Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, August 7, 2016

1] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 78/2016 ಕಲಂ: 279, 304(ಎ) ಐ.ಪಿ.ಸಿ.
ದಿನಾಂಕ: 05-08-2016 ರಂದು ಸಂಜೆ 7 ಗಂಟೆಯ ಸುಮಾರಿಗೆ ಆರೋಪಿ ಮೌನೇಶ ತಂದೆ ಗಂಗಾಧರ ಬಡಿಗೇರ ಮೋಟಾರ ಸೈಕಲ ನಂ: 37/ಈ.ಎ-1232 ನೇದ್ದರ ಸವಾರ ಸಾ: ಸಂಗನಾಳತನು ಮೋಟಾರ ಸೈಕಲ ನಂ: ಕೆ.-37/.-1232 ನೇದ್ದನ್ನು ಯಲಬುರ್ಗಾ ಕಡೆಯಿಂದ ಸಂಗನಾಳ ಕಡೆಗೆ ರಸ್ತೆಯ ಮೇಲೆ ಅತಿಜೋರಾಗಿ & ಅಲಕ್ಷತನದಿಂದ ಚಲಾಯಿಸಿ ಕೊಂಡು ಬಂದು ರಸ್ತೆ ದಾಟುತ್ತಿದ್ದ ಶ್ರೀಮತಿ ಬಸಮ್ಮ ಗಂಡ ಚೆನ್ನಪ್ಪ ಗಿರಡ್ಡಿ ಜಾತಿ: ರೆಡ್ಡಿ ಸಾ: ಆಶ್ರಯ ಕಾಲೋನಿ ಸಂಗನಾಳ ಇವಳಿಗೆ ಜೋರಾಗಿ ಟಕ್ಕರ್ ಕೊಟ್ಟು ಅಪಘಾತ ಪಡಿಸಿದ್ದರಿಂದ ಬಸಮ್ಮಳ 2 ಕಣ್ಣಿನ ಮಗ್ಗಲು ಹಾಗೂ ಬಲಗಾಲ ಮೊಣಕಾಲ ಚಿಪ್ಪಿನ ಹತ್ತಿರ ತೆರಚಿದ ನಮೂನೆಯ ಗಾಯಗಳಾಗಿದ್ದು, 2 ಪಾದಗಳ ಚಿಪ್ಪಿನ ಹತ್ತಿರ ಭಾರಿ ಸ್ವರೂಪದ ಗಾಯವಾಗಿ ಮುರಿದಿದ್ದು ಸದರಿಯವಳನ್ನು ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಸದರಿಯಯವಳ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಅದೆ. ಸದ್ರಿಯವಳಿಗೆ ಚಿಕಿತ್ಸೆ ಫಲೀಸದೆ ದಿನಾಂಕ: 06-08-2016 ರಂದು ಬೆಳಗಿನ ಜಾವ 0115 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾಳೆ ಅಂತಾ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 128/2016 ಕಲಂ: 363  ಐ.ಪಿ.ಸಿ.
ದಿನಾಂಕ: 06-08-2016 ರಂದು 10-00 .ಎಮ್ ಕ್ಕೆ ಫಿರ್ಯಾದಿ ಇಮಾಲಪ್ಪ ಕಂದಳ್ಳಿ ಅಧೀಕ್ಷಕರು ಬಾಲಮಂದಿರ ಕೊಪ್ಪಳ ಇವರು ಠಾಣೆಗೆ ಹಾಜರಾಗಿ  ನೀಡಿದ ದೂರಿನ ಸಾರಾಂಶವೇನೆಂದರೆ, ಬಾಲಮಂದಿರದಲ್ಲಿ ಆಶ್ರಯ ಪಡೆದ ಬಾಲಕ ಹುಲಗಪ್ಪ ತಂದೆ ರಾಜಪ್ಪ ಚಲವಾದಿ ವಯಾ: 13 ವರ್ಷ ಸಾ: ಕುಕನೂರ ಈತನು ದಿ: 03-08-2016 ರಂದು ಭಾಗ್ಯನಗರದ ಪ್ರೌಢ ಶಾಲೆಗೆ ಹೋಗಿದ್ದು, ನಂತರ ಶಾಲೆ ಬಿಟ್ಟ ನಂತರ ವಾಪಸ್ ಬಾಲಮಂದಿರಕ್ಕೆ ಬರುವಾಗ ಓಜನಹಳ್ಳಿ ಕ್ರಾಸ್ ಹತ್ತಿರ ಸಂಜೆ 05-30 ರಿಂದ 6-00 ಗಂಟೆ ನಡುವಿನ ಅವಧಿಯಲ್ಲಿ ಹುಲಗಪ್ಪ ವಯಾ: 13 ವರ್ಷ ಯಾರೋ ಅಪರಿಚಿತರು ಯಾವುದೋ ಉದ್ದೇಶಕ್ಕಾಗಿ ಅಪಹರಣ ಮಾಡಿಕೊಂಡು ಹೋಗಿರಬಹುದು ಅಂತಾ ಸಂಶಯ ಬಂದಿದ್ದು, ಕಾರಣ ಸದರಿ ಬಾಲಕ ಹುಲಗಪ್ಪ ಈತನಿಗೆ ಪತ್ತೆ ಮಾಡಿ, ಅಪಹರಣ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 129/2016 ಕಲಂ: 341, 323, 324, 504, 506 ಸಹಿತ 34 ಐಪಿಸಿ
ದಿನಾಂಕ: 06-08-2016 ರಂದು ಮಧ್ಯಾಹ್ನ 12-00 ಗಂಟೆಗೆ ಫಿರ್ಯಾದಿದಾರರಾದ ಗೋಪಾಲ ಕಲ್ಲಣ್ಣವರ ಸಾ: ಭಾಗ್ಯನಗರ  ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನನಗೆ ಪರಿಚಯ ಭಾಗ್ಯನಗರದ ನಿವಾಸಿ ಚಂದ್ರು ಈತನಿಗೆ ಚೀಟಿ ಹಣ ತುಂಬಲು ಕೈಗಡಾ ಹಣ ನೀಡಿದ್ದು, ವಾಪಸ್ ಕೊಡದೇ ಹೋಗಿದ್ದನು. ನಂತರ ದಿನಾಂಕ: 05-08-2016 ರಂದು ರಾತ್ರಿ 8-00 ಗಂಟೆಗೆ ನಾನು ಚಂದ್ರು ಮನೆಯ ಹತ್ತಿರ ಹೋಗಿದ್ದು, ಅವರ ಮನೆಯ ಹತ್ತಿರ ಮರಿಯಮ್ಮನ ಗುಡಿ ಹತ್ತಿರ ನಿಂತಿದ್ದ ಚಂದ್ರು ಅಣ್ಣ ರಾಜೇಶ ಈತನಿಗೆ  ಕೇಳಿದಾಗ ಚಂದ್ರು ಹಣ ಕೊಡಬೇಕು ಎಲ್ಲಿ ಇದ್ದಾನೆ ಅಂತಾ ಕೇಳಿದಾರ ರಾಜೇಶ ಈತನು ನನಗೆ ಚಂದ್ರು ಯಾವ ಹಣ ಕೊಡಬೇಕು ಅಂತಾ ರಾಜೇಶ ಮತ್ತು ಅವನ ತಂಗಿಯ ಗಂಡ ಇಬ್ಬರೂ ಕೂಡಿಕೊಂಡು ನನಗೆ ಅಡ್ಡಗಟ್ಟಿ ನಿಲ್ಲಿಸಿ ಲೇ ಸೂಳೆ ಮಗನೆ ನಿನಗೆ ಯಾವ ಹಣ ಕೊಡಬೇಕು ಇಲ್ಲಿಂದ ಹೋಗಲೇ ಅಂತಾ ಕೈಯಿಂದ ಮತ್ತು ಕಟ್ಟಿಗೆಯಿಂದ ಬಡಿದು ದುಖಾಪತ್ ಗೊಳಿಸಿದ್ದು, ಅಲ್ಲದೆ ಅವಾಚ್ಯವಾಗಿ ಬೈದಾಡಿ ಜೀವದ ಬೆದರಿಕೆ ಹಾಕಿ ಹೋಗಿದ್ದು, ಸದರಿ ಆರೋಪಿತರ ಮೇಲೆ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 95/2016 ಕಲಂ: 143,147,323,324,341,504,506 ಸಹಿತ 149 ಐ.ಪಿ.ಸಿ.
ದಿನಾಂಕ 06-08-2016 ರಂದು ಮದ್ಯಾಹ್ನ 12-30 ಗಂಟೆಗೆ ಫಿರ್ಯಾಧಿದಾರರಾದ ಶ್ರೀ ಬಸವರಾಜ ತಂದೆ ವೀರಭದ್ರಪ್ಪ ಸಂಗಟಿ ವಯ: 23 ವರ್ಷ, ಜಾತಿ: ಲಿಂಗಾಯತ, ಉ: ಒಕ್ಕಲುತನ, ಸಾ: ಎಂ. ಗುಡದೂರು. ರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾಧಿಯನ್ನು ನೀಡಿದ್ದು ಅದರ ಸಾರಾಂಶವೆನೆಂದರೆ ನಮ್ಮೂರಿನ ನಮ್ಮ ಸಮಾಜದ ಶಿವಬಸಪ್ಪ ತಂದೆ ದೊಡ್ಡಪ್ಪ ಮೆಂಟಗೇರಿ ಈತನು ನನಗೆ ಸಂಬಂಧಿಕರಲ್ಲಿ ಮಾವನಾಗುತ್ತಿದ್ದು, ಅವರಿಗೂ ನಮಗೂ ದುಡ್ಡಿನ ವಿಷಯದಲ್ಲಿ ಕೊಡುವ ತೆಗೆದುಕೊಳ್ಳುವ ವ್ಯವಹಾರವಿದ್ದು, ನಾವು ಅವರಿಗೆ ಒಂದು ಲಕ್ಷ ರೂಪಾಯಿಗಳನ್ನು ಕೊಡಬೇಕಾಗಿತ್ತು. ನನ್ನ ಮಾವ ಶಿವಬಸಪ್ಪನ ಮಗಳಾದ ಶಿವಮ್ಮ 19 ವರ್ಷ ಈಕೆಯನ್ನು ನಾನು ಪ್ರೀತಿಸಿ ಓಡಿಸಿಕೊಂಡು ಹೋಗಿ ಮದುವೆಯಾಗಿದ್ದು ಅದೇ ವಿಷಯಕ್ಕೆ ನನ್ನ ಮಾವನ ಅಣ್ಣ ತಮ್ಮಂದಿರು ಮತ್ತು ಸಂಬಂಧಿಕರು ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದರು. ದಿನಾಂಕ: 04-07-2016 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನಾನು ಒಂದು ಲಕ್ಷ ರೂಪಾಯಿಗಳನ್ನು ತೆಗೆದುಕೊಂಡು ನನ್ನ ಮಾವನಿಗೆ ಕೊಡಲು ನಮ್ಮ ಸೋದರ ಮಾವಂದಿರಾದ 1) ದೊಡ್ಡಪ್ಪ ಬಳೋಟಗಿ 2) ಬಸಣ್ಣ ಬಳೋಟಗಿ, 3) ಕಳಕಪ್ಪ ಬಳೋಟಗಿ ರವರೊಂದಿಗೆ ಹಣವನ್ನು ಕೊಡಲು ನಮ್ಮೂರಿನ ಸಂಗನಗೌಡ ತಂದೆ ಹನುಮಗೌಡ ಮಾಲಿಪಾಟೀಲ. ಇವರ ಹೊಸ ಮನೆಯಲ್ಲಿ ಸಮಾಜದ ಮುಖಂಡರಾದ ಚಂದ್ರಶೇಖರ ತಂದೆ ಆದಪ್ಪ  ನಾಲತವಾಡ, ಬಸಪ್ಪ ತಂದೆ ನಿಂಗಪ್ಪ ಸಂಗಟಿ, ದೊಡ್ಡಬಸಪ್ಪ ತಂದೆ ಪಕ್ಕೀರಪ್ಪ ಬಿಜಕಲ್, ಅಯ್ಯಪ್ಪ ತಂದೆ ಸಂಗಪ್ಪ ಬಿಜಕಲ್, ನಾಗಪ್ಪ ದೋಟಿಹಾಳ ರವರು ಕುಳಿತುಕೊಂಡು ವಿಚಾರ ಮಾಡಿ ಹೇಳಿದ ಪ್ರಕಾರ ಹಿರಿಯರಾದ ದೊಡ್ಡಬಸಪ್ಪ ತಂದೆ ಪಕ್ಕೀರಪ್ಪ ಬಿಜಕಲ್ ಇವರು ನಮ್ಮ ಸೋದರ ಮಾವ ಕಳಕಪ್ಪ ತಂದೆ ಕುಂಟೆಪ್ಪ ಬಳೋಟಗಿ ಇವರ ಕಡೆಯಿಂದ ಒಂದು ಲಕ್ಷ ರೂಪಾಯಿಗಳನ್ನು ತೆಗೆದುಕೊಂಡು ನಮ್ಮ ಮಾವ ಶಿವಬಸಪ್ಪನಿಗೆ ಕೊಟಿದ್ದು, ನಂತರ ನಮ್ಮ ಮಾವನ ತಮ್ಮನಾದ ಅಡಿವೆಪ್ಪ ಮೆಂಟಗೇರಿ ಈತನು ನನಗೆ ಲೇ ಸೂಳೇ ಮಗನೇ ನಮ್ಮ ಹುಡುಗಿಯನ್ನು ಓಡಿಸಿಕೊಂಡು ಹೋದವನು ವಾಪಾಸು ಊರಾಕ ಯಾಂಗ ಬಂದೀಲೇ ಅಂತಾ ಕೈಯಲ್ಲಿ ಒಂದು ಕಟ್ಟಿಗೆಯ ಬಡಿಗೆಯನ್ನು ಹಿಡಿದುಕೊಂಡು ಬಂದವನೇ ನನ್ನ ತಲೆಗೆ ಜೋರಾಗಿ ಹೊಡೆದನು. ನಾನು ಓಡಿ ಹೋಗಬೇಕು ಎನ್ನುವಷ್ಟರಲ್ಲಿ ಕಳಕಪ್ಪ ತಂದೆ ಬಸನಗೌಡ ಮೆಂಟಗೇರಿ, ಈತನು ನನ್ನನ್ನು ಹಿಂದಿನಿಂದ ಗಟ್ಟಿಯಾಗಿ ಹಿಡಿದುಕೊಂಡಿದ್ದು ಆಗ ಉಳಿದವರಾದ ಶಿವಪ್ಪ ತಂದೆ ಬಸನಗೌಡ ಮೆಂಟಗೇರಿ, ದೊಡ್ಡಪ್ಪ ತಂದೆ ಸಂಗಪ್ಪ ಗೋತಗಿ, ಬಸನಗೌಡ ತಂದೆ ಶಿವನಗೌಡ ಮೆಂಟಗೇರಿ. ಬಸಲಿಂಗಪ್ಪ ತಂದೆ ಬಸಪ್ಪ ಸಂಗಟಿ, ವಿರುಪಾಕ್ಷಿ ತಂದೆ ಬಸಪ್ಪ ಸಂಗಟಿ ಇವರೆಲ್ಲರೂ ನನಗೆ ಈ ಸೋಳೆ ಮಗ ನಮ್ಮ ಹುಡುಗಿಯನ್ನು ಓಡಿಸಿಕೊಂಡು ಹೋಗಿ ನಮ್ಮ ಮುಂದೆಯೇ ನಮ್ಮ ಊರಿನಲ್ಲಿಯೇ ತಿರುಗಾಡುತ್ತಾನೆಂದರೆ ಈ ಸೋಳೆ ಮಗನನ್ನು ಬಿಡಬೇಡಿ ಹೊಡೆದು ಸಾಯಿಸಿ ಎನ್ನತ್ತಾ ತಮ್ಮ ಕೈಗಳಿಂದ ನನಗೆ ಹೊಡೆಬಡೆ ಮಾಡಿದ್ದು ಅಂತಾ ಮುಂತಾಗಿ ಫಿರ್ಯಾಧಿ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
5] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 170/2016 ಕಲಂ: 109 ಸಿ.ಆರ್.ಪಿ.ಸಿ.

ದಿನಾಂಕ: 06-08-2016 ರಂದು ಸಂಜೆ 5-15 ಗಂಟೆಯ ಸುಮಾರಿಗೆ ಠಾಣಾ ವ್ಯಾಪ್ತಿಯ ಯತ್ನಟ್ಟಿ ಸೀಮಾದ ಬಸಪ್ಪ ಅಜ್ಜನ ಮಠದ ಹತ್ತಿರ ಯಾರೋ ಓರ್ವ ಅಪರಿಚಿತ ವ್ಯಕ್ತಿ ಸಂಶಯಾತ್ಮಕವಾಗಿ ತಿರುಗಾಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದು, ಕೂಡಲೇ ಸಿಬ್ಬಂದಿಯವರಿಗೆ ಸಂಗಡ ಕರೆದುಕೊಂಡು ಠಾಣೆಯಿಂದ ಸಂಜೆ 6-00 ಗಂಟೆಗೆ ಹೊರಟು ಯತ್ನಟ್ಟಿ ಗ್ರಾಮದ ಗುಡಿಯ ಹತ್ತಿರ ಹೋಗಿ ನೋಡಲು ಅಲ್ಲಿ ಊರಿನ ಜನರ ಹತ್ತಿರ ಓಡಿ ಹೋಗಲು ಪ್ರಯತ್ನಿಸಿದ ವ್ಯಕ್ತಿಯನ್ನು ಅನುಮಾನಗೊಂಡು ಅವನನ್ನು ಹಿಡಿದುಕೊಂಡು ಕೂಡ್ರಿಸಿದ್ದುಆಗ ಅವನು ಮದ್ಯಸೇವನೆ ಮಾಡಿದ ವಾಸನೆಯಿದ್ದು, ಅಲ್ಲದೇ ಅವನು ತಪ್ಪಿಸಿಕೊಂಡು ಓಡಿ ಹೋಗುವಾಗ ಬಿದ್ದಿದ್ದರಿಂದ ತಲೆಗೆ ಮತ್ತು ಬೆನ್ನಿಗೆ ಪೆಟ್ಟಾಗಿದ್ದು ಇತ್ತು, ಸದರಿಯವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರನ್ನು ಬೇರೆ ಬೇರೆಯಾಗಿ ತೊದಲಿಸುತ್ತಾ ಹೇಳುತ್ತಿದ್ದು ನಂತರ ಸದರಿಯವರಿಗೆ ದೀರ್ಘವಾಗಿ ವಿಚಾರಣೆ ಮಾಡಲು ಅವರು ತಮ್ಮ ಹೆಸರು ಬಸವರಾಜ ತಂದೆ ಸಣ್ಣಹನುಮಪ್ಪ ಗದ್ದೇರ. ವಯ: 24 ವರ್ಷ, ಜಾ: ಉಪ್ಪಾರ, ಉ: ಕೂಲಿಕೆಲಸ, ಸಾ: ಕಾಟ್ರಳ್ಳಿ. ತಾ:ಜಿ: ಕೊಪ್ಪಳ. ಅಂತಾ ತಿಳಿಸಿದ್ದು ಇರುತ್ತದೆ. ಸದರಿಯವನನ್ನು ಹಾಗೇ ಅಲ್ಲಿಯೇ ಬಿಟ್ಟಲ್ಲಿ ಅಲ್ಲಿ ಹಾಗೂ ಮುಂದೆ ಎಲ್ಲಾದರೂ ಸಂಜ್ಞೆಯ ಅಪರಾಧ ಅಥವಾ ಸ್ವತ್ತಿನ ಅಪರಾಧ ಮಾಡಬಹುದೆಂಬ ಬಲವಾದ ಸಂಶಯ ಬಂದಿದ್ದರಿಂದ ಮುಂಜಾಗೃತೆ ಕ್ರಮವಾಗಿ ಸದರಿಯವರನ್ನು ಸಂಜೆ 6-20 ಗಂಟೆಗೆ ವಶಕ್ಕೆ ತಗೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008