Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, August 11, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 228/2016 ಕಲಂ: 9B(1)(b) ) Explosives Act 1884
ಶ್ರೀ ಈ. ಕಾಳಿಕೃಷ್ಣ, ಸಿಪಿಐ ಗಂಗಾವತಿ ಗ್ರಾಮೀಣ ವೃತ್ತ ರವರು ಫಿರ್ಯಾಧಿ ನೀಡಿದ್ದು ಅದರ ಸಾರಾಂಶವೆನಂದರೆ, ದಿನಾಂಕ: 10-08-2016 ರಂದು ಮಧ್ಯಾಹ್ನ 3:00 ಗಂಟೆಯ ಸುಮಾರಿಗೆ ನಾನು ವೃತ್ತ ಕಾರ್ಯಲಯದಲ್ಲಿರುವಾಗ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ವೆಂಕಟಗಿರಿ ಗ್ರಾಮ ಸೀಮಾ ಸರ್ವೆ ನಂ: 77 ರಲ್ಲಿ ಬರುವ ಗುಡ್ಡದಲ್ಲಿ ಅನಧಿಕೃತವಾಗಿ ಸ್ಟೋಟಕ ವಸ್ತುಗಳನ್ನು ಉಪಯೋಗಿಸಿ ಕಲ್ಲುಗಳನ್ನು ಒಡೆಯಲು ಪ್ರಯತ್ನಿಸುತ್ತಿರುವ ಬಗ್ಗೆ ಖಚಿತವಾದ ಬಾತ್ಮಿ ಬಂದ ಮೇರಗೆ ನಾನು ಮತ್ತು ಕಛೇರಿಯ ಸಿಬ್ಬಂದಿಯವರಾದ ಪಿಸಿ 40 ಶ್ರೀ ಸಿದ್ದನಗೌಡ, ಪಿಸಿ 40 ಶ್ರೀ ಅಮರೇಶ ಹಾಗೂ ಜೀಪ ಚಾಲಕ ಬಸವರಾಜ ಎ.ಪಿ.ಸಿ ರವರೊಂದಿಗೆ ಸರಕಾರಿ ಜೀಪ್ ನಂ: ಕೆ.ಎ-37/ಜಿ-336 ನೇದ್ದರಲ್ಲಿ. ಸಾಯಂಕಾಲ 4 ಗಂಟೆಗೆ ಠಾಣೆಯಿಂದ ಹೊರಟೆವು. ನಂತರ ದಾಸನಾಳ ಬ್ರಿಡ್ಜ್ ಹತ್ತಿರ ಹೋಗಿ ಪಿಸಿ 60 ರವರ ಮುಖಾಂತರ ಪಂಚರಾದ (1) ಶ್ರೀ ಹುಸೇನಬಾಷಾ ತಂದೆ ಶ್ಯಾಮೀದಸಾಬ 38 ವರ್ಷ ಜಾತಿ: ಮುಸ್ಲಿಂ, ಉ: ಒಕ್ಕಲತನ ಸಾ: ಹಿರೇಬೆಣಕಲ್ ತಾ: ಗಂಗಾವತಿ (2) ಶ್ರೀ ಜಗನಮೋಹನ ತಂದೆ ಸತ್ಯನಾರಾಯಣ 45 ವರ್ಷ ಜಾತಿ: ಕಮ್ಮಾ, ಉ: ಶ್ರೀರಾಮ ಕ್ರಷರ್ ಮಿಷನ್ ಸೂಪರವೈಸರ್ ಸಾ: ಬಸಾಪಟ್ಟಣ ಇವರನ್ನು ಬರಮಾಡಿಕೊಂಡು ಅವರಿಗೆ ಬಾತ್ಮಿ ವಿಷಯ ತಿಳಿಸಿ ಎಲ್ಲರೂ ಕೂಡಿ ಬಾತ್ಮಿ ಇದ್ದ ಸ್ಥಳವಾದ ವೆಂಕಗಿರಿ ಸೀಮಾಕ್ಕೆ  ಹೋಗಿ ದಾಳಿ ಮಾಡಲಾಗಿ ಸ್ಥಳದಲ್ಲಿ ಏಳು ಜನರು ಸಿಕ್ಕಿದ್ದು ಆಗ ಸಮಯ ಸಾಯಂಕಾಲ 4:30 ಗಂಟೆಯಾಗಿತ್ತು ಕೂಡಲೇ ನಾನು ಮತ್ತು ಸಿಬ್ಬಂದಿಯವರ ಕೂಡಿ ಅವರ ಹತ್ತಿರ ಇದ್ದ ಕಲ್ಲುಗಳನ್ನು ಸ್ಪೋಟಿಸಲು ಉಪಯೋಗಿಸುವಂತಹ ವಸ್ತುಗಳನ್ನು ಪರಿಶೀಲಿಸಲು ಸುಮಾರು 3 ಕೆ.ಜಿ. ಯಷ್ಟು ಅಮೋನಿಯಮ್ ನೈಟ್ರೀಟ್ ಹಾಗೂ 23 ಬಿಳಿ ವೈರವುಳ್ಳ ಎಲೆಕ್ಟ್ರಾನಿಕ್ ಡಿಟೋನೇಟರ್ ( ಕೇಪುಗಳು ) ಸಿಕ್ಕಿದ್ದು ಇರುತ್ತದೆ. ಸದರಿ ದಾಳಿಯಲ್ಲಿ ಸಿಕ್ಕವರನ್ನು ವಿಚಾರಿಸಲು ಅವರು ತಮ್ಮ ಹೆಸರು 1] ದುರುಗಪ್ಪ ತಂದೆ ಲಿಂಗಪ್ಪ 35 ವರ್ಷ ಜಾತಿ: ಉಪ್ಪಾರ, ಉ: ಕಲ್ಲು ಒಡೆಯುವದು, ಸಾ: ಗಡ್ಡಿ ತಾ: ಗಂಗಾವತಿ 2] ನಿಂಗಪ್ಪ ತಂದೆ ಸಂಜೀವಪ್ಪ 38 ವರ್ಷ ಜಾತಿ: ಭೊವಿ, ಸಾ: ತಿಪ್ಪನಾಳ ತಾ: ಗಂಗಾವತಿ 3] ಬಸವರಾಜ ತಂದೆ ಹನುಮಂತಪ್ಪ 36 ವರ್ಷ ಜಾತಿ: ಬೊವಿ, ಸಾ: ಚೌಡಾಪೂರ ತಾ: ಜಿ: ಕಲಬುರಗಿ ಹಾ:ವ: ಹಿರೇಬೆಣಕಲ್ 4] ದುರುಗಪ್ಪ ತಂದೆ ಯಂಕಪ್ಪ ದೇವರಕರ, 32 ವರ್ಷ ಜಾತಿ: ಭೋವಿ, ಸಾ: ಶಾಹಬಾದ ಜಿ: ಕಲಬುರಗಿ ಹಾ:ವ: ಹಿರೇಬೆಣಕಲ್ ತಾ: ಗಂಗಾವತಿ 5] ಅಂಬಣ್ಣ ತಂದೆ ಹುಲಗಪ್ಪ 35 ವರ್ಷ ಜಾತಿ: ಭೊವಿ, ಸಾ: ಗಡ್ಡಿ ತಾ: ಗಂಗಾವತಿ 6] ಶರಣಪ್ಪ ತಂದೆ ವೀರನಗೌಡ ಸಿಂಗನಾಳ 30 ವರ್ಷ ಜಾತಿ: ವಾಲ್ಮಿಕಿ, ಸಾ: ಉಡುಮಕಲ್ ತಾ: ಗಂಗಾವತಿ 7] ಹುಲುಗಪ್ಪ ತಂದೆ ಕನಕಪ್ಪ 30 ವರ್ಷ ಜಾತಿ: ಉಪ್ಪಾರ, ಸಾ: ಗಡ್ಡಿ ತಾ: ಗಂಗಾವತಿ ಅಂತಾ ತಿಳಿಸಿದ್ದು ಅವರ ಹತ್ತಿರ ಸಿಕ್ಕ ಸ್ಪೋಟಕ ವಸ್ತುಗಳ ಬಗ್ಗೆ ಯಾವುದಾದರೂ ಅಧಿಕೃತವಾದ ಪರವಾನಿಗೆ ಅಥವಾ ದಾಖಲಾತಿ ವಿಚಾರಿಸಲು ಅವರು ತಮ್ಮ ಹತ್ತಿರ ಯಾವುದೇ ಅಧಿಕೃತ ಪರವಾನಿಗೆ ಇರುವುದಿಲ್ಲಾ. ಇವುಗಳನ್ನು ಅನಧಿಕೃತವಾಗಿ ಉಪಯೋಗಿಸುತ್ತಿರುವುದಾಗಿ ತಿಳಿಸಿದರು. ನಂತರ ಅವರ ಹತ್ತಿರ ಸಿಕ್ಕ ಸ್ಪೋಟಕ ವಸ್ತುಗಳ ಪೈಕಿ ಒಂದು ( ಎಲೆಕ್ಟ್ರಾನಿಕ್ ಡಿಟೋನೇಟರ್ ) ಕೇಪನ್ನು ಮತ್ತು ಒಂದು ಕೇಜಿಯಷ್ಟು ಅಮೋನಿಯಂ ನೈಟ್ರೇಟ್ ನ್ನು ರಸಾಯನಿಕ ಪರೀಕ್ಷೆ ಕುರಿತು ಪ್ರತ್ಯೇಕವಾಗಿ ಪ್ಲಾಸ್ಟಿಕ ಚೀಲದಲ್ಲಿ ಹಾಕಿ ಅವುಗಳನ್ನು ಪ್ರತ್ಯೇಕವಾಗಿ ಬಿಳಿ ಬಟ್ಟೆಯ ಚೀಲಗಳಲ್ಲಿ ಹಾಕಿ ಅವುಗಳ ಬಾಯಿ ಹೊಲಿದು VB ಎಂಬ ಇಂಗ್ಲೀಷ ಅಕ್ಷರದಿಂದ ಶೀಲ್ ಮಾಡಿ ಪಂಚರ ಸಹಿ ಚೀಟಿ ಅಂಟಿಸಿ ಉಳಿದ 22 ಕೇಪ್ ಮತ್ತು ಎರಡು ಕೇಜಿ ಅಮೋನಿಯಂ ನೈಟ್ರೀಟ್ ನ್ನು ಪ್ರತ್ಯೇಕವಾಗಿ ಚೀಲದಲ್ಲಿ ಹಾಕಿ ಎಲ್ಲವನ್ನು ತಾಬಾಕ್ಕೆ ತಗೆದುಕೊಂಡಿದ್ದು, ಈ ಬಗ್ಗೆ ಸಾಯಂಕಾಲ 4:30 ಗಂಟೆಯಿಂದ 5:30 ಗಂಟೆಯವರಗೆ ಸ್ಥಳದಲ್ಲಿಯೇ ಪಂಚನಾಮೆಯನ್ನು ನಿರ್ವಹಿಸಲಾಯಿತು. ನಂತರ ದಾಳಿಯಲ್ಲಿ ಸಿಕ್ಕ ಏಳು ಜನ ಹಾಗೂ ಸ್ಟೋಟಕ ವಸ್ತುಗಳನ್ನು ವಶಕ್ಕೆ ತಗೆದುಕೊಂಡು ವಾಪಸ್ಸು ಠಾಣೆಗೆ ಬಂದಿದ್ದು ಇರುತ್ತದೆ. ಕಾರಣ ಸದರಿ ಸ್ಟೋಟಕ ವಸ್ತುಗಳನ್ನು ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಸ್ವಾಧೀನದಲ್ಲಿಟ್ಟುಕೊಂಡ ಏಳು ಜನರ ವಿರುದ್ದ ಪ್ರಕರಣ ದಾಖಲಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 162/2016 ಕಲಂ: 143, 147,148, 341, 323, 324,307, 504, 506, 149 ಐ.ಪಿ.ಸಿ, SC AND THE ST  (PREVENTION OF ATTROCITIES) ACT, 1989 U/s 3(1)(10) )
ದಿನಾಂಕ 11-08-2016 ರಂದು 00-30 ಗಂಟೆಗೆ  ಸುರೇಶ ತಂದೆ ಯಲ್ಲಪ್ಪ ಕನಕಗಿರಿ, ವಯಸ್ಸು 24 ವರ್ಷ, ಜಾ: ಮುಚಿಗೇರ, ಉ:  ವ್ಯಾಪಾರ, ಸಾ: 9ನೇ ವಾರ್ಡ, ಲಿಂಗರಾಜ ಕ್ಯಾಂಪ್, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ನಿನ್ನೆ ದಿನಾಂಕ 10-08-2016 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಉಪ್ಪಿನ ಮಳಿ ಕ್ಯಾಂಪಿನ ಆಂಜನೇಯ ದೇವಸ್ಥಾನದಲ್ಲಿ ನಮ್ಮ ಸಮಾಜದ ಮೀಟಿಂಗ್ ಇತ್ತು.   ಆ ಸಮಯದಲ್ಲಿ ಲಿಂಗರಾಜ ಕ್ಯಾಂಪಿನ ರವಿ ತಂದೆ ಬಸವರಾಜ ಕುರುಬರು ಇವನು ತನ್ನೊಂದಿಗೆ ಮತ್ತಿತರ 7 ಜನರನ್ನು ಕರೆದುಕೊಂಡು ಬಂದಿದ್ದು, ಆಗ ನಾನು ಇಲ್ಲಿ ನಮ್ಮ ಸಮಾಜದ ಮೀಟಿಂಗ್ ನಡೆದಿದ್ದು ನೀವು ಬರಬೇಡಿರಿ ಹೋಗಿರಿ ಅಂತಾ ಅಂದಿದ್ದಕ್ಕೆ ಅವರೆಲ್ಲರೂ ನನ್ನೊಂದಿಗೆ ಬಾಯಿ ಮಾತಿನ ಜಗಳ ಮಾಡಿಕೊಂಡಿದ್ದು, ಅಲ್ಲದೇ ಹೊರಗೆ ಬಾ ನೋಡಿಕೊಳ್ಳುತ್ತೇವೆ ಅಂತಾ ಹೇಳಿ ಹೋಗಿದ್ದರು. ನಂತರ ರಾತ್ರಿ   8-30 ಗಂಟೆ ಸುಮಾರಿಗೆ ನಾನು ಕನಕಗಿರಿ ರಸ್ತೆಯ ರಾಜಾ ವೆಂಕಟಪ್ಪ ನಾಯಕ ಸರ್ಕಲ್ ಹತ್ತಿರ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ನಾನು ಮೀಟಿಂಗ್ ದಲ್ಲಿ ಬರಬೇಡಿರೆಂದು ಹೇಳಿದ್ದನ್ನೇ ನೆಪ ಮಾಡಿಕೊಂಡು ಲಿಂಗರಾಜ ಕ್ಯಾಂಪಿನ (1) ರವಿ ತಂದೆ ಬಸವರಾಜ ಕುರುಬರು (2) ಮಲ್ಲೇಶ (ಮಲ್ಲ) ಪೂಜಾರ ಕುರುಬರು (3) ಆಂಜನೇಯ (ಅಂಜಿ) ತಂದೆ ಹನುಮಂತಪ್ಪ (ಹರನಾಥಪ್ಪ) ನಾಯಕ (4) ಮಂಜು ತಂದೆ ಹರನಾಥಪ್ಪ ನಾಯಕ (5) ಹನುಮಂತ ತಂದೆ ಯಲ್ಲಪ್ಪ ವಡ್ಡರ (6) ಲಕ್ಷ್ಮಣ @ ಲಚಮ ಹಾಗೂ ಉಪ್ಪಿನಮಳಿ ಕ್ಯಾಂಪಿನ (7) ಮಲ್ಲಿಕಾರ್ಜುನ ಸ್ವಾಮಿ  (8) ಪ್ರಶಾಂತ ಚಿತ್ರಗಾರ ಇವರೆಲ್ಲರೂ ಅಕ್ರಮ ಕೂಟ ರಚಿಸಿಕೊಂಡು ಬಂದು ನನ್ನನ್ನು ತಡೆದು ನಿಲ್ಲಿಸಿ “ಈ ಸೂಳೇಮಗಾ ನಮಗೆ ಮಾತಾಡುತ್ತಾನೆ, ಹಾಕ್ರಿ ಈ ಮುಚಿಗೇರ ಸೂಳೇಮಗನ್ನಾ” ಅಂತಾ ಅನ್ನುತ್ತಾ ಮಲ್ಲೇಶ ಮತ್ತು ಆಂಜನೇಯ ನನ್ನನ್ನು ಹಿಡಿದುಕೊಂಡಿದ್ದು ರವಿ ಇವನು “ಇನೌನ್ ಇವತ್ ಮುಗಿಸಿಬಿಡ್ತಿನಿ” ಅಂತಾ ಅನ್ನುತ್ತಾ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಸಣ್ಣ ಚಾಕುವಿನಿಂದ ನನ್ನ ಎದೆಗೆ ಬಲಭಾಗದಲ್ಲಿ ತಿವಿದಿದ್ದು, ನಾನು ನನ್ನ ಕೈಯಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ ನನ್ನ ಎದೆಯ ಎಡಭಾಗದಲ್ಲಿಯೂ ಸಹಾ ಎಳೆದಿದ್ದು ಇದೆ.  ಆಗ ಉಳಿದವರೆಲ್ಲರೂ ನನಗೆ ಕೈಯಿಂದ ಹೊಡೆಬಡೆ ಮಾಡಿದ್ದು ಅಲ್ಲದೇ “ಲೇ ನಿಮ್ಮೌನ್ ನಮ್ಮನ್ ವಿರುದ್ಧ ಹಕ್ಕೊಂದ್ ಗಂಗಾವತ್ಯಾಗ ಜೀವಂತ್ ಇರ್ತಿ ಏನಲೇ, ನಿನ್ನ ಜೀವಾ ತೆಗೆದ ಬಿಡ್ತಿವಿ ಸೂಳೇಮಗನೇ ಹುಷಾರ್” ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆಂದು ವಗೈರೆ ಆಗಿ ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 134/2016 ಕಲಂ: 379 ಐ.ಪಿ.ಸಿ:.
ದಿನಾಂಕ: 10-08-2016 ರಂದು ಮದ್ಯಾಹ್ನ 12-00 ಗಂಟೆಗೆ ಫಿರ್ಯಾದಿದಾರರಾದ ಗೌಸ್ ಮೋಹಿದ್ದಿನ ತಂದೆ ಮಹ್ಮದ್ ಹುಸೇನ ಸಿಕ್ಕಲಗಾರ ವಯಾ: 38 ವರ್ಷ ಜಾ: ಮುಸ್ಲಿಂ ಉ: ವ್ಯಾಪಾರ ಸಾ: ಸೈಲಾನಪೂರ ಓಣಿ ಕೊಪ್ಪಳರವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸರಾಂಶವೇನೆಂದರೆ, ದಿನಾಂಕ: 18-07-2015 ರಂದು ಮುಂಜಾನೆ 11-00 ಗಂಟೆಗೆ ಫಿರ್ಯಾದಿದಾರರು ತಮ್ಮ ತಮ್ಮನಾದ ಖಾಸೀಂಅಲಿ ಇವರನ್ನು ಬಸ್ ನಿಲ್ದಾಣಕ್ಕೆ ಬಿಡಲು ಅವರನ್ನು ತಮ್ಮ ಮೋಟಾರ ಸೈಕಲ್ ಮೇಲೆ ಕರೆದುಕೊಂಡು ಹೋಗಿ ತಮ್ಮ ಮೋಟಾರ ಸೈಕಲ್ನ್ನು ಬಸ್ ನಿಲ್ದಾಣದ ಮುಂದೆ ನಿಲ್ಲಿಸಿ, ತನ್ನ ತಮ್ಮನನ್ನು ಬಸ್ ಹತ್ತಿಸಿ ವಾಪಸು ಮುಂಜಾನೆ 11-30 ಗಂಟೆಯ ಸುಮಾರಿಗೆ ಬಸ್ ನಿಲ್ದಾಣದ ಹೊರಗಡೆ ಬಂದು ನೋಡಿದಾಗ ತಾನು ನಿಲ್ಲಸಿದ್ದ ತನ್ನ ಮೋಟಾರ ಸೈಕಲ್ ಕಾಣಲಿಲ್ಲಾ. ಕೂಡಲೇ ತಾನು ಗಾಭರಿಯಾಗಿ ಬಸ್ ನಿಲ್ದಾಣದ ಸುತ್ತಾಮುತ್ತಾ ಹಾಗೂ, ರೈಲ್ವೆ ಸ್ಟೇಷನ್ ಜವಾಹರ ರೋಡ್ ಮುಂತಾದ ಕಡೆಗಳಲ್ಲಿ ಹುಡುಕಾಡಲು ಎಲ್ಲಿಯೂ ಕಂಡುಬರಲಿಲ್ಲಾ, ನಂತರ ಫಿರ್ಯಾದಿದಾರರಿಗೆ ಜಾಹಿರಾತು ಮೂಲಕ ಗೊತ್ತಾಗಿದ್ದೇನೆಂದರೆ 1] ಕಾಳಿಂಗ ತಂದೆ ಹುಲಗಪ್ಪ ವಯಾ: 28 ವರ್ಷ ಜಾ: ಕೋರವರ ಉ: ಗುಜರಿ ವ್ಯಾಪಾರ ಸಾ: ಶಿರಸಿಂಕಲ್ ಹೊಸಪೇಟೆ ಜಿ: ಬಳ್ಳಾರಿ ಇತನು ಫಿಯರ್ಾದಿದಾರರ ಮೋಟಾರ್ ಸೈಕಲ್ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಫಿಯರ್ಾದಿದಾರರಿಗೆ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಮೋಟಾರ ಸೈಕಲ್ ಕಳ್ಳತನ ಮಾಡುವವರನ್ನ ಹಿಡಿದಿರುವುದು ಗೋತ್ತಾಗಿ, ನಂತರ ಇವರು ಠಾಣೆಗೆ ಬಂದು ನೋಡಿ ತಮ್ಮ ಮೋಟರ್ ಸೈಕಲ್ನ್ನು ಖಚಿತ ಪಡಿಸಿಕೊಂಡ ಮೇಲೆ ಠಾಣೆಗೆ ಬಂದು ಫಿಯರ್ಾದಿ ಸಲ್ಲಿಸಿದ್ದು ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 228/2016 ಕಲಂ:  279, 337, 338 ಐ.ಪಿ.ಸಿ.

ದಿನಾಂಕ:10-08-2016 ರಂದು ಮುಂಜಾನೆ 08-15 ಗಂಟೆಗೆ ಪಿರ್ಯಾದಿದಾರಳಾದ ನಾಗರತ್ನ ಗಂಡ ಶರಣಯ್ಯ ಸಂಕಿನಮಠ ಸಾ: ಕಂದಕೂರ ಹಾ:ವ:ಮಾರುತಿ ನಗರ ರವರು ಠಾಣೆಗೆ ಹಾಜರಾಗಿ ಗಣಕೀಕೃತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸದರ ಪಿರ್ಯಾದಿಯ ಸಾರಾಂಶವೆನೆಂದರೆ, ತನ್ನ ಗಂಡನಾದ ಶರಣಯ್ಯ ಸಂಕಿನಮಠ ಈತನು ಈಗ್ಗೆ 14 ವರ್ಷಗಳಿಂದ ಕುಷ್ಟಗಿಯಲ್ಲಿರುವ ಹಾಲಿನ ಡೈರಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ. ನಿನ್ನೆ ದಿನಾಂಕ:09-08-2016 ರಂದು ರಾತ್ರಿ 08-30 ಗಂಟೆಯ ಸುಮಾರಿಗೆ ನನ್ನ ಗಂಡನು ತನ್ನ ಮೋಟಾರ ಸೈಕಲ್ ನಂ ಕೆ.ಎ-37 ಇ.ಎ-3398 ನೇದ್ದನ್ನು ತೆಗೆದುಕೊಂಡು ಕುಷ್ಟಗಿಗೆ ಹೋಗಿ ಡ್ರೈರಿಯವರಿಗೆ ಬೆಟ್ಟಿಯಾಗಿ  ವಾಪಸ ಬರುತ್ತೇನೆ ಅಂತಾ ಹೇಳಿ ಹೋದನು. ನಂತರ ರಾತ್ರಿ 11-00 ಗಂಟೆಯ ಸುಮಾರಿಗೆ ನನ್ನ ಗಂಡನು ತನ್ನ ಮೋಟಾರ ಸೈಕಲನ್ನು ಸ್ಕೀಡ ಮಾಡಿಕೊಂಡು ಬಿದ್ದಿರುತ್ತಾನೆ. ಅಂತಾ ಸುದ್ದಿ ಕೇಳಿ ಗೊತ್ತಾಗಿ ನಾನು ನಮ್ಮ ಸಂಬಂದಿಕರಾದ ಕಲ್ಲಯ್ಯ ತಂದೆ ವಿರುಪಾಕ್ಷಯ್ಯ ಸಂಕಿನಮಠ ಇಬ್ಬರೂ ಬಂದು ನೋಡಲಾಗಿ ನನ್ನ ಗಂಡನು ಕುಷ್ಟಗಿ-ಕಂದಕೂರ ರಸ್ತೆಯ ಮೇಲೆ ರಾತ್ರಿ 10-30 ಗಂಟೆಯ ಸುಮಾರಿಗೆ ವಾಪಸ ಮನೆಗೆ ಮೋಟಾರ ಸೈಕಲ್ ನಂ ಕೆ.ಎ-37 ಇ.ಎ-3398 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತದಿಂದ ನಡೆಯಿಸಿಕೊಂಡು ಬರುತ್ತಿರುವಾಗ ಸ್ಕೀಡಮಾಡಿಕೊಂಡು ಬಿದ್ದು ಅಪಘಾತವಾಗಿದ್ದು ಅಪಘಾತದಲ್ಲಿ ನನ್ನ ಗಂಡನಿಗೆ ತಲೆಗೆ ಭಾರಿರಕ್ತಗಾಯವಾಗಿ, ಎರಡು ಕಪಾಳಕ್ಕೆ ಬಾವು ಬಂದು ರಕ್ತಗಾಯವಾಗಿ ಎಡಕಿವಿಯಲ್ಲಿ ರಕ್ತ ಬಂದಂತೆ ಕಂಡು ಬಂದಿದ್ದು. ಕೂಡಲೇ ನಮ್ಮ ಸಂಬಂದಿಕ ಕಲ್ಲಯ್ಯ ಈತನು 108 ಅಂಬುಲೇನ್ಸಗೆ ಪೋನ್ ಮಾಡಿ ಅಂಬುಲೇನ್ಸ ಬಂದ ನಂತರ ಚಿಕಿತ್ಸೆ ಕುರಿತು ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದೇವು. ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಕೊಪ್ಪಳ ಆಸ್ಪತ್ರೆಗೆ ಹೋಗಲು ವೈದ್ಯರು ತಿಳಿಸದ ಮೇರೆಗೆ ಕೊಪ್ಪಳ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆಗಾಗಿ ಸೇರಿಕೆ ಮಾಡಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008