ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 223/2016 ಕಲಂ: 302 ಐ.ಪಿ.ಸಿ:
ದಿನಾಂಕ 07-08-16 ರಂದು ಪಿರ್ಯಾದಿದಾರ ಬಾಳಪ್ಪ ಹಾಗೂ ಆತನ ಹೆಂಡತಿ
ಭರಮವ್ವ ಮತ್ತು ಮಗ ಶಿವಕುಮಾರ ಕುಷ್ಟಗಿ ಸಂತೆಗೆ ಬೆಳೀಗ್ಗೆ 10-00 ಗಂಟೆಗೆ ಬಂದು 12000-00 ಸಾವಿರ
ರೂಗಳಿಗೆ ಒಂದು ಆಕಳವನ್ನು ಖರೀದಿ ಮಾಡಿಕೊಂಡು ಶಿವಕುಮಾರಿಗೆ 300-00 ರೂ ಗಳನ್ನು ಕುಡಿಯಲು
ಕೊಟ್ಟು ಆಕಳನ್ನು ಹೊಡೆದುಕೊಂಡು ನಾನು ನಿದಾನವಾಗಿ ಹೊರಟಿದ್ದು ಸಂಜೆ 06-00 ಗಂಟೆಗೆ ಮನೆಗೆ ಬಂದು
ನೋಡಲು ನನ್ನ ಹೆಂಡತಿ ಮತ್ತು ಮಗ ಬರಲಿಲ್ಲಾ ರಾತ್ರಿ ಸಹ ಬರಲಿಲ್ಲಾ ಶಿವಕುಮಾರ ಒಬ್ಬನೇ ಬಂದು ಮಲಗಿದನು.
ಇಂದು ಬೆಳಿಗ್ಗೆ 07-00 ಗಂಟೆಗೆ ವಿಚಾರಿಸಲಾಗಿ ದಾರಿಯಲ್ಲಿ ತಾನು ಮತ್ತು ತಾಯಿ ಭರಮವ್ವ ಸಾರಾಯಿ ಕುಡಿದು
ಕುಡಿದ ನಂತರ ಇನ್ನಷ್ಟೂ ಸರಾಯಿ ಕುಡಿಯ ಬೇಕು ರೊಕ್ಕ ಕೋಡು ಅಂತಾ ಕೇಳಿದಕ್ಕೆ ಭರಮವ್ವ ದುಡ್ಡು ಕೊಡಲಾರದಕ್ಕೆ
ಕಟ್ಟಿಗೆಯಿಂದ ತಲೆಗೆ ಮುಖಕ್ಕೆ ಹೊಡೆದು ಭಾರಿ ರಕ್ತಗಾಯಗಳನ್ನು ಉಂಟು ಮಾಡಿ ಕೊಲೆ ಮಾಡಿದ್ದು ಇರುತ್ತದೆ.
ಪ್ರಕರಣ ದಾಖಲಿಸಿಕೊಂಡು ಆರೋಪಿತನಾದ ಶಿವಕುಮಾರನನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು
ಇರುತ್ತದೆ.
0 comments:
Post a Comment