Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, August 3, 2016

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 166/2016 ಕಲಂ: 394 ಐ.ಪಿ.ಸಿ.
ದಿ :02.08.2016 ರಂದು ಬೆಳೆಗ್ಗೆ 09.00 ಗಂಟೆಗೆ ಫಿರ್ಯಾದಿದಾರರಾದ ಶಂಕರಾಚಾರ್ಯ ತಂದೆ ಪುಟ್ಟು ಆಚಾರ್ಯ ಸಾ: ರಾಜೀವನಗರ, ಮಣಿಪಾಲ ತಾಜಿ: ಉಡುಪಿ ಇವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ದೂರಿನ ಸಾರಾಂಶವೇನೆಂದರೇ, ನಿನ್ನೆ ದಿ-01.08.2016 ರಂದು ಸಂಜೆ 06.00 ಗಂಟೆಗೆ ಸುಮಾರು 20-25 ವರ್ಷದ ನಾಲ್ಕು ಜನ ಅಪರಿಚಿತ ಗಂಡಸು ವ್ಯಕ್ತಿಗಳು ಫಿರ್ಯಾದಿದಾರರ ಕಾರ್ ನಂ-ಕೆಎ-20/ಡಿ-1726 ನೇದ್ದನ್ನು ಉಡುಪಿಯಿಂದ ರಾಯಚೂರ ಜಿಲ್ಲೆ ಲಿಂಗಸಗೂರಿಗೆ ಹೋಗಲು ಕಿ.ಮೀ ಗೆ 10/- ರೂ ದಂತೆ ಬಾಡಿಗೆ ಮುಗಿಸಿ ಫಿರ್ಯಾದಿ ಚಾಲಕನನ್ನು ಕರೆದುಕೊಂಡು ಬರುವಾಗ ಇಂದು ದಿ-02.08.16 ರಂದು ಬೆಳಗಿನ ಜಾವ 04.00 ಗಂಟೆ ಸುಮಾರಿಗೆ ಕೊಪ್ಪಳ ದಿಂದ ಸುಮಾರು 10 ಕಿ.ಮೀ ಅಂತರದಲ್ಲಿ ಕುಷ್ಟಗಿ ಕಡೆಗೆ ಹೋಗುವಾಗ ಕಾರಿನಲ್ಲಿದ್ದ ಒಬ್ಬನಿಗೆ ವಾಂತಿ ಬಂದಿದೆ ಅಂತಾ ಫಿರ್ಯಾದಿಗೆ ಹೇಳಿ ಕಾರನ್ನು ನಿಲ್ಲಿಸಿ ರಕ್ತದ ವಾಂತಿ ಆಗಿದೆ ಎಂದು ಹೇಳಿದಾಗ ಫಿರ್ಯಾದಿ ಚಾಲಕನು ಕೆಳಗಡೆ ಇಳಿದಾಗ  ಆತನಿಗೆ 4 ಜನರು ಕೂಡಿ ಜಬರದಸ್ತ ದಿಂದ ಪಕ್ಕದ ಹೊಲದಲ್ಲಿ ಎಳೆದುಕೊಂಡು ಹೋಗಿ ಟವಲ್ ಕುತ್ತಿಗಿಗೆ ಹಾಕಿ ಎಳೆದಾಡಿ ಕೈಗಳಿಂದ ಹೊಡಿ ಬಾಡಿ ಚಾಕು ತೋರಿಸಿ ಹೆದರಿಸಿ ಫಿರ್ಯಾದಿ ಜೇಬಿನಲ್ಲಿದ್ದ  ನಗದು ಹಣ 2000/-, 1 ಪಾನ್ ಕಾರ್ಡ ಅಂ.ಕಿ ಇಲ್ಲಾ,  1 ಮೊಬೈಲ್ , 1 ಓಟರ್ ಐಡಿ ಅಂ.ಕಿ ಇಲ್ಲಾ,  1 ಸಿಂಡಿಕೇಟ್ ಬ್ಯಾಂಕ್ ಹಾಗೂ 1 ಕರ್ನಾಟಕ ಬ್ಯಾಂಕಿನ ಒಟ್ಟು 2 ಎ.ಟಿ.ಎಂ ಕಾರ್ಡ ಅಂ.ಕಿ ಇಲ್ಲಾ, ಇವುಗಳನ್ನು ಕಳ್ಳತನ ಮಾಡಿಕೊಂಡು ಫಿರ್ಯಾದಿಗೆ ಕೆಳಗಡೆ ಕೆಡವಿ ಫಿರ್ಯಾದಿಯ ಮಾಲೀಕತ್ವದ 4,50,000/- ರೂ ಬೆಲೆ ಬಾಳುವ ಕಾರ್ ನಂ-ಕೆಎ-20/ಡಿ-1726 ನೇದ್ದನ್ನು ಕಳ್ಳತನ ಮಾಡಿ ಕುಷ್ಟಗಿ ಕಡೆಗೆ ಓಡಿಸಿಕೊಂಡು ಹೋಗಿರುತ್ತಾರೆ. ಕಾರಣ 4 ಜನ ಅಪರಿಚಿತ ಗಂಡಸು ವ್ಯಕ್ತಿಗಳನ್ನು ಪತ್ತೆ ಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ತಡವಾಗಿ ನೀಡಿದ ದೂರಿನ ಮೇಲಿಂದ ಕೊಪ್ಪಳ ಗ್ರಾಮೀಣ ಠಾಣೆ ಗುನ್ನೆ ನಂ :166/2016. ಕಲಂ : 394 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 126/2016 ಕಲಂ: DOWRY PROHIBITION ACT, 1961 U/s 3,4 and IPC 1860 U/s 304B,109,498A,302
ದಿನಾಂಕ: 02-08-2016 ರಂದು 1-00 ಪಿ.ಎಮ್. ಕ್ಕೆ ಫಿರ್ಯಾದಿ ಅಮ್ಜದಖಾನ್ ಜಮಾದಾರ ಸಾ: ಕೊಪ್ಪಳ ರವರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ನಮ್ಮ ತಂಗಿ ಮುನ್ನಿಬೇಗಂ ಅಂತಾ ಇದ್ದು, ಇವಳನ್ನು ಈಗ್ಗೆ ಸುಮಾರು 03 ವರ್ಷಗಳ ಹಿಂದೆ ಕುಷ್ಟಗಿಯ ಅಹ್ಮದಹುಸೇನ ಅನ್ಸಾರಿ ಇವರ 3ನೇ ಮಗನಾದ ಸುಲೇಮಾನ ಅನ್ಸಾರಿ ಈತನಿಗೆ ಕೊಟ್ಟು ನಮ್ಮ ಮನೆಯ ಮುಂದೆ ಮದುವೆ ಮಾಡಿದ್ದು, ಸದ್ಯ ಅವರಿಗೆ ಮಿಸ್ಬಾ ಫರ್ವಿನ್ 02ವರ್ಷ, ಮತ್ತು ರಾಹಿನ ಫರ್ವಿನ್ 02 ತಿಂಗಳು ಎಂಬ ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ನನ್ನ ತಂಗಿಗೆ ಮದುವೆಯಾದಾಗಿನಿಂದ ಆಕೆಯ ಗಂಡನಾದ ಸುಲೇಮಾನ ಮತ್ತು ಆತನ ತಾಯಿ ರಹಮತ್ ಭೀ ಇಬ್ಬರೂ ಕೂಡಿ ನಿನ್ನ ತವರು ಮನೆಯಿಂದ ಮತ್ತು ನಿಮ್ಮ ಅಣ್ಣಂದಿರ ಕಡೆಯಿಂದ ವರದಕ್ಷಿಣೆ ಹಣ 50,000/- ರೂಪಾಯಿ ಮತ್ತು ಒಂದೂವರೆ ತೊಲೆ ಬಂಗಾರ ತರುವಂತೆ ಮತ್ತು ತನಗೆ ಒಂದು ಟಾಟಾ ಏಸ್ ವಾಹನವನ್ನು ಕೊಡಿಸುವಂತೆ ಒತ್ತಾಯ ಮಾಡಿ ಲೇ ಬೋಸೂಡಿ ನೀನು ಮನೆಗೆಲಸ ಸರಿಯಾಗಿ ಮಾಡುತ್ತಿಲ್ಲ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಹೊಡಿಬಡಿ ಮಾಡುತ್ತಿರುವ ಬಗ್ಗೆ ಮತ್ತು ಸುಲೇಮಾನ್ ಅಕ್ಕಂದಿರಾದ ಗೌಶಿಯಾ, ಸುಲ್ತಾನಾ, ಅಣ್ಣ ಶಾಲಮ್ ಇವರು ಆಗಾಗ್ಗೆ ಕುಷ್ಟಗಿಗೆ ಬಂದು ಇವಳನ್ನು ಯಾಕೇ ಇನ್ನೂ ಮನೆಯಲ್ಲಿ ಇಟ್ಟುಕೊಂಡಿರಿ ಇವಳನ್ನು ಮನೆಯಿಂದ ಹೊರೆಗೆ ಹಾಕಿರಿ ಅಂತಾ ಹೊಡೆಬಡಿ ಮಾಡಿ ದೈಹಿಕ ಮತ್ತು ಮಾನಶೀಕ ಕಿರುಕುಳ ನೀಡುತ್ತಾರೆ ಅಂತಾ  ನಮ್ಮ ತಂಗಿ ಊರಿಗೆ ಬಂದಾಗ ನಮ್ಮ ಮುಂದೆ ಹೇಳುತ್ತಿದ್ದಳು. ನಮ್ಮ ತಮ್ಮನ ಮದುವೆ ಇದ್ದುದರಿಂದ ನಮ್ಮ ತಂಗಿ ಮುನ್ನಿಬೇಗಂ ಇವಳನ್ನು ಕರೆದುಕೊಂಡು ಬಾ ಅಂತಾ ಸುಲೇಮಾನಗೆ ಹೇಳಿದ್ದರಿಂದ ದಿ: 26-07-2016 ರಂದು  ಸುಲೇಮಾನ ನಮ್ಮ ತಂಗಿಯನ್ನು ಕರೆದುಕೊಂಡು ಕೊಪ್ಪಳಕ್ಕೆ ಬಂದಿದ್ದನು. ನಂತರ ದಿನಾಂಕ: 02-08-2016 ರಂದು ರಾತ್ರಿ 01-30 ಗಂಟೆಯಿಂದ ದಿನಾಂಕ: 02-08-2016 ರಂದು ಬೆಳಗಿನ ಜಾವ 9-00 ಗಂಟೆಯ ನಡುವಿನ ಅವಧಿಯಲ್ಲಿ ನನ್ನ ತಂಗಿ ಮುನ್ನಿಬೇಗಂ ಮತ್ತು ಆಕೆಯ 02 ತಿಂಗಳ ಹೆಣ್ಣು ಮಗು ರಾಹಿನಫರ್ವಿನ್ ಇವರನ್ನು ಆಕೆಯ ಗಂಡ ಸುಲೇಮಾನ ಅನ್ಸಾರಿ ಈತನು ತನಗೆ ವರದಕ್ಷಿಣೆ ಹಣ 50 ಸಾವಿರ ರೂಪಾಯಿ ಹಾಗೂ 02 ತೊಲೆ ಬಂಗಾರ ಹಾಗೂ ತಾನು ಕೇಳಿದ ಟಾಟಾ ಏಸ್ ವಾಹನ ಕೊಡಿಸಿರುವುದಿಲ್ಲ ಅಂತಾ ಆತನ ತಾಯಿ ರಹಮತ್ಬೀ, ಹಾಗೂ ಅತನ ಅಕ್ಕಂದಿರಾದ ಗೌಸಿಯಾ, ಸುಲ್ತಾನಾ, ಆತನ ಅಣ್ಣ ಶ್ಯಾಲಮ್ ಇವರ ಪ್ರಚೋಧನೆಯಿಂದ ಸುಲೇಮಾನ್ ಈತನು ನನ್ನ ತಂಗಿ ಮುನ್ನಿಬೇಗಂ ಇವಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ನಮ್ಮ ಮನೆಯ ಮೇಲ್ಗಡೆ ಇರುವ ರೂಮಿನಲ್ಲಿ ತಲೆದಿಂಬು ತೆಗೆದುಕೊಂಡು ಉಸಿರುಗಟ್ಟಿಸಿ ನನ್ನ ತಂಗಿ ಮುನ್ನಿಬೇಗಂ, ಹಾಗೂ ಆಕೆಯ 02 ತಿಂಗಳ ಹೆಣ್ಣು ಮಗು ರಾಹಿನಫರ್ವಿನ್ ಇವರನ್ನು ಸುಲೇಮಾನ್ ಕೊಲೆ ಮಾಡಿದ್ದು ಇರುತ್ತದೆ. ಕಾರಣ ಕೊಲೆ ಮಾಡಿದ ಸುಲೇಮಾನ ಅನ್ಸಾರಿ, ಹಾಗೂ ಇದಕ್ಕೆ ಪ್ರಚೋದನೆ ನೀಡಿದ ರಹಮತಬೀ, ಶಾಲಮ್, ಗೌಶೀಯಾ, ಸುಲ್ತಾನಾ ಇವರ ಮೇಲೆ ಕಾನೂನು ಕ್ರಮ  ಜರುಗಿಸಲು ವಿನಂತಿ. ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೂಕನೂರು ಪೊಲೀಸ್ ಠಾಣೆ ಗುನ್ನೆ ನಂ. 91/2016 ಕಲಂ: 87 Karnatka Police Act.
ಪಿ.ಎಸ್.ಐ. ಕುಕನೂರ ಠಾಣೆರವರು ರಾಜೂರು ಗ್ರಾಮದ ಕರಿಯಮ್ಮದೇವಿ ದೇವಸ್ಥಾನದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, ಸದರಿ 1] ರಾಜಾಸಾಬ್ ಯಮನೂರುಸಾಬ್ ನಧಾಫ್ ವಯಾ: 28 ಜಾ: ಪಿಂಜಾರ ಸಾ: ರಾಜುರು 2] ಬೋಜಪ್ಪ ತಂ.ಯಲಪ್ಪ ಉಪ್ಪಾರ ವಯಾ: 43 ಜಾ: ಉಪ್ಪಾರ ಸಾ: ರಾಜೂರು 3] ಮಹ್ಮದ್ ತಂ.ಅಲ್ಲಾಸಾಬ್ ನಧಾಫ ವಯಾ: 35 ಜಾ: ಪಿಂಜಾರ ಸಾ: ರಾಜುರು 4] ಸಂಗಪ್ಪ ತಂ.ಹನುಮಪ್ಪ ಮಾದಿನೂರು ವಯಾ: 49 ಜಾ: ರಟ್ಟಿ ಸಾ: ರಾಜೂರು 5] ಶರಣಪ್ಪ ತಂ.ಬಸವಂತಪ್ಪ ಹರಾರಿ ವಯಾ: 50 ಜಾ: ಹರಾರಿ ಸಾ: ಆಡೂರು ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಸಿಕ್ಕಿಬಿದ್ದವರಿಂದ ಹಾಗೂ ಜೂಜಾಟದ ಕಣದಿಂದ ಒಂದು ಬರಕಾ, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 1300/-ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದು ಪ್ರಕರಣ ದಾಖಲಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 93/2016 ಕಲಂ: 78(3) Karnatka Police Act.

ಪಿ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆರವರು ತಾವರಗೇರಾ ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟವನ್ನು ಆಡುತ್ತಿದ್ದು ಆ ಕಾಲಕ್ಕೆ ಅಧಿಕಾರಿ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ ರೂ. 670-00, ಜಪ್ತ ಮಾಡಿಕೊಂಡಿದ್ದು ಸಿಕ್ಕಿಬಿದ್ದ ಒಬ್ಬ ಆರೋಪಿ ರಾಮಾನಾಯಕ ತಂದೆ ದೇವಪ್ಪನಾಯಕ ರಾಥೋಡ ಸಾ: ಕಿಲಾರಟ್ಟಿ ತಾಂಡಾ ತಾ: ಕುಷ್ಟಗಿ ಹಾಗೂ ಮಟ್ಕಾ ಪಟ್ಟಿಯನ್ನು ತೆಗೆದುಕೊಳ್ಳುವ ದಶರಥಸಿಂಗ್ ರಜಪೂತ ಸಾ: ತಾವರಗೇರಾ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿಯನ್ನು ನೀಡಿದ್ದು ಸದರಿ ಅಪರಾಧವು ಅಸಂಜ್ಞೆಯವಗಿದ್ದರಿಂದ ಪ್ರಕರಣ ದಾಖಲು ಮಾಡಲು ಮಾನ್ಯ ನ್ಯಾಯಾಲಯದ ಪಾರವಾನಿಗೆಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008