Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, September 12, 2016

1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 151/2016 ಕಲಂ: 87 Karnataka Police Act.
ದಿನಾಂಕ: 11-09-2016 ರಂದು ಮದ್ಯಾನ 2-30 ಗಂಟೆಯ ಸುಮಾರಿಗೆ ಭಾಗ್ಯನಗರದ ಪಾನಘಂಟಿ ಕಲ್ಯಾಣ ಮಂಟಪದ ಹತ್ತಿರ ಬಯಲು ಜಾಗೆಯ ಸಾರ್ವಜನಿಕ ಸ್ಥಳದಲ್ಲಿ  06 ಜನ ಆರೋಪಿತರು ಗುಂಪಾಗಿ ಕುಳಿತುಕೊಂಡು ಅಂದರ-ಬಾಹರ್ ಇಸ್ಪೀಟ ಜೂಜಾಟದಲ್ಲಿ ತೊಡಗಿರುವಾಗ ಶ್ರೀ ಸತೀಶ.ಎಸ್.ಪಾಟೀಲ್ ಪಿ.ಐ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಪಂಚರ ಸಮಕ್ಷಮದಲ್ಲಿ ಆರೋಪಿತರಿಂದ  4500=00  ಇಸ್ಪೀಟ ಜೂಜಾಟದ ಹಣವನ್ನು ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಬಂದು ಮುಂದಿನ ಕ್ರಮಕ್ಕಾಗಿ ಮುದ್ದೇಮಾಲು ಹಾಗೂ ಆರೋಪಿತರೊಂದಿಗೆ ಹಾಜರಪಡಿಸಿದ್ದು, ಆರೋಪಿತರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಅದೆ.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 152/2016 ಕಲಂ: 87 Karnataka Police Act.
ದಿನಾಂಕ: 11-09-2016 ರಂದು ಸಾಯಂಕಾಲ 6-45 ಗಂಟೆಯ ಸುಮಾರಿಗೆ ಕಿನ್ನಾಳ ರಸ್ತೆಯ  ಇಟ್ಟಂಗಿ ಭಟ್ಟಿಯ  ಹತ್ತಿರ ಬಯಲು ಜಾಗೆಯ ಸಾರ್ವಜನಿಕ ಸ್ಥಳದಲ್ಲಿ  09 ಜನ ಆರೋಪಿತರು ಗುಂಪಾಗಿ ಕುಳಿತುಕೊಂಡು ಅಂದರ-ಬಾಹರ್ ಇಸ್ಪೀಟ ಜೂಜಾಟದಲ್ಲಿ ತೊಡಗಿರುವಾಗ ಶ್ರೀ ಸತೀಶ.ಎಸ್.ಪಾಟೀಲ್ ಪಿ.ಐ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಪಂಚರ ಸಮಕ್ಷಮದಲ್ಲಿ ಆರೋಪಿತರಿಂದ  7080=00  ಇಸ್ಪೀಟ ಜೂಜಾಟದ ಹಣವನ್ನು ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಬಂದು ಮುಂದಿನ ಕ್ರಮಕ್ಕಾಗಿ ಮುದ್ದೇಮಾಲು ಹಾಗೂ ಆರೋಪಿತರೊಂದಿಗೆ ಹಾಜರಪಡಿಸಿದ್ದು, ಆರೋಪಿತರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಅದೆ.
3] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ: 61/2016 ಕಲಂ: 498(ಎ), 143, 147, 148, 341, 323, 354, 504, 506 ಸಹಿತ 149 ಐ.ಪಿ.ಸಿ ಮತ್ತು 03 , 04 ವರದಕ್ಷಿಣೆ ನಿಷೇಧ ಕಾಯ್ದೆ:
ಪಿರ್ಯಾದಿದಾರರಾದ ಶ್ರೀಮತಿ ಮಂಜುಳಾ ಗಂಡ ಯಮನಪ್ಪ ಮಂಗಳೂರು, ವಯಾ: 24 ವರ್ಷ, ಜಾ: ವಾಲ್ಮೀಕಿ ಸಾ:ಬೇವೂರ ತಾ:ಯಲಬುರ್ಗಾ ರವರು ಪಿರ್ಯಾದಿ ನೀಡಿದ್ದು,  ಫಿರ್ಯಾದಿದಾರಳು ಆರೋಪಿ ನಂ: 1 ನೇದ್ದವನನ್ನು 2011 ನೇ ಸಾಲಿನಲ್ಲಿ ಸಪ್ಟಂಬರ್ ತಿಂಗಳದಲ್ಲಿ ಮದುವೆ ಆಗಿದ್ದು ಮದುವೆ ಸಮಯದಲ್ಲಿ ಹಿರಿಯರ ಸಮಕ್ಷಮದಲ್ಲಿ ಫಿರ್ಯಾದಿದಾರಳ ತವರು ಮನೆಯವರು ಇವಳ ಗಂಡನ ಮನೆಯವರಿಗೆ ಮೂರು ಲಕ್ಷ ರೂ, ವರದಕ್ಷಿಣೆ ಎಡರು ತೋಲೆ ಬಂಗಾರ ಮತ್ತು ಬಾಂಡೆಸಾಮಾನು, ಬಟ್ಟೆಬರೆ, ವರೋಪಚಾರಗಳನ್ನು ಕೊಟ್ಟಿದ್ದಿ ಇರುತ್ತದೆ, ಈಗ್ಗೆ ಒಂದುವರೆ ವರ್ಷಗಳಿಂದ ಪಿರ್ಯಾದಿದಾರಳ ಗಂಡ  ಆರೋಪಿ ನಂ: 01 ಯಮನಪ್ಪ, ಅತ್ತೆ ಆರೋಪಿ ನಂ:02, ಹನುಮವ್ವ, ನಾದಿನಿಯಾದ ಆರೋಪಿ 03 ದೇವಮ್ಮ ಇವರುಗಳು ಸೇರಿ ಪಿರ್ಯಾದಿದಾರಳಿಗೆ ಮಾನಸಿಕವಾಗಿ ದೈಹಿಕವಾಗಿ ಕಿರುಕುಳ ಕೊಡುತ್ತಾ ತವರು ಮನೆಯಿಂದ ಇನ್ನೂ ಹೆಚ್ಚಿಗೆ ಒಂದುವರೆ ಲಕ್ಷ ರೂಪಾಯಿಗಳನ್ನು ತೆಗೆದುಕೊಂಡು ಬಾ ಇಲ್ಲದಿದ್ದಲ್ಲಿ ನಮ್ಮ ಮನೆ ಬಿಟ್ಟು ಹೋಗು ನಾವು  ಆರೋಪಿ ನಂ: 01 ನೇದ್ದವನಿಗೆ  ಆರೋಫಿ ನಂ: 06 ನೇದ್ದವಳಾದ ದೇವಮ್ಮಳನ್ನು ಮದುವೆ ಮಾಡುತ್ತೇವೆ ಅಂತಾ ಆಗಾಗ ಕಿರುಕುಳ ಕೊಡುತ್ತಾ ಬಂದಿದ್ದರಿಂದ ಈ ವಿಷಯವನ್ನು ಫಿರ್ಯಾದಿದಾರಳು ತನ್ನ ತವರು ಮನೆಯವರಿಗೆ ಮತ್ತು ಹಿರಿಯರಿಗೆ ತಿಳಿಸಿದಾಗ ಇವರೆಲ್ಲರೂ ಸೇರಿ ಪಿರ್ಯಾದಿದಾರಳ ಗಂಡನ ಮನೆಯವರಿಗೆ ಬುದ್ದಿಮಾತು ಹೇಳಿದರೂ ಕೂಡಾ ಅದನ್ನೆ ಮುಂದುವರೆಸಿಕೊಂಡು ಬಂದಿದ್ದು ಇರುತ್ತದೆ, ನಂತರ ಇದೆ ವಿಷಯಕ್ಕೆ ದಿನಾಂಕ:10-09-2016 ರಂದು ಮದ್ಯಾನ್ಹ 3-00 ಗಂಟೆಯ ಸುಮಾರಿಗೆ  ಬೇವೂರ ಗ್ರಾಮದ ಗ್ರಾಮ ಪಂಚಾಯತ ಮಳಿಗೆಗಳ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಆರೋಫಿ ನಂ: 01 ರಿಂದ 06 ನೇದ್ದವರು ಗುಂಪುಕಟ್ಟಿಕೊಂಡು ಬಂದು ಫಿರ್ಯಾದಿದಾರಳಿಗೆ ಮತ್ತು ಆಕೆಯ ತಾಯಿ ಅಳ್ಳಮ್ಮಳಿಗೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದಾಡಿ ಆರೋಪಿ ನಂ: 01 ನೇದ್ದವನು ಪಿರ್ಯಾದಿದಾರಳ ತಾಯಿ ಅಳ್ಳಮ್ಮಳಿಗೆ ಕಲ್ಲಿನಿಂದ ಹೊಡೆದು ಈಕೆಯ ಸೀರೆ ಸೆರಗು ಹಿಡಿದು ಏಳೆದಾಡಿ ಅಳ್ಳಮ್ಮಳ ಮರ್ಯಾದೆಗೆ ದಕ್ಕೆಯುಂಟು ಮಾಡಿ ಕಾಲಿನಿಂದ ಒದ್ದಿದ್ದು ಇದನ್ನು ನೋಡಿ ಬಿಡಿಸಲು ಹೋದ ಪಿರ್ಯಾದಿದಾರಳಿಗೆ ಆರೋಫಿ ನಂ: 02 ರಿಂದ 06 ನೇದ್ದವರು ಸೀರೆ ಹಿಡಿದು ಎಳೆದಾಡಿ ಕೈಯಿಂದ ಮತ್ತು ಕಾಲಿನಿಂದ ಹೊಡೆಬಡಿ ಮಾಡಿ ಆರೋಪಿತರೆಲ್ಲರೂ ಸೇರಿ ಅವಾಚ್ಯವಾಗಿ ಬೈದಾಡಾತ್ತಾ ಜಿವದ ಬೆದರಿಕೆ ಹಾಕಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ,
4] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 268/2016 ಕಲಂ: 279, 304(ಎ) ಐ.ಪಿ.ಸಿ ಹಾಗೂ 187 ಐ.ಎಂ.ವಿ. ಕಾಯ್ದೆ:.

ದಿನಾಂಕ:- 11-09-2016 ರಂದು ಸಂಜೆ 7:00 ಗಂಟೆಯ ಸುಮಾರಿಗೆ ಮನು @ ಮನೋಜ ಮತ್ತು ದೇವೇಂದ್ರ ಕೂಡಿಕೊಂಡು ನನ್ನ ಸೋದರ ಮಾವನಾದ ಸಂಜೀವ ಸಾ: ಆನೇಗುಂದಿ ಈತನ ಹಿರೋಹೋಂಡಾ ಸಿ.ಡಿ. 100 ಮೋಟಾರ ಸೈಕಲ್ ನಂ: ಕೆ.ಎ-25/ ಹೆಚ್-9173 ನೇದ್ದರಲ್ಲಿ ಸ್ವಂತ ಕೆಲಸದ ನಿಮಿತ್ಯ ರಾಂಪೂರಕ್ಕೆ ಬಂದಿದ್ದೆವು. ಕೆಲಸ ಮುಗಿಸಿಕೊಂಡು ಚಿಕ್ಕರಾಂಪೂರಕ್ಕೆ ಹೋಗುತ್ತಿರುವಾಗ ಮೋಟಾರ ಸೈಕಲ್ ನ್ನು ದೇವೇಂದ್ರನು ನಡೆಯಿಸುತ್ತಿದ್ದು, ನಾನು ಹಿಂಭಾಗದಲ್ಲಿ ಕುಳಿತಿದ್ದೆನು. ರಾತ್ರಿ 7:30 ಗಂಟೆಯ ಸುಮಾರಿಗೆ ರಾಂಪೂರು ರಸ್ತೆಯ ಸೋನಿಯಾ ನಗರದ ಆಂಜನೇಯ ಗುಡಿಯ ಹತ್ತಿರ ಹೋಗುತ್ತಿರುವಾಗ ನಮ್ಮ ಎದುರುಗಡೆಯಿಂದ ಯಾವುದೋ ಒಂದು ಮೋಟಾರ ಸೈಕಲ್ ಚಾಲಕನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ ನಮ್ಮ ಮೋಟಾರ ಸೈಕಲ್ ಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದನು. ಇದರಿಂದ ನಾನು ಮತ್ತು ದೇವೇಂದ್ರ ಇಬ್ಬರೂ ಮೋಟಾರ ಸೈಕಲ್ ಸಮೇತ ಕೆಳಗೆ ಬಿದ್ದೆವು.  ಇದರಿಂದ ದೇವೇಂದ್ರನಿಗೆ ತಲೆಗೆ ಮತ್ತು ಮುಖಕ್ಕೆ ಭಾರೀ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ನನ್ನ ಎಡ ಮೊಣಕಾಲಿಗೆ ರಕ್ತಗಾಯವಾಯಿತು. ಅಪಘಾತ ಮಾಡಿದ ಮೋಟಾರ ಸೈಕಲ್ ಚಾಲಕನು ನಿಲ್ಲಿಸದೇ ಹಾಗೆಯೇ ರಾಂಪೂರು ಕಡೆಗೆ ಹೊರಟು ಹೋದನು.  ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008