Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, August 18, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 233/2016 ಕಲಂ: 78(3) Karnataka Police Act.
ದಿನಾಂಕ:- 16-08-2016 ರಂದು ಸಾಯಂಕಾಲ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ದಾಸನಾಳ ಬ್ರಿಡ್ಜ್ ಹತ್ತಿರ ಒಂದು ಗೋದಾಮಿನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದಿದ್ದು, ಶ್ರೀ ಪ್ರಕಾಶ. ಎಲ್. ಮಾಳಿ, ಪಿ.ಎಸ್.ಐ. ಮತ್ತು ಠಾಣೆಯ ಸಿಬ್ಬಂದಿಯವರಾದ ಪಿ.ಸಿ. 361, 429, 129, 323 ಎ.ಪಿ.ಸಿ. 77 ಕನಕಪ್ಪ ಹಾಗೂ ಇಬ್ಬರು ಪಂಚರನ್ನು ಬರಮಾಡಿಕೊಂಡು ದಾಸನಾಳ ಬ್ರಿಡ್ಜ್ ಸಮೀಪ ಜೀಪನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ನೋಡಲಾಗಿ ನಮಗೆ ಮಾಹಿತಿ ಇದ್ದ ಪ್ರಕಾರ ಗೋದಾಮಿನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರು ಸೇರಿದ್ದು, ಅವರಲ್ಲಿ ಒಬ್ಬ ವ್ಯಕ್ತಿಯು ಕುಳಿತುಕೊಂಡು ಜನರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ, ಅದೃಷ್ಟದ ಮಟಕಾ ನಂಬರ್ಗಳಿಗೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗುತ್ತಾ ಜನರನ್ನು ಕರೆದು, ಅವರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ, ಪಟ್ಟಿಯನ್ನು ಬರೆದುಕೊಳ್ಳುತ್ತಾ ಅದೃಷ್ಠದ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಮಟಕಾ ಪಟ್ಟಿ ಬರೆಯುತ್ತಿದ್ದವನು ಸಿಕ್ಕಿ ಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ವಿಚಾರಿಸಲಾಗಿ ಮಟಕಾ ಪಟ್ಟಿ ಬರೆದುಕೊಳ್ಳುತ್ತಿದ್ದವನು ತನ್ನ ಹೆಸರು ಅಹ್ಮದ್ ಹುಸೇನ ತಂದೆ ಪಕ್ರುದ್ದೀನ್ ಸಾಬ ವಯಸ್ಸು: 30 ವರ್ಷ ಜಾತಿ: ನಧಾಪ್ ಉ: ಹೂವಿನ ವ್ಯಾಪಾರ, ಸಾ: 4 ನೇವಾರ್ಡ ಬಸಾಪಟ್ಟಣ ತಾ: ಗಂಗಾವತಿ ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 1060/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ಪೆನ್ನು ದೊರೆತಿದ್ದು ಇದೆ.  
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 184/2016 ಕಲಂ: 78(3) Karnataka Police Act.
ದಿನಾಂಕಃ- 17-08-2016  ರಾತ್ರಿ 9-35 ಗಂಟೆಯ ಸುಮಾರಿಗೆ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ಒಂದು ಮೂಲ ಪಂಚನಾಮೆಯೊಂದಿಗೆ ಮಾನ್ಯ ನ್ಯಾಯಾಲಯದ ಅನುಮತಿ ಪತ್ರದೊಂದಿಗೆ ವರದಿಯನ್ನು ಹಾಜರುಪಡಿಸಿದ್ದು ಸಾರಾಂಶವೆನಂದರೆ, ಇಂದು ದಿನಾಂಕ 17-08-2016 ರಂದು ರಾತ್ರಿ 8-10 ಗಂಟೆಯ ಸುಮಾರಿಗೆ ಕಾರಟಗಿ ಇಂದಿರಾನಗರದ ಗಾಳೆಮ್ಮ ಗುಡಿಯ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಮಟಕಾ ಜೂಜಾಟ ತೊಡಗಿದ್ದ ಆರೋಪಿತನ ಮೇಲೆ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿವರು ಪಂಚರ ಸಮಕ್ಷದಲ್ಲಿ ದಾಳಿ ಮಾಡಿ ಆರೋಪಿ ವೀರುಪಾಕ್ಷಗೌಡ ತಂದಿ ರುದ್ರಗೌಡ ಗೌಡ್ರ  ವಯಾ-52 ವರ್ಷ ಜಾ. ಲಿಂಗಾಯತ ಉ- ಕಿರಾಣಿ ಅಂಗಡಿ ಸಾ. ಇಂದಿರಾನಗರ ಕಾರಟಗಿ ತಾ. ಗಂಗಾವತಿ ಈತನಗಿ ಹಿಡಿದುಕೊಂಡು ಆರೋಪಿತನ ಕಡೆಯಿಂದ ನಗದು ಹಣ ರೂ.310=00 ಗಳು ಹಾಗೂ ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗಕೊಂಡೆನು.
3] ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ: 28/2016 ಕಲಂ: 279, 304(ಎ) ಐ.ಪಿ.ಸಿ:
ದಿನಾಂಕ. 17-08-2016 ರಂದು ಬೆಳಿಗ್ಗೆ 11-45 ಗಂಟೆಗೆ ಫಿರ್ಯಾದಿದಾರರಾದ ಹುಸೇನಸಾಬ ತಂದೆ ಭಾಷಾಸಾಬ ಕವಲೂರ ವಯ. 37 ಜಾತಿ. ಮುಸ್ಲಿಂ ಉ. ಆಟೋ ಚಾಲಕ ಸಾ. ಮುದ್ದಾಬಳ್ಳಿ ಜಿ. ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು ಅವರು ನೀಡಿದ ಹೇಳಿಕೆಯನ್ನು ಗಣಕೀಕರಣ ಮಾಡಿಕೊಂಡಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 17-08-2016 ರಂದು ಫಿರ್ಯಾದಿದಾರರು ಅವರ ತಂದೆ ಭಾಷಾಸಾಬ ಇವರನ್ನು ಕರೆದುಕೊಂಡು ಚಿಕಿತ್ಸೆ ಕೊಡಿಸಲು ಕೊಪ್ಪಳದ ಕಿಮ್ಸ ಆಸ್ಪತ್ರೆಗೆ ಬಂದು ಅಲ್ಲಿ ಚಿಕಿತ್ಸೆ ಕೊಡಿಸಿ ವಾಪಸ ಊರಿಗೆ ಹೋಗಲು ಕೊಪ್ಪಳದ ಬಸವೇಶ್ವರ ಸರ್ಕಲ್ ಗೆ ಬಂದು ಅಲ್ಲಿಂದ ಫಿರ್ಯಾದಿ ಮತ್ತು ಅವರ ತಂದೆ ನಡೆದುಕೊಂಡು ಗವಿಮಠ ರಸ್ತೆಯ ಕಡೆಗೆ ಹೋಗುವಾಗ ಫಿರ್ಯಾದಿಯ ತಂದೆ ಮುಂದೆ ಹೋಗುತ್ತಿರುವಾಗ ಹೊಪಸೇಟೆ ರಸ್ತೆಯ ಕಡೆಯಿಂದ ಬಂದ ಲಾರಿ ನಂಬರ. KA-25/A-9872 ನೇದ್ದರ ಚಾಲಕನು ಲಾರಿ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ತಂದೆಗೆ ಟಕ್ಕರಮಾಡಿ ಅಪಘಾತಮಾಡಿದನು ಇದರಿಂದ ಫಿರ್ಯಾದಿಯ ತಂದೆಗೆ ತಲೆಗೆ ತೆರಚಿದಗಾಯ ಮತ್ತು ಬೆನ್ನಿಗೆ ಭಾರಿ ರಕ್ತಗಾಯವಾಗಿದ್ದು, ಚಿಕಿತ್ಸೆಗಾಗಿ ಫಿರ್ಯಾದಿ ಮತ್ತು ಅವರ ಸ್ನೇಹಿತ ಹಜರತ್ ಅಲಿ ಇಬ್ಬರೂ ಒಂದು ಆಟೋದಲ್ಲಿ ಕರೆದುಕೊಂಡು ಹೋಗಿ ಕೊಪ್ಪಳದ ಕಿಮ್ಸ ಆಸ್ಪತ್ರೆಗೆ ಕರರೆದುಕೊಂಡು ಹೊಗುವಾಗ ದಾರಿಯ ಮಧ್ಯದಲ್ಲಿ ಮೃತಪಟ್ಟಿದ್ದು ಇರುತ್ತದೆ. ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 147/2016 ಕಲಂ: 279, 337 ಐ.ಪಿ.ಸಿ:
ದಿನಾಂಕ 16-08-2016 ರಂದು ಮದ್ಯಾನ 02-00 ಗಂಟೆಯ ಸುಮಾರಿಗೆ ಪಿರ್ಯಾದುದಾರರು ಮತ್ತು ಆರೋಪಿತನು ಮೋಟರ ಸೈಕಲ್ ನಂಬರ ಕೆ.ಎ.37/ ಇ.ಎ.8591 ನೇದ್ದರಲ್ಲಿ ಕೊಪ್ಪಳ ಗಂಗಾವತಿ ರಸ್ತೆಯ ಮೇಲೆ ಜಬ್ಬಲ ಗುಡ್ಡದ ಹತ್ತಿರ ಇರುವ ರೈಲ್ವೇ ಬ್ರಿಡ್ಜ್ ಮೇಲೆ ವೇಗವಾಗಿ ಹೋಗುತ್ತಿರುವಾಗ ರಸ್ತೆಯ ಮೇಲೆ ಒಂದು ದನ ಅಡ್ಡ ಬಂದಿದ್ದರಿಂದ ಒಮ್ಮೇಲೆ ಬೈಕನ್ನು ಎಡಗಡೆಗೆ ತಿರುಗಿಸಿದಾಗ ಬ್ರಿಡ್ಜ್ ನ ಪಕ್ಕದಲ್ಲಿರುವ ಆಂಗ್ಲರ್ ಪಟ್ಟಿಗೆ ಡಿಕ್ಕಿಕೊಟ್ಟು ಅಪಘಾತ ಪಡಿಸಿದ್ದರಿಂದ ಆರೋಪಿತನ ಕಾಲು ಆಂಗ್ಲರ ಪಟ್ಟಿಗೆ ಸಿಕ್ಕಿಕೊಂಡು ತುಂಡಾಗಿ ಬಿದ್ದಿದ್ದು ಆತನು ಬ್ರಿಡ್ಜ್ ಕೆಳಗೆ ಬಿದ್ದಿದ್ದು ಮತ್ತು ಪಿರ್ಯಾದಿಯು ಬ್ರಿಡ್ಜ್ ಮೇಲೆ ಬಿದ್ದಿದ್ದು ಒಳಪೆಟ್ಟಾಗಿರುತ್ತದೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
5] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 183/2016 ಕಲಂ: 13, 15(ಎ), 32(ಎ), 34, 38(ಎ) ಕೆ.ಇ. ಕಾಯ್ದೆ 1965:

ದಿನಾಂಕ-16-08-2016 ರಂದು ಸಾಯಂಕಾಲ 4-35 ಗಂಟೆಯ ಸುಮಾರಿಗೆ ಮಾನ್ಯ ಪಿ.ಎಸ್.ಐ ಸಾಹೇಬರಿ ಬಂದ ಬಾತ್ಮಿ ಪ್ರಕಾರ ನಮ್ಮ ಸಿಬ್ಬಂದಿಯವರಾದ ಹೆಚ್.ಸಿ- 35, ಪಿ.ಸಿ 103, 413, 11, 76, 197, ಎಪಿ.ಸಿ- 179 ಮತ್ತು ಇಬ್ಬರು ಪಂಚರನ್ನು ಕರೆದುಕೊಂಡು ಸರಕಾರಿ ಜೀಪ್ ನಂ- ಕೆ.ಎ- 37/ಜಿ-304 ನೇದ್ದರಲ್ಲಿ ಠಾಣೆಯಿಂದ ಸಾಯಂಕಾಲ 4-45 ಗಂಟೆಗೆ ಹೋರಟು ಸಾಯಂಕಾಲ 5-30 ಗಂಟೆಗೆ ಮೈಲಾಪೂರ ಗ್ರಾಮಕ್ಕೆ ಹೋಗಿ ಬಾತ್ಮಿ ಪ್ರಕಾರ ಮೈಲಾಪೂರ ಗ್ರಾಮದಲ್ಲಿ ದಾಳಿ ಮಾಡಲು ಅಕ್ರಮ ನಕಲಿ ಮದ್ಯ ತಯಾರು ಮಾಡುತ್ತಿದ್ದ 1) ಬಸವರಾಜ ತಂದಿ ಮುದಕಪ್ಪ ಈಡಿಗೇರ 2) ಸುರೇಶ ತಂದಿ ಮುದಕಪ್ಪ ಈಡಿಗೇರ ಸಾ-ಮೈಲಾಪೂರ ಇವರು ಎಲ್ಲಿಂದಲೋ ಇವರು ಓಡಿಹೋಗಿದ್ದು  ಆರೋಪಿತರ ಮನೆಯಿಂದ ಪಂಚರ ಸಮಕ್ಷಮದಲ್ಲಿ 1) 25 ಲೀಟರಿನ ಅಳತೆಯ 2 ಬಿಳಿಯ ಕ್ಯಾನುಗಳು, ಅದರಲ್ಲಿದ್ದ ಅಂದಾಜು 40 ಲಿಟರ್ ಸ್ಪೀರಿಟ್ ಇದರಲ್ಲಿ ಒಟ್ಟು 4 ಲೀಟರಿನಷ್ಟು ಸ್ಪೀರಿಟ್ ನ್ನು 2  ಪ್ಲಾಸ್ಟಿಕ್ ಬಾಟಲಿಯಲ್ಲಿ ಪ್ರತ್ಯೆವಾಗಿ ಎಪ್.ಎಸ್.ಎಲ್.ಗೆ ಕಳುಹಿಸಿಕೊಡುವ ಕುರಿತು ಜಪ್ತ ಮಾಡಿಕೊಂಡು ಒಟ್ಟು ಅಂ.ಕಿ 4,000=00 ರೂ.ಗಳಾಗಬಹುದು. 2) 210 ಓರಿಜನಲ್ ಚ್ವಾಯಿಸ್ ( ಜೊಹಾನ್ಸ) ಅಂತಾ ಬರೆದ ಬಾಟಲಿಯ ಮುಚ್ಚಳಗಳು 3) ಒಂದು ಲಿಟರಿನ ಪ್ಲಾಸ್ಟಿಕ್ ಡಬ್ಬಿಯಲ್ಲಿ ನಕಲಿ ದ್ಯತಯಾರಿಸಲು ಹಾಕುವ ಕೆಮಿಕಲ್ ಇದನ್ನು ಎಪ್.ಎಸ್.ಎಲ್.ಗೆ ಕಳುಹಿಸಿಕೊಡುವ ಕುರಿತು ಇದರ ಬಾಯಿಗೆ ಬಿಳಿಯ ಬಟ್ಟೆ ಕಟ್ಟಿ ಪಿ.ಎ.ಜೆ. ಎಂಬ ಶೀಲಿನಿಂದ ಶೀಲು ಮಾಡಿದ್ದು 4) 26 ಖಾಲಿ ಕ್ವಾಟರ್ ಬಾಟಲಿಗಳು 5) ಎರಡು ಪ್ಲಾಸ್ಟಿಕ್ ಜಗ್ಗಗಳು 6) ಮದ್ಯ ತಯಾರಿಸಲು ಅಳತೆ ಮಾಡಲು ಉಪಯೊಗಿಸುವ ಒಂದು ಪ್ಲಾಸ್ಟಿಫ್ ಮಾಪ್ ಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತ ಮಾಡಿಕೊಂಡಿದ್ದು ಸದ್ರಿ ಆರೋಪಿತರು ತಾವು ಮಾಡುವ ಕೃತ್ಯದಿಂದ ಮಾವ ಜೀವಕ್ಕೆ ಅಪಾಯವಾಗುತ್ತದೆ ಅಂತಾ ಗೊತ್ತಿದ್ದು ಸಹ ಹಾನಿಕಾರಕ ಪದಾರ್ಥವನ್ನು ಸ್ಪೀರಿಟ್ ದಲ್ಲಿ ಕೆಮಿಕಲ್ಲನ್ನು ಮಿಶ್ರಣ ಮಾಡಿ ನಕಲಿ ಮದ್ಯದ ಬಾಟಲಿಗಳನ್ನು ತಯಾರು ಮಾಡಿ ಮಾರಾಟ ಮಾಡುತ್ತಾರೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008