Our Commitment For Safe And Secure Society

Our Commitment For Safe And Secure Society

This post is in Kannada language.

To view, you need to download kannada fonts from the link section.
Follow on FACEBOOK
Koppal District Police
As per SO 1017 New beat system is introduced in Koppal District. Click on Links to know your area in charge officers ASI/HC/PC

Wednesday, November 23, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 324/2016 ಕಲಂ: 341, 323, 353, 504, 506  ಐ.ಪಿ.ಸಿ:.
ದಿನಾಂಕ. 22-11-2016 ರಂದು ಫಿರ್ಯಾದಿದಾರರಾದ ಈಶ್ವರಪ್ಪ ತಂ/ ಶಿವಪ್ಪ ಚಿಟಗಿ ಇವರು ಫಿರ್ಯಾದಿ ಹಾಜರ ಪಡಿಸಿದ್ದು ದಿನಾಂಕ. 22-11-2016 ರಂದು ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆ.ಎ.37/ಎಫ್.339 ನೇದ್ದರಲ್ಲಿ ಅನೂಸೂಚಿ ಸಂ. 85/86 ರಲ್ಲಿ ನವಲಿ ಗಂಗಾವತಿ ಕರ್ತವ್ಯಕ್ಕೆ ಹೋಗಿದ್ದು, ಇಂದು ಸಾಯಂಕಾಲ 06-15 ಗಂಟೆ ಸುಮಾರಿಗೆ ನವಲಿಯಿಂದ ಗಂಗಾವತಿಗೆ ಪ್ರಯಾಣಿಕರನ್ನು ಕರೆದುಕೊಂಡು ಬರುತ್ತಿರುವಾಗ ಹಣವಾಳ ಬಾಪುರೆಡ್ಡಿ ಕ್ಯಾಂಪ ಮಧ್ಯದಲ್ಲಿ ಆರೋಪಿ ಶ್ರೀನಿವಾಸ ತಂ/ ರಾಮಕೃಷ್ಣ ಸಾ. ಬಾಪುರೆಡ್ಡಿ ಕ್ಯಾಂಪ ಇವನು ಟ್ರ್ಯಾಕ್ಟರ ನಂ. ಕೆ.ಎ.37/ಟಿ.ಎ.5585 ಬಸ್ಸನಿನ ಮುಂದೆ ಸೈಡು ಕೊಡದೇ ಪೋನಿನಲ್ಲಿ ಮಾತನಾಡುತ್ತಾ ನಿಧಾನವಾಗಿ ಹೊರಟಿದ್ದು, ಬಸ್ಸಿನ ಹಾರ್ನ ಹಾಕಿದಾಗ ಟ್ರ್ಯಾಕ್ಟರನ್ನು ಬಸ್ಸಿಗೆ ಅಡ್ಡ ನಿಲ್ಲಿಸಿ ಕೆಳಗೆ ಇಳಿದು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಎದೆಯ ಮೇಲಿನ ಅಂಗಿ ಹಿಡಿದು ಬಸ್ಸಿನಿಂದ ಕೆಳಗೆ ಇಳಿಸಿ ಕೈಯಿಂದ ಮುಖಕ್ಕೆ ಹೊಡೆದಿರುತ್ತಾನೆ. ಹಾಗೂ ಪ್ರಾಣ ಬೆದರಿಕೆ ಹಾಕಿ ನಿನು ಮುಂದೆ ಹೇಗೆ ಹೋಗುತ್ತಿಯಾ ಹೋಗು ಅಂತಾ ಪ್ರಶ್ನೆ ಹಾಕಿ ಧಮಕಿ ಕೊಟ್ಟು ಸುಮಾರು ಒಂದು ತಾಸು ಬಸ್ಸನ್ನು ನಿಲ್ಲಿಸಿ ಪ್ರಯಾಣಿಕರಿಗೆ ತೊಂದರೆ ಕೊಟ್ಟಿದ್ದು ಅಲ್ಲದೆ ಸರಕಾರಿ ಕತ್ರವ್ಯಕ್ಕೆ ಅಡ್ಡಿ ಪಡಿಸಿರುತ್ತಾನೆ. ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 286/2016 ಕಲಂ: 110(ಇ) ಮತ್ತು (ಜಿ) ಸಿ.ಆರ್.ಪಿ.ಸಿ:.

ದಿನಾಂಕ: 22-11-2016 ರಂದು ನಾನು ಸಂಜೆ 04-30 ಗಂಟೆಗೆ ಪೆಟ್ರೋಲಿಂಗ್ ಕುರಿತು ಹೋಗಿದ್ದಾಗ ಕನಕದಾಸ ವೃತ್ತದ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು  ವ್ಯಕ್ತಿಗಳು ನಿಂತು ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಅಸಭ್ಯವಾಗಿ ವರ್ತಿಸುತ್ತಾ ಹೋಗಿ ಬರುವ ಜನರಿಗೆ ಯಾವ ಸೂಳೇ ಮಕ್ಕಳು ಏನ ಸೆಂಟಾ ಹರಕೊಂತಾರ ಯಾವ ಸೂಳೆ ಮಕ್ಕಳೂ ನಮಗೆ ಏನು ಮಾಡುತ್ತಾರೆ ಅಂತಾ ಬೈದಾಡುತ್ತಾ ಅಲ್ಲದೆ ಯಾವ ಸರಕಾರ ಯಾವ ಕಾನೂನು ನನಗೇನು ಮಾಡುತ್ತದೆ ಅಂತಾ ಬೈದಾಡುತ್ತಾ ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿದ್ದು ಆಗ ನಾನು ಅವನರಿಗೆ ಈ ರೀತಿ ಮಾಡುವದು ಸರಿಯಲ್ಲಾ ಸುಮ್ಮನೆ ಹೋಗಿ ಅಂತಾ ಎಚ್ಚರಿಸಿದರೂ ಸಹ ಸದರಿಯವರು ತಮ್ಮ ವರ್ತನೆಯನ್ನು ಹಾಗೆಯೇ ಮುಂದುವರೆಸಿದ್ದರಿಂದ ಸದರಿಯವರನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ಅವರು ತಮ್ಮ ಹೆಸರು 1) ಇಮ್ತಿಯಾಜ್ ತಂದೆ ಜಮೀಲ ಸಾಬ ಅಗರಬತ್ತಿ ವಯ: 26, ಜಾ: ಮುಸ್ಲಿಂ ಉ: ವ್ಯಾಪಾರ ಸಾ: ಮುಲ್ಲಾರ  ಓಣಿ ಕುಷ್ಟಗಿ 2) ಸೈಯದ್ ಖಾಜಾ ತಂದೆ ಸೈಯದ್ ಕತ್ತಲ್ ಸಾಬ ಅತ್ತಾರ್  ವಯ: 29,  ಜಾ: ಮುಸ್ಲಿಂ  ಉ: ವ್ಯಾಪಾರ ಸಾ: ಅಂಬೇಡ್ಕರ ನಗರ ಕುಷ್ಟಗಿ ಅಂತಾ ತಿಳಿಸಿದ್ದು ಇವರು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುವ ಮತ್ತು ಶಾಂತವಿದ್ದ ವಾತಾವರಣವನ್ನುಕದಡುವ ಕೃತ್ಯವನ್ನು ಮಾಡುವ ಸಂಭವ ಕಂಡು ಬಂದಿದ್ದರಿಂದ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕ್ರಮ ಕೈಕೊಂಡಿದೆ.

0 comments:

 
Will Smith Visitors
Since 01/02/2008