಕ್ಕೆ ತನಗೆ ಪೋನ್ ಮಾಡಿ ಹೋಗುವ ಬಗ್ಗೆ ಮಾಹಿತಿ ತಿಳಿಸಿ ಮನೆಯಿಂದ ಹೋಗಿದ್ದು ವಾಪಾಸ ಇಲ್ಲಿಯವರೆಗೆ ಬಂದಿರುವದಿಲ್ಲಾ. ಕಾಣೆಯಾದ ತನ್ನ ಗಂಡನನ್ನು ತನ್ನ ತಂದೆ ಮತ್ತು ಸಂಬಂದಿಕರು ಸೇರಿ ತಮ್ಮ ಸಂಬಂಧಿಕರಿರುವ ಊರುಗಳಾದ ಕೊಪ್ಪಳ, ಗದಗ, ಹುಬ್ಬಳ್ಳಿ ಕಡೆಗೆ ಹುಡುಕಾಡಿದ್ದು, ಇಲ್ಲಿಯವರೆಗೆ ಸಿಗದೇ ಇದ್ದುದರಿಂದ ಹಾಗೂ ತನ್ನ ಗಂಡನ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿ ಸಿಗದೇ ಇದ್ದುದರಿಂದ, ಕಾಣೆಯಾದ ತನ್ನ ಗಂಡನನ್ನು ಹುಡುಕಿ ಪತ್ತೆ ಹಚ್ಚಿಕೊಡಲು ವಿನಂತಿ ಅಂತಾ ಮುಂತಾಗಿ ನೀಡಿದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಮುನಿರಾಬಾದ್ ಪೊಲೀಸ್ ಠಾಣೆ ಯು.ಡಿ.ಆರ್.16/2016 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ 10-07-2016 ರಂದು ಪಿರ್ಯಾಧಿದಾರರಾಧ ಶ್ರೀ ಸುದೀರ ತಂದೆ ದೇವಯ್ಯ ವಯ: 42 ವರ್ಷ ಜಾ: ವೈಶ್ಯ ಸಾ: ಹುಲಗಿ ಇವರು ಹುಲಿಗೆಮ್ಮ ದೇವಸ್ಥಾನದ ಹತ್ತಿರ ಸೆಕ್ಯೂರಿಟಿ ಕರ್ತವ್ಯ ನಿರ್ವಹಿಸುತ್ತಿರುವಾಗ ಹುಲಗೆಮ್ಮ ದೇವಸ್ಥಾನದ ಪಾರ್ಕಿಂಗ್ ಸ್ಥಳದಲ್ಲಿ ಒಬ್ಬ ಸುಮಾರು 45 ರಿಂದ 50 ವರ್ಷ ವಯಸ್ಸಿನ ಅಪರಿಚಿತ ಹೆಂಗಸು ಮೃತಪಟ್ಟಿದ್ದು ಸದರಿ ಹೆಂಗಸು ಹುಲಗಿಯಲ್ಲಿ ಬಿಕ್ಷೆ ಬೇಡುತ್ತಿದ್ದು ಸದರಿ ಹೆಂಗಸು ಯಾವುದೋ ರೋಗದಿಂದ ಬಳಲಿ ಮೃತಪಟ್ಟಿರುತ್ತಾಳೆ ಸದರಿಯವಳ ಸಾವಿನಲ್ಲಿ ಯಾವುದೇ ಸಂಶಯವಿರುವದಿಲ್ಲಾ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 197/2016 ಕಲಂ. 109 ಸಿ.ಆರ್.ಪಿ.ಸಿ.
ದಿನಾಂಕ 10-07-2016 ರಂದು ಸಂಜೆ 05-30 ಗಂಟೆಗೆ ಕುಷ್ಟಗಿ ಪಟ್ಟಣದ ತೆಗ್ಗಿನ ಓಣಿಯಲ್ಲಿ ಪಿ.ಎಸ್.ಐ. ಕುಷ್ಟಗಿರವರು ಪೆಟ್ರೋಲಿಂಗ್ ಕುರಿತು ತಮ್ಮೊಂದಿಗೆ ಹೆಚ್.ಸಿ-108, ಪಿಸಿ-109 ಇವರನ್ನು ಕರೆದುಕೊಂಡು ತಿರುಗಾಡುತ್ತಾ ತೆಗ್ಗಿನ ಓಣಿಯ ಹತ್ತಿರ ಬಂದಾಗ ಇಲ್ಲಿ ಒಬ್ಬ ವ್ಯಕ್ತಿ ಡಬ್ಬಿ ಅಂಗಡಿಗಳ ಹತ್ತಿರ ಕಡೆ ಕಡೆ ಅನುಮಾನಾಸ್ಪದವಾಗಿ ತಿರುಗಾಡುತ್ತಾ ತನ್ನ ಇರುವಿಕೆಯನ್ನು ಬದಲಾಯಿಸಿದಾಗ ಅವನನ್ನು ಕೂಡಲೇ ಹೋಗಿ ಹಿಡಿದುಕೊಂಡು ವಿಚಾರಿಸಿದಾಗ ಸಮರ್ಪಕವಾದ ಉತ್ತರವನ್ನು ಕೊಡದೇ ಇದ್ದು ಪುನಃ ಪುನಃ ವಿಚಾರಿಸಿದಾಗ ತನ್ನ ಹೆಸರು ಉಮೇಶ ತಂದೆ ಹುಳಚಪ್ಪ ಕಟ್ಟಿಮನಿ ವಯ: 38, ಜಾ: ಲಮಾಣಿ,, ಉ: ಒಕ್ಕಲುತನ ಸಾ: ಹುಣಸಿಹಾಳ ತಾ: ಯಲಬುರ್ಗಾ ಅಂತಾ ಹೇಳಿದ್ದು ಇಲ್ಲಿ ಬಂದ ಬಗ್ಗೆ ಸಮರ್ಪಕವಾದ ಉತ್ತರವನ್ನು ಕೊಡದೇ ಇದ್ದು, ಸದರಿಯವನು ಯಾವುದೇ ಸಂಜ್ಞೆಯ ಅಪರಾಧ ಮಾಡ ಬಹುದು ಅಂತಾ ಸಂಶಯ ಬಂದಿದ್ದು ಅಲ್ಲದೇ ಅವನನ್ನು ಹಾಗೆಯೇ ಬಿಟ್ಟಲ್ಲಿ ಸಂಜ್ಞೆಯ ಅಪರಾಧ ಮಾಡಬಹುದು ಅಂತಾ ಕಂಡು ಬಂದ ಮೇರೆಗೆ ಸದರಿಯವನನ್ನು ವಶಕ್ಕೆ ತಗೆದುಕೊಂಡು ಪ್ರಕರಣವನ್ನು ದಾಖಲು ಮಾಡಿ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
5] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್. 16/2016 ಕಲಂ. 174 ಸಿ.ಆರ್.ಪಿ.ಸಿ.

ದಿ:10-07-2016 ರಂದು ಮಧ್ಯಾಹ್ನ 12-15 ಗಂಟೆಗೆ ಫಿರ್ಯಾದಿದಾರರಾದ ಯಂಕಪ್ಪ ತಳವಾರ. ಸಾ: ಚಾಮಲಾಪುರ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ಫಿರ್ಯಾದಿಯ ಮಗಳು ಮೃತ ನೇತ್ರಾವತಿ ಇವರಿಗೆ ತಿಂಗಳ ಮುಟ್ಟಿನ ಕಾಲಕ್ಕೆ ಹೊಟ್ಟೆನೋವಿನ ಬಾಧೇ ಕಾಣಿಸಿಕೊಳ್ಳುತ್ತಿದ್ದರಿಂದ ಜಿಗುಪ್ಸೆಗೊಂಡು ದಿ:10-07-2016 ರಂದು ಬೆಳಿಗ್ಗೆ 08-00 ಗಂಟೆಗೆ ಚಾಮಲಾಪೂರ ಸೀಮಾದ ತಮ್ಮ ಹೊಲದಲ್ಲಿ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಳಾಗಿದ್ದರಿಂದ ಅವರನ್ನು ಇರಕಲ್ ಗಡಾ ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಸಿದಾಗ ಬೆಳಿಗ್ಗೆ 10-00 ಗಂಟೆಗೆ ಪರೀಕ್ಷಿಸಿದ ವೈದ್ಯರು ಈಗಾಗಲೇ ಮಾರ್ಗದಲ್ಲಿ  ಮೃತಪಟ್ಟಿರುವ ಬಗ್ಗೆ ಖಚಿತಪಡಿಸಿದ್ದು ಇರುತ್ತದೆ. ಮೃತಳ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008