ದಿನಾಂಕ 27-10-2016 ರಂದು
ಬೆಳೆಗ್ಗೆ 11:30 ಗಂಟೆ ಸುಮಾರಿಗೆ ಹಿರೇವಂಕಲಕುಂಟಾ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಒಂದು
ಸೆತುವೆ ಮೇಲೆ ಕುಳಿತುಕೊಂಡು ಜನರಿಂದ ಹಣ ಪಡೆದುಕೊಂಡು ಓಸಿ ಚೀಟಿಗಳನ್ನು ಬರೆದು ಕೊಡುತ್ತಾ ಇದು ನಸೀಬದ
ಜೂಜಾಟ ಓ/ಸಿ ಹಚ್ಚಿರಿ ಒಂದು ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಕೂಗಿ ಕರೆಯುತ್ತಾ ಓಸಿ ಜೂಜಾಟದಲ್ಲಿ
ತೊಡಗಿದ್ದಾಗ ಸದರಿ ಭಾತ್ಮಿ ಮೇರೆಗೆ ಪಿಎಸ್.ಐ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲಾಗಿ
ಆರೋಪಿತನು ಸಿಕ್ಕಿ ಬಿದ್ದಿದ್ದು ಇವನ ಮುಂದೆ ಒಂದು ಕರವಸ್ತ್ರದಲ್ಲಿದ್ದ ಓಸಿ ಜೂಜಾಟದ ನಗದು ಹಣ
450 ರೂ ಒಂದು ಬಾಲ ಪೆನ್ ಒಂದು ಓಸಿ ಪಟ್ಟಿ ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ
ಪೊಲೀಸ್ ಠಾಣೆ ಗುನ್ನೆ ನಂ: 306/2016 ಕಲಂ: 323, 324, 354, 504, 506 ಸಹಿತ 34 ಐ.ಪಿ.ಸಿ:.
ದಿನಾಂಕ:- 27-10-2016 ರಂದು
ಬೆಳಿಗ್ಗೆ 10:00 ಗಂಟೆಗೆ ಫಿರ್ಯಾದಿದಾರರಾದ ರಾಮಕೃಷ್ಣ ತಂದೆ ತಿಮ್ಮಣ್ಣ, ವಯಸ್ಸು 31 ವರ್ಷ, ಜಾತಿ:
ಬೋವಿ ಉ: ಸಂಗಾಪೂರು ಗ್ರಾಮ ಪಂಚಾಯತ ಉಪಾಧ್ಯಕ್ಷರು, ಸಾ: ಸಂಗಾಪೂರು. ತಾ. ಗಂಗಾವತಿ ಇವರು ಠಾಣೆಗೆ
ಹಾಜರಾಗಿ ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ಈಗ್ಗೆ
ಸುಮಾರು 4-5 ತಿಂಗಳದ ಹಿಂದೆ ನಮ್ಮೂರ ಗಂಗಾಧರ ನಾಯ್ಕ ತಂದೆ ತಿಪ್ಪಣ್ಣ
ಲಮಾಣಿ, 35 ವರ್ಷ, ಸಾ: ಸಂಗಾಪೂರು ಈತನ ಅಣ್ಣ ಹುಸೇನ್ ನಾಯ್ಕನು ಗ್ರಾಮದಲ್ಲಿ ಕಳಪೆ ಶೌಚಾಲಯಗಳನ್ನು
ನಿರ್ಮಾಣ ಮಾಡಿ ಬಿಲ್ಲುಗಳನ್ನು ತೆಗೆದುಕೊಂಡಿದ್ದರು. ಈ ರೀತಿ ಕಳಪೆ ಕಾಮಗಾರಿ ಮಾಡಿದ್ದಾರೆಂದು
ನಾನು ತಾಲೂಕ ಪಂಚಾಯತಿ ಅಧಿಕಾರಿಗಳಿಗೆ ತಕರಾರು ಮಾಡಿದ್ದೆನು. ಆಗಿನಿಂದ ಅವರು
ವಿನಾ: ಕಾರಣ ನನ್ನೊಂದಿಗೆ ಜಗಳ ಮಾಡುತ್ತಿದ್ದರು. ನಮ್ಮೂರ ಶ್ರೀ ರಾಮ ದೇವರ ಗುಡಿಯ ಹತ್ತಿರ
ನಿಂತುಕೊಂಡಾಗ ಗಂಗಾಧರ ನಾಯ್ಕ ತಂದೆ ತಿಪ್ಪಣ್ಣ ಇವನು ನಾನು ಇದ್ದಲ್ಲಿಗೆ ಬಂದು ಅಲ್ಲಿದ್ದ ತಮ್ಮ ಹುಡುಗರಿಗೆ
“ ಲೇ ನೀವು ಯಾವ ಸೂಳೇ ಮಗನಿಗೂ ಹೆದರುವುದು ಬೇಡಾ, ನೀವು ಉಸುಗನ್ನು ಹೊಡೆಯಿರಿ (ಸಾಗಿಸಿ), ಯಾರು
ಏನು ಮಾಡುತ್ತಾರೆ ನೋಡಿಕೊಳ್ಳುತ್ತೇನೆ ” ಅಂತಾ ಜಗಳವಾಡಿ ಹೊಡಬಡೆ ಮಾಡಿರುತ್ತಾರೆ. ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈ ಗೊಂಡಿರುತ್ತಾರೆ.
0 comments:
Post a Comment