Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, July 24, 2016

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 160/2016 ಕಲಂ: 87 Karnatka Police Act.
ದಿ:23.07.2016 ರಂದು ಸಂಜೆ 05.45 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಅರಸಿನಕೇರಿ ಗ್ರಾಮದ ಹೊರವಲಯದಲ್ಲಿರುವ ಹನಮಂತ ದೇವರ ಗುಂಡಿನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 07 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಮಾನ್ಯ ಡಿ.ಎಸ್.ಪಿ ಕೊಪ್ಪಳ ಸಾಹೇಬರು ಮತ್ತು ಸಿ.ಪಿ. ಕೊಪ್ಪ ಗ್ರಾಮೀಣ ವೃತ್ತ ಸಾಹೇಬರ ನೇತೃತ್ವದಲ್ಲಿ ಪಿ.ಎಸ್,ಐ ರವರು ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ 5,600=00 ರೂ, ಮತ್ತು 52 ಇಸ್ಪೇಟ್ ಎಲೆಗಳನ್ನು ಹಾಗೂ ಒಂದು ಹಾಳೆಯ ಚೀಲ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು 07 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ.68/2016 ಕಲಂ : 341, 506, 353 .ಪಿ.ಸಿ
ದಿನಾಂಕ: 25-07-2016 ರಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಅನಿರ್ದೀಷ್ಟ ಮುಷ್ಕರವನ್ನು ಹಮ್ಮಿಕೊಂಡಿದ್ದು ಆ ಹಿನ್ನೆಲೆಯಲ್ಲಿ ದಿನಾಂಕ: 23-07-2016 ರಂದು ಪಿರ್ಯಾದಿದಾರರು ತಮಗೆ ಹಂಚಿಕೆಯಾದ ಕಾರ ನಂ: ಕೆ.-37/ಎಪ್ -513 ನೇದ್ದನ್ನು ತೆಗೆದುಕೊಂಡು ಚಾಲಕನಾದ ಮಂಜುನಾಥ ಶಂಕಿನ ಇವರೊಂದಿಗೆ ಯಲಬುರ್ಗಾಕ್ಕೆ ಬಂದು ತಮ್ಮ ಘಟಕದ ಸಿಬ್ಬಂದಿಯವರಿಗೆ ಮುಷ್ಕರವನ್ನು ಕೈ ಬಿಡುವಂತೆ ತಿಳುವಳಿಕೆಯನ್ನು ನೀಡಿ ನಂತರ ಪಿರ್ಯಾದಿದಾರರು ತಮ್ಮ ಕಾರಿನಲ್ಲಿ ಚಾಲಕನೊಂದಿಗೆ ಕುಷ್ಟಗಿ ಘಟಕಕ್ಕೆ ಯಲಬುರ್ಗಾದಿಂದ ಕುಷ್ಟಗಿಗೆ ಯಲಬುರ್ಗಾ-ಕುದ್ರಿಕೋಟಗಿ ರಸ್ತೆಯ ಮೇಲೆ ಕುದ್ರಿಕೊಟಗಿ ಗ್ರಾಮದ ಕಡೆಗೆ ಯಲಬುರ್ಗಾ ಪಟ್ಟಣದ ಹೊರವಲಯದಲ್ಲಿರುವ ಆಶ್ರಯ ಕಾಲೋನಿ ಹತ್ತಿರ ಸಂಜೆ 7-20 ಗಂಟೆಯ ಸುಮಾರಿಗೆ ಹೋಗುತ್ತಿದ್ದಾಗ ಆರೋಪಿತನು ಮೋಟಾರ ಸೈಕಲ ಮೇಲೆ ಬಂದು ಪಿರ್ಯಾದಿದಾರರ ಕಾರನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಪಿರ್ಯಾದಿದಾರರಿಗೆ `` ನೀನು ನನ್ನನ್ನು ಸೇವೆಯಿಂದ ವಜಾ ಮಾಡಿರುತ್ತೀ ನೀನು ಈಗ ಸಿಕ್ಕಿರುತ್ತೀ ನಿನ್ನನ್ನು ಜೀವ ಸಹಿತ ಬಿಡುವದಿಲ್ಲ’’. ಅಂತಾ ಜೀವದ ಭಯವನ್ನು ಹಾಕಿ ಪಿರ್ಯಾದಿರರಿಗೆ ಕರ್ತವ್ಯಕ್ಕೆ ಅಡ್ಡಿಯನ್ನುಂಟು ಮಾಡಿದ್ದು ಇರುತ್ತದೆ. ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ


0 comments:

 
Will Smith Visitors
Since 01/02/2008