ದಿನಾಂಕ:- 25-07-2016 ರಂದು ಮಧ್ಯಾಹ್ನ
ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ದಾಸನಾಳ ಗ್ರಾಮದಲ್ಲಿ ತುಂಗಭಧ್ರ ಎಡದಂಡೆ ಮುಖ್ಯ
ಕಾಲುವೆಯ ಪಕ್ಕ ನೀರಾವರಿ ಇಲಾಖೆ ಆಪೀಸ್ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಮಟಕಾ
ಜೂಜಾಟ ನಡೆಯಿಸಿದ್ದಾನೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ. ಹಾಗೂ ಸಿಪಿಐ
ಸಾಹೇಬರು ಮಾರ್ಗದರ್ಶನದಲ್ಲಿ ಶ್ರೀ ಪ್ರಕಾಶ. ಎಲ್. ಮಾಳಿ, ಪಿ.ಎಸ್.ಐ. ಮತ್ತು ಸಿಬ್ಬಂದಿಯವರಾದ ಪಿ.ಸಿ. 361, 237, 323, ಎ.ಪಿ.ಸಿ. 77 ಹಾಗೂ ಇಬ್ಬರು ಪಂಚರನ್ನು
ಬರಮಾಡಿಕೊಂಡು ಹೋಗಿ ನೋಡಲಾಗಿ ನಮಗೆ ಮಾಹಿತಿ ಇದ್ದ ಪ್ರಕಾರ ದಾಸನಾಳ ಬ್ರಿಡ್ಜ್ ಹತ್ತಿರ
ತುಂಗಭದ್ರ ಎಡದಂಡೆ ಮುಖ್ಯ ಕಾಲುವೆಯ ದಂಡೆಯಲ್ಲಿ ನೀರಾವರಿ ಇಲಾಖೆ ಆಫೀಸ್ ಪಕ್ಕ ಸಾರ್ವಜನಿಕ
ಸ್ಥಳದಲ್ಲಿ ಸುಮಾರು ಜನರು ಸೇರಿದ್ದು, ಅವರಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಜನರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇವೆ, ಅದೃಷ್ಟದ ಮಟಕಾ ನಂಬರ್ಗಳಿಗೆ ಹಣವನ್ನು
ಪಣಕ್ಕೆ ಹಚ್ಚಿರಿ ಅಂತಾ ಕೂಗುತ್ತಾ ಜನರನ್ನು ಕರೆದು ಸೇರಿದ ಜನರಿಂದ ಹಣವನ್ನು ಪಡೆದುಕೊಂಡು ಮಟಕಾ
ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ, ಪಟ್ಟಿಯನ್ನು ಬರೆದುಕೊಳ್ಳುತ್ತಾ ಅದೃಷ್ಠದ
ಮಟಕಾ ಜೂಜಾಟದಲ್ಲಿ ತೊಡಗಿದ್ದು, ಕೂಡಲೇ ಅವರ ದಾಳಿ ಮಾಡಲಾಗಿ ಮಟಕಾ ಜೂಜಾಟದಲ್ಲಿ
ತೊಡಗಿದ್ದ ಒಬ್ಬ ವ್ಯಕ್ತಿಯು ಸಿಕ್ಕಿ ಬಿದ್ದಿದ್ದು, ಮಟ್ಕಾ ಪಟ್ಟಿ ಬರೆಯಿಸಲು ಬಂದಿ ಜನರು ಅಲ್ಲಿಂದ ಓಡಿ ಹೋದರು. ಸಿಕ್ಕಿಬಿದ್ದವನ ತನ್ನ ಹೆಸರು
ಸೈಯದ್ ಸಾಬ ತಂದೆ ಸೈಯದ್ ಮೀರಸಾಬ ವಯಸ್ಸು: 31 ವರ್ಷ ಜಾತಿ: ಮುಸ್ಲಿಂ, ಉ: ಅಟೋ ಚಾಲಕ ಸಾ: ದಾಸನಾಳ. ತಾ: ಗಂಗಾವತಿ
ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 300/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ಪೆನ್ನು ದೊರೆತಿದ್ದು ಇದೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 211/2016 ಕಲಂ: 78(3) Karnatka Police Act.
ದಿನಾಂಕ: 25-07-2016 ರಂದು ರಾತ್ರಿ 7:30 ಗಂಟೆಗೆ ಶ್ರೀ ಪ್ರಕಾಶ. ಎಲ್. ಮಾಳಿ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಇವರು ಇಬ್ಬರು ಆರೋಪಿತರೊಂದಿಗೆ ಮೂಲ ಪಂಚನಾಮೆ, ಮುದ್ದೆಮಾಲು ಹಾಗೂ
ವರದಿಯನ್ನು ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. “ಇಂದು
ದಿನಾಂಕ:- 25-07-2016 ರಂದು ಸಂಜೆ ಗಂಗಾವತಿ
ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಮನಗರ ಗ್ರಾಮದ ಶ್ರೀ ರಾಮಲಿಂಗೇಶ್ವರ ಗುಡಿಯ ಹತ್ತಿರ ರಸ್ತೆಯ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ
ಖಚಿತವಾದ ಮಾಹಿತಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ. ಗಂಗಾವತಿ ಮತ್ತು ಸಿ.ಪಿ.ಐ. ಗಂಗಾವತಿ
(ಗ್ರಾ) ವೃತ್ತರವರ ಮಾರ್ಗದರ್ಶನದಲ್ಲಿ ಶ್ರೀ ಪ್ರಕಾಶ. ಎಲ್. ಮಾಳಿ,
ಪಿ.ಎಸ್.ಐ. ಹಾಗೂ ಪಿ.ಸಿ. 429, 323 ಎ.ಪಿ.ಸಿ. 77 ಹಾಗೂ ಇಬ್ಬರು ಪಂಚರನ್ನು ಬರಮಾಡಿಕೊಂಡು ಠಾಣೆಯಿಂದ ಹೊರಟು ಶ್ರೀರಾಮನಗರ ಗ್ರಾಮದಲ್ಲಿ ಜೀಪನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು
ಹೋಗಿ ನಮಗೆ ಮಾಹಿತಿ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಂತು ನೋಡಲಾಗಿ ಅಲ್ಲಿ ಶ್ರೀ ರಾಮಲಿಂಗೇಶ್ವರ ಗುಡಿಯ ಹತ್ತಿರ ರಸೆಯ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಜನರು ಸೇರಿದ್ದು, ಅವರಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಜನರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇವೆ, ಅದೃಷ್ಟದ ಮಟಕಾ ನಂಬರಗಳಿಗೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗುತ್ತಾ ಜನರನ್ನು ಕರೆದು ಅವರಿಂದ ಹಣವನ್ನು
ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು
ಬರೆದುಕೊಡುತ್ತಾ, ಪಟ್ಟಿಯನ್ನು
ಬರೆದುಕೊಳ್ಳುತ್ತಾ ಅದೃಷ್ಠದ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಕೂಡಲೇ ಅವರ ದಾಳಿ ಮಾಡಲಾಗಿ ಮಟಕಾ ಪಟ್ಟಿ ಬರೆಯುತ್ತಿದ್ದವನು ಸಿಕ್ಕಿ ಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ವಿಚಾರಿಸಲು ಅವನು ತನ್ನ ಹೆಸರು
ಕೆ. ಮಧುಸೂದನ ತಂದೆ ರಾಮಾಂಜಿನೇಯ, ವಯಸ್ಸು 38 ವರ್ಷ, ಜಾತಿ: ಕಮ್ಮಾ ಉ: ಆಟೋ ಚಾಲಕ ಸಾ: 2ನೇ ವಾರ್ಡ-ಶ್ರೀರಾಮನಗರ ತಾ: ಗಂಗಾವತಿ ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 600/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ ಪೆನ್ನು ದೊರೆತಿದ್ದು, ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ.
71/2016 ಕಲಂ: 87 Karnataka Police Act.
ದಿನಾಂಕ: 25-07-2016
ರಂದು ಸಾಯಂಕಾಲ 5-25 ಗಂಟೆಯ ಸುಮಾರಿಗೆ ಸಂಕನೂರು ಗ್ರಾಮದಲ್ಲಿಯ ಸಾರ್ವಜನಿಕ ಸ್ಥಳವಾದ ಬಸ್ ನಿಲ್ದಾಣದ ಮುಂಭಾಗದಲ್ಲಿ
ಆರೋಪಿತರೆಲ್ಲರೂ ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ಸಾಯಂಕಾಲ 5-30 ಗಂಟೆಗೆ ದಾಳಿ ಮಾಡಿ ಹಿಡಿದಿದ್ದು 08 ಜನ ಆರೋಪಿತರು ಸಿಕ್ಕಿಬಿದ್ದಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 17,450=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು, ಒಂದು ಪ್ಲಾಸ್ಟೀಕ ಚೀಲ ಸಿಕ್ಕಿದ್ದು ಇರುತ್ತದೆ. ಈ ಬಗ್ಗೆ ಪ್ರಕರಣ
ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment