Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, October 13, 2016

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 208/2016 ಕಲಂ: 341, 504, 323, 324, 354, 506 ಸಹಿತ 34 ಐ.ಪಿ.ಸಿ:.
ಟಣಕನಕಲ್ ಗ್ರಾಮದ ಮಸೀದಿ ಮುಂದೆ ಅಲಾಯಿ ದೇವರ ಕುಣಿಯ ಹತ್ತಿರ ಫಿರ್ಯಾದಿದಾರರ ಮಗ ಹನುಮಂತಪ್ಪ ಮತ್ತು ಅಳಿಯ ಗುರುರಾಜ ಇವರು ಮೊಹರಂ ಹಬ್ಬದ ಪ್ರಯುಕ್ತ ಕುಣಿಯಲ್ಲಿ ಕಟ್ಟಿಗೆ ಹಾಕಲು ಹೋದಾಗ ಕುಣಿಯ ಸುತ್ತ ಕೋಲಾಟದಲ್ಲಿದ್ದ ಆರೋಪಿ ಗವಿಸಿದ್ದಪ್ಪ ಮತ್ತು ದೇವಪ್ಪ ಇವರು ಇಬ್ಬರಿಗೆ ಕುಣಿಯ ಕಡೆಗೆ ಹೋಗದಂತೆ ತಡೆದು ನಿಲ್ಲಿಸಿ ಈ ಗಾಣಿಗ ಸೂಳೇಮಕ್ಕಳಿಗೆ ಕುಣಿಯಲ್ಲಿ ಕಟ್ಟಿಗೆ ಹಾಕಲು ಬಿಡಬಾರದು ಎಂದು ಜಗಳ ತೆಗೆದು ಜಾಲಿ ಕಟ್ಟಿಗೆಯಿಂದ ಗವಿಸಿದ್ದಪ್ಪನು ಗುರುರಾಜನಿಗೆ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು ಅಲ್ಲದೇ ಅದೇ ಕಟ್ಟಿಗೆಯಿಂದ ದೇವಪ್ಪನು ಹನುಮಂತನ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದುಅಲ್ಲದೇ ನೀವೆಲ್ಲೇ ಹೋದರು ನಿಮ್ಮನ್ನು ಹೊಡೆದು ಸಾಯಿಸುತ್ತೇವೆ. ಎಂದು ಜೀವದ ಬೆದರಿಕೆ ಹಾಕಿರುತ್ತಾರೆ. ನಂತರ ನಿನ್ನೆ ರಾತ್ರಿ 11-30 ಗಂಟೆಯ ಸುಮಾರಿಗೆ ಫಿರ್ಯಾದಿದಾರಳು ತನ್ನ ಗಂಡ ಮತ್ತು ಮಗ ಹನುಮಂತ ಹೀಗೆ ತಮ್ಮ ಮನೆಯಲ್ಲಿ ಇದ್ದಾಗ ಆರೋಪಿ ದೇವಪ್ಪ ಮತ್ತು ಆರೋಪಿ ಶಾಂತವ್ವ ಇವರುಗಳು ಬಂದು ಫಿರ್ಯಾದಿಯ ಮನೆಯ ಬಾಗಿಲು ಹೊಡೆದಾಗ ಫಿರ್ಯಾದಿ ಮತ್ತು ಅವಳ ಗಂಡ ಉಡಚಪ್ಪ ಹೊರಗಡೆ ಬಂದಾಗ ಆರೋಪಿತರು ಅವರಿಗೆ ನಿಮ್ಮ ಮಗ ಎಲ್ಲಿದ್ದಾನೆ ಹೇಳ್ರಿ ಎಂದು ದಬ್ಬಾಡಿ ಕೇಳಿದ್ದು ಅಲ್ಲದೇ ಆರೋಪಿ ದೇವಪ್ಪನು ಫಿರ್ಯಾದಿಗೆ ಮೈ ಕೈ ಮುಟ್ಟಿ ಎಳೆದಾಡಿ ಅವಮಾನ ಮಾಡಿ ಲೇ ಭೋಸೂಡಿ ನಿನ್ನ ಮಗನಿಗೆ ಎಲ್ಲಿ ಬಚ್ಚಿಟ್ಟೀರಿ ಎಂಧು ದೌರ್ಜನ್ಯ ಮಾಡಿದ್ದು ಅಲ್ಲದೇ ಆರೋಪಿ ಶಾಂತವ್ವಳು ಫಿರ್ಯಾದಿಗೆ ಕೈ ಹಿಡಿದು ಎಳೆದಾಡಿ ಕೈಗಳಿಂದ ಹಲ್ಲೆ ಮಾಡಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 209/2016 ಕಲಂ: 143, 147, 148, 324, 504, 354, 506 ಸಹಿತ 149 ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ:.
ಟಣಕನಕಲ್ ಗ್ರಾಮದಲ್ಲಿ ಮಸೀದಿ ಮುಂದೆ ಅಲೆ ಹಬ್ಬದ ನಿಮಿತ್ತ ಕೊಂಡ ಮಾಡಿದ್ದು ಅದರಲ್ಲಿ ಕಟ್ಟಿಗೆಗಳನ್ನು ಹಾಕುವ ಸಮಯದಲ್ಲಿ ಆರೋಪಿ ಶರಣಪ್ಪ ಹಂದ್ರಾಳ ಹಾಗೂ ಇತರರು ಹಸಿ ಕಟ್ಟಿಗೆಗಳನ್ನು ಹಾಕುತ್ತಿದ್ದರು. ಇದನ್ನು ನೋಡಿದ ಫಿರ್ಯಾಧಿಯ ಸಂಬಂಧಿಕರಾದ ದೇವಪ್ಪ ಮತ್ತು ಗವಿಸಿದ್ದಪ್ಪ ಇವರುಗಳು ಆರೋಪಿತರಿಗೆ ಹಸಿ ಕಟ್ಟಿಗೆಗಳನ್ನು ಹಾಕಿದರೆ ಬೆಂಕಿಯು ಚೆನ್ನಾಗಿ ಹತ್ತುವುದಿಲ್ಲವೆಂದು ಹೇಳಿದ್ದಕ್ಕೆ ಆರೋಪಿತರು ಪ್ರತಿಕ್ರಿಯೆ ಕೊಡದೇ ದೇವಪ್ಪ ಮತ್ತು ಗವಿಸಿದ್ದಪ್ಪ ಇವರೊಂದಿಗೆ ಏಕಾಏಕೀ ಜಗಳ ತೆಗೆದು ಆರೋಪಿತರು ಕಟ್ಟಿಗೆ ಮತ್ತು ಕಲ್ಲಿನಿಂದ ತಲೆಗೆ, ಕೈಗೆ, ಬೆನ್ನಿಗೆ ಹೊಡಿಬಡಿ ಮಾಡಿರುತ್ತಾರೆ. ಮತ್ತು ಕೊಂಡದಲ್ಲಿ ಕಟ್ಟಿಗೆಗಳನ್ನು ತುಂಡು ಮಾಡಲು ತಂದಿದ್ದ ಕೊಡ್ಲಿಯಿಂದ ಶರಣಪ್ಪನು ದೇವಪ್ಪನಿಗೆ ಬೀಸಿದಾಗ ಕೊಡಲಿ ಏಟಿನಿಂದ ಪಾರಾಗಿರುತ್ತಾನೆ. ಆರೋಪಿತರು ಫಿರ್ಯಾದಿಗೆ ಕೈಯಿಂದ ಹೊಡೆದಿದ್ದಲ್ಲದೇ ಬ್ಯಾಡ್ರ ಸೂಳೆ ನೀನೇನು ಬಿಡಿಸಲಿಕ್ಕೆ ಬಂದೆ ಎಂಧು ಅವಾಚ್ಯ ಶಬ್ದಗಳಿಂದ ಬೈಯ್ದಿರುತ್ತಾರೆ. ಮತ್ತು ಈ ಗ್ರಾಮದಲ್ಲಿ ಹೇಗೆ ಇರುತ್ತಿರಿ ಹೇಗೆ ಜೀವನ ಮಾಡುತ್ತೀರಿ, ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ. ಎಂದು ಜೀವದ ಬೆದರಿಕೆ ಹಾಕಿರುತ್ತಾರೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈ ಗೊಂಡಿರುತ್ತಾರೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 169/2016 ಕಲಂ: 143, 147, 148, 341, 354, 504, 506 ಸಹಿತ 149 ಐ.ಪಿ.ಸಿ ಮತ್ತು 3(1)(10)(11) ಎಸ್.ಸಿ/ಎಸ್.ಟಿ. ಕಾಯ್ದೆ:.
ದಿನಾಂಕ: 12.10.2016 ರಂದು ಸಾಯಂಕಾಲ 6:30 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ: 11.10.2016 ರಂದು ರಾತ್ರಿ 11:00 ಗಂಟೆಗೆ ಟಣಕನಕಲ್ ಗ್ರಾಮದಲ್ಲಿ ಆಲೆ ಹಬ್ಬದ ಕುಣಿಗೆ ಕಟ್ಟಿಗೆ ಹಾಕುವ ಸಂಭಂದ ಜಗಳವಾಗಿದ್ದು ಜಗಳದಲ್ಲಿ ಗಾಯಗೊಂಡ ತನ್ನ ಗಂಡ ಹಾಗೂ ಇತರನ್ನು ಒಂದು ಆಟೋದಲ್ಲಿ ಚಿಕಿತ್ಸೆ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂಭಂದ ಕೊಪ್ಪಳದ ಗಾಣಿಗೇರ ಭವನದ ಹತ್ತಿರ ಬರುತ್ತಿರುವಾಗ ಆರೋಪಿತರು ತಮ್ಮ ಕೈಯಲ್ಲಿ ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ಬಂದು ವಾಹನವನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಹಿಡಿದು ಜಗ್ಗಾಡಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ಎತ್ತಿ ಬೈದು ಜಾತಿ ನಿಂದನೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಪ್ರಕರಣ ದಾಖಲಿಸಿ ತನಿಕೆ ಕೈಗೊಂಡಿದ್ದು ಇರುತ್ತದೆ.
4] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 114/2016 ಕಲಂ: 279, 337, 338 ಐ.ಪಿ.ಸಿ:.
ದಿನಾಂಕ 11-10-2016 ರಂದು ಸಾಯಂಕಾಲ :17-15  ಗಂಟೆಯ ಸುಮಾರು ತನ್ನ ಗೇಳೆಯನಾದ ರಾಘವೇಂದ್ರಸಿಂಗ್ ಗುಡಸಲಿ ಈತನ ಬೈಕ ನಂ: ಕೆ.ಎ-37 / ವಾಯ್-2945 ನೇದ್ದರ ಪಲ್ಸರ್ ಬೈಕನ ಮೇಲೆ ಹಿಂದೆ ಕುಳಿತು ಇಲಕಲ್ಲ ದರ್ಗಾಗೆ ಸಕ್ಕರೆ ಹೋಯಿಸಲು ತಾವರಗೇರಾ-ಮುದೇನೂರ ರಸ್ತೆಯ ಮೇಲೆ ಜುಮಲಾಪುರ ಸೀಮಾಂತರ ರಸ್ತೆಯ ತಿರುವಿನಲ್ಲಿ ಹೊರಟಾಗ ರಾಘವೇಂದ್ರಸಿಂಗ್ ಗುಡಸಲಿ ಈತನು ಬೈಕನ್ನು ಅತೀವೇಗ ಹಾಗೂ ಅಲಕ್ಷ್ಯತನದಿಂದ ನಡೆಯಿಸಿ ಅಫಘಾತ ಮಾಡಿ ಪಿರ್ಯಾದಿ ಮಗನಾದ ಶರಣಪ್ಪ ಗಾಂಜಿ ಈತನು ರಸ್ತೆಯ ಮೇಲೆ ಪುಟಿದು ಬಿದ್ದು ಆತನಿಗೆ ಭಾರಿ ಹಾಗೂ ಸಾದಾ ಸ್ವರೂಪದ ಗಾಯಪಡಿಸಿದ್ದು ಸದರಿ  ಶರಣಪ್ಪ ಗಾಂಜಿ ಈತನು ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇರುವದರಿಂದ ಸದರಿಯವನನ್ನು ಮೊದಲು ಮುದೇನೂರ ಸರಕಾರಿ ಆಸ್ಪತ್ರಗೆ ದಾಖಲು ಮಾಡಿ, ನಂತರ ಅಲ್ಲಿಂದ ಹೆಚ್ಚಿನ ಇಲಾಜಿಗೆ ಇಲಕಲ್ಲ ಮಹಾಂತೇಶ ಆಸ್ಪತ್ರೆ ದಾಖಲು ಮಾಡಿ , ನಂತರ ಇನ್ನು ಹೆಚ್ಚಿನ ಇಲಾಜಿಗೆ ಬಾಗಲಕೋಟ್ ಕೆರೂಡಿ ಆಸ್ಪತ್ರೆಗೆ ದಾಖಲು ಮಾಡಿ ತಡವಾಗಿ ಬಂದು ಪಿರ್ಯಾದಿಯನ್ನು ಸಲ್ಲಿಸಿಸರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
5] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 169/2016 ಕಲಂ: 323, 307, 504 ಐ.ಪಿ.ಸಿ:.

ದಿನಾಂಕ: 12-10-2016 ರಂದು ಸಂಜೆ 5-00 ಗಂಟೆ ಸುಮಾರಿಗೆ ಪಿರ್ಯಾದಿ ಬಸವರಾಜ ತಂದೆ ಚಂದಪ್ಪ ಮತ್ತು ಆತನ ಗೆಳೆಯನಾದ ಗೋಣೆಪ್ಪ ಇಬ್ಬರು ಆನಂದ ಪಾನ್ ಶಾಫ್ ಹತ್ತಿರ ನಿಂತುಕೊಂಡಿದ್ದಾಗ, ಅದೇ ಸಮಯಕ್ಕೆ ಆರೋಪಿ ರಾಮಪ್ಪನು ಅಲ್ಲಿಗೆ ಬಂದಿದ್ದು, ಪಿರ್ಯಾದಿ ಕೆಳಗೆ ಏನೋ ಬಿದ್ದಿದ್ದನ್ನು ತೆಗೆದುಕೊಳ್ಳಲು ಕೆಳಗೆ ಬಗ್ಗಿದಾಗ ಆರೋಪಿತನು ಪಿರ್ಯಾದಿಗೆ ಕೈಯಿಂದ ವಿನಾ: ಕಾರಣ ಹೊಡೆದಿದ್ದು, ನಂತರ ರಾತ್ರಿ 8-30 ಗಂಟೆ ಸುಮಾರಿಗೆ ಪಿರ್ಯಾದಿಯ ಮನೆ ಹತ್ತಿರ ಆರೋಪಿತನು ಪುನಃ ಅಲ್ಲಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದಾಡಿದಾಗ ಪಿರ್ಯಾದಿದಾರರ ತಮ್ಮ, ತಂಗಿ, ತಂದೆ ಎಲ್ಲರೂ ಬೈದಿದ್ದರಿಂದ ಆರೋಪಿತನು ಅಲ್ಲಿಂದ ಹೋಗಿ ತಮ್ಮ ಮನೆಯಿಂದ ಕೊಡಲಿ ಹಿಡಿದುಕೊಂಡು ಬಂದವನೆ ರಾತ್ರಿ 8-45 ಗಂಟೆ ಸುಮಾರಿಗೆ ಪಿರ್ಯಾದಿದಾರನು ತಮ್ಮ ಮನೆಯ ಮುಂದೆ ಇದ್ದಾಗ ಕೊಲೆ ಮಾಡುವ ಉದ್ದೇಶದಿಂದ ಕೊಡಲಿಯಿಂದ ತಲೆಗೆ ಹೊಡೆದು ರಕ್ತಗಾಯಗೊಳಿಸಿ ದುಖಾಃಪಾತಗೊಳಿಸಿದ್ದಾನೆಂದು ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತದೆ.

0 comments:

 
Will Smith Visitors
Since 01/02/2008