Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, October 14, 2016

1] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 92/2016 ಕಲಂ: 279, 304(ಎ) ಐ.ಪಿ.ಸಿ:
ದಿನಾಂಕ: 13-10-2016 ರಂದು ಮುಂಜಾನೆ 11-30 ಗಂಟೆ ಸುಮಾರಿಗೆ ಕಡೂರ ಸೀಮಾದಲ್ಲಿಯ ಶಶಿಕಿರಣ ಕ್ವಾರಿಯಲ್ಲಿ ರವಿ ಬಿಸಲದಿನ್ನಿ ಸಾ: ಕಲ್ಲಗೋನಾಳ ಈತನು ಟ್ರ್ಯಾಕ್ಟರ್ ನಂ: ಕೆ.ಎ-29/3857 ನೇದ್ದರ ಚಾಲಕನು ಕ್ವಾರಿಯಲ್ಲಿಯ ತೆಗ್ಗಿನಲ್ಲಿಂದ ಟ್ರ್ಯಾಕ್ಟರನನ್ನು ಅತೀವೇಗ ಹಾಗೂ ಆಲಕ್ಷತನದಿಂದ ನಡೆಸಿಕೊಂಡು ಮೇಲೆ ಹೋಗುವಾಗ ಟ್ರ್ಯಾಕ್ಟರ್ ಹತೋಟಿ ತಪ್ಪಿ ಹಿಂದಕ್ಕೆ ಬರುವಾಗ ಚಾಲಕ ರವಿ ಭಯಪಟ್ಟು  ಹಿಂದಕ್ಕೆ ಜಿಗಿದಾಗ ಟ್ರ್ಯಾಕ್ಟರ್ ಆತನ ತಲೆಯ ಮೇಲೆ ಹಾಯ್ದು ಅಪಘಾತವಾಗಿದ್ದು, ರವಿ ಈತನಿಗೆ ತಲೆಗೆ ಒಳಪೆಟ್ಟಾಗಿ ಬಾವು ಬಂದು ಕಿವಿ ಹಾಗೂ ಮೂಗಲ್ಲಿ ಮತ್ತು ಎಡಗೈ ಹಾಗೂ ಮುಖಕ್ಕೆ ರಕ್ತಗಾಯವಾಗಿ ಉಪಚಾರ ಕುರಿತು ಇಲಕಲ್ ಜೆ.ಬಿ. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮಧ್ಯಾಹ್ನ 12-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 105/2016 ಕಲಂ: 323, 324, 355, 504, 506 ಸಹಿತ 34 ಐ.ಪಿ.ಸಿ:.
ದಿನಾಂಕ 13-10-2016 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ಪಿರ್ಯಾದಿಯು ಹಾಗೂ ಆತನ ತಮ್ಮ ಮಾಟರಂಗಿ ಸೀಮಾದಲ್ಲಿಯ ತಮ್ಮ ಹೊಲದಲ್ಲಿ ಕೆಲಸ ಮಾಡಿಕೊಂಡಿರುವಾಗ ಪಿರ್ಯಾದಿದಾರನ ತಮ್ಮನ ಮಗನಾದ ರಾಘವೆಂದ್ರನು ತಮಗೆ ಆರೋಪಿ ನಂ 01 ಈತನಿಂದ ಬರಬೇಕಾದ 3000/- ರೂ. ಹಣವನ್ನು ಕೇಳುವ ಕುರಿತು ಮೋ.ಸೈ ನಂ ಕೆ.ಎ-37/ಯು-0699 ನೇದ್ದರಲ್ಲಿ ಆರೋಪಿ ನಂ 01 ನೇದ್ದವನ ಮನೆಯ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಬಂದಾಗ ಆರೋಪಿತರೆಲ್ಲರೂ ರಾಘವೆಂದ್ರನನ್ನು ತಡೆದು ನಿಲ್ಲಿಸಿ ನಿಮ್ಮ ತಂದೆ ಹೋಲದಲ್ಲಿ ರೂಟರ್ ಹೊಡೆದು ಹಾಳು ಮಾಡಿರುತ್ತಾನೆ. ನೀನು ಈಗ ನಮಗೆ ಹಣ ಕೇಳಲು ಬಂದಿಯಾ ಸೂಳೆ ಮಗನೇ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡುತ್ತಿದ್ದಾಗ ಯಾಕೆ ಬೈದಾಡುತ್ತೀರಿ ಅಂತಾ ಕೇಳಲು ಹೋದ ಪಿರ್ಯಾದಿ ಹಾಗೂ ಆತನ ತಮ್ಮನಿಗೆ ಈ ಸೂಳೆ ಮಕ್ಕಳ ಸೋಕ್ಕು ಜಾಸ್ತಿ ಆಗೈತಿ, ಅಂತಾ ಅನ್ನುತ್ತಾ ಆರೋಪಿ ನಂ 02 ಇವನು ಪಿರ್ಯಾದಿಯ ತಲೆಯ ಮುಂಬಾಗಕ್ಕೆ ಕಟ್ಟಿಗೆ ಬಡಿಗೆಯಿಂದ ಹೋಡೆದು ರಕ್ತ ಗಾಯ ಮಾಡಿದ್ದು ಅದೆ. ಹಾಗೂ ಆರೋಪಿ ನಂ 01 ನೇದ್ದವನು ಅಲ್ಲೆ ಬಿದ್ದಿದ್ದ ಇನ್ನೊಂದು ಕಟ್ಟಿಗೆ ಬಡಿಗೆಯಿಂದ ಪಿರ್ಯಾದಿಯ ತಮ್ಮನಾದ ರಮೇಶನ ತಲೆಗೆ ಹೊಡೆದು ರಕ್ತಗಾಯ ಮಾಡಿ ಕೈಯಿಂದ ಅವನ ಎದೆಗೆ ಬೆನ್ನಿಗೆ ಹೊಡೆದಿದ್ದು, ಹಾಗೂ ಆರೋಪಿ ನಂ 04 ಈಕೆಯು ರಮೇಶನ ಮೊಣಕಾಲಿಗೆ ಹಾಗೂ ಬೆನ್ನಿಗೆ ಕಟ್ಟಿಗೆ ಬಡಿಗೆಯಿಂದ ಬಡಿದು ಒಳಪೆಟ್ಟು ಮಾಡಿದ್ದು, ಹಾಗೂ ಆರೋಪಿ ನಂ 03 ನೇದ್ದವನು ನನ್ನ ಪಿರ್ಯಾದಿದಾರನ ತಮ್ಮನ ಮಗನಾದ ರಾಘವೆಂದ್ರನ ಹೊಟ್ಟೆಗೆ ಕೈಮುಷ್ಟಿ ಮಾಡಿ ಗುದ್ದಿ ಅಲ್ಲೇ ಬಿದ್ದಿದ್ದ ಒಂದು ಕಟ್ಟಿಗೆ ಬಡಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿ ನಿಮ್ಮನ್ನು ಇಷ್ಟಕ್ಕೆ ಬಿಡುವದಿಲ್ಲ ನಿಮ್ಮ ಜೀವ ತೆಗೆಯುತ್ತೇವೆ ಅಂತಾ ಎಲ್ಲರೂ ಜೀವದ ಭಯವನ್ನು ಹಾಕಿರುತ್ತಾರೆ.   ಪ್ರಕರಣ ಧಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. 
3] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 106/2016 ಕಲಂ: 323, 324, 355, 504, 506 ಸಹಿತ 34 ಐ.ಪಿ.ಸಿ:.

ದಿನಾಂಕ 13-10-2016 ರಂದು  ಪಿರ್ಯಾದಿದಾರನು ತನ್ನ ಹೆಂಡತಿ ಹಾಗೂ ಮಕ್ಕಳೊಂದಿಗೆ ತನ್ನ ಮನೆಯಲ್ಲಿ  ಇರುವಾಗ ಆರೋಪಿ ನಂ 01 ನೇದ್ದವನು  ಮೋ.ಸೈ ನಂ ಕೆ.-37/ಯು-0699 ನೇದ್ದರಲ್ಲಿ  ಪಿರ್ಯಾದಿಯ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ನಿಂತು ನಾವು ನಮ್ಮ ಹೋಲದಲ್ಲಿ ಏನು ಬೇಕಾದರೂ ಮಾಡ್ಕೋತಿವಿ ಅದನ್ನ ಎನು ಕೇಳ್ತಿರೋ ಸೂಳೇ ಮಕ್ಕಳ ಅಂತಾ ಬೈಯುತ್ತಿದ್ದು, ಆಗ ಪಿರ್ಯಾದಿ ಹಾಗೂ ಆತನ ಕುಟುಂಬವರು ಮನೆಯಿಂದ ಹೊರಬಂದು ಯಾಕೆ ಬೈದಾಡುತ್ತಿ ಅಂತಾ ಕೇಳಿದ್ದಕ್ಕೆ ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಇರುವಾಗ ಅಲ್ಲಿಗೆ ಉಳಿದ ಆರೋಪಿತರು ಬಂದು ನಮ್ಮ ಹೊಲದ ಉಸಾಬರಿ ನಿಮಗ್ಯಾಕೆ ನೀವು ಜೀವಸಹಿತ ಇರಬೇಕಾದರೇ ನಮ್ಮ ತಂಟೆಗೆ ಬರಬೇಡಿ ಸುಳೆಮಕ್ಕಳಾ ನಮ್ಮ ತಂಟೆಗೆ ಬಂದರೇ ನಿಮ್ಮ ಜೀವಾ ತಗಿತೀವಿ ಅಂತಾ ಹೇಳುತ್ತಾ ಒಮ್ಮೆಲೆ ಆರೋಪಿ ನಂ 02 ಇವನು ಅಲ್ಲಿಯೆ ಬಿದ್ದಿದ್ದ ಬಡಿಗೆಯಿಂದ ಪಿರ್ಯಾದಿ ತೆಲೆಯ ಮೇಲೆ ಬೆನ್ನಿಗೆ, ಕೈಗೆ ಬಡಿದಿದ್ದರಿಂದ ತಲೆಗೆ ರಕ್ತಗಾಯವಾಗಿ, ಬೆನ್ನಿಗೆ & ಕೈಗೆ ಒಳಪೆಟ್ಟು ಆಗಿದ್ದು, ಆರೋಪಿ ನಂ 04 ಇವಳು ತನ್ನ ಬಲಗಾಲ ಚಪ್ಪಲಿಯಿಂದ ಪಿರ್ಯಾದಿಯ ಎಡ ಕಪಾಳಕ್ಕೆ ಬಡಿದು  ಕೈಯಿಂದ ಪಿರ್ಯಾದಿಯ ಎದೆಗೆ ಬೆನ್ನಿಗೆ ಬಡಿದಿದ್ದು ಅದೆ. ಪಿರ್ಯಾದಿಯ ಮಗನಾದ ಹನುಮಂತನಿಗೆ ಆರೋಪಿ ನಂ 03 ಇವನು ಅಲ್ಲೆ ಬಿದ್ದಿದ್ದ ಬಡಿಗೆಯಿಂದ ತಲೆಯ ಹಿಂಭಾಗಕ್ಕೆ ಹೊಡೆದಿದ್ದರಿಂದ ರಕ್ತಗಾಯ ಮಾಡಿ ಹನುಮಂತನ ಬೆನ್ನಿಗೆ ತನ್ನ ಬಾಯಿಯಿಂದ ಕಚ್ಚಿ ರಕ್ತ ಗಾಯಗೊಳಿದ್ದು ಅದೆ. ಪ್ರಕರಣ ಧಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.   

0 comments:

 
Will Smith Visitors
Since 01/02/2008