Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, August 19, 2016

1] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 86/2016 ಕಲಂ: 279, 338, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ:18-08-2016 ರಂದು ಮದ್ಯಾಹ್ನ  4-00 ಗಂಟೆಯ ಸುಮಾರಿಗೆ ಹಲಗೇರಿ- ಹಿರೇಸಿಂಧೋಗಿ  ರಸ್ತೆಗೆ  ಹೊಂದಿ ಕೊಂಡಿರುವ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ, ಪಿರ್ಯಾದಿದಾರರ ಅಣ್ಣನಾದ ಮೃತ ಶರಣಪ್ಪ ತಂದೆ  ದೊಡ್ಡಹನುಮಪ್ಪ ಇಟಗಿವಯ: 50 ವರ್ಷ ಇವರು ತಮ್ಮ ಹೊಲಕ್ಕೆ  ಸೈಕಲ್ ಮೇಲೆ ಬಂದು, ಸೈಕಲ್ ನ್ನು ರಸ್ತೆ ಬದಿಗೆ ನಿಲ್ಲಿಸಿ, ಇಳಿದು ನಡೆದ ಕೊಂಡು ಬರುತ್ತಿದ್ದಾಗ, ಒಬ್ಬ ಮೋಟರ್ ಸೈಕಲ್ ಸವಾರನು ತಾನು ನಡೆಸುತ್ತಿದ್ದ  ಮೋಟರ್ ಸೈಕಲ್ ಮೇಲೆ ಇನ್ನೂಬ್ಬ ವ್ಯಕ್ತಿಯನ್ನು  ಕೂಡಿಸಿಕೊಂಡು  ಹಲಗೇರಿ ಕಡೆಯಿಂದ ತಾನು ನಡೆಸುತ್ತಿದ್ದ ಮೋಟರ್ ಸೈಕಲ್ ನ್ನು  ಅತೀವೇಗವಾಗಿ ಮತ್ತು  ಅಲಕ್ಷತನದಿಂದ ನಡೆಸಿಕೊಂಡು ಬಂದ, ರಸ್ತೆಯ ಬದಿಗೆ ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿಯ ಅಣ್ಣನಿಗೆ ಟಕ್ಕರ್ ಕೊಟ್ಟು ಅಫಘಾತ ಮಾಡಿದ್ದು, ಇದರಿಂದ ಮೃತನು ರಸ್ತೆಯ ಬದಿಗೆ ತಗ್ಗಿನಲ್ಲಿ ಬಿದ್ದಿದ್ದು, ಮೋಟರ್ ಸೈಕಲ್ ಸವಾರನೂ ಕೂಡಾ ಮೋಟರ್ ಸೈಕಲ್ ನೊಂದಿಗೆ ರಸ್ತೆಯ ಮೇಲೆ ಬಿದ್ದಿದ್ದು, ಫಿರ್ಯಾದಿದಾರರು ಅಲ್ಲಿಗೆ ಬರುವಷ್ಟರಲ್ಲಿ ಅಫಘಾತ ಪಡಿಸಿದ ಹಾಗೂ ಮೋಟರ್ ಸೈಕಲ್ ಹಿಂದೆ ಕುಳಿತಿದ್ದ  ವ್ಯಕ್ತಿಯೊಂದಿಗೆ  ಮೋಟರ್ ಸೈಕಲ್ ನ್ನು  ತೆಗೆದುಕೊಂಡು ಅಲ್ಲಿಂದ ಹೋಗಿದ್ದು ಇರುತ್ತದೆ. ಈ ಅಫಘಾತದಿಂದ ಮೃತ ಶರಣಪ್ಪನಿಗೆ ಎಡಗಾಲ ಮೋಣಕಾಲ ಕೆಳಗೆ ಭಾರಿ ಸ್ವರೂಪದ ರಕ್ತ ಗಾಯವಾಗಿಕಾಲು ಮುರಿದಿದ್ದು ಇರುತ್ತದೆ. ಅಲ್ಲದೇ ಹೊಟ್ಟೆಗೂ ಸಹ ಭಾರಿ  ಒಳ ಪೆಟ್ಟಾಗಿದ್ದು ಇರುತ್ತದೆ. ನಂತರ  ಮೃತನಿಗೆ ಚಿಕಿತ್ಸೆ ಕುರಿತು  108 ವಾಹನದಲ್ಲಿ  ಕೊಪ್ಪಳ  ಜಿಲ್ಲಾ ಆಸ್ಪತ್ರೆಗೆ  ಕರೆದ ಕೊಂಡು  ಬಂದು ದಾಖಲು ಮಾಡಿದ್ದು, ಸದರಿ ಶರಣಪ್ಪನಿಗೆ ಪರೀಕ್ಷಿಸಿದ ವೈಧ್ಯರು ಹೆಚ್ಚಿನ ಚಿಕಿತ್ಸೆ ಕುರಿತು ಹುಬ್ಬಳ್ಳಿಗೆ  ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ ಮೇರೆಗೆ ಸದರಿ ಶರಣಪ್ಪನಿಗೆ ಚಿಕಿತ್ಸೆ ಕುರಿತು ಹುಬ್ಬಳ್ಳಿಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯ ಸಂಜೆ 7 -30  ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ.  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 233/2016 ಕಲಂ: 279, 337, 338 ಐ.ಪಿ.ಸಿ:
ದಿನಾಂಕ: 18-08-2016 ರಂದು ಬೆಳಿಗ್ಗೆ ನಮ್ಮ ಮಾವನಾದ ಜರಿಯಪ್ಪ ತಂದೆ ಹನುಮಪ್ಪ ಹರಿಜನ್ ಸಾ: ವಿಠಲಾಪೂರ ಇವರು ತಾವರಗೇರಾಕ್ಕೆ ಹೋಗುವ ಸಲುವಾಗಿ ಕುಷ್ಟಗಿಯ ಎನ್ ಹೆಚ್ 50 ಕ್ರಾಸನಲ್ಲಿ ಬಸ್ ಗಾಗಿ ಕಾಯುತ್ತಾ ಕುಳಿತಾಗ ರಾತ್ರಿ 8-30 ಗಂಟೆ ಸುಮಾರಿಗೆ ಹುಬ್ಬಳ್ಳಿ ಕಡೆಯಿಂದ ಒಂದು ಕಾರು ಬಂದಿದ್ದು ಅದರ ಚಾಲಕನ್ನು ವಿಚಾರಿಸಿದಾಗ ಸದರಿಯವನು ಮುದಗಲ್ ಗೆ ಹೋಗುವುದಾಗಿ ತಿಳಿಸಿದ್ದರಿಂದ ನಾವು ತಾವರಗೇರಾವರೆಗೆ ಬರುತ್ತೇವೆ ಅಂತಾ ಹೇಳಿ ಆತನ ಕಾರನ್ನು ಹತ್ತಿದ್ದೇವು. ನಂತರ ಸದರಿ ಕಾರಿನ ಚಾಲಕನು ರಾತ್ರಿ 08-45 ಗಂಟೆ ಸುಮಾರಿಗೆ ಕುಷ್ಟಗಿ- ತಾವರಗೇರಾ ರಸ್ತೆಯ ಗುಮಗೇರಾ ಗ್ರಾಮದ ಯಲ್ಲಮ್ಮ ದೇವಿಯ ಗುಡಿಯ ಹತ್ತಿರ ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷಕತನದಿಂದ ನಡೆಸಿಕೊಂಡು ಹೋಗಿ ವಾಹನವನ್ನು ನಿಯಂತ್ರಣ ಮಾಡದೇ ರಸ್ತೆಯ ಬಲಗಡೆಗೆ ಪಲ್ಟಿಮಾಡಿ ಕೆಡವಿದ್ದು ಸದರಿ ಕಾರನ್ನು ನೋಡಲಾಗಿ ಅದು ಟೋಯೋಟಾ ಫೋರ್ಡ್ ಕಂಪನಿಯ ಕಾರ ನಂ ಕೆಎ-36-ಎಂ-9211 ಅಂತಾ ಇದ್ದು ಆತನ ಹೆಸರು ವಿಚಾರಿಸಲಾಗಿ ಶಿವಕುಮಾರ ತಂದೆ ಅಮರಯ್ಯ ಹಿರೇಮಠ ವಯ: 28, ಸಾ: ಮುದಗಲ್ ಅಂತಾ ತಿಳಿಸಿದ್ದು ನಂತರ ನಾವುಗಳು 108 ಅಂಬುಲೆನ್ಸ ಕರೆಯಿಸಿ ಕುಷ್ಟಗಿಯ ಸರ್ಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ನಂತರ ಕಾರ ಚಾಲಕನಾದ ಶಿವಕುಮಾರನನ್ನು ಹೆಚ್ಚಿನ ಚಿಕಿತ್ಸೆ ಕುರಿತು ಇಲಕಲ್ನ ಕಠಾರಿ ಬಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಇರುತ್ತದೆ. ಪ್ರಕರಣ ದಾಖಲಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 239/2016 ಕಲಂ: 87 Karnataka Police Act.

ದಿನಾಂಕ: 18-08-2016 ರಂದು ರಾತ್ರಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಮನಗರ ಗ್ರಾಮದ ರೇಣುಕಾ ಕಾಲೋನಿಯ ಶ್ರೀನಿವಾಸ ಎಂಬುವವರ ಹೋಟಲ್ ಹತ್ತಿರ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಹಾರ ಎಂಬ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಭಾತ್ಮಿ ಮೇರೆಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಹಾಗೂ ಸಿಬ್ಬಂದಿಯವರಾದ 110, 429, 363, 335, 129  ರವರು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಎಲ್ಲರೂ ನಡೆದುಕೊಂಡು ಹೋಗಿ ನಮಗೆ ಮಾಹಿತಿ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಂತು ನೋಡಲು ಶ್ರೀರಾಮನಗರ ಗ್ರಾಮದ ರೇಣುಕಾ ಕಾಲೋನಿಯಲ್ಲಿ ಶ್ರೀನಿವಾಸ ಎಂಬುವರ ಹೋಟಲ್ ಹತ್ತಿರ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಬೀದಿಯ ಲೈಟಿನ ಬೆಳಕಿನಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ  7 ಜನರು ಸಿಕ್ಕಿಬಿದ್ದಿದ್ದು. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 2,300/- ರೂಪಾಯಿ, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಖಾಲಿ ಚೀಲ ಸಿಕ್ಕಿದ್ದು, ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008