1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ.
208/2016 ಕಲಂ: 87 Karnatka Police Act. 
ದಿನಾಂಕ 21-07-2016 ರಂದು ಸಂಜೆ 6-45  ಗಂಟೆಗೆ ಪಿ.ಎಸ್.ಐ ಕುಷ್ಠಗಿ ಪೊಲೀಸ ಠಾಣೆರವರು ಠಾಣಾ
ವ್ಯಾಪ್ತಿಯ ನೆರೇಬೆಂಚಿ ಗ್ರಾಮದ ಕೆಂಚಮ್ಮನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರಬಾಹರ
ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಪಿ.ಸಿ-105,109,117,161,167,407,430,24,393
ಹಾಗೂ ನಮ್ಮ ಸರಕಾರಿ ಜೀಪ ನಂ: ಕೆ.ಎ-37-ಜಿ-292 ನೇದ್ದರಲ್ಲಿ ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್
ಮಾಡಿ 1] ರಾಮಣ್ಣ ತಂದೆ ಮರಿಯಪ್ಪ ಕುರಿ ವಯಾ:
35 ವರ್ಷ ಜಾತಿ:
ಕುರುಬರ ಉ:
ಒಕ್ಕಲುತನ ಸಾ:
ನೆರೇಬೆಂಚಿ 
2] ಈರಪ್ಪ ತಂದೆ ಫಕೀರಪ್ಪ ಹರಿಜನ ವಯಾ:
43 ವರ್ಷ ಜಾತಿ:
ಮಾದಿಗ ಉ:
ಕೂಲಿಕೆಲಸ ಸಾ:
ನೆರೇಬೆಂಚಿ  3] ನರೇಗಲ್ಲಪ್ಪ ತಂದೆ ಹನಮಪ್ಪ ಮೇಟಿ ವಯಾ:
32 ವರ್ಷ ಜಾತಿ:
ಕುರುಬರ ಉ:
ಒಕ್ಕಲುತನ ಸಾ:
ನೆರೇಬೆಂಚಿ 4]
ವೀರಭದ್ರಯ್ಯ ತಂದೆ ಶಿವಲಿಂಗಯ್ಯ ಗಣಾಚಾರಿ ವಯಾ: 34 ವರ್ಷ ಜಾತಿ: ಜಂಗಮಉ:ಒಕ್ಕಲುತನ ಸಾ: ನೆರೇಬೆಂಚಿ  5] ಯಮನಪ್ಪ ತಂದೆ
ಹನಮಪ್ಪ ಮಾದರ ವಯ: 70 ವರ್ಷ ಜಾ: ಮಾದರ ಉ: ಒಕ್ಕಲುತನ ಸಾ: ನೆರೇಬೆಂಚಿ  6] ಹನಮಪ್ಪ ತಂದೆ ಮಲ್ಲಪ್ಪ ಹಿರೇಬಂಡಿಹಾಳ ವಯ: 50 ಜಾ: ಕುರುಬರ ಉ: ಕೂಲಿ, ಸಾ: ನೆರೇಬೆಂಚಿ  7] ಚಂದುಸಾಬ ತಂದೆ
ಯಮನೂರಸಾಬ ನದಾಫ್ ವಯ: 40 ವರ್ಷ, ಜಾ: ಮುಸ್ಲಿಂ, ಉ: ಕೂಲಿ ಸಾ: ನೆರೇಬೆಂಚಿ  8] ಕಾಶೀಮಪ್ಪ ತಂದೆ ಯಮನಪ್ಪ ಮಾದರ ವಯ:
38 ವರ್ಷ,
ಜಾ:
ಹರಿಜನ ಉ:
ಕೂಲಿ ಸಾ:
ನೆರೇಬೆಂಚಿ 08 ಜನ ಆರೋಪಿತರು ಸಿಕ್ಕಿದ್ದು ಇರುತ್ತದೆ.
ಸಿಕ್ಕ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು
ಹಣ 3330=00 ರೂ, ಹಾಗೂ 52 ಇಸ್ಪೆಟ್ ಎಲೆಗಳು
ಹಾಗೂ ಒಂದು ಹಳೆಯ ನ್ಯೂಸ್ ಪೇಪರ ಇವುಗಳನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು
ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ. 
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ.
79/2016 ಕಲಂ: 279, 304(ಎ) ಐ.ಪಿ.ಸಿ:.
ದಿನಾಂಕ:21-07-2016 ರಂದು 6-30ಎಎಂಕ್ಕೆ ಪಿರ್ಯಾದಿದಾರ ಠಾಣೆಗೆ ಹಾಜರಾಗಿ ಒಂದು ಗಣಕೀಕರಣ
ಮಾಡಿದ ಪಿರ್ಯಾದಿಯನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ,  ದಿನಾಂಕ:20-07-2016 ರಂದು
ಮೃತ ಮೌನೇಶ್ವರ ತಂದೆ ಶಂಕ್ರಪ್ಪ ಅಕ್ಕಸಾಲಿಗ, ವ:40ವರ್ಷ, ಜಾ:ಪಂಚಾಳ, ಉ:ಎನ್.ಈ.ಕೆ.ಎಸ್.ಅರ್.ಟಿ.ಸಿ.
ಚಾಲಕ/ನಿರ್ವಾಹಕ, ಕೊಪ್ಪಳ ಡಿಪೋ ಸಾ:ಅರಹುಣಸಿ ಹಾ:ವ: ಭಾಗ್ಯನಗರ (ಮೋ.ಸೈ. ನಂ:ಕೆಎ-37 ಕ್ಯೂ-1257
ರ ಸವಾರ) ಈತನು ತನ್ನ ಸ್ವಂತ ಊರಿನಲ್ಲಿ ಜಾತ್ರೆ ಇದ್ದುದರಿಂದ ಜಾತ್ರೆಗೆ ಹೋಗಿ, ಜಾತ್ರೆ ಮುಗಿಸಿಕೊಂಡು
ವಾಪಸ್ ಕೊಪ್ಪಳಕ್ಕೆ ಹೋಗುವ ಕುರಿತು ಮೋಟಾರ್ ಸೈಕಲ್ ನಂ:ಕೆಎ-37 ಕ್ಯೂ-1257 ನೇದ್ದನ್ನು ತೆಗೆದುಕೊಂಡು
ರಾತ್ರಿ 8-10 ಗಂಟೆಯ ಸುಮಾರು ಕುಕನೂರ-ಕೊಪ್ಪಳ ರಸ್ತೆಯ ಮೇಲೆ ಮಸಬಹಂಚಿನಾಳ ಸೀಮಾದ ಹಿರೇಹಳ್ಳದ ಹತ್ತಿರ
ಹೊರಟಾಗ ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನ್ನು ಅತೀವೇಗವಾಗಿ ಮತ್ತು ರಸ್ತೆಯ ರಿಪೇರಿ ಕುರಿತು
ಹಾಕಿದ ಎಚ್ಚರಿಕೆಯ ಫಲಕ, ಸಂಜ್ಞೆ ಗಳನ್ನು ಲಕ್ಷಿಸದೇ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ,
ಸಿಮೆಂಟ್ ಪೈಪ್ ಗೆ ಟಕ್ಕರ್ ಕೊಟ್ಟು ಭಾರೀಗಾಯಗೊಂಡಿದ್ದು, ಚಿಕಿತ್ಸೆ ಕುರಿತು ಕುಕನೂರ ಆಸ್ಪತ್ರೆಯಿಂದ
ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ
12-10 ಗಂಟೆಗೆ ಮೃತಪಟ್ಟಿರುತ್ತಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 118/2016 ಕಲಂ: 379 ಐ.ಪಿ.ಸಿ.
ಶ್ರೀ ಸೈಯದ್ ನೂರುದ್ದೀನ ಅಲ್ವಿ ಸಾ: ಸಿ.ಬಿ,ನಗರ ಕೊಪ್ಪಳ ರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೆನಂದರೆ, ದಿನಾಂ-27.03.2016 ರಂದು 11 ಎ.ಎಂಕ್ಕೆ ಕೊಪ್ಪಳದ ಜೆ.ಪಿ
ಮಾರುಕಟ್ಟೆಯಲ್ಲಿ  ಯಾರೋ ಕಳ್ಳರು  ನನ್ನ ಪ್ಯಾಂಟ ಜೇಬಿನಲ್ಲಿದ್ದ ಲಿಂಗಸಗೂರ
ಎಸ್.ಬಿ.ಹೆಚ್ ಶಾಖೆಯ ಎ.ಟಿ.ಎಂ ಕಾರ್ಡ , ವೋಟರ್ ಐಟಿ, ಆಧಾರ ಕಾರ್ಡ, 4 ಪಾಸ್ ಪೋರ್ಟ ಸೈಜಿನ ಫೋಟೋ ಹಾಗೂ 4000-00 ರೂ ನಗದು ಹಣ ಇದ್ದ ಪರ್ಸನ್ನು ಕಳ್ಳತನ
ಮಾಡಿದ್ದು ನಂತರ ಸದರಿ ಅಪರಿಚಿತ ಕಳ್ಳರು ಕಳೆದ ನನ್ನ ಲಿಂಗಸಗೂರ ಎಸ್.ಬಿ.ಹೆಚ್ ಶಾಖೆಯ ಎ.ಟಿ.ಎಂ
ಕಾರ್ಡ ಬಳಸಿ ದಿ-28.03.2016 ರಂದು ಕೊಪ್ಪಳ ತಾಲೂಕಿನ ಗಿಣಗೇರಾದಲ್ಲಿಯ ಎ.ಟಿ.ಎಂ ದಿಂದ 
ನಿಯಮಿತವಾಗಿ ಆರು ಸಲ ಒಟ್ಟು 40031-00 ರೂ ಹಣವನ್ನು ಡ್ರಾ ಮಾಡಿಕೊಂಡಿದ್ದು ಕಾರಣ ಕಳ್ಳರನ್ನು
ಪತ್ತೆ ಮಾಡಿ ಕಳವಾದ ನನ್ನ ನಗದು ಹಣ ಹಾಗೂ ವಸ್ತುಗಳನ್ನು ನನಗೆ ಮರಳಿಸಲು ತೀವ್ರ ಕಾನೂನು ಕ್ರಮ
ಕೈಗೊಳ್ಳಲು ಕೋರಿದ ವಗೈರಾ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 
4] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ.
160/2016 ಕಲಂ: 420, 465 ಐ.ಪಿ.ಸಿ. 
ದಿನಾಂಕ
:21-07-2016 ರಂದು  ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ಫಿರ್ಯಾದಿದಾರಳಾದ ಶ್ರೀಮತಿ  ಗೌರಮ್ಮ ಗಂಡ  ದಿ: ಜಂಬಣ್ಣ ಮದ್ದಿಕೇರಿ ವಯಾ-70 ವರ್ಷ ಜಾ-ವೈಶ್ಯ ಉ- ಮನೆಗೆಲಸ ಸಾ-ಚಳ್ಳೂರ ಹಾ.ವ ಬರಗೂರ್ ತಾ-ಗಂಗಾವತಿ.ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ,  ನನ್ನ ಖಾಸ್ ಮಗನಾದ ವೆಂಕಟೇಶ ತಂದಿ  ದಿ: ಜಂಬಣ್ಣ ಮದ್ದಿಕೇರಿ  ಈತನು ಗಂಗಾವತಿ ತಾಲೂಕ ಕಾರಟಗಿ ಹೊಬಳಿಯ ಚೆಳ್ಳೂರ ಗ್ರಾಮದ ವ್ಯಾಪ್ತಿಯಲ್ಲ ಬರುವ  ತರಿ ಭೂಮಿ ಸರ್ವೆ ನಂ- 25/*/1 ಇದರ ವಿಸ್ತೀರ್ಣ  1 ಎಕರೆ  26 ಗುಂಟೆ  ದ್ದು  ಸದರಿ ಜಮೀನನ್ನು ನನ್ನ  ಮಾಹಿತಿಗೆ ತರದೆ  ಸಂಭಂಪಟ್ಟ ತಹಸಿಲ್ ಕಾರ್ಯಾಲಯದಲ್ಲಿ  ನನ್ನ ಸಮ್ಮತಿ ಇಲ್ಲದೆ  ನನ್ನಿಂದ ಯಾವುದೇ ವರ್ಗಾವಣೆ ಪತ್ರ ಪಡೆಯದೆ  ಸದರಿ ಭೂಮಿಯನ್ನು  ತನ್ನ ಹೆಸರಿಗೆ ವರ್ಗಾವಣೆ ಮಾಡಿಸಿಕೊಂಡಿದ್ದು  ಸದರಿ ಭೂಮಿ ನನ್ನ ಕಬ್ಜಾ ಮತ್ತು ವಹಿವಾಟಿನಲ್ಲಿರುತ್ತದೆ.  ಸದರಿ ಭೂಮಿ ನನ್ನ ತವರು ಮನೆಯ ಕಡೆಯಿಂದ  ಬಂದಿದ್ದು ಇರುತ್ತದೆ.  ನನ್ನ ಗಮನಕ್ಕೆ ತರದೆ ದಿನಾಂಕ : 29-03-2016 ರಂದು  ನನ್ನ ಮಗನಾದ ವೆಂಕಟೇಶ ತನು  ರೂ-100 ಮುಖಬೆಲೆಯ ಇ ಸ್ಟಾಂಪ್ ಮೇಲೆ  ಸದರಿ ಭೂಮಿಯ ಖೊಟ್ಟಿ ಹಕ್ಕು ಬಿಟ್ಟು ಕೊಟ್ಟ  ಪ್ರಮಾಣ ಪತ್ರವನ್ನು  ಸೃಷ್ಟಿಸಿ  ಸದರಿ ಹಕ್ಕು ಬಿಟ್ಟುಕೊಟ್ಟ ಪ್ರಮಾಣ ಪತ್ರಕ್ಕೆ  ನನ್ನ ಸಹಿಯನ್ನು ತಾನೇ ಸ್ವತ: ಮಾಡಿ  ಅದಕ್ಕೆ  1) ಗಾದಿಲಿಂಗಪ್ಪ 2) ಬಸವರಾಜ ಸಾ- ಚಳ್ಳೂರ ಇವರುಗಳನ್ನು ಸಾಕ್ಷಿದಾರರನ್ನಾಗಿ ಸಹಿ ಮಾಡಿಸಿದ್ದು ಅಲ್ಲದೆ  ಸದರಿ ಹಕ್ಕು ಬಿಟ್ಟಕೊಟ್ಟ  ಪ್ರಮಾಣ ಪತ್ರವನ್ನು  ಗಂಗಾವತಿಯಲ್ಲಿ ನೊಟರಿ ಮಾಡಿಸಿ ಚಳ್ಳೂರ ಗ್ರಾಮದ ಗ್ರಾಮಲೆಕ್ಕಾಧೀಕಾರಿಗಳಿಗೆ ಸುಳ್ಳು ಮಾಹಿತಿ ಕೊಟ್ಟು ಸದರಿ ಭೂಮಿಯನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿಸಿಕೊಂಟಡುದ್ದು ಅಲ್ಲದೆ  ಪುನ:  ಅದನ್ನು ದಿ:7-6-2016 ರಂದು ನನ್ನ ಗಮನಕ್ಕೆ ತರದೆ  ಶ್ರೀ ರಾಮರಾವ ತಂದಿ ವೇದವ್ಯಾಸರಾವ್  ವಯಾ- 47 ವರ್ಷ ಜಾ- ಬ್ರಾಹ್ಮಣ ಉ- ಒಕ್ಕಲುತನ ಸಾ- ಜೂರಟಗಿ ತಾ- ಗಂಗಾವತಿ  ಇತನಿಗೆ  3,00,000=00 ರೂ.ಗಳಿಗೆ  ಮಾರಾಟ ಮಾಡಿ  ಅದೇ ದಿನದಂದು ಮುಂಗಡವಾಗಿ  2,75,000=00 ರೂ.ಗಳನ್ನು ಪಡೆದುಕೊಂಡು  ಸದರಿ ಭೂಮಿಯ ಖರೀದಿ ಖರಾರು ಪತ್ರವನ್ನು ಮಾಡಿಸಿ  ಅದನ್ನು  ಮಾನ್ಯ ಉಪ ನೊಂದಣಾಧೀಕಾರಿಗಳು ಕಾರ್ಯಾಲಯ  ಕಾರಟಗಿ ರವರಲ್ಲಿ  ನೊಂದಣಿ ಸಂಖ್ಯೆ : 1052/16 -17  ನೇದ್ದರಲ್ಲಿ  ಮಾರಾಟ ಮಾಡಿ  ಖರೀದಿ ಖರಾರು ಪತ್ರ ಮಾಡಿಸಿಕೊಟ್ಟ ವಿಷಯ  ನಂತರ ನನಗೆ ತಿಳಿದಿದ್ದು ಇರುತ್ತದೆ.  ಕಾರಣ ಸದರ್ ನನ್ನ ಮಗನು ನನ್ನ ಮಾಹಿತಿಗೆ ತರದೆ ನನಗೆ ತಿಳಿಸದೆ  ಖೊಟ್ಟಿ ಹಕ್ಕುಬಿಟ್ಟುಕೊಟ್ಟ ಪ್ರಮಾಣಪತ್ರಕ್ಕೆ ಸಾಕ್ಷಿದಾರರಾಗಿ ಸಹಿ ಮಾಡಿದ  ಗಾದಿಲಿಂಗಪ್ಪ ಹಾಗೂ ಬಸವರಾಜ  ಮತ್ತು ಪಂಚರ ಸಾಕ್ಷಿಯಾಗಿ  ಖೊಟ್ಟಿ ಹೇಳಿಕೆ ಕೊಟ್ಟು ಸಹಿ ಮಾಡಿದ  ಲಿಂಗಪ್ಪ, ಬಸಪ್ಪ ವಡ್ಡರ, ಡಿ. ಯಂಕಪ್ಪ  ಸಾ- ಚಳ್ಳೂರ  ಹಾಗೂ ನನ್ನ ಹೇಳಿಕೆ ಪಡೆಯದೆ ನನಗೆ ಮಾಹಿತಿ ನೀಡದೆ  ಒಂದು ನೋಟಿಸನ್ನು ಕೊಡದೆ ಖೊಟ್ಟಿ ಪಂಚನಾಮೆಯನ್ನು ಮಾಡಿ ಸಂಭಂದಪಟ್ಟ ತಹಸಿಲ್ ಕಾರ್ಯಾಲಯಕ್ಕೆ ಖೊಟ್ಟಿ ವರದಿಯನ್ನು  ಸಲ್ಲಿಸಿದ ಗ್ರಾಮಲೆಕ್ಕಾಧೀಕಾರಿಯಾದ  ಶ್ರೀ  ಗಿರಿಸ್ವಾಮಿ  ಇವರುಗಳ ವಿರುದ್ದ  ಸೂಕ್ತ ಕಾನೂನು ಕ್ರಮ  ಜರುಗಿಸಿ ನನಗೆ ನ್ಯಾಯ ಒದಗಿಸಿ ಕೊಡಬೇಕಾಗಿ ವಿನಂತಿ. ನಾನು  ದಿನಾಂಕ : 30-06-2016 ರಂದು  ನನ್ನ ಮೊಮ್ಮಗನಾದ ಗುರುರಾಜ ತಂದಿ ಮರಿಸ್ವಾಮಿ  ಸಾ-ಬರಗೂರ ತನೊಂದಿಗೆ  ಸಂಭಂದಪಟ್ಟ  ನಾಡ್ ತಹಸಿಲ್ ಕಾರ್ಯಾಲಯ ಕಾರಟಗಿ ಇವರಿಗೆ ಹೊಗಿ ನಾನು ಪಹಣಿ ಪತ್ರಿಕೆಯನ್ನು ತೆಗೆಸಲು ಹೊಗಿದ್ದಾಗ್ಗೆ ಈ ವಿಷಯ ಗೊತ್ತಾಗಿ ಇಂದು ತಡವಾಗಿ ತಮ್ಮಲ್ಲಿಗೆ ಬಂದು ಫಿರ್ಯಾದಿ ಕೊಟ್ಟಿರುತ್ತೇನೆ ಅಂತಾ
ಮುಂತಾಗಿದ್ದು ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
5] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 143/2016 ಕಲಂ: ಮನುಷ್ಯ ಕಾಣೆ. 
ದಿನಾಂಕ 21-07-2016
ರಂದು 13-30 ಗಂಟೆಗೆ ವಾಸುದೇವ ತಂದೆ ಜಂಬಣ್ಣ ಅದಾಪೂರ, ವಯ 41 ವರ್ಷ ಜಾ:
ಉಪ್ಪಾರ, ಉ: ವ್ಯಾಪಾರ, ಸಾ: ಚರ್ಚ ಹಿಂಭಾಗ ಗಂಜ್ ಏರಿಯಾ ಗಂಗಾವತಿ ಇವರು
ಠಾಣೆಗೆ ಹಾಜರಾಗಿ ಫಿರ್ಯಾದಿಯನ್ನು ಹಾಜರು ಪಡಿಸಿದ್ದು ಸದರಿ ದೂರಿನ ಸಾರಾಂಶವೆನೆಂದರೆ, ಫಿರ್ಯಾದಿದಾರರ
ತಮ್ಮನಾದ ವೆಂಕಟೇಶ ವಯಸ್ಸು 39 ವರ್ಷ ಇತನು ಮಾನಸಿಕವಾಗಿ ಅಸ್ವಸ್ಥನಾಗಿದ್ದು ದಿನಾಂಕ
14-03-2016 ರಂದು ಮಧ್ಯಾಹ್ನ 3-00 ಗಂಟೆಗೆ ಪಂಪಾನಗರದಲ್ಲಿರುವ ತಮ್ಮ ಮನೆಯಿಂದ ಹೊರಗಡೆಗೆ ಹೋದವನು
ಪುನ: ವಾಪಸ್ ಮನೆಗೆ ಬರದೆ ಕಾಣೆಯಾಗಿರುತ್ತಾನೆ.  ಕಾಣೆಯಾಗಿರುವ ವೆಂಕಟೇಶ ಎತ್ತರ 5-2 ಅಡಿ, ಸಾದಾರಣ ಮೈಕಟ್ಟು, ಗೋದಿ ಮೈಬಣ್ಣ, ಉದ್ದನೆಯ ಮುಖ ಕನ್ನಡ, ಹಿಂದಿ, ಭಾಷೆ ಮಾತನಾಡುತ್ತಾನೆ, ಮನೆಯಿಂದ ಹೋಗುವಾಗ ನೀಲಿ ಪ್ಯಾಂಟ, ಬೂದು ಬಣ್ಣದ ಶರ್ಟ,
ಧರಿಸಿದ್ದು ಇರುತ್ತದೆ. ಹೋಟ್ಟೆಯ ಮೇಲೆ ಸುಟ್ಟಿರುವ ಕಲೆ ಗುರುತುಗಳು ಇರುತ್ತವೆ. ಇತನನ್ನು
ಪತ್ತೆ ಮಾಡಿಕೊಡಬೇಕೆಂದು ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು
ಕೈಕೊಂಡಿದ್ದು ಇರುತ್ತದೆ.  
 
 
 
0 comments:
Post a Comment