Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, September 21, 2016

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 195/2016 ಕಲಂ: 504, 323, 326, 448, 506 ಐ.ಪಿ.ಸಿ:.
ಫಿರ್ಯಾದಿ ಶ್ರೀದೇವಿ ತನ್ನ ಮನೆಯ ಮುಂದೆ ಕುಳಿತು ಮುಸರಿ ತಿಕ್ಕುವಾಗ ಅವಳ ತಂದೆಯ ತಾಯಿ ಅಂದರೆ ಅಜ್ಜಿ ಹನಮವ್ವಳು ನೋಡಿ ಫಿರ್ಯಾದಿಗೆ ಸಾಕು ಬಿಡು ಶಾಲೆಗೆ ಹೋಗು ಮನೆಯ ಮುಂದೆ ಕುಳಿತು ಹೊರಗಡೆ ಮುಸರಿ ತಿಕ್ಕಬೇಡ ವಯಸ್ಸಿನ ಹುಡುಗರು ಓಣಿ ದಾರಿಯಲ್ಲಿ ತಿರುಗಾಡುತ್ತಾರೆ. ಆಗಲೇ ನೀನು ದೊಡ್ಡವಳಾಗಿದ್ದಿಯಾ ಕೊಡ ತೆಗೆದುಕೊಳ್ಳುವ ಮಗಳು ಎಂದು ಬಾಯಿ ಮಾಡಿ ಕಳುಹಿಸುವಾಗ ಓಣಿಯ ದೇವರಾಜ ಎಂಬುವವನು ಫಿರ್ಯಾದಿ ಅಜ್ಜಿಗೆ ಯಾವುದೇ ತೊಂದರೆ ಕೊಟ್ಟಿಲ್ಲ ಎಂದು ಹೇಳಿದಾಗ ಆತನಿಗೆ ಫಿರ್ಯಾದಿಯ ಅಜ್ಜಿ ಹನಮವ್ವಳು ಇಲ್ಲಾ ಏಕೆ ಇಲ್ಲಿ ನಿಂತೀರಿ ಅಂತಾ ಹೇಳಿ ಕಳುಹಿಸಿದಳು. ನಂತರ ನಿನ್ನೆ ರಾತ್ರಿ 8-00 ಗಂಟೆಯ ಸುಮಾರಿಗೆ ಫಿರ್ಯಾದಿದಾರಳು ತನ್ನ ಅಜ್ಜಿ, ಹನುಮವ್ವ, ತಾಯಿ ರತ್ನಮ್ಮ, ತಂದೆ ಗವಿಸಿದ್ದಪ್ಪ ಇರುವಾಗ ಆರೋಪಿ ಪಾರಮ್ಮ ಹುಣಸಿಹಾಳ ಇವಳು ಬಂದು ಫಿರ್ಯಾದಿಯ ಅಜ್ಜಿಗೆ ಲೇ ಭೋಸೂಡಿ ಇಂದು ಮುಂಜಾನೆ ನನ್ನ ಮಗ ದೇವರಾಜನಿಗೆ ಏಕೆ ಬೈಯ್ದಿಯಾ ನನ್ನ ಮಗ ಅಂಥಾದ್ದು ಏನು ಮಾಡಿದ್ದಾನೆಂದು ಜಗಳ ಮಾಡಿದಳು. ಆಗ ಆಕೆಗೆ ಫಿರ್ಯಾದಿಯ ತಂದೆ-ತಾಯಿ ಯವರು ಸಣ್ಣ ವಿಚಾರ ಯಾಕೆ ದೊಡ್ಡದು ಮಾಡುತ್ತೀಯಾ ಎಂದು ಹೇಳಿದರು ಸಹ ಅವಳು ಕೇಳದೇ, ಫಿರ್ಯಾದಿಗೆ ಲೇ ಸೂಳೇ ಇದೆಲ್ಲಾ ನಿನ್ನಿಂದಲೇ ಆಗಿದ್ದೆಂದು ಮೈ ಕೈ ಮುಟ್ಟಿ ಎಳೆದಾಡಿ ಕೈಗಳಿಂದ ಹಲ್ಲೆ ಮಾಡಿದ್ದು, ಅಲ್ಲದೇ ಫಿರ್ಯಾದಿಯ ಮನೆಯ ಅಡುಗೆ ಮನೆಯಲ್ಲಿ ಆರೋಪಿತಳು ಅತೀಕ್ರಮ ಪ್ರವೇಶ ಮಾಡಿ ಡಬರಿಯಲ್ಲಿ ಕಾಯಿಸಲು ಇಟ್ಟಿದ್ದ ನೀರನ್ನು ತೆಗೆದುಕೊಂಡು ಬಂದವಳೇ ಬಿಸಿನೀರನ್ನು ಫಿರ್ಯಾದಿಯ ಮೈಮೇಲೆ ಚೆಲ್ಲಿದ್ದರಿಂದ ಫಿರ್ಯಾದಿಯ ಎಡಕಪಾಳಕ್ಕೆ, ಎದೆಗೆ, ಎಡಗೈ ರಟ್ಟೆಗೆ ಎಡಭುಜಕ್ಕೆ, ಇತರೆ ಕಡೆಗಳಲ್ಲಿ ಚರ್ಮ ಸುಟ್ಟಂತೆ ನೀರಿನ ಬೊಬ್ಬೆಯಾಗಿ ಭಾರಿ ಗಾಯಗಳಾಗಿರುತ್ತವೆ. ನಂತರ ಆರೋಪಿತಳು ಫಿರ್ಯಾದಿಗೆ ಇಷ್ಟಕ್ಕೆ ಸುಮ್ಮನೆ ಬಿಡು ಇದನ್ನು ಯಾರ ಮುಂದೆ ಹೇಳಿದರೇ ನಿನಗೆ ಸೀಮೆ ಎಣ್ಣೆ ಉಗ್ಗಿ ಬೆಂಕಿ ಹಚ್ಚಿ ಸಾಯಿಸಿಬಿಡುತ್ತೇನೆಂದು ಜೀವದ ಬೆದರಿಕೆ ಹಾಕಿ ಹೋಗಿರುತ್ತಾಳೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 157/2016 ಕಲಂ: 143, 147, 406, 323, 504, 506 ಸಹಿತ 149 ಐ.ಪಿ.ಸಿ:.

ಮಾನ್ಯ ನ್ಯಾಯಾಲಯದ ಉಲ್ಲೇಖಿತ ದೂರನ್ನು ಪಿಸಿ-414 ರವರು ಹಾಜರುಪಡಿಸಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿಯಾದ ನಾನು ಕೊಪ್ಪಳ ನಿವಾಸಿ ಇದ್ದು, ನನ್ನ ಮಗಳ ಮದುವೆ ಮಾಡಲಿಕ್ಕೆ ವರನಿಗೆ ಹುಡುಕಾಡುತ್ತಿದ್ದಾಗ ಮೌಲಾಸಾಬ ಎಂಬ ಎಜೆಂಟ್ ನು ಸಂಡೂರು ತಾಲೂಕ ಹೊಸ ದರೋಜಿ ಗ್ರಾಮದ ನಿವಾಸಿ ವಲಿಸಾಬ ಇವರ ಮಗನಾದ  ಶಕೀಲಅಹ್ಮದ ಎಂಬ ವರ ತಂದಿದ್ದು, ಎರಡೂ ಕುಟುಂಬದ ಸದಸ್ಯರು ಒಪ್ಪಿಕೊಂಡು ನಂತರ ದಿನಾಂಕ: 26-04-2016 ರಂದು ಕೊಪ್ಪಳ ಗಣೇಶ ನಗರದಲ್ಲಿರುವ ನಮ್ಮ ಮನೆಯಲ್ಲಿ ಆರೋಪಿತರು ಮತ್ತು ಸಾಕ್ಷಿದಾರರ ಸಮಕ್ಷಮ ನಿಶ್ಚಿತಾರ್ಥ ನೆರವೇರಿಸಿದ್ದು, ಆ ಕಾಲಕ್ಕೆ ಆರೋಪಿತರ ಒತ್ತಾಯದ ಮೇಲಿಂದ ನಿಶ್ಚಿತಾರ್ಥಕ್ಕಾಗಿ 10000/- ರೂ. ಹಣ ಮತ್ತು ಒಂದು ತೊಲೆ ಬಂಗಾರದ ಉಂಗುರ ಮತ್ತು ಅಲ್ಲದೆ ಮದುವೆಯ ನಿಶ್ಚಯ ಕಾಲಕ್ಕೆ ಮಾತುಕತೆಯಂತೆ 1,50,000/- ರೂ ವಲಿಸಾಬ ಇವರಿಗೆ ಕೊಟ್ಟಿದ್ದು ಇರುತ್ತದೆ. ಅಲ್ಲದೆ ದಿನಾಂಕ: 24-09-2016 ರಂದು ಕೊಪ್ಪಳದ ನೌಕರರ ಭವನದಲ್ಲಿ ಮದುವೆ ಮಾಡುವುದಾಗಿ ಮಾತುಕತೆ ಮಾಡಿದ್ದು ಇರುತ್ತದೆ. ನಂತರ ದಿನಾಂಕ: 21-08-2016 ರಂದು ಆರೋಪಿತರೆಲ್ಲರೂ ನಮ್ಮ ಮನೆಗೆ ಬಂದು ನೀನು 5,00,000/- ರೂ ನಗದು ಹಣ ಕೊಟ್ಟರೆ ನಿಮ್ಮ ಮಗಳನ್ನು ಮದುವೆ ಮಾಡಿಕೊಳ್ಳುತ್ತೇವೆ ಇಲ್ಲವಾದರೆ ನಿಮ್ಮ ಮಗಳನ್ನು ಬೇರೆ ಎಲ್ಲಿಯಾದರೂ ಕೊಡಿರಿ ಅಂತಾ ಹೇಳಿದ್ದು, ಆಗ ನಾನು ನಮ್ಮ ಹಿರಿಯರನ್ನು ಕರೆಯಿಸಿ ಕೇಳಿದಾಗ ನನಗೆ ಅವಾಚ್ಯವಾಗಿ ಬೈದಾಡಿ ಕಾಲಿನಿಂದ ಹೊಡಿಬಡಿ ಮಾಡಿ ಜೀವದ ಬೆದರಿಕೆ ಹಾಕಿ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008