Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, September 14, 2016

1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 200/2016 ಕಲಂ: 143, 147, 148, 323, 324, 504, 506 ಸಹಿತ 149 ಐ.ಪಿ.ಸಿ. ಮತ್ತು 3 (01) (10) ಎಸ್.ಸಿ.ಎಸ್.ಟಿ. ಪಿ.ಎ.ಕಾಯ್ದೆ 1989.
ದಿನಾಂಕ 13-09-2016 ರಂದು ಮಹಿಬೂಬು ನಗರದಲ್ಲಿ ಮೆರವಣಿಗೆ ಮುಖಾಂತರ ವಿಸರ್ಜನೆಗೆ ತೆಗೆದುಕೊಂಡು ಹೋಗುತ್ತಿರುವಾಗ  ಟಿಪ್ಪುಸುಲ್ತಾನ ಸರ್ಕಲ್ ಹತ್ತಿರ ಬಂದಾಗ ಅಲ್ಲಿ ಇದ್ದ ಶಾಶಾ ಮತ್ತು ಖಾಸಿಂ ಇವರು  ನಮ್ಮ ಏರಿಯಾದಲ್ಲಿ ಗಣೇಶ ಮೂರ್ತಿಯನ್ನು ತರಬೇಡಿರೆಂದು ಅಂದ್ರೂ ತರುತ್ತೀರೇನಲೇ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿದ್ದು ಆಗ ಅಲ್ಲಿಗೆ ಬಂದ ಇನ್ನುಳಿದ ಆರೋಪಿತರ ನಡುವೆ ಜಗಳವಾಗಿ ಹೊಡೆ-ಬಡಿ ಮಾಡಿಕೊಂಡಿದ್ದು ಘಟನೆಯಲ್ಲಿ ಶ್ರೀನಿವಾಸ ತಂದೆ ರಂಗಪ್ಪ ಸಾ: ಮಹಿಬೂಬು ನಗರ, ಹಲ್ಲೆಗೊಳಗಾಗಿದ್ದು ಈ ಬಗ್ಗೆ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 159/2016 ಕಲಂ: 279, 304(ಎ) ಐ.ಪಿ.ಸಿ. ಮತ್ತು 187 ಐ.ಎಂ.ವಿ. ಕಾಯ್ದೆ.
ದಿನಾಂಕ 13-09-2016 ರಂದು 07-30 ಪಿ.ಎಂ.ಸುಮಾರಿಗೆ ಪಿರ್ಯಾದುದಾರರ ತಂದೆ ºÀ£ÀĪÀÄAvÀ¥Àà vÀA/ ¸ÉÆêÀÄ¥Àà ¥ÀgÀvÉÃgÀ 65 ªÀµÀð eÁ;ªÁ°äÃQ ¸Á; aPÀ̧UÀ£Á¼À ಮತ್ತು ನಮ್ಮೂರಿನ ಭರಮಪ್ಪ ಇಬ್ಬರೂ ಟಿ.ವಿ.ಎಸ್.ಮೋ.ಸೈ.ನ್ನು ತೆಗೆದುಕೊಂಡು ಹಿರೇಬಗನಾಳದಿಂದ ಚಿಕ್ಕಬಗನಾಳಿಗೆ ಬರುತ್ತಿರುವಾಗ ಹಿರೆಬಗನಾಳ - ಚಿಕ್ಕಬಗನಾಳ ರಸ್ತೆಯ ಮೇಲೆ ಬ್ಯಾಡರ ಹಳ್ಳದ ಹತ್ತಿರ ಟ್ರ್ಯಾಕ್ಟರ್ ಇಂಜಿನ್ನಿಗೆ ನಂಬರ ಇರದ ಮತ್ತು ಟ್ರಾಲಿ ನಂ.ಕೆ.ಎ37/ಟಿ.ಬಿ.3535 ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ತಂದೆ ಚಲಾಯಿಸಿಕೊಂಡು ಬರುತ್ತಿದ್ದ ಟಿ.ವಿ.ಎಸ್.ಮೋ.ಸೈ.ಗೆ ಡಿಕ್ಕಿಕೊಟ್ಟು ಅಪಘಾತ ಡಿಸಿದ್ದರಿಂದ ಪಿರ್ಯಾದುದಾರರ ತಂದೆ ಹನುಮಂತಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದು ಮತ್ತು ಭರಮಪ್ಪನು ಕೊಪ್ಪಳದಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಮೃತಪಟ್ಟಿರುತ್ತಾನೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 248/2016 ಕಲಂ: 279,337,338,304() .ಪಿ.ಸಿ.
ದಿನಾಂಕ :-13-09-2016 ರಂದು ಬೆಳಿಗ್ಗೆ 11-30 ಗಂಟೆಗೆ ಫಿರ್ಯಾದಿ ಹನುಮಪ್ಪ  ತಂದೆ ಮಲ್ಲಪ್ಪ ಮಡಿವಾಳರ ವಯಾ 68  ವರ್ಷ ಜಾ : ಹಿಂದೂ ಮಡಿವಾಳರ  :ಒಕ್ಕಲುತನ ಸಾ :ಕಲಾಲಬಂಡಿ ತಾ :ಕುಷ್ಟಗಿ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದಿಯ ಸಾರಾಂಸವೆನೆಂದರೆ, ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ನನ್ನ ಮಗನಾದ ಬೀಮಪ್ಪ ಮಗಳು ಶ್ರೀದೇವಿ, ಇತರರಾದ ಮಲ್ಲೇಶ, ಜ್ಯೋತಿ ಮತ್ತು ಅನ್ನಪೂರ್ಣ ಎಲ್ಲರೂ ಮೆಕ್ಕೆ ಜೋಳದ ಸೊಪ್ಪಿ ಮೇವು ಮಾಡಿಕೊಂಡು ಟ್ರ್ಯಾಲಿ ಬಾಡಿ ತುಂಬಾ ಹಾಕಿಕೊಂಡು ಹನುಮಪ್ಪ ದಮ್ಮೂರ ರವರ ಹೊಲದ ಹತ್ತಿರ ಒಂದು ಕೆ..ಬಿ. ಕಂಬದಿಂದ ಇನ್ನೊಂದು ಕೆ..ಬಿ ಕಂಬದವರೆಗೆ ಸುಮಾರು 150 ಮೀಟರ ಅಂತರದಲ್ಲಿ ಇದ್ದು ನಮ್ಮ ಟ್ರ್ಯಾಕ್ಟರ ಚಾಲಕ ಬೀಮಪ್ಪನು ಮೇಲಿನ ಮೂರು ಲೈನಿನ ವೈರ್ ನ್ನು ಲೆಕ್ಕಿಸದೇ ಹಾಗೆ ನಡೆಯಿಸಿದ್ದರಿಂದ ನಮ್ಮ ಮಗಳಾದ ಶ್ರೀದೇವಿ, ಮಲ್ಲೇಶ, ಜ್ಯೋತಿ, ಅಣ್ಣಪೂರ್ಣ, ಇವರಿಗೆ ಕರೆಂಟ್ ಶಾಕ್ ಆಗಿ ಸುಟ್ಟಂತೆ ಕಂಡು ಬಂದಿದ್ದು. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದಾಗ ಶ್ರೀದೇವಿ ಈಕೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 270/2016 ಕಲಂ: 11  Karnataka Prevention of Cow Slaughter & Cattle Preservation Act 1964. 
ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯ ಸಂಗಾಪೂರು ಗ್ರಾಮದ ಪಕ್ಕದ ಒಂದು ಮಾವಿನ ತೋಟದಲ್ಲಿ ಮುಸ್ಲೀಂ ಧರ್ಮಿಯರು ಬಕ್ರೀದ ಹಬ್ಬದ ನಿಮಿತ್ಯ ಎತ್ತು/ಹೋರಿಗಳನ್ನು ಕುರುಬಾನಿ (ಬಲಿ) ಕೊಡಲು ತೆಗೆದುಕೊಂಡು ಹೋಗಿದ್ದು, ಒಂದು ಹೋರಿಯನ್ನು ಕೊಯ್ದಿದ್ದಾರೆ ಇನ್ನುಳಿದವುಗಳನ್ನು ಕೊಯ್ಯುವ ತಯಾರಿಲ್ಲಿದ್ದಾರೆಂದು ಖಚಿತ ಮಾಹಿತಿ ಬಂದ ಮೇರೆಗೆ  ದಾಳಿ ಮಾಡಿ ವಿಚಾರಿಸಲು ಮುಸ್ಲೀಂ ಧರ್ಮದ ಪ್ರಕಾರ ಕುರುಬಾನಿ (ಬಲಿ) ಕೊಡುತ್ತಿದ್ದು, ಅದಕ್ಕಾಗಿ ಕರಿಯಪ್ಪ ಹಾಗೂ ಹನುಮೇಶ ಇವರನ್ನು ಸಹಾಯಕ್ಕಾಗಿ ಕರೆದುಕೊಂಡು ಬಂದಿದ್ದು, ನಾಲ್ಕು ಜನ ಕೂಡಿ ಹೋರಿಯನ್ನು ಕುರುಬಾನಿ ಕೊಟ್ಟಿರುವುದಾಗಿ ತಿಳಿಸಿದರು. ನಂತರ ಸ್ಥಳಕ್ಕೆ ಡಾ|| ಅರುಣಗುರು, ಪಶು ವೈದ್ಯಾಧಿಕಾರಿಗಳು, ಪಶು ಚಿಕಿತ್ಸಾಲಯ ಸಂಗಾಪೂರು, ಹಾಗೂ ಡಾ|| ಮಲ್ಲಯ್ಯ, ಪಶು ವೈದ್ಯಾಧಿಕಾರಿಗಳು, ಪಶು ಚಿಕಿತ್ಸಾಲಯ ಗಂಗಾವತಿ ಇವರುಗಳನ್ನು ಬರಮಾಡಿಕೊಂಡು ಪರಿಶೀಲನೆ ಮಾಡಿಸಿ ಗುರುತಿಸಿದ್ದು, ಸತ್ತ ಹೋರಿಯು ಅಂದಾಜು 3 ರಿಂದ 3 ½   ವರ್ಷ ಇರುವುದಾಗಿ ತಿಳಿಸಿದ್ದು, ಅದನ್ನು ಹಾಗೆಯೇ ಬಿಟ್ಟಲ್ಲಿ ರೋಗ ರುಜಿನಗಳು ಹರಡುವ ಸಾಧ್ಯತೆ ಇರುತ್ತದೆ. ಕಾರಣ ಕೂಡಲೇ ಅದನ್ನು ಸುಮಾರು 10 ಅಡಿ ಆಳದ ತೆಗ್ಗು ತೋಡಿ ಸುಣ್ಣ ಹಾಕಿ ಮುಚ್ಚುವಂತೆ ಸಲಹೆ ನೀಡಿದ್ದರಿಂದ ಸ್ಥಳದಲ್ಲಿ 4 ಜನ ಗ್ರಾಮ ಪಂಚಾಯತಿಯ ಹಾಗೂ ಗ್ರಾಮದ ಕೂಲಿಕಾರರನ್ನು ಕರೆಯಿಸಿ ತೆಗ್ಗು ಅಗೆದು ಮುಚ್ಚಲಾಯಿತು. ಉಳಿದ 1 ಎತ್ತು ಹಾಗೂ 2 ಹೋರಿಗಳನ್ನು ಮಾನ್ಯ ನ್ಯಾಯಾಲಯದ ಮುಂದಿನ ಆದೇಶ ಆಗುವವರೆಗೂ ಸಂರಕ್ಷಣೆ ಮಾಡುವ ಕುರಿತು ವಶಕ್ಕೆ ತೆಗೆದುಕೊಂಡು ಸಿಬ್ಬಂದಿಯೊಂದಿಗೆ ಶ್ರೀ ದುರ್ಗಾಮಾತಾ ಗೋಶಾಲೆ, ಆನೇಗುಂದಿಯಲ್ಲಿರಿಸಲು ಕಳುಹಿಸಿಕೊಡಲಾಯಿತು ಈ ಬಗ್ಗೆ ಠಾಣೆಯಲ್ಲಿ ಸದರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.  

0 comments:

 
Will Smith Visitors
Since 01/02/2008