Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, August 8, 2016

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 171/2016 ಕಲಂ: 87 Karnataka Police Act.
ದಿ:207-08-2019 ರಂದು ಸಂಜೆ 4-50 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಹಟ್ಟಿ ಗ್ರಾಮದ ಕಲಿಕೇರಿ ರಸ್ತೆಯ ಬಾಜು ರವಣರೆಡ್ಡಿ ಇವರ ಹೊಲದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 08 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಮಾನ್ಯ ಡಿ.ಎಸ್.ಪಿ ಕೊಪ್ಪಳ ಸಾಹೇಬರು ಮತ್ತು ಸಿ.ಪಿ. ಕೊಪ್ಪಳ ಗ್ರಾಮೀಣ ವೃತ್ತ ಸಾಹೇಬರ ನೇತೃತ್ವದಲ್ಲಿ ಪಿ.ಎಸ್,ಐ ರವರು ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ 13,900=00 ರೂ, ಮತ್ತು 52 ಇಸ್ಪೇಟ್ ಎಲೆಗಳನ್ನು ಹಾಗೂ ಒಂದು ಹಾಳೆಯ ಚೀಲ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು 08 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಹೀಗೆ ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
2] ಯಲಬರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 79/2016 ಕಲಂ: 87 Karnataka Police Act.
ದಿನಾಂಕ: 07-08-2016 ರಂದು ಸಾಯಂಕಾಲ 5-20 ಗಂಟೆಯ ಸುಮಾರಿಗೆ ಚಿಕ್ಕಮ್ಯಾಗೇರಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಹತ್ತಿರ ಇರುವ ಸಾರ್ವಜನಿಕ ಕಚ್ಛಾ ರಸ್ತೆಯ ಮೇಲೆ ಆರೋಪಿತರೆಲ್ಲರೂ ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ಸಾಯಂಕಾಲ 5-20  ಗಂಟೆಗೆ ದಾಳಿ ಮಾಡಿ ಹಿಡಿದಿದ್ದು 3 ಜನರು ಸಿಕ್ಕಿ ಬಿದ್ದಿದ್ದು 4 ಜನ ಆರೋಪಿತರು ಓಡಿ ಹೋಗಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 3,100=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು ಅಂ.ಕಿ. ಇಲ್ಲ ಮತ್ತು ಒಂದು ಹಳೆಯ ಪ್ಲಾಸ್ಟೀಕ ಬರ್ಕಾ ಅಂ.ಕಿ. ಇಲ್ಲ ಇವುಗಳು ಸಿಕ್ಕಿದ್ದು ಇರುತ್ತದೆ. ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 220/2016 ಕಲಂ:  143, 147, 447, 427, 323, 354, 504, 506 ಸಹಿತ 149 ಐ.ಪಿ.ಸಿ:.
 ದಿನಾಂಕ: 07-08-2016 ರಂದು ಸಂಜೆ 6:30 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಮೀನಾಕ್ಷಮ್ಮ ಗಂಡ ದಿ: ವಿರುಪಾಕ್ಷಪ್ಪ ಕ್ಯಾಡೇದ 65 ವರ್ಷ ಜಾತಿ: ಲಿಂಗಾಯತ, ಉ: ಮನೆಕೆಲಸ ಸಾ: ಕೇಸರಹಟ್ಟಿ ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ತಮ್ಮ ನುಡಿ ಹೇಳಿಕೆ ದೂರನ್ನು ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ಈಗ್ಗೆ ಸುಮಾರು 2013 ನೇ ಸಾಲಿನಿಂದ ನಮಗೆ ಮತ್ತು ನನ್ನ ಎರಡನೇಯ ಮಗನಾದ ಬಸಪ್ಪ ಹಳ್ಳಿ ಈತನಿಗೂ ಆಸ್ತಿಯ ವಿಚಾರವಾಗಿ ತಕರಾರು ಇದ್ದು ನನ್ನ ಮಗಳಾದ ರೇಣುಕಾ ಗಂಡ ದುಂಡನಗೌಡ (ಡಿ.ಎಂ.ಪಾಟೀಲ್) ಇವಳು ಗಂಗಾವತಿ ಸಿವಿಲ್ ನ್ಯಾಯಲಯದಲ್ಲಿ ದಾವೆ ಹಾಕಿದ್ದು ದಾವೆ ಸಂ: 94/2013 ಇರುತ್ತದೆ. ಈ ದಾವೆಯು ನನ್ನ ಮಕ್ಕಳಿಗೆ ಸಮಾನಾಗಿ ವಿಭಾಗ ಮಾಡುವಂತೆ ದಿನಾಂಕ:  15-12-2015 ರಂದು ಆದೇಶಿಸಿರುತ್ತದೆ. ಆದರೆ ಇದನ್ನು ಸಹಿಸದೇ ಹಳ್ಳಿ ಬಸಪ್ಪ ಈತನು ರೇಣುಕಾ ಇವರ ವಿರುದ್ದ ಆಸ್ತಿಗೆ ಸಂಭಂದಿಸಿದಂತೆ ಪುನ: ನ್ಯಾಯಲಯಕ್ಕೆ ಮೋರೆ ಹೋಗಿರುತ್ತಾನೆ ಅದು ಇನ್ನೂ ವಿಚಾರಣೆಯಲ್ಲಿರುತ್ತದೆ. ನಿನ್ನೆ ದಿನಾಂಕ:- 06-08-2016 ರಂದು ರಾತ್ರಿ 9:10 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಗ ವೀರಾರಡ್ಡಿ ಇಬ್ಬರೂ ಕೂಡಿ ಮನೆಯಲ್ಲಿರುವಾಗ ಹಳ್ಳಿಬಸಪ್ಪ ಆತನ ಹೆಂಡತಿ ರೇಖಾ, ಅಳಿಯಂದಿರಾದ ರಮೇಶ ತಂದೆ ದೇವೆಂದ್ರಗೌಡ ಪಾಟೀಲ್, ವಿಶ್ವನಾಥ ತಂದೆ ದೇವೆಂದ್ರಗೌಡ ಪಾಟೀಲ್, ಶರಣಮ್ಮ ಗಂಡ ದೇವೆಂದ್ರಗೌಡ ಮಾಲಿಪಾಟೀಲ್ ಮತ್ತು ದೇವೆಂದ್ರಗೌಡ ತಂದೆ ವೀರನಗೌಡ ಮಾಲಿಪಾಟೀಲ್ ಸಾ: ಎಲ್ಲರೂ ಕೇಸಹರಟ್ಟಿ ಇವರುಗಳು ಕೂಡಿಕೊಂಡು ನಮ್ಮ ಮನೆಯಲ್ಲಿ ಅತೀಕ್ರಮ ಪ್ರವೇಶ ಮಾಡಿ ಹೆಣ್ಣು ಮಕ್ಕಳಿಗೆ ಯಾಕೆ ಆಸ್ತಿ ಕೊಡುತ್ತೀಯಾ ಅವರು ನಮ್ಮ ಮನೆಯ ಹತ್ತಿರ ಬರಬಾರದು ಅಂತಾ ಜಗಳ ಮಾಡಿ ನನ್ನ ಮೇಲೆ ಹಲ್ಲೆ ಮಾಡಿ ಸೀರೆ ಹಿಡಿದು ಎಳೆದಾಡಿರುತ್ತಾರೆ. ನಂತರ ಮನೆಯಲ್ಲಿದ್ದ ಕಿಟಕಿ ಗ್ಲಾಸ್ ಒಡೆದು, ಬಾಗಿಲುಗಳನ್ನು ಕಿತ್ತಿ ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಮಾಡಿರುತ್ತಾರೆ. ಹಾಗೂ ಗಾಡ್ರೆಜನ್ನು ಸಹ ಒಡೆದಿರುತ್ತಾರೆ. ಆಗ ಮನೆಯಲ್ಲಿದ್ದ ನನ್ನ ಮಗ ವೀರಾರಡ್ಡಿ  ಈತನು ಬಿಡಿಸಿದನು. ನಂತರ ಅವರು ನಿನೇನಾದರೂ ಹೆಣ್ಣು ಮಕ್ಕಳಿಗೆ ಆಸ್ತಿಯನ್ನು ಕೊಟ್ಟರೆ ನಿನ್ನನ್ನು ಜೀವ ಸಹಿತ ಉಳಿಸುವದಿಲ್ಲಾ ಮುಗಿಸಿಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋದರು. ಪ್ರರಕಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.


0 comments:

 
Will Smith Visitors
Since 01/02/2008