Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, October 16, 2016

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 239/2016 ಕಲಂ: 78(3) Karnataka Police Act.
ದಿನಾಂಕಃ-15-10-2016 ರಂದು ಮದ್ಯಾಹ್ನ 12-00 ಗಂಟೆಯ ಸುಮಾರಿಗೆ ಕಾರಟಗಿ ನಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ್ಗೆ ಖಚಿತ ಮಾಹಿತಿ ಬಂದಿದ್ದೇನೆಂದರೆ,  ಕಾರಟಗಿಯ ಎ.ಪಿ.ಎಮ್.ಸಿ. ಹತ್ತಿರ  ಮಟ್ಕಾ ಜೂಜಾಟ ನಡೆಸುತ್ತಿದ್ದಾರೆ ಅಂತಾ ಬಾತ್ಮೀ ಬಂದ ಮೇರೆಗೆ ನಮ್ಮ ಸಿಬ್ಬಂದಿಯವರಾದ ಪಿ.ಸಿ- 422,  ಮಲ್ಲಪ್ಪ ಎ.ಎಸ್.. ರವರನ್ನು ಒಂದು ಖಾಸಗಿ  ವಾಹನದಲ್ಲಿ ಕರೆದುಕೊಂಡು ಎ.ಪಿ.ಎಮ್. ಸಿ. ಹತ್ತಿರ ಹತ್ತಿರ ಹೋಗಿ ಸ್ವಲ್ಪು ದೂರದಲ್ಲಿ  ನಮ್ಮ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಪಂಚರು ನಾವು ಹೋಗಿ ಮರೆಯಲ್ಲಿ ನಿಂತು ನೊಡಲು ಒಬ್ಬನು ಕಾರಟಗಿಯ  ಹೊಟೇಲ್ ಮುಂದೆ ರೋಡಿನಲ್ಲಿ ಸಾರ್ವಜನಿಕ ರೋಡಿನಲ್ಲಿ ಹೋಗಿ ಬರುವ ಸಾರ್ವಜನಿಕರಿಗೆ ಕೂಗಿ ಮಟ್ಕಾ ನಂಬರುಗಳನ್ನು ಬರೆಸುವವರು ಬರೆಸಿರಿ ನಿಮ್ಮ ಲಕ್ಕಿ ನಂಬರ್ ಬಂದರೆ 1-00 ರೂಪಾಯಿಗೆ 80=00 ರೂಪಾಯಿ ಕೊಡುತ್ತೇವೆ ಅಂತಾ ಕೂಗಿ ಕರೆಯುತ್ತಾ ಇದ್ದು, ಇನ್ನೊಬ್ಬನು  ಸಾರ್ವಜನಿಕರಿಗೆ ಮೊಸ ಮಾಡುವ ಉದ್ದೇಶದಿಂದ  ಸಾರ್ವಜನಿಕರಿಂದ ಹಣ ಪಡೆದು ಯಾವುದೇ ಜವಾಬು ಕೊಡದೆ ಮಟ್ಕಾ ನಂಬರುಗಳ ಪಟ್ಟಿಯನ್ನು ಬರೆದುಕೊಳ್ಳುತ್ತಿರುವದನ್ನು ಖಚಿತಪಡಿಸಿಕೊಂಡು ಒಮ್ಮೆಲೆ ದಾಳಿ ಮಾಡಲು ಸಾರ್ವಜನಿಕರು ಓಡಿ ಹೊಗಿದ್ದುಕೂಗಿ ಕರೆಯುತ್ತಿದ್ದವ ಮತ್ತು ಮಟ್ಕಾ ಪಟ್ಟಿಬರೆದುಕೊಳ್ಳುವವ ಸಿಕ್ಕಿಬಿದ್ದಿದ್ದು,ಪಿ.ಎಸ್.. ರವರು  ವಿಚಾರಿಸಲು  ತನ್ನ ಹೆಸರು ವೆಂಕಟೇಶ್ವರರಾವ್ ತಂದಿ ಶಿವಶಂಕರ ಗಿರಿಶಾಲ ವಯಾ- 43 ವರ್ಷ ಜಾ- ಕಾಪು  - ಹೊಟೇಲ್ ಕೆಲಸ ಸಾಪನ್ನಾಪೂರ ಕ್ರಾಸ್ ಹತ್ತಿರ ಕಾರಟಗಿ ಅಂತಾ ತಿಳಿಸಿದ್ದು ಇವನ ಅಂಗ ಜಪ್ತಿ ಮಾಡಲು ಇತನ ಹತ್ತಿರ ಸಾರ್ವಜನಿಕರಿಂದ ಪಡೆದುಕೊಂಡಿದ್ದ ನಗದು ಹಣ ರೂ.550=00/- ಗಳು ಮತ್ತು ಒಂದು ಮಟ್ಕಾ ಪಟ್ಟಿ ಮತ್ತು ಒಂದು ಬಾಲ್ ಪೆನ್ನು ಸಿಕ್ಕಿರುತ್ತವೆ.  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 240/2016 ಕಲಂ: 87 Karnataka Police Act.
ದಿನಾಂಕ:-15-10-2016 ರಂದು ರಾತ್ರಿ 7-10 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಒಂದು ಇಸ್ಪೀಟ್ ಜೂಜಾಟದ ದಾಳಿ ಮೂಲ ಪಂಚನಾಮೆ ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರ ವರದಿಯನ್ನು ಹಾಜರುಪಡಿಸಿದ್ದ ಸದ್ರಿ ವರದಿಯ ಸಾರಾಂಶದಲ್ಲಿ ದಿನಾಂಕ:-15-10-2016 ರಂದು ಸಾಯಂಕಾಲ 5-45 ಗಂಟೆಗೆ ಕಾರಟಗಿಯ ಅಮೃತ ಲಾಡ್ಜ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ ಕಲ್ಲಪ್ಪ ತಂದೆ ನಾಗಪ್ಪ ಕೊರವರ ವಯ 25 ವರ್ಷ ಜಾತಿ ಕೊರವರ ವಯ 25 ವರ್ಷ ಜಾತಿ ಕೋರವರ ಉ. ಕೂಲಿಕೆಲಸ ಸಾ. 7 ನೇ ವಾರ್ಡ ಹಳೇ ಸಂತೆ ಮಾರ್ಕೆಟ್ ಕಾರಟಗಿ ಮತ್ತು ಇತರೆ 08 ಜನರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಮಾನ್ಯ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 09 ಜನರು ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದವರ ಕಡೆಯಿಂದ ಮತ್ತು ಖಣದಲ್ಲಿ ಸೇರಿ ಒಟ್ಟು ನಗದು ಹಣ ರೂ. 8385=00 ಗಳನ್ನು ಮತ್ತು ಇಸ್ಪೀಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 119/2016 ಕಲಂ: 323, 324, 504, 506 ಸಹಿತ 34 ಐ.ಪಿ.ಸಿ:.
ದಿನಾಂಕ:15-10-2016 ರಂದು 9-30 ಪಿಎಂಕ್ಕೆ ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ಪಿರ್ಯಾದಿಯನ್ನು ಹಾಜರಪಡಿಸಿದ್ದು, ಆರೋಪಿತನು ಇಂದು ಮುಂಜಾನೆ 10.30 ಗಂಟೆ ಸುಮಾರಿಗೆ ಪಿರ್ಯಾದಿದಾರನ ಮನೆ ಮುಂದೆ ಬಂದು ಫಿರ್ಯಾದಿಗೆ “ನಿಮ್ಮ ಕೈಯಲ್ಲಿ ಒಂದು ಸಾವಿರ ರೂಪಾಯಿ ಕೂಲಿ ಹಣ ಕೊಡಲು ಆಗೋದಿಲ್ಲ ಅಂದ್ರೆ ಯಾಕೆ ದುಡಿಸಿಕೊಳ್ಳಬೇಕು ಸೂಳೆ ಮಕ್ಕಳೆ ‘’ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿದಾಗ ಫಿರ್ಯಾದಿಯ ಅಣ್ಣ ಬಿಡಿಸಲು ಅಡ್ಡ ಬಂದಾಗ ಆತನಿಗೆ ಆರೋಪಿತನು ಕಲ್ಲಿನಿಂದ ಹೊಡೆದಿದ್ದು, ಆರೋಪಿ ದೇವವ್ವಳು ಫಿರ್ಯಾದಿಗೆ ಗಟ್ಟಿಯಾಗಿ ಹಿಡಿದು ನಿಲ್ಲಿಸಿ ಬಾಯಿಂದ ಎದೆಗೆ ಕಚ್ಚಿದ್ದು, ನಂತರ ಇಬ್ಬರೂ ಆರೋಪಿತರು ಫಿರ್ಯಾದಿಗೆ ಜೀವದ ಬೆದರಿಕೆ ಹಾಕಿರುತ್ತಾರೆ.  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
4] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 93/2016 ಕಲಂ: 323, 324, 504, 506 ಸಹಿತ 34 ಐ.ಪಿ.ಸಿ.

ದಿನಾಂಕ: 12-10-2016 ರಂದು ರಾತ್ರಿ 08-30 ಗಂಟೆಯ ಸುಮಾರಿಗೆ ತಮ್ಮೂರ ಮದ್ನಾಳ ಗ್ರಾಮದಲ್ಲಿ ಮೊಹರಂ ಹಬ್ಬದ ನಿಮಿತ್ತ ಹೆಜ್ಜೆ ಆಡುವಾಗ ಆರೋಪಿ ಮೈಲಾರಪ್ಪನಿಗೆ ಕೈ ತಾಗಿದ್ದಕ್ಕೆ ಸಿಟ್ಟಿಗೆ ಬಂದು ಯಾಕಲೇ ಮಗನ ಸೊಕ್ಕು ಬಂದೈತನಲೇ ಸೂಳೆ ಮಗನೆ ಅಂತಾ ಅವಾಚ್ಯವಾಗಿ ಬೈದಾಡ ಹತ್ತಿದಾಗ, ರಾಘವೇಂದ್ರಗೌಡ ಈತನು ಯಾಕ ಬೈತಿ ಅಂತಾ ಕೇಳಲು ಅದನ್ನೇನ್ ಕೇಳತಿಲೇ ಮಗನ ರಾಘ ಅಂತಾ ಅಲ್ಲೆ ಇದ್ದ ಪ್ರದಾನಪ್ಪ ತಂದೆ ಶಿವಲಿಂಗಪ್ಪ ಹರಿಜನ ಈತನು ರಾಘವೇಂದ್ರಗೌಡ ಕೈಯಿಂದ ಹೊಡೆಬಡೆ ಮಾಡಿದನು, ಆಗ ಮಹಾಂತೇಶಗೌಡನು ಬಿಡಿಸಲು ಹೋದಾಗ ಮೈಲಾರಪ್ಪನು ಅಲ್ಲೆ ಇದ್ದ ಕಟ್ಟಿಗೆ ಬಡಿಗೆಯಿಂದ ಮಹಾಂತೇಶಗೌಡನಿಗೆ ತಲೆಗೆ ಹೊಡೆದು ರಕ್ತ ಗಾಯ ಮಾಡಿದನು. ಪ್ರದಾನೆಪ್ಪನು ರಾಘವೇಂದ್ರಗೌಡ ಕಾಲಿನಿಂದ ಒದ್ದು, ಕೈಯಿಂದ ಹೊಡೆಬಡೆ ಮಾಡಿದಾಗ, ಎಡಗಾಲ ಹಿಂಬಡದ ಹತ್ತಿರ ಒಳಪೆಟ್ಟಾಗಿದ್ದು, ಆಗ ಮಹಾಂತೇಶಗೌಡನಿಗೆ ಪ್ರದಾನೆಪ್ಪ ಕೈಯಿಂದ ಹೊಡೆಬಡೆ ಮಾಡಿದಾಗ ಎದೆಗೆ, ಎಡಗೈ ರಟ್ಟೆಗೆ ಸಣ್ಣಪುಟ್ಟ ಗಾಯಗಳಾಗಿದ್ದು ಇರುತ್ತವೆ. ಆಗ ಅಲ್ಲೆ ಇದ್ದ ಫಿರ್ಯಾದಿ ಮತ್ತು ಬಸಪ್ಪ ತಂದೆ ಅಯ್ಯಪ್ಪ ಮಾಶೆಟ್ಟಿ, ಹನಮಂತಪ್ಪ ತಂದೆ ಮುತ್ತಪ್ಪ ಮೇಟಿ ರವರು ಜಗಳ ಬಿಡಿಸಿ ಕಳುಹಿಸಿದಾಗ ಮಕ್ಕಳ ಇವತ್ತು ಉಳಕಂಡ್ರಿ ಇನ್ನೊಂದು ಸಿಕ್ಕಾಗ ನಿಮ್ಮನ್ನ ಜೀವ ಸಹಿತ ಬಿಡಂಗಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋದರು. ನಂತರ ಗಾಯಾಳುಗಳನ್ನು ಉಪಚಾರ ಕುರಿತು ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಉಪಚಾರ ಪಡಿಸಿ ಹೆಚ್ಚಿನ ಉಪಚಾರ ಕುರಿತು ಬಾಗಲಕೋಟ ಕೆರೂಡಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಸದರಿಯವರು ಪುನಃ ನಮ್ಮ ಜೊತೆ ಜಗಳ ಮಾಡಬಹುದು ಅಂತಾ ತಿಳಿದು ಇಂದು ತಡವಾಗಿ ಠಾಣೆಗೆ ಬಂದು ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆ.

0 comments:

 
Will Smith Visitors
Since 01/02/2008