Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, August 5, 2016

1] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 75/2016 ಕಲಂ: 87 Karnataka Police Act
ದಿನಾಂಕ: 04-08-2016 ರಂದು ಸಾಯಂಕಾಲ 5-30 ಗಂಟೆಯ ಸುಮಾರಿಗೆ ಗೆದಗೇರಿ ತಾಂಡಾದಲ್ಲಿ ಬರುವ ಗಾಳೆಮ್ಮ ದೇವಸ್ಥಾನದ ಮುಂಭಾಗದಲ್ಲಿಯ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ಮಾಡಿ ಹಿಡಿದಿದ್ದು 1). ಪಾಂಡಪ್ಪ ತಂದೆ ಜಾಂಪಲೇಪ್ಪ ಚವ್ಹಾಣ ವ- 45 ವರ್ಷ ಜಾ- ಲಮಾಣಿ ಉ- ಒಕ್ಕಲುತನ 2). ಶೇಖಪ್ಪ ತಂದೆ ಲಾಲಪ್ಪ ರಾಠೋಡ ವ- 30 ವರ್ಷ ಜಾ- ಲಮಾಣಿ ಉ- ಒಕ್ಕಲುತನ 3). ಶರಣಪ್ಪ ತಂದೆ ನಾರಾಯಣಪ್ಪ ಚವ್ಹಾಣ ವ- 38 ವರ್ಷ ಜಾ- ಲಮಾಣಿ ಉ- ಕೂಲಿಕೆಲಸ 4). ನೀಲಪ್ಪ ತಂದೆ ಪೋಮಪ್ಪ ಚವ್ಹಾಣ ವ- 36 ವರ್ಷ ಜಾ- ಲಮಾಣಿ ಉ- ಕೂಲಿಕೆಲಸ  5). ಕಲ್ಲಪ್ಪ ತಂದೆ ಜಾಂಪಲೇಪ್ಪ ಚವ್ಹಾಣ ವ- 36 ವರ್ಷ ಜಾ- ಲಮಾಣಿ ಉ- ಒಕ್ಕಲುತನ 6). ಕುಬೇರಪ್ಪ ತಂದೆ ಲಚ್ಚಪ್ಪ ಚವ್ಹಾಣ ವ- 58 ವರ್ಷ ಜಾ- ಲಮಾಣಿ ಉ- ಒಕ್ಕಲುತನ 7). ಮಲ್ಲೇಶ ತಂದೆ ಪೀರಪ್ಪ ಬಸಿರಿಗಿಡ ವ- 29 ವರ್ಷ ಜಾ- ಲಮಾಣಿ ಉ- ಒಕ್ಕಲುತನ 8). ಮೋಹನ ತಂದೆ ಯಂಕಪ್ಪ ಚವ್ಹಾಣ ವ- 30 ವರ್ಷ ಜಾ- ಲಮಾಣಿ ಉ- ಒಕ್ಕಲುತನ  9). ಲಿಂಬಪ್ಪ ತಂದೆ ಚಂದಪ್ಪ ಪಮ್ಮಾರ ವ- 52 ವರ್ಷ ಜಾ- ಲಮಾಣಿ ಉ- ಕೂಲಿಕೆಲಸ 10). ಸೀನಪ್ಪ ತಂದೆ ಪೋಮಪ್ಪ ಚವ್ಹಾಣ ವ- 42 ವರ್ಷ ಜಾ- ಲಮಾಣಿ ಉ- ಒಕ್ಕಲುತನ  11). ಅಚ್ಚಪ್ಪ ತಂದೆ ಶಂಕ್ರಪ್ಪ ನಾಯಕ ವ- 50 ವರ್ಷ ಜಾ- ಲಮಾಣಿ ಸಾ- ಎಲ್ಲರೂ ಗೆದಗೇರಿ ತಾಂಡಾ 11 ಜನರು ಸಿಕ್ಕಿ ಬಿದ್ದಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 4,100=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು ಅಂ.ಕಿ. ಇಲ್ಲ ಮತ್ತು ಒಂದು ಹಳೆ ಪ್ಲಾಸ್ಟೀಕ ಚೀಲ ಅಂ.ಕಿ. ಇಲ್ಲ ಇವುಗಳು ಸಿಕ್ಕಿದ್ದು ಇರುತ್ತದೆ. ಈ ಬಗ್ಗೆ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 220/2016 ಕಲಂ: 341,342,323,324,326,504,506 ಸಹಿತ 34 ಐ.ಪಿ.ಸಿ
ದಿನಾಂಕ:04-08-2016 ರಂದು ಮದ್ಯಾಹ್ನ 03-15 ಗಂಟೆಗೆ ಪಿರ್ಯಾದಿದಾರನಾದ ಶರೀಫಸಾಬ ನದಾಫ್ ಸಾ:ನೆರೆಬೆಂಚಿ ಈತನು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿಯನ್ನು ನೀಡಿದ್ದು ಸದರ ಪಿರ್ಯಾದಿಯ ಸಾರಾಂಶದ ವೆನೆಂದರೆ ಮೊನ್ನೆ ದಿನಾಂಕ:02-08-2016 ರಂದು ರಾತ್ರಿ 7 ಗಂಟೆಯ ಸುಮಾರಿಗೆ ನಮ್ಮ ಅಣ್ಣ ಚಂದುಸಾಬ ಈತನು ನಮ್ಮೂರ ಶರಣಪ್ಪ ಗದ್ದಿ ಈತನಿಗೆ ಕುಡಿಯಲು ಸರಾಯಿ ಬಾಟ್ಲಿ ಕೊಡು ಅಂತಾ ಕೇಳಿದಾಗ ಶರಣಪ್ಪನು ನಿನಗೆ ಸರಾಯಿ ಬಾಟ್ಲಿ ಕೊಡುವುದಿಲ್ಲಾ. ಅಂತಾ ಅಂದಿದ್ದಕ್ಕೆ ಯಾಕಾ ನೀನು ನನಗೆ ಬಾಟ್ಲಿ ಕೊಡುವುದಿಲ್ಲಾ ಅಂತಾ ಕೇಳಿದ್ದಕ್ಕೆ ಅವರಿಬ್ಬರಲ್ಲಿ ಬಾಯಿ ಮಾತಿನಲ್ಲಿ ಜಗಳವಾಗಿದ್ದು ಇರುತ್ತದೆ. ಇದೇ ವಿಷಯವಾಗಿ ಇಂದು ದಿನಾಂಕ:04-08-2016 ರಂದು ಮುಂಜಾನೆ 08-30 ಗಂಟೆಯ ಸುಮಾರಿಗೆ ನನ್ನ ಅಣ್ಣ ಚಂದುಸಾಬನ ಮನೆಗೆ 1) ಶರಣಪ್ಪ ತಂದೆ ದುರುಗಪ್ಪ ಗದ್ದಿ 2) ಹನುಮಂತಪ್ಪ ತಂದೆ  ದುರುಗಪ್ಪ ಗದ್ದಿ ಮತ್ತು 3) ಮಾನಪ್ಪ ತಂದೆ ದುರುಗಪ್ಪ ಗದ್ದಿ ಇವರೆಲ್ಲರೂ ಕೂಡಿ ಹೋಗಿ ಚಂದುಸಾಬನನ್ನು ಕೇಳಿದಾಗ ನನ್ನ ಅತ್ತಿಗೆ ಸಣ್ಣಖಾದರಬಿ ಮನೆಯಲ್ಲಿದ್ದು ಆಕೆಯು ತನ್ನ ಗಂಡ ಚಂದುಸಾಬ ಮನೆಯಲ್ಲಿ ಇಲ್ಲಾ ಕುಷ್ಟಗಿಗೆ ಹೋಗಿರುತ್ತಾನೆ ಅಂತಾ ಹೇಳಿದಾಗ ಆಗ ಆ ಸೂಳೇ ಮಗ ಚಂದುಸಾಬ ಊರಿಗೆ ಬರಲಿ ಅವನ ಇವತ್ತು ಜೀವ ಸಹಿತ ಬಿಡುವುದಿಲ್ಲಾ ಅಂತಾ ಅನ್ನುತ್ತಾ ಬಸಸ್ಟ್ಯಾಂಡ ಕಡೆಗೆ ಬಂದರು. ನಂತರ ಮುಂಜಾನೆ 09-00 ಗಂಟೆಯ ಸುಮಾರಿಗೆ ನಮ್ಮ ಅಣ್ಣನಾದ ಚಂದುಸಾಬ ಈತನು ನಮ್ಮೂರ ದುರುಗಮ್ಮ ಗುಡಿಯ ಮುಂದೆ ಬರುತ್ತಿದ್ದಾಗ ಅವನನ್ನು ತಡೆದು ನಿಲ್ಲಿಸಿ ಒಮ್ಮಲೇ ಚಂದುಸಾಬನನ್ನು ಶರಣಪ್ಪ, ಹನುಮಂತಪ್ಪ, ಮಾನಪ್ಪ ಇವರು ಕೂಡಿ ಅವನ ಕೈಗಳನ್ನು ಗಟ್ಟಿಯಾಗಿ ಹಿಡಿದು ಹಗ್ಗದಿಂದ ಕಟ್ಟಿಯಾಕಿ  ಶರಣಪ್ಪನು ಲೇ ಬೋಸುಡಿ ಮಗನೇ ಮೊನ್ನೆ ನನ್ನ ಸಂಗಡ ಜೋರಾಗಿ ಜಗಳಮಾಡಿದಿ  ಈಗ ಮಾತಾಡು ಅಂತಾ ಅನ್ನುತ್ತಾ ಶರಣಪ್ಪನು ಅಲ್ಲಿಯೇ ಬಿದ್ದಿದ್ದ ಒಂದು ದಪ್ಪದಾದ ಹಿಡಿ ಗಾತ್ರದ ಕಟ್ಟಿಗೆಯಿಂದ ಜೋರಾಗಿ ಹಣೆಗೆ, ಮುಖಕ್ಕೆ  ಹೊಡೆದಿದ್ದು ಇದರಿಂದ ಭಾರಿ ರಕ್ತಗಾಯವಾಗಿದ್ದು  ಮತ್ತು ಹನುಮಂತಪ್ಪನು ಕೈಯಿಂದ ಮುಖಕ್ಕೆ ಜೋರಾಗಿ ಗುದ್ದಿದ್ದನು ಆಗ ಮೂಗಿನಿಂದ ರಕ್ತ ಬಂದಿದ್ದು ಮತ್ತು ಮಾನಪ್ಪನು ಹಗ್ಗದಿಂದ ಹೊಟ್ಟಿಗೆ ಮೈಗೆ.ಕೈಗೆ,ಬೆನ್ನಿಗೆ ಜೋರಾಗಿ ಹೊಡೆದು ಕಾಲಿನಿಂದ ಒದ್ದಿರುತ್ತಾನೆ.  ಅದೇ ವೇಳೆಗೆ ನಮ್ಮೂರ ಹುಲ್ಲಪ್ಪ ತಂದೆ ಹನುಮಪ್ಪ ಗುರಿಕಾರ ಮತ್ತು ದುರಗಪ್ಪ ತಂದೆ ಹುಲ್ಲಪ್ಪ ಕಲ್ಗುಡಿ ಮತ್ತು ಖಾಜಾಸಾಬ ತಂದೆ ಯಮನೂರಪ್ಪ ನದಾಫ್ ಬಂದು ಜಗಳ ಬಿಡಿಸಿ ಬುದ್ದಿ ಹೇಳಿ ಕಳಿಸಿದರು. ನಾನು ಈ ಸುದ್ದಿ ಕೇಳಿ ಊರಿಗೆ ಬಂದು ವಿಚಾರಿಸಿದಾಗ ಮೇಲ್ಕಾಣಿಸಿದ ವಿಷಯ ನಿಜವಿರುತ್ತದೆ. ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 221/2016 ಕಲಂ: 341,323,324,504,506 ಐ.ಪಿ.ಸಿ
ದಿನಾಂಕ:04-08-2016 ರಂದು ಸಂಜೆ 05-45 ಗಂಟೆಗೆ ಪಿರ್ಯಾದಿದಾರನಾದ ಶರಣಪ್ಪ ತಂದೆ ದುರುಗಪ್ಪ ಗದ್ದಿ ವಯಾ 35 ವರ್ಷ ಜಾ: ಕುರುಬರ ಉ:ಒಕ್ಕಲುತನ ಸಾ:ನೆರಬೆಂಚಿ ತಾ:ಕಷ್ಟಗಿ ಈತನು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿಯನ್ನು ನೀಡಿದ್ದು ಸದರ ಪಿರ್ಯಾದಿಯ ಸಾರಾಂಶದ ವೆನೆಂದರೆ ದಿನಾಂಕ:02-08-2016 ರಂದು ರಾತ್ರಿ 09-00 ಗಂಟೆಯ ಸುಮಾರಿಗೆ ಬೀರಲಿಂಗೇಶ್ವರ ಗುಡಿಯ ಮಗ್ಗಲ ರೋಡಿನಲ್ಲಿ ಚಂದುಸಾಬ ಈತನು ತನ್ನ ಮೋಟಾರ ಸೈಕಲ ತೆಗೆದುಕೊಂಡು ನನ್ನ ಹತ್ತಿರ ಬಂದು ಮೊಣಕೈಗೆ ತಾಗಿಸಿ ಲೇ ಶರಣ ನಿಂದರಲೇ ಸೂಳೇಮಗನೇ ಅಂತಾ ಅಂದು ನನ್ನನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ನೀನು ನಿನ್ನ ಜೇಬಿನಲ್ಲಿಟ್ಟು ಕೊಂಡು ಸರಾಯಿ ಬಾಟ್ಲಿ ಮಾರಟ ಮಾಡುತ್ತೀಯ ನನಗೆ ಒಂದು ಸರಾಯಿ ಬಾಟ್ಲಿ ಕೊಡಲೇ ಮಗನಾ ಅಂದ ಆಗ ನಾನು ಈ ಮೊದಲು ಸರಾಯಿ ಮಾರುತ್ತಿದ್ದೆ ಈಗ ಒಕ್ಕಲುತನಕೆಲಸ ಮಾಡಿಕೊಂಡು ಇರುತ್ತೇನೆ, ಸರಾಯಿ ಬಾಟ್ಲಿ ಇಲ್ಲಾ ಅಂತಾ ಹೇಳಿದೇನು. ಆಗ ಊರಿನವರಿಗೆ ಸರಾಯಿ ಬಾಟ್ಲಿ ಕೊಡುತ್ತಿ ನನಗೆ ಇಲ್ಲಾ ಅಂತೀಯ ಸೂಳೇ ಮಗನೇ ಅಂತಾ ಅಂದವನೇ ನನ್ನ ಎದೆಯ ಅಂಗಿಯನ್ನೆ ಹಿಡಿದು ಎಳೆದಾಡಿ ತೆಕ್ಕಿಮುಕ್ಕಿ ಬಿದ್ದು ನನ್ನನ್ನು ನೆಲಕ್ಕೆ ಕೆಡವಿ ಬೆನ್ನಿನ ಮೇಲೆ ಮತ್ತು ಎಡಸೊಂಟದ ಹತ್ತಿರ ಬಾಯಿಯಿಂದ ಕಡಿದು ಗಾಯಗೊಳಿಸಿದನು ಕೈಯಿಂದ ಹೊಡಿಬಡಿ ಮಾಡಿ ಸಿಟ್ಟಿನಿಂದ ನಿನ್ನ ಜೀವಸಹಿತ ಬಿಡುವುದಿಲ್ಲಾ ಅಂತಾ ನನ್ನ ತೊಡ್ಡಿಗೆ ಕೈಹಾಕಿ ಹಿಚುಕಲು ಪ್ರಯತ್ನಿಸಿದಾಗ ಅಲ್ಲಿಯೇ ನಾನು ಚೀರಾಡಿದ ದ್ವನಿ ಕೇಳಿ ಶಂಕ್ರಪ್ಪ ತಂದೆ ಭರಮಪ್ಪ ಕಿಚುಡಿ ಮತ್ತು ಹನುಮಪ್ಪ ತಂದೆ ನರಸಪ್ಪ ಗುರಿಕಾರ ಇವರು ಬಂದು ಜಗಳ ಬಿಡಿಸಿ ಬುದ್ದಿ ಹೇಳಿ ಕಳಿಸಿದರು. ನಂತರ ನಾನು ನಮ್ಮ ಅಣ್ಣ-ತಮ್ಮಂದಿಗೆ ಹಾಗೂ ನಮ್ಮೂರ ಹನುಮಪ್ಪ ಕಡೇಮನಿ, ಬಸಣ್ಣ ಗುರಿಕಾರ ಇವರಿಗೆ ಮೇಲೆ ನಡೆದ ವಿಷಯ ಹೇಳಿದೇನು ಆಗ ಅವರು ಇದು ಸಣ್ಣ ವಿಷಯ ಚಂದುಸಾಬನನ್ನು ಕರೆಯಿಸಿ ವಿಚಾರಿಸಿ ಇಲ್ಲಿಯೇ ಬುದ್ದಿ ಹೇಳಿ ಕಳಿಸಿದರಾಯಿತು. ಅಂತಾ ಹೇಳಿದ್ದಕ್ಕೆ ನಾನು ಹಿರಿಯರ ಮಾತಿಗೆ ಬೆಲೆಕೊಟ್ಟು ಸುಮ್ಮನೇ ಇದ್ದೇನು.  ಈಗ ತಡವಾಗಿ ಬಂದು ಪಿರ್ಯಾದಿ ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 145/2016 ಕಲಂ: 143,147,302,201 ಸಹಿತ 149 ಐ.ಪಿ.ಸಿ.
ಗದಗ ರೈಲ್ವೆ ಪೊಲೀಸ್ ಠಾಣೆಯಿಂದ ಹದ್ದಿ ಪ್ರಯುಕ್ತ ಮುನಿರಾಬಾದ ಠಾಣೆಗೆ ವರ್ಗಾವಣಗೊಂಡು ಬಂದಿದ್ದು, ಅದರ ಸಾರಾಂಶವೇನಂದರೆ, ಸದರ ಪ್ರಕರಣದ ಫಿರ್ಯಾದುದಾರರು ಮತ್ತು ಇತರು ಈ ದಿವಸ ಠಾಣೆಗೆ ಬಂದು ಗದಗ ರೇಲ್ವೆ ಪೊಲೀಸ ಠಾಣೆ ಯು.ಡಿ.ಆರ್ ನಂಬರ 15/2016 ಕಲಂ 174 (ಸಿ) ಸಿ.ಆರ್‌.ಪಿ.ಸಿ ಪ್ರಕರಣದಲ್ಲಿ ಮೃತಪಟ್ಟ ಅಪರಿಚಿತ ಶವದ ಫೊಟೋ ಮತ್ತು ಇತರ ವಿವರ ಗುರುತಿಸಿ ಮೃತನ ಹೆಸರು ಇಂದ್ರಪ್ಪ ತಂದೆ ಹನುಮಂತ ಗೂತ್ತುರು, ವಯಾ 45 ವರ್ಷ, ಜಾತಿ ಹಿಂದೂ ಕುರುಬರ, ಸಾ// ಇಂದರಗಿ. ತಾ//ಜಿ// ಕೊಪ್ಪಳ ಅಂತಾ ಗುರುತಿಸಿ ಫಿರ್ಯಾದಿ ನೀಡಿದ್ದರ ಸಾರಾಂಶ ಏನೆಂದರೆ,ದಿನಾಂಕ 07-04-2016 ರಂದು ಇಂದ್ರಪ್ಪ ಕಾಣೆಯಾಗಿದ್ದು, ದಿನಾಂಕ 19-04-2016 ರಂದು ಮುನಿರಾಬಾದ ಪೊಲೀಸ ಠಾಣೆಯಲ್ಲಿ ಗುನ್ನೆ ಸಂಖ್ಯೆ 90/2016 ಕಲಂ ಮನುಷ್ಯ ಕಾಣೆಯಾದ ಪ್ರಕರಣದಲ್ಲಿ ಧಾಖಲಮಾಡಿದ್ದು, ನಂತರ ಸದರಿ ಕಾಣೆಯಾದ ಮನುಷ್ಯನು ಗದಗ ರೇಲ್ವೆ ಪೊಲೀಸ ಠಾಣೆಯ ಸರಹದ್ದಿಯಲ್ಲಿ ಬರುವ ಹಿಟ್ನಾಳ ಗ್ರಾಮದ ಹತ್ತಿರ ಇರುವ ರೇಲ್ವೆ ಟ್ರ್ಯಾಕಿನಲ್ಲಿ ಶವ ಸಿಕ್ಕಿದ್ದರ ಬಗ್ಗೆ ತಿಳಿದುಕೊಂಡು ಬಂದು ಶವದ ಭಾವಚಿತ್ರ ಮತ್ತು ಇತರೆ ವಿವರ ಗುರುತಿಸಿದ್ದು, ಮೃತನ ಹೆಂಡತಿ ಇಂದರಗಿ ಗ್ರಾಮದ ಎಮ್ಮಿ ರಾಮಣ್ಣ ಎನ್ನುವವನ ಜೋತೆಗೆ ಅನೈತೀಕ ಸಂಬಂಧ ಹೊಂದಿರುವದು ತನ್ನ ಗಂಡ ಇಂದ್ರಪ್ಪನಿಗೆ ಗೊತ್ತಾಗಿದ್ದರಿಂದ ಹಲವಾರು ಭಾರಿ ಜಗಳವಾಗಿದ್ದು, ದಿನಾಂಕ 07-04-2016 ರಂದು ಎಮ್ಮಿ ರಾಮಣ್ಣ ತನ್ನ ಹೆಂಡತಿಯ ಮನೆಯಲ್ಲಿ ಇರುವದನ್ನು ನೋಡಿ ಬೈದಾಡುತ್ತಿದ್ದಾಗ ಇದರಲ್ಲಿಯ ಆರೋಪಿತರು ಇಂದ್ರಪ್ಪನ್ನು ಮನೆಯಲ್ಲಿ ಒಳಗೆ ಎಳದೆಕೊಂಡು ಲೈಟ್ ಆರಿಸಿ ರಾತ್ರಿ 10-00 ಗಂಟೆಯ ನಂತರ ದಿನಾಂಕ 08-04-2016 ರ ಬೆಳಿಗ್ಗೆ 04-00 ಗಂಟೆಯ ಮಧ್ಯದಲ್ಲಿ ಇಂದ್ರಪ್ಪನನ್ನು, ಅವನ ಹೆಂಡತಿ ಕರಿಯವ್ವ, ಅವನ ಮಗ ನಿಂಗಪ್ಪ @ ನಿಂಗಜ್ಜ, ಕರಿಯವ್ವಳ ಜೋತೆಗೆ ಅನೈತೀಕ ಸಂಬಂಧ ಹೊಂದಿದ್ದ ಎಮ್ಮಿ ರಾಮಣ್ಣ, ಘಟನೆ ಜರುಗಿದ ದಿನ ಮನೆಯಲ್ಲಿದ್ದ ಕರಿಯವ್ವಳ ಅಕ್ಕನ ಮಗಳಾದ ಮಲ್ಲವ್ವ ಮತ್ತು ಮಲ್ಲವ್ವಳ ಗಂಡ ಮಹಾದೇವಪ್ಪ ರವರೆಲ್ಲರೂ ಸೇರಿ ಇಂದರಗಿ ಗ್ರಾಮದ ಆರೋಪಿತರ ಮನೆಯಲ್ಲಿ ಕೊಲೆ ಮಾಡಿ, ಕೊಲೆಯನ್ನು ಮುಚ್ಚಿ ಹಾಕಲು ಗಿಣಗೇರಾ-ಮುನಿರಾಬಾದ ರೈಲು ನಿಲ್ದಾಣಗಳ ಮಧ್ಯದಲ್ಲಿ ಹಿಟ್ನಾಳ ಗ್ರಾಮದ ಹತ್ತಿರ ಇರುವ ರೇಲ್ವೆ ಹಳಿಯಲ್ಲಿ ಶವವನ್ನು ಚಲಿಸುವ ರೇಲ್ವೆಗೆ ದೇಹ ಕಟ್ಟಾಗು ರೀತಿಯಲ್ಲಿ ಹಾಕಿ ಹೋದ ಆರೋಪಿತರ ವಿರುದ್ದ ಕಾನೂನ ಕ್ರಮ ಜರುಗಿಸಲು ಲಿಖಿತ ಫಿರ್ಯಾದು ನೀಡಿದ್ದು, ಇದರೊಂದಿಗೆ ಗದಗ ರೇಲ್ವೆ ಪೊಲೀಸ ಠಾಣೆ ಯು.ಡಿ.ಆರ್ ನಂ 15/2016 ಕಲಂ 174 (ಸಿ) ಸಿ.ಆರ್.ಪಿ.ಸಿ ಪ್ರಕರಣದಲ್ಲಿಯ ಕಡತವನ್ನು ಅಳವಡಿಸಿಕೊಂಡು ಗದಗ ರೇಲ್ವೆ ಪೊಲಿಸ ಠಾಣೆ ಗುನ್ನೆ ಸಂಖ್ಯೆ 15/2016 ಕಲಂ 302, 201, 143,147 ಸಹ ಕಲಂ 149  ಐ.ಪಿ.ಸಿ ಪ್ರಕರಣದಲ್ಲಿ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
5] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 76/2016 ಕಲಂ: 78(3) Karnatka Police Act.

ದಿನಾಂಕ: 04-08-2016 ರಂದು ರಾತ್ರಿ 7-45 ಗಂಟೆ ಸುಮಾರಿಗೆ ಆರೋಪಿ ನಂ. 01 ಷಣ್ಮುಖಪ್ಪ ತಂದೆ ಸಿದ್ದಪ್ಪ ಗೊಗೆರಿ @ ಗೊಂದಿ ವಯ : 50 ವರ್ಷ ಜಾತಿ: ಕುರುಬರ ಸಾ; ರಾಜೂರ ತಾ: ಯಲಬುರ್ಗಾ  ನೇದ್ದವನು ಕಲ್ಲೂರ ಗ್ರಾಮದ ವಿರುಪಯ್ಯಜ್ಜನ ಮಠದ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಜನರಿಂದ ಹಣ ಪಡೆದು ಓಸಿ ಮಟಕಾ ನಂಬರಗಳನ್ನು ಬರೆದುಕೊಳ್ಳುತಿದ್ದಾಗ ಪಿ.ಎಸ್.ಐ. ಯಲಬುರ್ಗಾರವರು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದಿದ್ದು, ಸದರಿ ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ 670/-ರೂ. ಹಾಗೂ ಓ.ಸಿ ಮಟ್ಕಾ ನಂಬರ್ ಬರೆದ ಚೀಟಿ & 01 ಬಾಲ ಪೆನ್ ಗಳೊಂದಿಗೆ ಸಿಕ್ಕಿಬಿದ್ದಿದ್ದು ಇರುತ್ತದೆ. ಸದರಿ ಆರೋಪಿ ನಂ. 01 ನೇದ್ದವನು ಖುದ್ದಾಗಿ ಸಂಗಾನಾಳ ಗ್ರಾಮಕ್ಕೆ ಹೋಗಿ ಓಸಿ ಮಟಕಾ ಪಟ್ಟಿ ಹಾಗೂ ಹಣವನ್ನು ಆರೋಪಿ ನಂ. 02 ಸಿದ್ದಪ್ಪ ಗಿರಡ್ಡಿ ಸಾ- ಸಂಗನಾಳ ತಾ : ಯಲಬುರ್ಗಾ ನೇದ್ದವನಿಗೆ ಕೊಡುತ್ತಿರುವದಾಗಿ ಒಪ್ಪಿಕೊಂಡಿರುತ್ತಾನೆ ಅಂತಾ ಮುಂತಾಗಿ ಪಿರ್ಯಾದಿ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008