Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, July 3, 2016

1] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 60/2016 ಕಲಂ: 87 Karnataka Police Act.
ದಿನಾಂಕ: 02-07-2016 ರಂದು ಮದ್ಯಾಹ್ನ 4-00 ಗಂಟೆಗೆ ಠಾಣೆಯ್ಲಲಿದ್ದಾಗ ಮೀಯಾಪೂರ ರೋಡ ಹತ್ತಿರ ಮುದಟಗಿ ಸೀಮಾದಲ್ಲಿಯ ಸಾರ್ವನಿಕ ಹಳ್ಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹೆಚ್.ಸಿ-11, 83, ಪಿ.ಸಿ-126, 208, 310, ರವರು ಹಾಗೂ ಇಬ್ಬರು ಪಂಚರಾದ 1] ಚಂದ್ರಶೇಖರ ತಂದೆ ಹನಮಪ್ಪ ಕೊಂಡೆಕಾರ 2] ಯಮನಪ್ಪ ತಂದೆ ಸಕ್ರಪ್ಪ ಅಗಸಿ ಇಬ್ಬರೂ ಸಾ: ಹೊಸಳ್ಳಿ ರವರೊಂದಿಗೆ ಸರಕಾರಿ ಜೀಪ ನಂ: ಕೆ.ಎ-37 ಜಿ-186 ನೇದ್ದರಲ್ಲಿ ಹೊರಟು ಮುಯಾಪೂರ ರಸ್ತೆಯ ಹತ್ತಿರ ಮುದಟಗಿ ಸೀಮಾದ ಹಳ್ಳದಲ್ಲಿ ಸಾರ್ವ ಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು, ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವರರನ್ನು ಪಂಚರ ಸಮಕ್ಷಮ ದಾಳಿ ಮಾಡಲು ಆರೋಪಿ ನಂ: 1 ರಿಂದ 4 ರವರು ಸಿಕ್ಕಿ ಬಿದಿದ್ದು ಆರೋಪಿ ನಂ: 5 ರಿಂದ 13 ರವರು ಓಡಿ ಹೋಗಿದ್ದು ಆರೋಫಿತರು ಇಸ್ಪೆಟ್ ಜೂಜಾಟಕ್ಕೆ ಉಪಯೋಗಿಸಿದ 52 ಇಸ್ಪಟ ಎಲೆಗಳು ಹಾಗೂ 7430/- ನಗದು ಹಣ ಹಾಗೂ ಒಂದು ಪ್ಲಾಸ್ಟಿಕ್ ಬರ್ಕಾ ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.
2] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ: 44/2016 ಕಲಂ: 87 Karnataka Police Act.
ದಿನಾಂಕ: 01.07.2016 ರಂದು ಸಾಯಂಕಾಲ 5:30 ಗಂಟೆ ಸುಮಾರಿಗೆ ತಾಳಕೇರಿ ಗ್ರಾಮದ ಎಸ್ಸಿ ಕಾಲೋನಿಯಲ್ಲಿರುವ ಸಮುದಾಯ ಭವನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಇಸ್ಪಟ್ ಜೂಜಾಟ ಆಡುತ್ತಿರುವ ಕಾಲಕ್ಕೆ ಪಿಎಸ್ಐ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ಮುತ್ತಿಗೆ ಹಾಕಿ ದಾಳಿ ಮಾಡಿ ಸಿಕ್ಕಿ ಬಿದ್ದ ಐದು ಜನ ಆರೋಪಿತರಿಂದ ಇಸ್ಪೇಟ್ ಜೂಜಾಟದ ಒಟ್ಟು ನಗದು ಹಣ 1950/-ರೂ ಹಾಗೂ ಇಸ್ಪೇಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ ಇಬ್ಬರೂ ಆರೋಪಿತರು ದಾಳಿ ಕಾಲಕ್ಕೆ ಓಡಿ ಹೊಗಿದ್ದು ಸಿಕ್ಕಿಬಿದ್ದ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ  
3] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 143/2016 ಕಲಂ: 279, 429 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿ:02-07-16 ರಂದು ಬೆಳಗಿನಜಾವ 02-00 ಗಂಟೆಯ ಸುಮಾರಿಗೆ ಹೊಸೂರ್ ಕ್ರಾಸ್ ಸಮೀಪದ ಹೊಸಪೇಟೆ-ಕುಷ್ಟಗಿ ರಸ್ತೆಯಲ್ಲಿ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಓಡಿಸಿಕೊಂಡು ಬಂದು ಫಿರ್ಯಾದಿದಾರರ ಆಡುಗಳಿಗೆ ಹಾಯಿಸಿ ಅಪಘಾತ ಮಾಡಿ ವಾಹನ ನಿಲ್ಲಿಸದೇ ಹೋಗಿದ್ದರಿಂದ ಫಿರ್ಯಾದಿದಾರರ 11 ಆಡುಗಳು ಮತ್ತು  02 ಆಡುಮರಿಗಳಿಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಮತ್ತು 03 ಆಡುಗಳಿಗೆ ತೀವ್ರ ಗಾಯಗಳಾಗಿದ್ದು ಇರುತ್ತದೆ. ಮೃತಪಟ್ಟ ಆಡು ಒಂದು 6000=00 ರೂ. ಹಾಗೂ ಮೃತ ಆಡುಮರಿ ಒಂದು 3000=00 ರೂ ಬೆಲೆಬಾಳುತ್ತದೆ. ಕಾರಣ ಅಪಘಾತ ಮಾಡಿ ನಿಲ್ಲಿಸದೇ ಹೋದ ಯಾವುದೋ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ಸಲ್ಲಿಸಿದ ದೂರಿನ ಮೇಲಿಂದ  ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
4] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 185/2016 ಕಲಂ: 143, 147, 148, 448, 354, 355, 323, 324, 504, 506 ಸಹಿತ 149 ಐ.ಪಿ.ಸಿ ಮತ್ತು 3(1)(10)(11) ಎಸ್.ಎಸಿ/ಎಸ್.ಟಿ. ಕಾಯ್ದೆ:.
ದಿನಾಂಕ: 02-07-2016 ರಂದು ಸಾಯಂಕಾಲ 6:00 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಲಾವಣ್ಯ ಹಾಗೂ ನನ್ನ ಗಂಡ ಮನೆಯಲ್ಲಿರುವಾಗ 1] ಕರಿಯಪ್ಪ ತಂದೆ ಈಶಪ್ಪ ಬಡಿಗೇರ, 2] ಮೌನೇಶ ತಂದೆ ಚಂದಪ್ಪ ಬಡಿಗೇರ 3] ಪಂಪಾಪತಿ ತಂದೆ ಮಾನಪ್ಪ ಬಡಿಗೇರ 4] ವಿಶ್ವ ತಂದೆ ಮಾನಪ್ಪ ಬಡಿಗೇರ, 5] ವೀರಭದ್ರಪ್ಪ ತಂದೆ ದೊಡ್ಡಪ್ಪ ಬಡಿಗೇರ, ಹಾಗೂ ಇತರರೂ ನಮ್ಮ ಮನೆಯ ಹತ್ತಿರ ಬಂದು ನನ್ನ ಗಂಡನಿಗೆ ಲೇ ವಡ್ಡ ಸೂಳೆ ಮಗನೇ ನಿಂದು ಬಹಾಳ ಆಗೈತಿ ನಿನ್ನ ಮತ್ತು ನಿನ್ನ ಮನೆಯನ್ನು ಬೆಂಕಿ ಹಚ್ಚಿ ಸುಟ್ಟು ಬಿಡುವೆನು. ನಿಮ್ಮ ಶಿವರಾಜ ತಂಗಡಗಿ ವಡ್ಡ ಇಷ್ಟು ದಿನ ಮಿನಿಷ್ಟ್ರ ಇದ್ದ ದಿಮಾಕು ಮಾಡುತ್ತಿದ್ದೀರಿ ಈಗ ವಡ್ಡ ಸೂಳೆ ಮಗ ಇಲ್ಲಾ ನಿಮ್ಮನ್ನು ಊರು ಬಿಟ್ಟು ಓಡಿಸುವೆವು.  ನಂತರ ನಮ್ಮ ಮನೆಗೆ ನುಗ್ಗಿ ಕಟ್ಟಿಗೆಯಿಂದ ನನ್ನ ಗಂಡನಿಗೆ ಹೊಡೆದರು. ಬಿಡಿಸಲು ಹೋದ ನನ್ನನ್ನು ನೂಕಿದರು. ಕರಿಯಪ್ಪನು ನನ್ನ ಮೇಲೆ ಕುಳಿತು ಬಂಗಾರ ತಾಳಿ ಕಿತ್ತಿದನು ಹಾಗೂ ಬಡೆದನು. ಮೌನೇಶನು ನನಗೆ ಚಪ್ಪಲಿಯಿಂದ ಹೊಡೆದನು. ಪಂಪಾಪತಿಯು ಕೂದಲು ಹಿಡಿದು ಬಡೆದು ಸೀರೆಯನ್ನು ಎಳೆದಾಡಿದನು. ನಿಮ್ಮನ್ನು ಉಳಿಸುವದಿಲ್ಲಾ ಪ್ರಾಣವನ್ನು ತಗೆಯುತ್ತೇವೆ ಎಂದು ಅವಾಚ್ಯವಾಗಿ ನಿಂದಿಸಿ ಪ್ರಾಣ ಬೆಧರಿಕೆ ಹಾಕಿದರು.  ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ. 
5] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 186/2016 ಕಲಂ: 143, 147, 448, 323, 324, 326, 354, 504, 506 ಸಹಿತ 149 ಐ.ಪಿ.ಸಿ:
ದಿನಾಂಕ: 02-07-2016 ರಂದು ಸಾಯಂಕಾಲ 5:45 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಅನ್ನಪೂರ್ಣ ಹಾಗೂ ನನ್ನ ಗಂಡ ಮನೆಯಲ್ಲಿರುವಾಗ  (1) ಯಮನಪ್ಪ ತಂದೆ ಯಲ್ಲಪ್ಪ (2) ಪಕ್ಷಮ್ಮ ಗಂಡ ಯಮನಪ್ಪ (3) ಪರಸಪ್ಪ ತಂದೆ ಯಮನಪ್ಪ (4) ರಾಮಣ್ಣ ತಂದೆ ಯಮನಪ್ಪ (5) ಲಕ್ಷ್ಮಣ ತಂದೆ ಯಮನಪ್ಪ (6) ಕಾಶಪ್ಪ ತಂದೆ ಯಮನಪ್ಪ (7) ಯಲ್ಲಪ್ಪ ತಂದೆ ಯಮನಪ್ಪ (8) ವಿರುಪಣ್ಣ ತಂದೆ ಯಮನಪ್ಪ (9) ಹನುಮಂತ ತಂದೆ ಭೀಮಪ್ಪ (10) ಹನುಮಂತ ತಂದೆ ಗುರಪ್ಪ (11) ನಾಗಮ್ಮ ಗಂಡ ಪರಸಪ್ಪ (12) ಲಾವಣ್ಯ ಗಂಡ ಲಕ್ಷ್ಮಣ (13) ಲಕ್ಷ್ಮೀ ಗಂಡ ರಾಮಣ್ಣ (14) ಕಾಶಮ್ಮ ಗಂಡ ಯಲ್ಲಪ್ಪ ಹಾಗೂ ಇತರರು ಜಾತಿಯಿಂದ ವಡ್ಡರು ಇದ್ದು ಎಲ್ಲರೂ ಕೂಡಿಕೊಂಡು  ಏಕಾ ಏಕಿ ಬಂದು ಲೇ ಕಂಬಾರ ಸೂಳೇ ಮಕ್ಕಳೇ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲಾ ಏಕೆಂದರೆ ನಾವು ಜಾತಿಯಿಂದ ಎಸ್.ಸಿ. ಜನಾಂಗದವರಿರುತ್ತೇವೆ, ಆದ್ದರಿಂದ ನಿಮ್ಮ ಮೇಲೆ ಅಟ್ರಾಸಿಟಿ ಕೇಸ್ ಮಾಡಿ ನಿಮ್ಮನ್ನು ಒಳಗೆ ಹಾಕುತ್ತೇವೆ ಸೂಳೇಮಕ್ಕಳ ಎಂದು ಬೈದಾಡಿ ಜೀವದ ಬೆದರಿಕೆ ಹಾಕಿ ಕಬ್ಬಿಣದ ರಾಡ್ ಹಾಗೂ ಕಟ್ಟಿಗೆಗಳಿಂದ ನನ್ನ ಗಂಡ ವೀರಭದ್ರಪ್ಪನಿಗೆ ಹಾಗೂ ಪಂಪಾಪತಿ ಮತ್ತು ಕರಿಯಪ್ಪನಿಗೆ ಬಡಿದು ನನ್ನ ಕೊರಳಲಿದ್ದ ತಾಳಿ ಮತ್ತು ನೆಕ್ ಲೇಸ ಹಾಗೂ ಪಂಪಾಪತಿಯ ಸರ ಕಿತ್ತು ಹಾಕಿರುತ್ತಾರೆ. ಲಾವಣ್ಯಳು ಕಣ್ಣಿಗೆ ಕಾರಪುಡಿ ಎರೆಚಿರುತ್ತಾಳೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
6] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 130/2016 ಕಲಂ: 376 ಸಹಿತ 34 ಐ.ಪಿ.ಸಿ ಮತ್ತು 4, 6 ಪೊಕ್ಸೋ ಕಾಯ್ದೆ 2012 ಮತ್ತು 3(1)(10)(11) ಎಸ್.ಎಸಿ./ಎಸ್.ಟಿ. ಕಾಯ್ದೆ:.


ದಿನಾಂಕ: 02-07-2016 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ಹುಲಗಿಯ ದೇವಸ್ಥಾನದ ಹತ್ತಿರ ಇರುವ ತೊಟ್ಟಿಲು ಆಟದ ಹತ್ತಿರ ರೈಲ್ವೆ ಹಳಿ ಪಕ್ಕದಲ್ಲಿ ಪ್ಲಾಸ್ಟೀಕ್ ಬಾಟಲ್ ಆರಿಸುತ್ತಿದ್ದ ಪಿರ್ಯಾದಿಗೆ ಆರೋಪಿ ಶಬ್ಬೀರ ಮತ್ತು ಇನ್ನೊಬ್ಬನು ಇಬ್ಬರೂ ಸೇರಿ ಬಂದು ದುಡ್ಡು ಕೊಡುತ್ತೇನೆಂದು ಪುಸಲಾಯಿಸಿ ಕ್ರೀಮ್ ಚಾಕಲೇಟ ಕೊಡಿಸಿ ಒಂದು ಕಬ್ಬಿನ ಗದ್ದೆಯಲ್ಲಿ ಕರೆದುಕೊಂಡು ಹೋಗಿ ಆರೋಪಿ ಶಬ್ಬೀರ ಇವನು ಒತ್ತಾಯಪೂರ್ವಕವಾಗಿ ಅವಳ ಬಟ್ಟೆಯನ್ನು ಬಿಚ್ಚಿ ಸಂಭೋಗ ಮಾಡಿರುತ್ತಾನೆ.  ಕಾರಣ ನನ್ನ ಮೇಲೆ ಒತ್ತಾಯಪೂರ್ವಕವಾಗಿ ಸಂಭೋಗ ಮಾಡಿದ ಶಬ್ಬೀರ ಮತ್ತು ಆತನೊಂದಿಗೆ ಬಂದಿದ್ದ ಇನ್ನೊಬ್ಬನು ಇವರು ಇಬ್ಬರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಮುಂತಾಗಿದ್ದ ಪಿರ್ಯಾಧಿ ಸಾರಾಂಶದ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008