Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, September 2, 2016

1] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 74/2016 ಕಲಂ: 279, 337, 338, 304[ಎ] ಐ.ಪಿ.ಸಿ ಮತ್ತು 187 ಐ.ಎಮ್.ವ್ಹಿ. ಕಾಯ್ದೆ:.
ಫಿರ್ಯಾದಿ ಹಾಗೂ ಇತರರು ನಿನ್ನೆ ದಿನಾಂಕ: 31-08-2016 ರಂದು ಮುಂಜಾನೆ ಬೆಳಗೋಡರ ರವರ ಹೊಸ ಅಪ್ಪೆ ಗಾಡಿಯಲ್ಲಿ ರೋಣ ತಾಲೂಕಿನ ಹುಲ್ಲೂರ ಗ್ರಾಮದಲ್ಲಿ ಹೊಲದಲ್ಲಿ ಕಸ ತೆಗೆಯಲು ಹೋಗಿ ಕೆಲಸ ಮುಗಿಸಿ ಪುನಃ ಸಾಯಾಂಕಾಲ ಅದೇ ಅಪ್ಪೆ ಗಾಡಿಯಲ್ಲಿ ಎಲ್ಲರೂ ಕುಳಿತು ಅಲ್ಲಿಂದ ಹೊರಟು ಹೊಸೂರ ದಾಟಿ ರಾಂಪೂರ ಕಡೆಗೆ ಸಾಯಾಂಕಾಲ 07-00 ಗಂಟೆಗೆ ಅಡಿವೆಪ್ಪ ಮಾಡಗೇರ ರವರ ಹೊಲದ ಹತ್ತಿರ ಬರುವಾಗ ಎದುರುಗಡೆಯಿಂದ ಟ್ರ್ಯಾಕ್ಟರ್ ನಂ: ಕೆ.ಎ-29/ಟಿ.ಎ-3848 ಟ್ರ್ಯಾಲಿ ನಂ: ಕೆ,ಎ-29/ಟಿ-7741 ಹಾಗೂ ಇಂಜನ್ ನಂ: S318107774 ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀವೇಗ ಹಾಗೂ ಆಲಕ್ಷತನದಿಂದ ನಡೆಸಿಕೊಂಡು ಬಂದು ಟಕ್ಕರ್ ಕೊಟ್ಟು ಅಪಘಾತಪಡಿಸಿ ಓಡಿ ಹೋಗಿದ್ದು, ಅಪಘಾತದಲ್ಲಿ ಫಿರ್ಯಾದಿಗೆ ಬಲಗೈ ಹಾಗೂ ಬಲಗಾಲ ಚಪ್ಪೆಗೆ ಭಾರಿ ರಕ್ತಗಾಯ ಹಾಗೂ ಜಯರಾಭಿ ಬೆನ್ನು, ಬಲಗೈ ಹಾಗೂ ಬಲಗಾಲ ತೊಡೆಗೆ ಭಾರಿ ರಕ್ತಗಾಯವಾಗಿದ್ದು, ಮತ್ತು ಯಲ್ಲವ್ವ ಆರಿ ಈಕೆಗೆ ಎರಡೂ ಕೈಗಳು ಮುರಿದು ಮತ್ತು ಬಲಗಾಲ ಮುರಿದು ಭಾರಿ ರಕ್ತಗಾಯವಾಗಿದ್ದು, ಸದರಿಯವರನ್ನು ಟಾ ಟಾ ಎಸಿಇ ದಲ್ಲಿ ಉಪಚಾರ ಕುರಿತು ಬದಾಮಿ ಕಾರೂಡಗಿಮಠ ಆಸ್ಪತ್ರೆಗೆ ಸೇರಿಕೆ ಮಾಡಿ ಉಪಚಾರ ಪಡೆದುಕೊಂಡಿದ್ದು, ಉಪಚಾರ ಫಲಿಸದೇ ಯಲ್ಲವ್ವ ಗಂಡ ಶಿವಪುತ್ರಪ್ಪ ಆರಿ ಈಕೆಯು ರಾತ್ರಿ 09-00 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 256/2016 ಕಲಂ: 279, 337, 338 ಐ.ಪಿ.ಸಿ:.
ದಿನಾಂಕ:- 01-09-2016 ರಂದು ರಮೇಶನ ತಂದೆಯಾದ ಇಂದ್ರಪ್ಪನಿಗೆ ಮಾತಾಡಿಸಿಕೊಂಡು ಬರುವ ಸಲುವಾಗಿ ನಾನು ಮತ್ತು ರಾಮಣ್ಣ @ ರಮೇಶ ಇಬ್ಬರೂ ಕೂಡಿಕೊಂಡು ರಮೇಶನ ಹಿರೋ ಪ್ಯಾಸೆನ್ ಪ್ರೋ ಮೋಟಾರ ಸೈಕಲ್ ನಂ: ಕೆ.ಎ-37/ ಇ.ಬಿ-1542 ನೇದ್ದರಲ್ಲಿ ಸಿದ್ದಾಪೂರದಿಂದ ಮಧ್ಯಾಹ್ನ 12:30 ಗಂಟೆಗೆ ಹೊರಟು ಇಂದರಗಿಗೆ ಹೋಗಿ ಮಾತಾಡಿಸಿಕೊಂಡು ನಂತರ ವಾಪಸ್ ಸಿದ್ದಾಪೂರಕ್ಕೆ ಹೊರಟೆವು. ಮೋಟಾರ ಸೈಕಲನ್ನು ರಮೇಶನು ಚಲಾಯಿಸುತ್ತಿದ್ದು, ನಾನು ಹಿಂಭಾಗ ಕುಳಿತಿದ್ದೆನು. ಸಂಜೆ 4:00 ಗಂಟೆಯ ಸುಮಾರಿಗೆ ನಾನು ಗಂಗಾವತಿ-ಸಿಂಧನೂರು ಮುಖ್ಯ ರಸ್ತೆಯ ಮರಳಿ ಗ್ರಾಮದ ಸೀಮಾದಲ್ಲಿ ರಸ್ತೆಯ ಎಡಭಾಗದಲ್ಲಿ ಹೋಗುತ್ತಿರುವಾಗ ನಮ್ಮ ಎದುರುಗಡೆ ಸಿಂಧನೂರು ಕಡೆಯಿಂದ ಒಂದು ಆಟೋರಿಕ್ಷಾ ಚಾಲಕನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ ನಮ್ಮ ಮೋಟಾರ ಸೈಕಲ್ ಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದನು.  ಇದರಿಂದ ನಾವು ಮೋಟಾರ ಸೈಕಲ್ ಸಮೇತ ಕೆಳಗೆ ಬಿದ್ದೆವು. ಆಟೋರಿಕ್ಷಾ ಸಹ ರಸ್ತೆಯ ಪಕ್ಕದ ಸಣ್ಣ ಕಾಲುವೆಯಲ್ಲಿ ಹೋಗಿ ಬಿದ್ದಿತು.  ಇದರಿಂದ ನನ್ನ ಬಲಗಾಲ ಮೂರು ಬೆರಳುಗಳಿಗೆ ರಕ್ತಗಾಯ ಮತ್ತು ಬಲಗಣ್ಣಿನ ಹತ್ತಿರ ರಕ್ತಗಾಯವಾಯಿತು. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 242/2016 ಕಲಂ: 279, 337, 338 ಐ.ಪಿ.ಸಿ:.
ಗಾಯಾಳು ಶ್ರೀಧರ ಭಜೇಂತ್ರಿ ಸಾ: ತರಲಕಟ್ಟಿ ತಾ: ಯಲಬುರ್ಗಾ ಬೆಳಿಗ್ಗೆ ಕೃಷ್ಣಗಿರಿ ಕಾಲೋನಿಯಲ್ಲಿರುವ  ತಮ್ಮ ಮಾವನಾದ ಚಂದ್ರಶೇಖರ ವರನ್ನು ಮಾತನಾಡಿಸಿಕೊಂಡು ವಾಪಾಸ್ ಅವರ ಮನೆಯಿಂದ ಬಜಾರಕ್ಕೆ ಹೋಗುತ್ತಿರುವಾಗ ಎನ್.ಹೆಚ್-50 ರಸ್ತೆಯ ಬಾಕಳೆ ಖಾನಾವಳಿಯ ಹತ್ತಿರ ಹೊಸಪೇಟೆ ಕಡೆಯಿಂದ ದು ಮೋ.ಸೈ. ಸವಾರನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ತನ್ನ ಮೊ.ಸೈ ನಂ: ಕೆ.-29/ಇಬಿ-8897 ನೇದ್ದರ ಸವಾರ ದ್ಯಾಮಣ್ಣ ತಂದೆ ಗಿರಿಯಪ್ಪ ಹನಮರ ಸಾ: ಕೊಟ್ಟನಹಳ್ಳಿ ಇತನು ತನ್ನ ಹಿಂದೆ ಅಸಂಗ್ಯಪ್ಪ ಹನಮರ ಇವರನ್ನು ಕೂಡಿಸಿಕೊಂಡು ಬಂದು  ರಸ್ತೆ ದಾಟುತ್ತಿದ್ದ ಫಿರ್ಯಾದಿದಾರರಿಗೆ ಟಕ್ಕರ ಕೊಟ್ಟು ಅಪಘಾತಪಡಿಸಿದ್ದು ಇದರಿಂದ ಫಿರ್ಯಾದಿಗೆ ಮತ್ತು ಮೋ.ಸೈ. ಸವಾರನಿಗೆ ಹಾಗೂ ಮೋ.ಸೈ ಹಿಂದೆ ಕುಳಿತ ಅಸಂಗ್ಯಪ್ಪ ಇವರಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಿರುತ್ತವೆ. ಪ್ರಕರಣ ದಾಖಲಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 181/2016 ಕಲಂ: 279, 338 ಐ.ಪಿ.ಸಿ:.
ದಿ:30.08.16 ರಂದು ಸಾಯಂಕಾಲ 4-45 ಗಂಟೆಗೆ ಫಿರ್ಯಾದಿದಾರರಾದ ಹನಮರೆಡ್ಡಿ ಶಿಡಗನಾಳ. ಸಾ: ಚಿಲಗೋಡ. ತಮ್ಮ ಮೋಟಾರ ಸೈಕಲ್ ಓಡಿಸಿಕೊಂಡು ಕೊಪ್ಪಳಕ್ಕೆ ಅಂತಾ ಗಿಣಿಗೇರಿ ಸಮೀಪ ಹಳೇಕನಕಾಪೂರ ಕ್ರಾಸ್ ಹತ್ತಿರ ಬರುತ್ತಿದ್ದಾಗ ತನ್ನ ಮುಂಧೆ ಹೊರಟಿದ್ದ ಕಾರ್ ನಂ: ಕೆಎ-36/ಎನ್-6345 ನೇದ್ದಕ್ಕೆ ಅದರ ಎದುರುಗಡೆಯಿಂದ ಬಂದ ಮೋಟಾರ ಸೈಕಲ್ ನಂ: ಕೆಎ-02/3764 ನೇದ್ದರ ಚಾಲಕನು ತನ್ನ ಗಾಡಿಯನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ಅಡ್ಡಾದಿಡ್ಡಿಯಾಗಿ ಓಡಿಸಿಕೊಂಢು ಬಂದವನೇ ಕಾರಿಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಮೋಟಾರ ಸೈಕಲ್ ಸವಾರನಿಗೆ ತೆರೆಚಿದ ರಕ್ತಗಾಯ ಹಾಗೂ ತಲೆಗೆ ಭಾರಿ ರಕ್ತಗಾಯವಾಗಿದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
5] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 182/2016 ಕಲಂ: 279, 304(ಎ) ಐ.ಪಿ.ಸಿ:.

ದಿ:01-09-16 ರಂದು ಸಂಜೆ 6-45 ಗಂಟೆಯ ಸುಮಾರಿಗೆ ಫಿರ್ಯಾದಿದಾರರ ಸ್ವಂತ ಅಣ್ಣ ಶಿವಯ್ಯ ಕರಡಿಮಠ ವಯ: 40 ವರ್ಷ, ಇವರು ಚಾಮಲಾಪೂರ ಗ್ರಾಮದಲ್ಲಿ ಕೆಲಸ ಮುಗಿಸಿಕೊಂಡು ತಮ್ಮ ಮೋಟಾರ ಸೈಕಲ್ ನಂ: ಕೆಎ-37/ವಿ-5412 ನೇದ್ದನ್ನು ಓಡಿಸಿಕೊಂಡು ಕೊಪ್ಪಳ-ಕನಕಗಿರಿ ರಸ್ತೆಯ ಚಾಮಲಾಪೂರ ಕ್ರಾಸ್ ಹತ್ತಿರ ಬರುವತ್ತಿದ್ದಾಗ ಅದೇವೇಳೆಗೆ ಕನಕಗಿರಿ ಕಡೆಯಿಂದ ಬುಲೆರೋ ಮ್ಯಾಕ್ಸಿ ಟ್ರಕ್ ಪ್ಲಸ್ ವಾಹನದ ನಂ: ಕೆಎ-26/ಎ-5178 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದವನೇ ಶಿವಯ್ಯನ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಶಿವಯ್ಯನ ತಲೆಗೆ,ಬಲಕಾಲ ಹಿಂಬಡಕ್ಕೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ. ತೀವ್ರಗಾಯಗೊಂಡಿದ್ದ ಶಿವಯ್ಯನಿಗೆ ಅಪಘಾತ ಮಾಡಿದ ಚಾಲಕನು ತನ್ನ ವಾಹನದಲ್ಲಿಯೇ ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಗೆ ರಾತ್ರಿ 7-55 ಗಂಟೆಗೆ ಕರೆತಂದಾಗ ಪರೀಕ್ಷಿಸಿದ ವೈದ್ಯರು ಶಿವಯ್ಯನು ಮ್ರತ ಆಗಿರುವ ಬಗ್ಗೆ ತಿಳಿಸಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008