Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, August 12, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 229/2016 ಕಲಂ: 323, 324, 504, 506 ಸಹಿತ 34 ಐ.ಪಿ.ಸಿ:
ದಿನಾಂಕ:- 11-08-2016 ರಂದು ರಾತ್ರಿ 8:30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಯಂಕಪ್ಪ ತಂದೆ ಹುಲುಗಪ್ಪ ದೊಡ್ಡಮನಿ, ವಯಸ್ಸು: 37 ವರ್ಷ ಸಾ: ಮಲ್ಲಾಪೂರ   ತಾ: ಗಂಗಾವತಿ ಫಿರ್ಯಾದಿಯನ್ನು ನೀಡಿದ್ದು, ಸಂಜೆ 5:30 ಗಂಟೆಯ ಸುಮಾರಿಗೆ ನಾನು ಮನೆಯ ಹತ್ತಿರ ಇರುವಾಗ ನಮ್ಮ ಮಾವನಾದ ನೀಲಕಂಠಪ್ಪ ತಂದೆ ತಿಪ್ಪಣ್ಣ ತೋರಣಗಲ್ ವಯಸ್ಸು: 40 ವರ್ಷ ಜಾತಿ: ಬೋವಿ ಉ:  ಗಂಗಾವತಿ ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋದಲ್ಲಿ ಬಸ್ ಚಾಲಕ ಈತನು ಚಿಕನ್ ತೆಗೆದುಕೊಂಡು ಬಂದು ಮನೆಯಲ್ಲಿ ಇಟ್ಟಿದ್ದನ್ನು ನಾಯಿ ತಗೆದುಕೊಂಡು ಹೋಗಿದ್ದಕ್ಕೆ, ಮನೆಗೆ ಸರಿಯಾಗಿ ಬಾಗಿಲು ಹಾಕುವದಿಲ್ಲಾ ಅಂತಾ ಅವನ ಹೆಂಡತಿಗೆ ಬೈಯುತ್ತಿದ್ದನು.  ಅದೇ ಸಮಯಕ್ಕೆ  ಅಲ್ಲಿಯೇ ಹೊರಟಿದ್ದ ಬೋಜಪ್ಪ ತಂದೆ ದುರುಗಪ್ಪ ವಯಸ್ಸು: 32 ವರ್ಷ, ಜಾತಿ: ಭೋವಿ ಈತನು ಒಮ್ಮಿಂದೊಮ್ಮಲೆ ನೀಲಕಂಠಪ್ಪನ ಮನೆಯ ಅಂಗಳದಲ್ಲಿ ಹೋಗಿ ಯಾಕಲೇ ಸೂಳೆ ಮಗನೇ ನನ್ನನ್ನು ನೋಡಿ ಯಾಕೇ ಬೈಯುತ್ತೀಯಾ ಅಂತಾ ಅವಾಚ್ಯವಾಗಿ ಬೈದು ಜಗಳಕ್ಕೆ ಬಂದಾಗ  ನೀಲಕಂಠಪ್ಪನು  ನಾನು ನನ್ನ ಹೆಂಡತಿಗೆ ಬೈದರೆ ನೀನು ಯಾಕೇ ತಪ್ಪು ತಿಳಿದುಕೊಳ್ಳುತ್ತೀಯಾ ಅಂತಾ ಹೇಳಿದ್ದಕ್ಕೆ ಆತನು ಒಮ್ಮಲೇ ಸಿಟ್ಟಿಗೆ ಬಂದು ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯಿಂದ ತೆಲೆಗೆ ಹಾಗೂ ಎದೆಗೆ ಹೊಡೆಬಡೆ ಮಾಡಿ ಗಾಯಗೊಳಿಸಿದನು. ನಂತರ ಅಲ್ಲಿಗೆ ಬಂದ ಭೋಜಪ್ಪನ ಹೆಂಡತಿ ಭಾಗ್ಯಮ್ಮ - 30 ವರ್ಷ ಹಾಗೂ ತಾಯಿಯಾದ ಬಸಮ್ಮ ಗಂಡ ದುರುಗಪ್ಪ 55 ವರ್ಷ ಇವರುಗಳು ಸಹ ಈ ಸೂಳೆ ಮಗನಿಗೆ ಸೊಕ್ಕು ಬಂದಿದೆ ಬಹಳ ಮಾತನಾಡುತ್ತಾನೆ ಅಂತಾ ಎದೆಯ ಮೇಲೆ ಅಂಗಿ ಹಿಡಿದು ಕೈಗಳಿಂದ ಕಪಾಳಕ್ಕೆ ಹೊಡೆಬಡೆ ಮಾಡಿ ಈ ಸೂಳೆ ಮಗನನ್ನು ಮುಗಿಸಿಬಿಡು ಅಂತಾ ಜೀವ ಬೆದರಿಕೆ ಹಾಕಿರುತ್ತಾರೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.                   
2] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 68/2016 ಕಲಂ: 186, 341, 504, 506, 509 ಸಹಿತ 34 IPC.
ತುಮರಿಕೊಪ್ಪ ಗ್ರಾಮಕ್ಕೆ ಶುದ್ದ ಕುಡಿಯುವ ನೀರಿನ ಘಟ ಮಂಜುರಾಗಿದ್ದು ಆದ್ದರಿಂದ ತುಮರಿಕೊಪ್ಪ ಗ್ರಾಮದ ಗ್ರಾಮಪಂಚಾಯತ ಅಧ್ಯಕ್ಷರಾದ ಶ್ರೀಮತಿ ಹನಮಮ್ಮ ರವರು ತುಮರಿಕೊಪ್ಪ ಗ್ರಾಮದಲ್ಲಿಯ ಈ ಹಿಂದಿನ ಹಾಳು ಬಿದ್ದ ನೀರಿನ ಟ್ಯಾಂಕನ್ನು ತೆಗೆದು ಹೊಸದಾಗಿ ಶುದ್ದ ಕುಡಿಯುವ ನೀರಿನ ಟ್ಯಾಂಕನ್ನು ನಿರ್ಮಿಸಲು ಹೋದಾಗ ತುಮರಿಕೊಪ್ಪ ಗ್ರಾಮದವರಾದ 1] ಲೋಕಪ್ಪ @ ಮಹಾದೇವಪ್ಪ ಪೂಜಾರ 2] ರಮೇಶ ತಂದೆ ಮಾಹಾದೇವಪ್ಪ ಪೂಜಾರ 3] ವಿಠ್ಠಪ್ಪ ತಂದೆ ಮಹಾದೇವಪ್ಪ ಪೂಜಾರ 4] ಮಲ್ಲಪ್ಪ ತಂದೆ ಲೋಕಪ್ಪ ನಸಗುನ್ನಿ ಎಲ್ಲರೂ ಜಾತಿ: ವಾಲ್ಮೀಕಿ ಸಾ: ತುಮರಿಕೊಪ್ಪ ತಾ: ಕುಷ್ಟಗಿ ಇವರು ಬಂದವರೇ ಕೆಲಸಮಾಡುವದನ್ನು ತಡೆದು ನಿಲ್ಲಿಸಿ ಇದು ನಮ್ಮ ಧಣಿ ಜಾಗೆ ಇಲ್ಲಿ ಏನೂ ಮಾಡಬೇಡರಿ ಎಂದು ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈದಾಡುತ್ತಾ. ಫಿರ್ಯಾದಿ ಹಾಗೂ ಕೆಲಸಗಾರರ ಮೇಲೆ ಏರಿ ಬಂದಾಗ ಫಿರ್ಯಾದಿದಾರರು, ನಾವು ಈ ಮೋದಲಿನ ಜಾಗೆಯಲ್ಲಿ ಕಟ್ಟುತಿದ್ದೇವೆ. ಊರಲ್ಲಿ ಎಲ್ಲರಿಗೂ ಶುದ್ದ ಕುಡಿಯುವ ನೀರು ದೋರೆಯುತ್ತವೆ, ಯಾಕ ಅಡ್ಡಿ ಮಾಡತೀರಿ. ಅಂತಾ ಫಿರ್ಯಾದಿದಾರರು ಹಾಗೂ ಊರ ಜನರು ಅವರಿಗೆ ತಿಳಿ ಹೇಳಿದರು. ಆರೋಪಿತರೆಲ್ಲರೂ ಕೂಡಿ ಫಿರ್ಯಾದಿಗೆ ನೀಯಾ ಅಧ್ಯಕ್ಷಣಿಯಾಗಿದಿ ನಾವು ಕಟ್ಟಲಿಕ್ಕೆ ಬಿಡುವುದಿಲ್ಲಾ. ಅಂತಾ ಅಡ್ಡಬಂದು ನಿಮ್ಮನ್ನು ಬಿಡುವುದಿಲ್ಲಾ. ಇಲ್ಲಿಯೇ ಹಾಕಿ ಮುಚ್ಚಿಬಿಡುತ್ತೇವೆ. ಎಂದು ಅಶ್ಲೀಲ ಶಬ್ದಗಳನ್ನು ಬಳಸಿ ಬೈದಾಡಿ ಜೀವ ಬೇದರಿಕೆ ಹಾಕಿದ್ದು ಇರುತ್ತದೆ. ನಂತರ ಊರಿನ ಹಿರಯರಾದ 1] ಯಮನೂರಪ್ಪ ಪರಸಾಪೂರ 2] ರಾಮಣ್ಣ ನಸಗುನ್ನಿ, 3] ಚಂದ್ರಪ್ಪ ಗುಡೂರ 4] ರಂಗಪ್ಪ ನಾಯಕರ 5] ಯಮನಪ್ಪ ಗೋತಗಿ. ಮತ್ತು 6] ಮುತ್ತಪ್ಪ ಗೋತಗಿ ಇವರಲ್ಲರೂ ಅವರಿಗೆ ಬುದ್ದಿ ಹೇಳಿದರೆ. ಕೇಳದೆ  ಆರೋಪಿತರೆಲ್ಲಾ ಅವರಿಗೆ ತಿರುಗಿ ಮದ್ಯಾಹ್ನ  3-30 ಗಂಟೆಯವರಗೆ ಬೈದಾಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.

0 comments:

 
Will Smith Visitors
Since 01/02/2008