Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, November 16, 2016

1] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 101/2016 ಕಲಂ: 302 ಐ.ಪಿ.ಸಿ.
ದಿನಾಂಕ: 15-1011-2016 ರಂದು ಮುಂಜಾನೆ 09-00 ಗಂಟೆಗೆ ಫಿರ್ಯಾದಾರರಾದ ಮಂಜುನಾಥ ತಂದೆ ಸಂಗಪ್ಪ ಸುಂಕದ, ಸಾ: ಹಾಬಲಕಟ್ಟಿ ಹಾ/ವ: ಬಾದಿಮನಾಳ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶ ನೆಂದರೆ, ಫಿರ್ಯಾದಿದಾರರ ತಂದೆ ಮೃತ ಸಂಗಪ್ಪನು ತಮ್ಮ ಹೊಲ ಸರ್ವೆ ನಂ: 28 ರಲ್ಲಿ ಬದುವಿಗೆ ಇರುವ ಬೇವಿನ ಗಿಡಗಳನ್ನು 43000/- ರೂಪಾಯಿಗೆ ಮಾರಾಟ ಮಾಡಿದ್ದು, ಈ ವಿಷಯ ಕುರಿತು ಫಿರ್ಯಾದಿಯ ಅಣ್ಣ ಮಲ್ಲಪ್ಪನು ತನ್ನ ತಂದೆಗೆ ಹಣ ಕೇಳಿ ಜಗಳ ಮಾಡಿದ್ದು ಇರುತ್ತದೆ. ಸಂಗಪ್ಪನು ಬಾದಿಮನಾಳ ಕ್ರಾಸದಲ್ಲಿ ತನ್ನ ಮೊಮ್ಮಗಳೊಂದಿಗೆ ಚಹ ಕುಡಿದು ವಾಪಸ್ ಗಜೇಂದ್ರಗಡ ದಾರಿ ತಮ್ಮ ಹೊಲದ ಮನೆಗೆ ತನ್ನ ತಮ್ಮ ಸೋಮಪ್ಪನ ಹೊಲದಲ್ಲಿ ಹೋಗುವಾಗ ಮಲ್ಲಪ್ಪನು ತೆಕ್ಕೆಗೆ ಬಿದ್ದು, ಕೊಡ್ಲಿಯಿಂದ ಚೆಂಡಿನ ಕೆಳಗೆ ಹಾಗೂ ಎಡ ಭುಜಕ್ಕೆ ಹೊಡೆದು ಓಡಿ ಹೋಗಿದ್ದು, ಆಗ ಫಿರ್ಯಾದಿ ಮತ್ತು ಪ್ರತ್ಯಕ್ಷದರ್ಶಿಗಳು ಬೆನ್ನು ಹತ್ತಿದ್ದು, ಆರೋಪಿ ಮಲ್ಲಪ್ಪನು ಸಿಗದೇ ಓಡಿ ಹೋಗಿದ್ದರಿಂದ ಫಿರ್ಯಾದಿ ತನ್ನ ತಂದೆ ಸಂಗಪ್ಪನನ್ನು ಕೊಲೆ ಮಾಡಿದ ಮಲ್ಲಪ್ಪನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಮುಂತಾಗಿ ಫಿರ್ಯಾದಿ ನೀಡಿದ್ದು  ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 320/2016 ಕಲಂ:  279, ಐ.ಪಿ.ಸಿ ಹಾಗೂ 187 ಐ.ಎಂ.ವಿ. ಕಾಯ್ದೆ:
ದಿನಾಂಕ:- 15-11-2016 ರಂದು ಮಧ್ಯಾಹ್ನ 12:15 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಸಲೀಮ್ ಪಾಷಾ,  ಸಹಾಯಕ ಅಭಿಯಂತರರು (ವಿ), ಕಾರ್ಯ ಮತ್ತು ಪಾಲನೆ ವೆಂಕಟಗಿರಿ ಶಾಖೆ, ಜೆಸ್ಕಾಂ ಗಂಗಾವತಿ ಇವರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ದಿನಾಂಕ:- 14-11-2016 ರಂದು ಮುಂಜಾನೆ ಸುಮಾರು 3:30 ಗಂಟೆಯ ಸುಮಾರಿಗೆ ಕೊಪ್ಪಳ ರಸ್ತೆಯ ದಾಸನಾಳ ಹತ್ತಿರವಿರುವ ಮೆ: ಶ್ರೀ ಕೆ. ಚಂದ್ರಪ್ಪ ತಂದೆ ಹಾಲಪ್ಪ ಮಿಲ್ (ಆರ್.ಆರ್. ನಂ: VNKP2105) ನವರು ಕರೆ ಮಾಡಿ ಅವರ ಮಿಲ್ಲಿನ 63 ಕೆವಿಅ ವಿದ್ಯುತ್ ಪರಿವರ್ತಕಕ್ಕೆ ಕಾರು ಅಪಘಾತದಿಂದ ಹಾನಿಯಾಗಿರುವ ಕುರಿತು ತಿಳಿಸಿದರು.  ನಂತರ ದಿ:- 14-11-2016 ರಂದು ಬೆಳಿಗ್ಗೆ 08:00 ಗಂಟೆಗೆ ನಮ್ಮ ಶಾಖೆಯ ಮಾರ್ದಾಳಾದ ಶ್ರೀ ಶೇಖ್ ರಹೀಮ್ ಕಪಾಲಿ ಇವರ ಜೊತೆಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಲಾಗಿ ಮಿಲ್ ಹತ್ತಿರವಿರುವ 63ಕೆವಿಎ ಪರಿವರ್ತಕ ಮತ್ತು ಕಂಬ ಮುರಿದು ಕೆಳಗೆ ಬಿದ್ದು ಹಾಳಾಗಿರುವುದು ಕಂಡುಬಂದಿದೆ. ಪ್ರತ್ಯಕ್ಷ ದರ್ಶಿಗಳಾದ ಕೆ. ಚಂದ್ರಪ್ಪ ಮತ್ತು ಎ. ನಾಗರಾಜ  ಇವರ ಪ್ರಕಾರ ಈ ಅಪಘಾತ K.A-37/ M-8253 ನಂಬರಿನ Ritz ಕಾರಿನಿಂದ ಆಗಿದೆಯೆಂದು ತಿಳಿಸಿರುತ್ತಾರೆ.  ಇದರಿಂದ ನಮ್ಮ ಇಲಾಖೆಗೆ ರೂ. 1,30,000-00 ನಷ್ಟವಾಗಿರುತ್ತದೆ.  ಕಾರಣ ಸದರಿ ವಿಷಯವಾಗಿ ದೂರನ್ನು ದಾಖಲಿಸಿಕೊಂಡು ಅಪಘಾತ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ." ಅಂತಾ ಇದ್ದ ದೂರಿನ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.  

0 comments:

 
Will Smith Visitors
Since 01/02/2008