Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, August 10, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 224/2016 ಕಲಂ: 279, 304(ಎ) ಐ.ಪಿ.ಸಿ:.
ಫಿರ್ಯಾದಿದಾರರಾದ ಶ್ರೀಮತಿ ದೇವಮ್ಮ ಗಂಡ ಬಾಳಪ್ಪ ಪಿನ್ನೇರ ಹಾಗೂ ನನ್ನ ಗಂಡ ಕೂಡಿಕೊಂಡು ನಮ್ಮ ಬಜಾಜ್ ಎಕ್ಸ್.ಸಿ.ಡಿ. 125 ಮೋಟಾರ ಸೈಕಲ್ ನಂಬರ: ಕೆ.ಎ-04/ ಬಿ.ಎಕ್ಸ್-7950 ನೇದ್ದರಲ್ಲಿ ಬಸಾಪಟ್ಟಣಕ್ಕೆ ನಮ್ಮ ಮಗಳನ್ನು ಮಾತಾಡಿಸಿಕೊಂಡು ಬರಲು ಬಂದಿದ್ದೆವು. ಇಂದು ದಿನಾಂಕ:- 09-08-2016 ರಂದು ಬೆಳಿಗ್ಗೆ 08:30 ಗಂಟೆಯ ಸುಮಾರಿಗೆ ಜಂಗಮರ ಕಲ್ಗುಡಿಯಲ್ಲಿರುವ ನಮ್ಮ ಸಂಬಂಧಿಕರನ್ನು ಮಾತಾಡಿಸಿಕೊಂಡು ಬರುವುದಾಗಿ ನನ್ನ ಗಂಡನು ಮೋಟಾರ ಸೈಕಲ್ ಚಲಾಯಿಸಿಕೊಂಡು ಹೋದನು. ನಂತರ ಮಧ್ಯಾಹ್ನ 12:00 ಗಂಟೆಯ ಸುಮಾರಿಗೆ ಗುಡ್ಡದ ಕ್ಯಾಂಪ್ ನ ರಫಿ ಎಂಬುವವರು ನನ್ನ ಗಂಡನ ಹತ್ತಿರ ಇದ್ದ ಮೊಬೈಲ್ ನಿಂದ ನನ್ನ ಮೊಬೈಲಗೆ ಕರೆ ಮಾಡಿ ಈ ಮೊಬೈಲ್ ನ ವ್ಯಕ್ತಿಯು ಮೋಟಾರ ಸೈಕಲ್ ಮೇಲೆ ಬರುವಾಗ ಗುಡ್ಡದ ಕ್ಯಾಂಪ್ ಹತ್ತಿರ ಬಸ್ ಅಪಘಾತ ಮಾಡಿ ಆತನು ತೀವ್ರವಾಗಿ ಗಾಯಗೊಂಡಿರುತ್ತಾನೆ ಅಂತಾ ತಿಳಿಸಿದರು.  ಕೂಡಲೇ ನಾನು, ನನ್ನ ಅಳಿಯ ಮುತ್ತಣ್ಣ ಕೂಡಿಕೊಂಡು ಸ್ಥಳಕ್ಕೆ ಬಂದು ನೋಡಲಾಗಿ ಸದರಿ ಅಪಘಾತಕ್ಕೀಡಾದ ವ್ಯಕ್ತಿ ನನ್ನ ಗಂಡ ಬಾಳಪ್ಪನೇ ಇದ್ದು, ಆತನು ರಸ್ತೆಯ ಎಡಗಡೆ ಬಿದ್ದಿದ್ದು, ಆತನ ಎಡಗಾಲ ಪಾದಕ್ಕೆ, ಮೊಣಕಾಲಿಗೆ, ಬಲಗೈಗೆ ರಕ್ತಗಾಯವಾಗಿದ್ದು, ತಲೆಗೆ ಭಾರೀಗಾಯವಾಗಿ ಮೂಗಿನಲ್ಲಿ ರಕ್ತ ಬರುತ್ತಿತ್ತು ಆತನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ನನ್ನ ಗಂಡನ ಮೋಟಾರ ಸೈಕಲ್ ರಸ್ತೆಯಲ್ಲಿಯೇ ಜಖಂಗೊಂಡು ಬಿದ್ದಿತ್ತು. ಸ್ಥಳದಲ್ಲಿಯೇ ಅಪಘಾತ ಮಾಡಿದ ಸರಕಾರಿ ಬಸ್ ನಂ: ಕೆ.ಎ-25/ ಎಫ್-3198 ಅಂತಾ ಇದ್ದು, ಹುಬ್ಬಳ್ಳಿಯಿಂದ ಹೈದ್ರಾಬಾದ್ ಗೆ ಹೊರಟಿದ್ದು, ಅಲ್ಲಿದ್ದ ಬಸ್ ಚಾಲಕನಿಗೆ ವಿಚಾರಿಸಲು ಆತನ ಹೆಸರು ಬಿ. ನಾಗಭೂಷಣ ತಂದೆ ಬಸವರಾಜಪ್ಪ, ಹುಬ್ಬಳ್ಳಿ ಡಿಪೋ ಸಾ: ಶಿವಮೊಗ್ಗ ಅಂತಾ ತಿಳಿಸಿದನು.  ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 225/2016 ಕಲಂ: 279 ಐ.ಪಿ.ಸಿ:.
ದಿನಾಂಕ:- 09-08-2016 ರಂದು ಫಿರ್ಯಾದಿದಾರರಾದ ಶ್ರೀ ದವಲೇಶ ಬಿ. ತಂದೆ ಪಾಂಡುರಂಗ ವಯಸ್ಸು: 30 ವರ್ಷ ಉ: ಸಹಾಯಕ ಅಭಿಯಂತರರು ಜೆಸ್ಕಾಂ ಇಲಾಖೆ ಗಂಗಾವತಿ ಇವರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ಇಂದು ದಿನಾಂಕ: 09-08-2016 ರಂದು ಮಧ್ಯಾಹ್ನ 3:30 ಗಂಟೆಯ ಸುಮಾರಿಗೆ ಟಿಪ್ಪರ್ ಲಾರಿ ನಂ: ಕೆ.ಎ-36/ಬಿ-1311 ನೇದ್ದರ ಚಾಲಕ ಹನುಮಂತಪ್ಪ ತಂದೆ ಅಯ್ಯಾಳಪ್ಪ ನಾಟೇಕರ, ಸಾ: ಹತ್ತಿಗೂಡ ತಾ: ಶಹಪುರ, ಜಿ: ಯಾದಗಿರಿ ಈತನು ತನ್ನ ಟಿಪ್ಪರ್ ಲಾರಿಯನ್ನು ಗಂಗಾವತಿ-ಸಿಂಧನೂರ ಮುಖ್ಯ ರಸ್ತೆಯಲ್ಲಿ ವಿಧ್ಯಾನಗರ ಪ್ರಶಾಂತ ಹೋಟಲ ಹತ್ತಿರ ಗಂಗಾವತಿ ಕಡೆಯಿಂದ ಅತಿವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಸಿಂಧನೂರ ಕಡೆಗೆ ಹೋಗುತ್ತಿರುವಾಗ ಒಮ್ಮಲೇ ಟಿಪ್ಪರ್ ನ ಹೈಡ್ರೋಲಿಕ್ ಬಾಡಿಯನ್ನು ಮೇಲೆ ಎತ್ತಿದ್ದರಿಂದ ರಸ್ತೆಯಲ್ಲಿ ಹಾಯ್ದು ಹೋಗಿರುವ 11 ಕೆ.ಬಿ. ವಿಧ್ಯುತ್ ಲೈನ್ ( ಎಫ್.-5 ಗಂಗಾವತಿ ಶೂಗರ ಫೀಡರ್ ) ಬಾಡಿಗೆ ಸಿಕ್ಕಿಕೊಂಡು ಹಾಗೇಯೇ ಮುಂದೆ ಎಳೆದುಕೊಂಡು ಹೋಗಿದ್ದು ಇದರಿಂದ ಎರಡು ವಿಧ್ಯುತ್ ಕಂಬಗಳು ಮತ್ತು ವಿಧ್ಯುತ್ ಪರಿವರ್ತಕ ಸೆಂಟರಗೆ ( ಸ್ಟ್ರಕ್ಚರ್) ಹಾಗೂ ಫೆನ್ಸಿಂಗ್ ಮುರಿದು ಬಿದ್ದು ಅಂದಾಜು 2,48,000/- ರೂ ಲುಕ್ಸಾನ ಆಗಿದ್ದು ಇರುತ್ತದೆ. ಸದರಿ ವಿಷಯವನ್ನು ಅಲ್ಲಿಯೇ ಇರುವ ಗ್ಯಾರೆಜ್ ಮೆಕಾನಿಕ ಉಸ್ಮಾನ್ ಎಂಬುವರು ತಿಳಿಸಿರುತ್ತಾರೆ.  ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 227/2016 ಕಲಂ: 392 ಐ.ಪಿ.ಸಿ:.

ದಿನಾಂಕ 09-08-2016 ರಂದು ರಾತ್ರಿ 9-30 ಗಂಟೆಗೆ ಫೀರ್ಯಾದಿದಾರರಾದ ಕಸ್ತೂರಿ ಗಂಡ ವಿರುಪಾಕ್ಷ ಬಾಚಲಾಪೂರ ಸಾ: ಅನ್ನದಾನೇಶ್ವರ ನಗರ ಸಾ: ಕುಷ್ಟಗಿ ರವರು ಠಾಣೆಗೆ ಹಾಜರಾಗಿ ನೀಡಿದ ಫೀರ್ಯಾದಿ ಸಾರಂಶ ವೇನೆಂದೆರೆ.  ಫೀರ್ಯಾದಿದಾರರು  ನಿನ್ನೆ ಮದ್ಯಾಹ್ನ 12-00 ಗಂಟೆಯ ಸುಮಾರು ತನ್ನ ಮನೆಯ ಸಣ್ಣ ಕಿರಾಣಿ ಅಂಗಡಿಯಲ್ಲಿದ್ದಾಗ  ಯಾರೋ ಅಪರಿಚಿತ ವ್ಯಕ್ತಿ ಅಂಗಡಿಗೆ ಬಂದು 5-00 ವಿಮಲ್ ಪೌಚ್ ಕೇಳಿದ್ದು ಫಿರ್ಯಾದಿದಾರಳು ವಿಮಲ್ ಪೌಚ್ ಕಡೆಗೆ ಗಮನಹರಿಸಿದಾಗ  ಅಪರಿಚಿತ ವ್ಯಕ್ತಿ  ಫಿರ್ಯಾದಿದಾರಳ ಕೊರಳಿದ್ದ ನಾಲ್ಕುವರೆ ತೋಲೆ ಬಂಗಾರದ ಮಾಂಗಲ್ಯ ಸರ ಮತ್ತು ಒಂದು ತೋಲೆಯ ಬಂಗಾರದ ಕೊರಳ ಚೈನ್ ಗಳನ್ನು ಕಿತ್ತುಕೊಂಡು ಪರಾರಿ ಯಾಗಿದ್ದು ಇರುತ್ತದೆ. ಅಪರಿಚಿತ ವ್ಯಕ್ತಿ 22 ರಿಂದ 26  ವಯಸ್ಸಿನವನು ಇರಬಹುದು ಮತ್ತು ಅವನು ಚಾಕಲೇಟ ಕಲರ ಪ್ಯಾಂಟ ಮತ್ತು ತಿಳಿ ನೀಲಿಬಣ್ಣದ ಪುಲ್ ಶರ್ಟ ಧರಿಸಿದ್ದನು. ಈ ಮಾಲಿನ  ಒಟ್ಟು ಅ. ಕಿ 1.10,000=00 ರೂ ಆಗಬಹುದು ಅಂತಾ ವಗೈರೆ ಫಿರ್ಯಾದಿ ಮೇಲಿಂದ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008