Our Commitment For Safe And Secure Society

Our Commitment For Safe And Secure Society

This post is in Kannada language.

To view, you need to download kannada fonts from the link section.
Follow on FACEBOOK
Koppal District Police

Saturday, October 8, 2016

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 233/2016 ಕಲಂ: 279, 338 ಐ.ಪಿ.ಸಿ.
ದಿನಾಂಕ:-07-10-2016 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿದಾರರಾದ ಸೋಮನಾಥ ತಂದಿ ಸಾಬಣ್ಣ ಕೊಪ್ಪಳ ವಯಾ-25 ವರ್ಷ ದೂರು ನೀಡಿದ್ದು ದಿನಾಂಕ:-05-10-2016 ರಂದು ಸಾಯಂಕಾಲ 7-00 ಗಂಟೆಯ ಸುಮಾರಿಗೆ ಪಿರ್ಯಾದಿದಾರರು ಚಳ್ಳೂರು ಕ್ಯಾಂಪ್ ದಲ್ಲಿ ಔಷದಿ ತರಲೆಂದು ಚಳ್ಳೂರು ಕ್ಯಾಂಪ್ ನ ಅಂಜುಬಾಬ ಇವರ ಜಾಗದ ಹತ್ತಿರ ಹೋರಟಿದ್ದಾಗ್ಗೆ ಲಾರಿ ನಂ ಎಪಿ-16 ಟಿ.ಎಕ್ಸ್-7878 ನೆದ್ದರ ಚಾಲಕ ನಾಗೇಶ್ವರರಾವ್ ಈನತು ತನ್ನ ಲಾರಿಯನ್ನು ಅತೀ ವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಚಳ್ಳೂರು ಕಡೆಯಿಂದ ಮೊಟಾರ್ ಸೈಕಲ್ ನಂ ಕೆ.ಎ-36 ಕ್ಯೂ-9226 ನೆದ್ದರ ಮೇಲೆ ಬರುತ್ತಿದ್ದ ಪರಸುರಾಮ ತಂದಿ ಯಂಕೋಬ ಸಾ. ತೊಂಡಿಹಾಳ ಈತನ ಮೋಟಾರ್ ಸೈಕಲ್ ಗೆ ಟಕ್ಕರ ಕೊಟ್ಟು ಅಪಗಾತಪಡಿಸಿದ್ದರಿಂದ ಪರಸುರಾಮ ಈತನಿಗೆ ತಲೆಗೆ ಗಂಭೀರ ಸ್ವಾರೂಪದ ಗಾಯಗಳಾಗಿದ್ದವು ಇದನ್ನು ನೋಡಿದ ಪಿರ್ಯಾದಿದಾರರು ಪರಸುರಾಮ ಈತನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಹುಬ್ಬಳ್ಳಿ ಎಸ್.ಡಿ.ಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲುಮಾಡಿ ಇಂದು ಠಾಣೆಗೆ ಬಂದು ನೀಡಿದ ದೂರಿನ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 168/2016 ಕಲಂ: 447, 324, 355, 307, 427, 504 ಸಹಿತ 149 ಐ.ಪಿ.ಸಿ:
ದಿನಾಂಕ: 07-10-2016 ರಂದು 12-00 ಪಿ.ಎಂ.ಕ್ಕೆ ಪಿರ್ಯಾಧಿದಾರರಾದ ಶರಣಪ್ಪ ತಂದೆ ಯಮನೂರಪ್ಪ ಕಟಗಿಹಳ್ಳಿ ವಯ: 37, ಜಾತಿ: ವಾಲ್ಮೀಕಿ ಉ: ಒಕ್ಕಲುತನ ಸಾ: ಜಬ್ಬಲಗುಡ್ಡ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಪಿರ್ಯಾದಿಯನ್ನು ಹಾಜರ ಪಡಿಸಿದ್ದು ಅದರ ಸಾರಾಂಶವೇನಂದರೆ, ನಿನ್ನೆ ದಿನಾಂಕ: 06-10-2016 ರಂದು ಪಿರ್ಯಾದಿದಾರರ ಚಿಕ್ಕಪ್ಪ ಆರೋಪಿತರ ಮೇಲೆ ಕೇಸ್ ಮಾಡಿಸಿದ್ದರ ದ್ವೇಷದಿಂದ ಇಂದು ದಿನಾಂಕ: 07-10-2016 ರಂದು ಪಿರ್ಯಾದಿದಾರರು ತಮ್ಮ ಹೊಲದಲ್ಲಿ ದನಗಳನ್ನು ಮೇಯಿಸುತ್ತಿದ್ದಾಗ ಆರೋಪಿತರೆಲ್ಲರೂ ಸೇರಿಕೊಂಡು ಪಿರ್ಯಾದಿದಾರರ ಹೊಲದಲ್ಲಿ ಅತೀಕ್ರಮಣ ಪ್ರವೇಶ ಮಾಡಿ ಹೊಲದಲ್ಲಿನ ಅಂದಾಜು 1 ಲಕ್ಷ ರೂಪಾಯಿ ಮೌಲ್ಯದ ಜೋಳ ಮತ್ತು ಹುಳ್ಳಿ ಬೆಳೆಗಳನ್ನು ನಾಶ ಮಾಡಿ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿ ಬಡಿಗೆಯಿಂದ, ಚಪ್ಪಲಿಯಿಂದ ಹೊಡಿ-ಬಡಿ ಮಾಡಿ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆಂದು ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತದೆ. 

0 comments:

 
Will Smith Visitors
Since 01/02/2008