Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, October 5, 2016

1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 261/2016 ಕಲಂ: 279, 337, 338 ಐ.ಪಿ.ಸಿ:.
ಪಿರ್ಯಾಧಿದಾರರು ತಮ್ಮ ಮೋಟರ್ ಸೈಕಲ್ ನಂ  ಕೆಎ-36-ಎಕ್ಸ್-7075 ನೇದ್ದರ ಮೇಲೆ ಅಕ್ಕಮ್ಮ ಮತ್ತು ನನ್ನ ಗಂಡನಾದ ಶಿವಕುಮಾರ ತಂದೆ ಯಮನಪ್ಪಅಂಬಿಗೇರ ವಯ: 28 ವರ್ಷ ಇವರೊಂದಿಗೆ ಇಂದು ದಿನಾಂಕ: 04-10-2016 ರಂದು ನೇರೆಗೆಲ್ ದಲ್ಲಿ ವಯಕ್ತಿಕ ಕೆಲಸ ಮುಗಿಸಿಕೊಂಡು ವಾಪಸ್ ಕುಷ್ಟಗಿ ಕಡೆಗೆ ಬರುತ್ತಿರುವಾಗಿ ರಾತ್ರಿ 08-30 ಗಂಟೆ ಸುಮಾರಿಗೆ ಪುರಸಭೆ ಕಮಾನ ದಾಟಿ ರಸ್ತೆಯ ಎಡಗಡೆ ಬರುತ್ತಿರುವಾಗ ಕುಷ್ಟಗಿ ಕಡೆಯಿಂದ ಒಂದು ಮೋಟರ್ ಸೈಕಲ್ ಸವಾರನು ತಮ್ಮ ಮೋ.ಸೈ ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮಗೆ ಟಕ್ಕರ ಕೊಟ್ಟು ಅಪಘಾತ ಪಡಿಸಿದ್ದರಿಂದ ನನಗೆ ಬಲಗಾಲ ಮೋಣಕಾಲಿಗೆ ತೆರಚಿದ ಗಾಯ ಎಡಗೈ ರೆಟ್ಟೆಗೆ ಒಳಪೆಟ್ಟು, ಮತ್ತು ನನ್ನ ಗಂಡನನ್ನು ನೋಡಲಾಗಿ ಬಲಗಡೆ ಹಣೆಗೆ ಭಾರಿ ರಕ್ತಗಾಯ, ತುಟಿಗೆ ರಕ್ತಗಾಯವಾಗಿದ್ದು ನಮಗೆ ಅಪಘಾತ ಪಡಿಸಿದ ಸವಾರನನ್ನು ನೋಡಲಾಗಿ ಆತನಿಗೆ ತಲೆಯ ಎಡಗಡೆ ಬಾರಿ ರಕ್ತಗಾಯ, ಹಣೆಗೆ ರಕ್ತ ಗಾಯ, ಬಲಗಾಲ ಎಬ್ಬೆರಳೀಗೆ ರಕ್ತಗಾಯವಾಗಿದ್ದು ಇರುತ್ತದೆ. ಸದರಿಯವನ ಮೋ.ಸೈಕಲ್ ನೋಡಲಾಗಿ ಹಿರೋಹೋಂಡಾ ನಂ ಕೆಎ-35-ಜೆ-1565 ಅಂತಾ ಇದ್ದು ಆತನನ್ನು ವಿಚಾರಿಸಲಾಗಿ ತನ್ನ ಹೆಸರು ಶಾಂತಪ್ಪ ತಂದೆ ನಿಂಗಪ್ಪ ಭಾವಿಮನಿ ಸಾ: ನಿಡಶೇಸಿ ಅಂತಾ ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 291/2016 ಕಲಂ: 279, 337, 338, 304(ಎ) ಐ.ಪಿ.ಸಿ:.

ದಿನಾಂಕ:- 04-10-2016 ರಂದು ಬೆಳಿಗ್ಗೆ 06:30 ಗಂಟೆಗೆ ಫಿರ್ಯಾದಿದಾರರಾದ ರಮೇಶ ತಂದೆ ಹನುಮಂತಪ್ಪ, ವಯಸ್ಸು 30 ವರ್ಷ, ದಿನಾಂಕ:- 03-10-2016 ರಂದು ರಾತ್ರಿ 10:00 ಗಂಟೆಯ ಸುಮಾರಿಗೆ ಹಿರೇಜಂತಕಲ್-ಚಿಕ್ಕಜಂತಕಲ್ ರಸ್ತೆಯ ಚಿಕ್ಕ ಜಂತಕಲ್ ಸೀಮಾದಲ್ಲಿ ಆಪೆ ಆಟೋರಿಕ್ಷಾ ನಂಬರ್: ಕೆ.ಎ-37/ 9206 ನೇದ್ದರಲ್ಲಿ ಕಂಪ್ಲಿಯಿಂದ ಕೂಲಿ ಕೆಲಸ ಮುಗಿಸಿಕೊಂಡು ನನ್ನ ತಾಯಿ, ಹೆಂಡತಿ, ಅಕ್ಕ ಹಾಗೂ ಓಣಿಯ ಜನರಾದ (1)  ಸುಂಕಮ್ಮ ಗಂಡ ಹನುಮಂತಪ್ಪ-50 ವರ್ಷ, (2)  ಹುಲಿಗೆಮ್ಮ ಗಂಡ ರಮೇಶ-22 ವರ್ಷ ಹಾಗೂ (3) ನಾಗಮ್ಮ ಗಂಡ ಈರಪ್ಪ, ಬೋವಿ, 40 ವರ್ಷ, (4) ರೇಣಮ್ಮ ಗಂಡ ತಿಮ್ಮಣ್ಣ- 25 ವರ್ಷ, (5) ಶಾಂತಮ್ಮ ಗಂಡ ಈರಪ್ಪ-35 ವರ್ಷ, (6) ದೇವರಾಜ ತಂದೆ ಹುಲಗಪ್ಪ-14 ವರ್ಷ ಇವರುಗಳು ವಾಪಸ್ ಗಂಗಾವತಿಗೆ ಬರುತ್ತಿರುವಾಗ ರಾತ್ರಿ 10:00 ಗಂಟೆಯ ಸುಮಾರಿಗೆ ಚಾಲಕ ನಜೀರ್ ಸಾಬ ತಂದೆ ಕಾಶೀಮಸಾಬ ಸಾ: ಹೊಸ ಹಿರೇಬೆಣಕಲ್ ಈತನು ಆಟೋವನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ ರಸ್ತೆಯ ಪಕ್ಕದಲ್ಲಿ ಉರುಳಿ ಬಿದ್ದು, ಚಾಲಕ ಸಮೇತ ಆಟೋದಲ್ಲಿದ್ದವರೆಲ್ಲರಿಗೂ ತೀವ್ರ ಮತ್ತು ಸಾದಾ ಗಾಯಗಳಾಗಿರುತ್ತವೆ.  ನಂತರ ಗಾಯಾಳುಗಳನ್ನು ಗಂಗಾವತಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ನನ್ನ ತಾಯಿಯನ್ನು ಬಳ್ಳಾರಿಗೆ ಹಾಗೂ ಉಳಿದ ಗಾಯಾಳುಗಳನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿದ್ದು ನಂತರ ದಿನಾಂಕ:- 04-10-2016 ರಂದು ಸಂಜೆ 5:30 ಗಂಟೆಗೆ ಬಳ್ಳಾರಿಯ ಕಂಟೋನ್ ಮೆಂಟ್ ಓ.ಪಿ.ಯಿಂದ ಫೋನ್ ಮೂಲಕ ಸಂದೇಶವನ್ನು ತಿಳಿಸಿದ್ದು, ಅದರಲ್ಲಿ ಈ ಪ್ರಕರಣದಲ್ಲಿ ಗಾಯಗೊಂಡಿದ್ದ ಗಾಯಾಳು ಶ್ರೀಮತಿ ಸುಂಕಮ್ಮ ಗಂಡ ಹನುಮಂತಪ್ಪ, ಬೋವಿ ಸಾ: ವಿರುಪಾಪೂರು-ಗಂಗಾವತಿ ಇವಳು ವಿಮ್ಸ್ ಬಳ್ಳಾರಿಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುವಾಗ ಗುಣವಾಗದೇ ಇಂದು ಮಧ್ಯಾಹ್ನ 3:00 ಗಂಟೆಗೆ ಮೃತಪಟ್ಟಿರುತ್ತಾಳೆ. 

0 comments:

 
Will Smith Visitors
Since 01/02/2008