Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, October 6, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 292/2016 ಕಲಂ: 87 Karnataka Police Act.
ದಿನಾಂಕ:- 04-10-2016 ರಂದು ರಾತ್ರಿ 07-30 ಗಂಟೆಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ದಾಸನಾಳ ಬ್ರಿಡ್ಜ ಹತ್ತಿರ ನಾಯ್ಡು ಟ್ರಾನ್ಸಪೊರ್ಟ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಾಹರ್ ಎಂಬ ಅದೃಷ್ಟದ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಭಾತ್ಮಿ ಬಂದ ಮೇರೆಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್..  ಮತ್ತು  ಸಿಬ್ಬಂದಿಯವರಾದ ಸಿಪಿಸಿ- 429, 120, 358, 363, 301 ಇವರನ್ನು ಕರೆದುಕೊಂಡು ದಾಸನಾಳ ಬ್ರಿಡ್ಜ ಹತ್ತಿರ ಹೋಗಿ ವಾಹನಗಳನ್ನು ಮರೆಯಲ್ಲಿ ನಿಲ್ಲಿಸಿ ಇಬ್ಬರು ಪಂಚರನ್ನು ಬರಮಾಡಿಕೊಂಡು ಅಲ್ಲಿಂದ ಎಲ್ಲರೂ ನಡೆದುಕೊಂಡು ಹೋಗಿ ನಮಗೆ ಮಾಹಿತಿ ಇದ್ದ ಸ್ಥಳದಲ್ಲಿ ನಾಯ್ಡು ಟ್ರಾನ್ಸಪೊರ್ಟ ಹಿಂದೆ ಹೋಗಿ ಮರೆಯಲ್ಲಿ ನಿಂತು ನೋಡಲು ನಾಯ್ಡು ಟ್ರಾನ್ಸಪೊರ್ಟ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 6 ಜನರು ಸಿಕ್ಕಿಬಿದ್ದಿದ್ದು. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 14,040-00 ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಬರಕಾ ಸಿಕ್ಕಿದ್ದು, ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 230/2016 ಕಲಂ: 78(3) Karnataka Police Act.
ದಿನಾಂಕಃ-05-10-2016 ರಂದು ಮದ್ಯಾಹ್ನ 12-00 ಗಂಟೆಯ ಸುಮಾರಿಗೆ ಕಾರಟಗಿ ನಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ್ಗೆ ಖಚಿತ ಮಾಹಿತಿ ಬಂದಿದ್ದೇನೆಂದರೆ,  ಕಾರಟಗಿಯ ಹಳೇ ಬಸ್ ನಿಲ್ದಾಣದ ಹತ್ತಿರ ಮಟ್ಕಾ ಜೂಜಾಟ ನಡೆಸುತ್ತಿದ್ದಾರೆ ಅಂತಾ ಬಾತ್ಮೀ ಬಂದ ಮೇರೆಗೆ ದಾಳಿ ಕುರಿತು ಮಾನ್ಯ ನ್ಯಾಯಾಲಯದಿಂದ  ಪರವಾನಿಗೆಯನ್ನು ಪಡೆದುಕೊಂಡು ನಂತರ   ಇಬ್ಬರು ಪಂಚರಾದ 1) ಪರಸಪ್ಪ ತಂದಿ ರಂಗಪ್ಪ ತಳವಾರ 2) ಭೀಮಣ್ಣ ತಂದಿ ಕಲ್ಲಪ್ಪ ಬಜಂತ್ರಿ ಸಾ- ಜಾಲಿಹಾಳ ಹಾ.. ಕಾರಟಗಿ ಇವರನ್ನು ಕಾರಟಗಿಯ ನವಲಿ ಕ್ರಾಸ್ ದಲ್ಲಿ  ಕರೆದುಕೊಂಡು ಬಂದಿದ್ದು ನಂತರ ಅವರಿಗೆ ದಾಳಿಯ ಬಗ್ಗೆ ಮಾಹಿತಿ ತಿಳಿಸಿ ನಂತರ  ಇಬ್ಬರು ಪಂಚರನ್ನು ಮತ್ತು ಸದರಿ ನಮ್ಮ ಸಿಬ್ಬಂದಿಯವರಾದ ಪಿ.ಸಿ- 422, 413, 76, 197  ರವರನ್ನು ಒಂದು ಖಾಸಗಿ  ವಾಹನದಲ್ಲಿ ಕರೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೊಡಲು ಒಬ್ಬನು ಕಾರಟಗಿಯ ಗುರುಪ್ರಸಾದ ಹೊಟೇಲ್ ಮುಂದೆ ರೋಡಿನಲ್ಲಿ ಸಾರ್ವಜನಿಕ ರೋಡಿನಲ್ಲಿ ಹೋಗಿ ಬರುವ ಸಾರ್ವಜನಿಕರಿಗೆ ಕೂಗಿ ಮಟ್ಕಾ ನಂಬರುಗಳನ್ನು ಬರೆಸುವವರು ಬರೆಸಿರಿ ನಿಮ್ಮ ಲಕ್ಕಿ ನಂಬರ್ ಬಂದರೆ 1-00 ರೂಪಾಯಿಗೆ 80=00 ರೂಪಾಯಿ ಕೊಡುತ್ತೇವೆ ಅಂತಾ ಕೂಗಿ ಕರೆಯುತ್ತಾ ಇದ್ದು, ಇನ್ನೊಬ್ಬನು  ಸಾರ್ವಜನಿಕರಿಗೆ ಮೊಸ ಮಾಡುವ ಉದ್ದೇಶದಿಂದ  ಸಾರ್ವಜನಿಕರಿಂದ ಹಣ ಪಡೆದು ಯಾವುದೇ ಜವಾಬು ಕೊಡದೆ ಮಟ್ಕಾ ನಂಬರುಗಳ ಪಟ್ಟಿಯನ್ನು ಬರೆದುಕೊಳ್ಳುತ್ತಿರುವದನ್ನು ಖಚಿತಪಡಿಸಿಕೊಂಡು ಒಮ್ಮೆಲೆ ದಾಳಿ ಮಾಡಲು ಸಾರ್ವಜನಿಕರು ಓಡಿ ಹೊಗಿದ್ದುಕೂಗಿ ಕರೆಯುತ್ತಿದ್ದವ ಮತ್ತು ಮಟ್ಕಾ ಪಟ್ಟಿಬರೆದುಕೊಳ್ಳುವವ ಸಿಕ್ಕಿಬಿದ್ದಿದ್ದು, ಇವನ ಅಂಗ ಜಪ್ತಿ ಮಾಡಲು ಇತನ ಹತ್ತಿರ ಸಾರ್ವಜನಿಕರಿಂದ ಪಡೆದುಕೊಂಡಿದ್ದ ನಗದು ಹಣ ರೂ.2010/- ಗಳು ಮತ್ತು ಒಂದು ಮಟ್ಕಾ ಪಟ್ಟಿ ಮತ್ತು ಒಂದು ಬಾಲ್ ಪೆನ್ನು ಸಿಕ್ಕಿರುತ್ತವೆ.   ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 162/2016 ಕಲಂ: 78(3) Karnataka Police Act.
ದಿನಾಂಕ: 05-10-2016 ರಂದು ರಾತ್ರಿ 7-30 ಗಂಟೆಗೆ ಕೊಪ್ಪಳ ನಗರದ ಹಸನ್ ಕ್ರಾಸ್ ಹತ್ತಿರ ಸಂಗೀತಾ ಮೊಬೈಲ್ ಶಾಫ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ನಿಂತುಕೊಂಡು 1 ರೂ ಗೆ 80 ರೂ ಯಾರ ಅದೃಷ್ಟ ನಶೀಬದ ಆಟ ಹಚ್ಚಿರಿ ಅಂತಾ ಕೂಗುತ್ತಿದ್ದಾಗ ದಾಳಿಕಾಲಕ್ಕೆ ಆರೋಪಿ ವಲಿ ತಂದೆ ನಿಜಾಮಸಾಬ ಎಂಬ ಆರೋಪಿತರು ಸಿಕ್ಕಿದ್ದು ಸದರಿ ಆರೋಪಿತನಿಂದ ನಗದು ಹಣ ರೂ 1120=00, ಒಂದು ಮಟಕಾ ಚೀಟಿ, ಒಂದು ಬಾಲ್ ಪೆನ್ ಗಳನ್ನ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು  ಸದರಿ ಆರೋಫಿತನ ಮೇಲೆ ಪ್ರಕರಣ ದಾಖಲುಮಾಡಿಕೊಂಡು ತನಿಖೆಕೈಗೊಂಡಿದ್ದು ಅದೆ.
4] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 161/2016 ಕಲಂ: 379 ಐ.ಪಿ.ಸಿ:.

ದಿನಾಂಕ 05-10-2016 ರಂದು ರಾತ್ರಿ 7-30 ಗಂಟೆಗೆ  ಫಿರ್ಯಾಧಿದಾರರಾದ ರಾಜೇಶ ತಂಧೆ ಮಲ್ಲಪ್ಪ ಹೊಸಳ್ಳಿ ಸಾ: ಹಿರೇಸಿಂದೋಗಿ ತಾ:ಜಿ:ಕೊಪ್ಪಳ  ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೆ.  ದಿನಾಂಕ 21-09-2016 ರಂದು ಮದ್ಯಾಹ್ನ 1-30 ಗಂಟೆಗೆ ಫಿರ್ಯಾದಿದಾರರು ಕುಷ್ಠಗಿ ರಸ್ತೆಯಲ್ಲಿರುವ ಆಟೋಮೋಬೈಲ್ಸ ಅಂಗಡಿಗೆ ಸಾಮಾನುಗಳನ್ನ ತರಲು ತನ್ನ ಹಿರೋ ಸ್ಪ್ಲೆಂಡರ್ ಮೋಟಾರ ಸೈಕಲ ನಂ KA 37/EB 2605 ನೇದ್ದನ್ನು ತೆಗೆದುಕೊಂಡು ಹೋಗಿ ಅಂಗಡಿಯ ಮುಂದೆ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿ  ಅಂಗಡಿಗೆ ಹೋಗಿ ವಾಪಸ ಮದ್ಯಾಹ್ನ 1-45 ಗಂಟೆಗೆ ಬಂದು ನೋಡಿದಾಗ ತಮ್ಮ ಮೋಟಾರ ಸೈಕಲ್ ಕಾಣಲಿಲ್ಲಾ. ಕೂಡಲೇ ಗಾಬರಿಯಾಗಿ ತಾನು ಅಲ್ಲಿ ಸುತ್ತಾಮುತ್ತ ಹಾಗೂ ಬಸ್ ನಿಲ್ದಾಣ  ರೈಲ್ವೆ ಸ್ಟೇಷನ್ ಮುಂತಾದ ಕಡೆಗಳಲ್ಲಿ ಹುಡುಕಾಡಲು ಎಲ್ಲಿಯೂ ಕಂಡು ಬರಲಿಲ್ಲಾ, ಯಾರೋ ಕಳ್ಳರು ಕಳ್ಳತನ ಮಾಢಿಕೊಂಡು ಹೋಗಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008