Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, September 22, 2016

1] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 14/2016 ಕಲಂ: 87 Karnataka Police Act:.
ದಿನಾಂಕ:21-09-2016 ರಂದು 6-30 ಪಿಎಂಕ್ಕೆ ಮಸಬಹಂಚಿನಾಳ ಗ್ರಾಮದಲ್ಲಿ ಇಸ್ಪೀಟ್ ಜೂಜಾಟದ ಮಾಹಿತಿ ಬಂದ ಪ್ರಕಾರ ತಾವು ಮಾನ್ಯ ಸಿ.ಪಿ.ಐ.ಸಾಹೇಬರ ಮಾರ್ಗದರ್ಶನದಲ್ಲಿ ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಶ್ರೀ. ವಿಶ್ವನಾಥ ಹಿರೇಗೌಡರ ಪಿ.ಎಸ್.ಐ. ರವರು ಮಸಬಹಂಚಿನಾಳ ಗ್ರಾಮದ ಕಲ್ಲಿನಾಥೇಶ್ವರ ದೇವಸ್ಥಾನದ ಹಿಂದಿನ ಬಯಲು ಜಾಗೇಯ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, 5 ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಸಿಕ್ಕಿಬಿದ್ದವರಿಂದ ಹಾಗೂ ಜೂಜಾಟದ ಕಣದಿಂದ ಒಂದು ಟಾವೆಲ್, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 2450/- ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 196/2016 ಕಲಂ: 498(ಎ), 323, 504, 506 ಸಹಿತ 34 ಐ.ಪಿ.ಸಿ ಮತ್ತು 3, 4, 6 ವರದಕ್ಷಿಣೆ ನಿಷೇಧ ಕಾಯ್ದೆ:.

ದಿ:21-09-2016 ರಂದು ಮಧ್ಯಾನ್ನ 01.00  ಗಂಟೆಗೆ ಮಾನ್ಯ ಜೆ.ಎಮ್.ಎಫ್.ಸಿ ಘನ ನ್ಯಾಯಾಲಯ ಕೊಪ್ಪಳ ರವರಿಂದ ಖಾಸಗಿ ಫಿರ್ಯಾದಿ ಸಂ : 157/2016. ಹಾಗೂ ಎಲ್.ಟಿ. ಸಂ :887/2016. ದಿ : 17-09-2016 ನೇದ್ದರಲ್ಲಿ ಫಿರ್ಯಾದಿಯು ಸ್ವೀಕೃತವಾಗಿದ್ದು ಇರುತ್ತದೆ. ಸದರಿ ದೂರಿನ ಸಾರಾಂಶವೇನೆಂದರೇ, ಕಳೆದ ದಿ:04-06-2015 ರಂದು ಆರೋಪಿ ನಂ : 01 ನೇದ್ದವರು ಫಿರ್ಯಾದಿದಾರಳಿಗೆ ಡಾವಣಗೇರಿಯಲ್ಲಿ ಮದುವೆ ಮಾಡಿಕೊಂಡಿದ್ದು ಇರುತ್ತದೆ. ಆರೋಪಿತರು ಸದರಿ ಮದುವೆಗಾಗಿ ಫಿರ್ಯಾದಿದಾರರಿಗೆ ವರದಕ್ಷಿಣೆ ರೂಪದಲ್ಲಿ 8 ಲಕ್ಷ ರೂ. ಹಾಗೂ 15 ತೊಲೆ ಬಂಗಾರದ ವಡವೆಗಳನ್ನು ಕೊಡುವಂತೆ ಬೇಡಿಕೆ ಇಟ್ಟಿದ್ದು ಇರುತ್ತದೆ. ಫಿರ್ಯಾದಿಯ ಪೋಷಕರು ತನ್ನ ಮಗಳು ಚೆನ್ನಾಗಿರಲೆಂದು ಮದುವೆಯ ಕಾಲಕ್ಕೆ 3 ಲಕ್ಷ ರೂ. ಹಣ ಹಾಗೂ 06 ತೊಲೆ ಬಂಗಾರದ ಒಡವೆಗಳನ್ನು ಕೊಟ್ಟಿದ್ದು ಇರುತ್ತದೆ. ನಂತರ ಫಿರ್ಯಾದಿದಾರಳಿಗೆ ತನ್ನ ಗಂಡ ಮತ್ತು ಮನೆಯವರು ಚೆನ್ನಾಗಿ ನೋಡಿಕೊಳ್ಳದೇ, ಫಿರ್ಯಾದಿಯ ಗಂಡ ಮತ್ತು ಅತ್ತೆ ಮಾವ ನಾದಿನಿಯವರು ಕೂಡಿಕೊಂಡು ಫಿರ್ಯಾದಿದಾರಳಿಗೆ ವರದಕ್ಷಿಣೆ ಹಣ ಒಡವೆ ತೆಗೆದುಕೊಂಡು ಬರುವಂತೆ ಒತ್ತಾಯಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು, ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದು ಇರುತ್ತದೆ. ನಂತರ ಫಿರ್ಯಾದಿ ದಾರಳು ಡಂಬ್ರಳ್ಳಿಗೆ ಬಂದಾಗ ಆರೋಪಿತರಿಗೆ ಕರೆಯಿಸಿ ಹಿರಿಯರ ಸಮಕ್ಷಮ ಪಂಚಾಯತಿ ಮಾಡಿದ್ದು ಆಗ ಆರೋಪಿತನು ವೈದ್ಯಕೀಯ ಉಪಚಾರಕ್ಕಾಗಿ ಉಳಿದ ವರದಕ್ಷಿಣೆ ಹಣ ಮತ್ತು ಬಂಗಾರದ ಒಡವೆ, ಕಾರು ಕೊಡಬೇಕು ಇಲ್ಲದಿದ್ದರೆ 02 ನೇ ಮದುವೆ ಮಾಡಿಕೊಳ್ಳುವುದಾಗಿ ಹೆದರಿಕೆ ಹಾಕಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008