Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, July 25, 2016

1] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 87/2016 ಕಲಂ: 87 Karnatka Police Act.
ದಿನಾಂಕ: 24-07-2016 ರಂದು 12-30 ಪಿಎಂಕ್ಕೆ ಪಿ.ಎಸ್.. ಕುಕನೂರ ಠಾಣೆರವರು ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ ತರ್ಫೆ ಪಿರ್ಯಾದಿಯನ್ನು, ಮುದ್ದೆಮಾಲು ಹಾಗೂ ವಶಕ್ಕೆ ಪಡೆದ 5 ಜನ ಆರೋಪಿತರನ್ನು ಹಾಜರಪಡಿಸಿ ವರದಿ ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ಜೂಜಾಟದ ಮಾಹಿತಿ ಬಂದ ಪ್ರಕಾರ ತಾವು ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 10-50 ಪಿಎಂಕ್ಕೆ ನಿಂಗಾಪೂರ ಗ್ರಾಮದ ಮೈಲಾರಲಿಂಗೇಶ್ವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, ಸದರಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಸಿಕ್ಕಿಬಿದ್ದವರಿಂದ ಹಾಗೂ ಜೂಜಾಟದ ಕಣದಿಂದ ಒಂದು ಸಣ್ಣ  ಪ್ಲಾಸ್ಟಿಕ್ ಬರಕಾ, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 1800/- ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 88/2016 ಕಲಂ: 87 Karnatka Police Act.
ದಿನಾಂಕ: 24-07-2016 ರಂದು 2-45 ಪಿಎಂಕ್ಕೆ ಪಿ.ಎಸ್.. ಕುಕನೂರ ಠಾಣೆರವರು ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ ತರ್ಫೆ ಪಿರ್ಯಾದಿಯನ್ನು, ಮುದ್ದೆಮಾಲು ಹಾಗೂ ವಶಕ್ಕೆ ಪಡೆದ 4 ಜನ ಆರೋಪಿತರನ್ನು ಹಾಜರಪಡಿಸಿ ವರದಿ ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ಜೂಜಾಟದ ಮಾಹಿತಿ ಬಂದ ಪ್ರಕಾರ ತಾವು ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 1-20 ಪಿಎಂಕ್ಕೆ ನಿಂಗಾಪೂರ ಗ್ರಾಮದ ಹಳ್ಳದ ದಂಡೆಯ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, ಸದರಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಸಿಕ್ಕಿಬಿದ್ದವರಿಂದ ಹಾಗೂ ಜೂಜಾಟದ ಕಣದಿಂದ ಒಂದು ಟಾವೆಲ್, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 1500/- ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 211/2016 ಕಲಂ: 87 Karnatka Police Act.
ದಿನಾಂಕ 24-07-2016 ರಂದು ಸಂಜೆ 6-45  ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರು ಠಾಣೆಗೆ ಬಂದು ಒಂದು ವರದಿ ಮತ್ತು ಪಂಚನಾಮೆಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ ಕುಷ್ಟಗಿ ಠಾಣಾ ವ್ಯಾಪ್ತಿಯ ಚಳಗೇರಿ ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಪಿರ್ಯಾಧಿದಾರರು ಬಸವರಾಜ ಎ.ಎಸ್.ಐ ಮತ್ತು ಹೆಚ್.ಸಿ 108, ಪಿ.ಸಿ-109,117,161,393,24 ಹಾಗೂ ನಮ್ಮ ಸರಕಾರಿ ಜೀಪ ನಂ: ಕೆ.-37-ಜಿ-292 ನೇದ್ದರಲ್ಲಿ ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 05 ಜನ ಆರೋಪಿತರು ಸಿಕ್ಕಿದ್ದು ಇರುತ್ತದೆ. ಸಿಕ್ಕ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ಹಣ 3940=00 ರೂ, ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಒಂದು ಹಳೆಯ ನ್ಯೂಸ್ ಪೇಪರ ಇವುಗಳನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 164/2016 ಕಲಂ: 379 ಐ.ಪಿ.ಸಿ:.
ದಿನಾಂಕ : 24-07--2016 ರಂದು 11-05 ಗಂಟೆಯ ಸುಮಾರಿಗೆ  ಫಿರ್ಯಾದಿದಾರರಾದ ಪಂಪನಗೌಡ ತಂದಿ ಶಂಕರಗೌಡ ಹೊಸಮನಿ ವಯಾ-48ವರ್ಷ ಜಾ-ಲಿಂಗಾಯತ -ಒಕ್ಕಲುತನ ಸಾ-ವಾರ್ಡ ನಂ-3 ಸಿದ್ದಾಪೂರ ಒಂದು ದೂರು ನೀಡಿದ್ದು ಸಾರಾಂಶದಲ್ಲಿ ನಮ್ಮ ಮನೆಯತನದ ಹೈನುಗಾರಿಕೆ ಸಲುವಾಗಿ ಧನಕರಗಳನ್ನು ಸಾಕಿಕೊಂಡಿರುತ್ತೇನೆ. ನಮ್ಮವು ದನಗಳನ್ನು ನಾವು ದಿನಾಲು ಕೊಟ್ನೆಕಲ್ ರಸ್ತೆಗೆ ಹೊಂದಿಕೊಂಡು ನಮ್ಮ ದನದ ದೊಡ್ಡಿಯಲ್ಲಿ ದನಗಳನ್ನು ಕಟ್ಟುತ್ತೇವೆ. ದಿನಾಂಕ:15-07-2016 ರಂದು ರಾತ್ರಿ 9-30 ಗಂಟೆಯ ಸುಮಾರಿಗೆ ನಾನು ನಮ್ಮ ದನಗಳಿಗೆ ನೀರುಕುಡಿಸಿ ಮೇವು ಹಾಕಿ ದನಗಳನ್ನು ಕಟ್ಟಿ ನಮ್ಮ ಮನೆಗೆ ಹೊಗಿ ಮಲಗಿಕೊಂಡಿದ್ದೇನು. ದಿನಾಂಕ :16-07-2016 ರಂದು  ಬೆಳಗ್ಗೆ  6-00 ಗಂಟೆಯ ಸುಮಾರಿಗೆ ಎಂದಿನಂತೆ ದನಗಳ ದೊಡ್ಡಿಯನ್ನು ಸ್ವಚ್ಚಗೊಳಿಸಲೆಂದು ಹೊಗಿ ನೋಡಲಾಗಿ ನಮ್ಮ ಜವಾರಿ ತಳಿಯ ಕಪ್ಪು ಬಣ್ಣದ ಮುಂಗೋಡಿನ ಎಮ್ಮೆ ಅಂ.ಕಿ-45,000=00 ರೂ. ಬೆಲೆಬಾಳುವದನ್ನು ಯಾರೋ ಕಳ್ಳರು ಸದರ್ ಎಮ್ಮೆಗೆ ಕಟ್ಟಿದ ಹಗ್ಗವನ್ನು ಕತ್ತರಿಸಿ ಎಮ್ಮೆಯನ್ನು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ.   ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 69/2016 ಕಲಂ: 279, 338 ಐ.ಪಿ.ಸಿ:.
ದಿನಾಂಕ: 23-07-2016  ರಂದು ಅಂದಾಜು ರಾತ್ರಿ 9-30 ಗಂಟೆ ಸುಮಾರಿಗೆ ಆರೋಪಿತನು ರೋಣ ತಾಲೂಕಿನ ಕಳಕಾಪುರ ಗ್ರಾಮಕ್ಕೆ ತನ್ನ ಹೆಂಡತಿಯನ್ನು ಮಾತನಾಡಿಸುವ ಸಲುವಾಗಿ ಮೋಟಾರ್ ಸೈಕಲ್ ಚೆಸ್ಸಿ ನಂ. MD2AZ7FWB14948   ಮತ್ತು ಇಂಜೀನ್  ನಂ.  D4ZWFB82527  ನೇದ್ದರ ಮೇಲೆ ಯಲಬುರ್ಗಾದಿಂದ ಹೋರಟಿದ್ದು, ಆರೋಪಿತನು ಸದರಿ ಮೋಟಾರ್ ಸೈಕಲನ್ನು ಯಲಬುರ್ಗಾ-ಹಿರೇಮ್ಯಾಗೇರಿ ರಸ್ತೆಯ ಮೇಲೆ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋರಟಾಗ ಹಿರೇಮ್ಯಾಗೇರಿ ಸೀಮಾದಲ್ಲಿಯ ಸೀಮಿ ದ್ಯಾಮವ್ವನ ಗುಡಿ ಹತ್ತಿರ ಮೋಟಾರ ಸೈಕಲ್ ನಿಯಂತ್ರಣ ತಪ್ಪಿ ಸ್ಕೀಡ್ ಆಗಿ ಬಿದ್ದು ಭಾರಿ ಸ್ವರೂಪದಲ್ಲಿ ಗಾಯಗೊಂಡಿರುತ್ತಾನೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
6] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 161/2016 ಕಲಂ: 279, 283, 338 ಐ.ಪಿ.ಸಿ:.
ದಿ:24-07-2016 ರಂದು ಬೆಳಿಗ್ಗೆ 09-30 ಗಂಟೆಗೆ ಫಿರ್ಯಾದಿದಾರರಾದ ವಿಠಲ್ ತಂದೆ ರಾಮಪ್ಪ ವಾಲಿಕಾರ. ಸಾ: ಅಡವಿ ಸೋಮಾಪೂರ. ತಾ: ಶಿಗ್ಗಾಂವ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೇ,  ಇಂದು ಬೆಳಗಿನಜಾವ 04-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರ ಲಾರಿ ನಂ: ಕೆಎ-25/ಎಎ-1965 ನೇದ್ದು ಕೊಪ್ಪಳ-ಗಿಣಿಗೇರಿ ರಸ್ತೆಯ ಬಸಾಪೂರ ದಾಟಿ ಕೋಕ ಅನಲೋಡ ಮಾಡಲು ಅಂತಾ ಕಿರ್ಲೋಸ್ಕರ್ ಫ್ಯಾಕ್ಟರಿಗೆ ಹೋಗುವಾಗ ಹಿಂದಿನ ಗಾಲಿ ಟೈರ ಬಸ್ಟ ಆಗಿದ್ದರಿಂದ ಲಾರಿಯನ್ನು ಚಾಲಕನು ರಸ್ತೆಯ ಮೇಲೆ ಹಾಗೇಯೆ ಬಿಟ್ಟಿದ್ದು ನಂತರ ಇಂದು ದಿ:24-07-16 ರಂದು ಬೆಳಿಗ್ಗೆ 06-00 ಗಂಟೆಯ ಸುಮಾರಿಗೆ ಕೊಪ್ಪಳ ಕಡೆಯಿಂದ ಮೋಟಾರ ಸೈಕಲ್ ನಂ: ಕೆಎ-18/ಜೆ-6883 ನೇದ್ದರ ಚಾಲಕ ಪರಶುರಾಮ ಇತನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದವನೆ ಫಿರ್ಯಾದಿದಾರರ ಲಾರಿಯನ್ನು ಗಮನಿಸದೇ ನಿರ್ಲಕ್ಷ್ಯತನದಿಂದಾ ಹಿಂದಿನಿಂದ ಹಾಯಿಸಿ ಅಪಘಾತ ಮಾಡಿಕೊಂಡು ಬಿದ್ದಿದ್ದರಿಂದ ಪರಶುರಾಮನಿಗೆ ತುಟಿಗೆ ತೆರೆಚಿದ ರಕ್ತಗಾಯ, ಬಲಗೈ ಮುಂಗೈ ಹತ್ತಿರ ಭಾರಿ ಪೆಟ್ಟಗಿ ಮೂಳೆ ಮುರಿದಂತೆ ಬಾವು ಬಂದಿದ್ದು, ಬಲಕಾಲ ಮೊಣಕಾಲಿಗೆ ಪೆಟ್ಟಾಗಿರುತ್ತದೆ.   ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
7] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 121/2016 ಕಲಂ: 454, 457, 380 ಐ.ಪಿ.ಸಿ:.
ದಿನಾಂಕ: 24.07.2016 ರಂದು ಸಾಯಂಕಾಲ 7:30 ಗಂಟೆಗೆ ಫಿರ್ಯಾದಿ ಪಕೀರಸಾಬ  ನೂರುಬಾಷಾ ಸಾ: ವಾಲ್ಮೀಕಿ ಭವನ ಸಾ: ಕೊಪ್ಪಳ ಇವರು ದೂರನ್ನು ಸಲ್ಲಿಸಿದ್ದು ಸಾರಾಂಶವೇನೆಂದರೆ, ಕೊಪ್ಪಳದ ವಾಲ್ಮೀಕಿ ಭವನದ ಹತ್ತಿರ ಜ್ಞಾನಸಾಗರ ಎಂಟರ ಪೈಜಸ್ ಎಂಬ ಬುಕ್ ಸ್ಟಾಲ್ ಇಟ್ಟುಕೊಂಡು ಉಪಜೀವಿಸುತ್ತೇನೆ. ನಿನ್ನೆ ದಿನಾಂಕ : 23.07.2016 ರಂದು ರಾತ್ರಿ 8:30 ಗಂಟೆಗೆ ದಿನಂಪ್ರತಿಯಂತೆ ಮನೆಗೆ ಹೋಗುವಾಗ ನನ್ನ ಬುಕ್ ಸ್ಟಾಲನ್ನು ಬಂದ ಮಾಡಿಕೊಂಡು ಮನೆಗೆ ಹೋಗಿ ದ್ದೇನು.ಇಂದು ದಿನಾಂಕ: 24.07.2016 ರಂದು ಬೆಳಿಗ್ಗೆ 7:00 ಗಂಟೆಗೆ ದಿನಂಪ್ರತಿಯಂತೆ ನಾನು ನನ್ನ ಬುಕ್ ಸ್ಟಾಲ್  ಬಾಗಿಲನ್ನು ತೆಗೆಯುವಷ್ಟರಲ್ಲಿ ನಮ್ಮ ಅಂಗಡಿಯ ಬಲಗಡೆ ಭಾಗದ ಕಿಡಕಿಯ ಗ್ಲಾಸ್ ಜಖಂಗೊಂಡಂತೆ ಕಂಡು ಬಂದಿದ್ದು ಇರುತ್ತದೆ. ನಾನು ಅಂಗಡಿಯ ಬಾಗಿಲ ಕೀಲಿಯನ್ನು ತೆಗೆದು ಒಳಗಡೆ ಹೋಗಿ ನೋಡಲು ಅಂಗಡಿ ಯಲ್ಲಿರುವ ಸ್ಟೇಷನರಿ ಸಾಮಾನುಗಳೆಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು ಮತ್ತು ನನ್ನ ವ್ಯವಹಾರಕ್ಕೆ ಇಟ್ಟುಕೊಂಡಿದ್ದ 03 ಗಣಕಯಂತ್ರಗಳು ಕಂಡುಬರಲಿಲ್ಲಾ. ನಾನು ಗಾಬರಿಗೊಂಡು ನನ್ನ ಅಂಗಡಿಯನ್ನು ಚಕ್ ಮಾಡಲಾಗಿ ಅಂಗಡಿಯಲ್ಲಿಟ್ಟಿದ್ದ  03 ಐಬಾಲ್ ಕಂಪನಿಯ ಕಂಪ್ಯೂಟರ ಮಾನಿಟರುಗಳು, 02 ಐಬಾಲ್ ಕಂಪನಿಯ ಸಿ.ಪಿ.ಯು, 02 ಕೀಬೋರ್ಡ, 02 ಮೌಸ್ ಅ.ಕಿ 60,000=00 ಸಾವಿರ ರೂಪಾಯಿಗಳು ಮತ್ತು ನಗದು ಹಣ 900=00 ರೂ ಒಟ್ಟು ಎಲ್ಲಾ ಸೇರಿ 60.900=00 ರೂ ಕಿಮ್ಮತ್ತಿನ ವಸ್ತುಗಳನ್ನು ಯಾರೋ ಅಪರಿಚಿತ ವ್ಯಕ್ತಿಗಳು ದಿನಾಂಕ : 23.07.2016 ರಂದು ರಾತ್ರಿ 08:30 ಗಂಟೆಯಿಂದ ದಿನಾಂಕ : 24.07.2016 ರಂದು ಬೆಳಗಿನ ಜಾವ 07:00 ಗಂಟೆಯ ನಡುವಿನ ಅವಧಿಯಲ್ಲಿ ನನ್ನ ಬುಕ್ ಸ್ಟಾಲ್ ನ ಅಂಗಡಿಯ ಕಿಟಕಿಯ ಗ್ಲಾಸನ್ನು ಒಡೆದು ಒಳಗೆ ಪ್ರವೇಶ ಮಾಡಿ ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
8] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 122/2016 ಕಲಂ: 454, 457, 380 ಐ.ಪಿ.ಸಿ:.

ಫಿರ್ಯಾದಿದಾರರಾದ ಶ್ರೀಮತಿ ಗಂಗೂಬಾಯಿ ತಂದೆ ಚಂದ್ರಶೇಖರಯ್ಯ ಬಜಾರಮಠ ಸಾ: ಬಜಾರಮಠ ಕಾಲೋನಿ ಕುಷ್ಠಗಿ ರೋಡ್ ಕೊಪ್ಪಳ ಇವರು  ದಿನಾಂಕ: 21-07-2016 ರಂದು ಸಂಜೆ 5-30 ಗಂಟೆಯ ಸುಮಾರಿಗೆ ತಮ್ಮ ತಂಗಿಯ ಊರಿಗೆ ಹೋಗಿದ್ದಾಗ, ದಿನಾಂಕ: 23-07-2016 ರಂದು ಮುಂಜಾನೆ 8-40 ಗಂಟೆಯ ಸುಮಾರಿಗೆ ಫಿರ್ಯಾದಿದಾರರ ಅಣ್ಣನಾದ ಅಶೋಕ ಬಜಾರಮಠ ಇವರು ಫಿರ್ಯಾದಿದಾರರಿಗೆ ಪೋನ್ ಮಾಡಿ ತಮ್ಮ ಮನೆಯಲ್ಲಿ ಕಳ್ಳತನವಾಗಿದೆ ಅಂತಾ ತಿಳಿಸಿದರು, ಫೀರ್ಯಾಧಿದಾರರು ಅಂದು ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ಕೊಪ್ಪಳದ ತಮ್ಮ ಮನೆಗೆ ಬಂದು ನೋಡಿದಾಗ ತಮ್ಮ ಮನೆಯಲ್ಲಿದ್ದ ಗಾಡ್ರೆಜ್ ನ್ನು ಸಿಕ್ಕಾಪಟ್ಟೆ ಒಡೆದು ಅದರಲ್ಲಿದ್ದ ಒಟ್ಟು 87 ಗ್ರಾಂ ಬಂಗಾರದ ಆಭರಣಗಳು, ಒಂದು ಡೈಮಂಡ್ ಹಳ್ಳು ಮತ್ತು ನಗದು ಹಣ ರೂ 2000=00 ಎಲ್ಲಾ ಸೇರಿ ಒಟ್ಟು ಅಂಕಿರೂ: 2,29,000=00 ಬೆಲೆಬಾಳುವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಢಿಕೊಂಡು ಹೋಗಿದ್ದು ಇರುತ್ತದೆ. ಪ್ರಕರಣ ದಾಖಾಲು ಮಾಢಿಕೊಂಡು ತನಿಖೆ ಕೈಗೊಂಡಿರುತ್ತಾರೆ.

0 comments:

 
Will Smith Visitors
Since 01/02/2008