Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, November 7, 2016

1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 250/2016 ಕಲಂ: 304(ಬಿ), 498(ಎ), ಸಹಿತ 34 ಐ.ಪಿ.ಸಿ ಮತ್ತು 3, 4 ವರದಕ್ಷಿಣೆ ನಿಷೇಧ ಕಾಯ್ದೆ:.  
ದಿನಾಂಕ 06-11-2016 ರಂದು  ಗಂಟೆಗೆ ಚೆನ್ನಮ್ಮ ಗಂಡ ದಿ: ನಾಗಪ್ಪ   ಪ್ರಭುಶೇಟ್ಟರ್, ವಯಾ 48 ವರ್ಷ, ಫಿರ್ಯಾದಿದಾರಳ ಮಗಳಾದ ಶ್ರೀಮತಿ ಶಿಲ್ಪಾ ಇವಳ ವಿವಾಹವು ಈಗ್ಗೆ 1 ವರ್ಷ 8 ತಿಂಗಳ ಹಿಂದೆ ಆರೋಪಿ ನಂ:01 ಚಂದ್ರಶೇಖರ ಇವರೊಂದಿಗೆ ದಿನಾಂಕ 13-02-2016 ರಂದು ಆಗಿದ್ದು, ಮದುವೆಯ ನಂತರ ಶಿಲ್ಪಾ ಇವಳು ಗಂಡನ ಮನೆಗೆ ಸಂಸಾರವನ್ನು ಮಾಡಲು ಹೋಗಿದ್ದು ಆರೋಪಿತರೆಲ್ಲರೂ ಕೂಡಿಕೊಂಡು ಫಿರ್ಯಾದಿದಾರಳ ಮಗಳಿಗೆ ವರದಕ್ಷಿಣೆಯ ಹಣವನ್ನು ತರುವಂತೆ ಕಿರುಕೊಳವನ್ನು ಕೊಡುತ್ತಾ ಹೊಡೆ ಬಡಿ ಮಾಡುತ್ತಿದ್ದು ಅಲ್ಲದೇ ಆಹಾರ ನೀರು ಸರಿಯಾಗಿ ಕೊಡದೇ ತೊಂದರೆಯನ್ನು ಕೊಡುತ್ತಿದ್ದರಿಂದ ಶಿಲ್ಪಾ ಇವಳು ಸದರಿಯವರ ಕಿರುಕೊಳವನ್ನು ತಾಳಲಾರದೆ ನನ್ನ ಮಗಳು ವಿವಾಹ ವಿಚ್ಚೇಧನೆ ಕೊಡುವಂತೆ ಕೇಳಿ ನಮ್ಮ ಮನೆಯಲ್ಲಿದ್ದು ನಮ್ಮ ಅಳಿಯ ಮತ್ತು ಅವರ ತಂದೆ-ತಾಯಿಯವರ ಕಿರುಕೊಳದಿಂದಲೇ ನನ್ನ ಮಗಳು ಇಂದು ಮಧ್ಯಾಹ್ನ 1-30 ಗಂಟೆಯಿಂದ 2-00 ಗಂಟೆಯ ಅವದಿಯಲ್ಲಿ  ನನ್ನ ಸಾವಿಗೆ ನನ್ನ ಗಂಡ ಮತ್ತು ಮನೆಯವರು ನೀಡುವ ಕಿರುಕೊಳದಿಂದಲೇ ಜೀವನ ಮಾಡಲು ಇಷ್ಟವಿಲ್ಲಾ ಅಂತಾ ಕನ್ನಡದಲ್ಲಿ ಚೀಟಿ ಬರೆದು ಉರುಲು ಹಾಕಿಕೊಂಡು ಮೃತಪಟ್ಟಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 126/2016 ಕಲಂ: 279, 337, 338 ಐ.ಪಿ.ಸಿ:
ದಿನಾಂಕ: 06-11-2016 ರಂದು ತನ್ನ ತಮ್ಮನ ಮಗನ ಜವಳ ಕಾರ್ಯಕ್ರಮ ಬಳ್ಳಾರಿ ಸಮೀಪದ ಎತ್ತಿನ ಬೂದಿಹಾಳ ಹತ್ತಿರದ ಕಟ್ಟೆ ಬಸವೇಶ್ವರ ದೇವಸ್ಥಾನದಲ್ಲಿ ಇದ್ದುದರಿಂದ ತಮ್ಮ ಸಂಬಂದಿಕರೊಂದಿಗೆ ಪರಿಚಯಸ್ಥರನ್ನು ಕರೆದುಕೊಂಡು ತಮಗೆ ಪರಿಚಯಸ್ಥರಾದ ಸುರೇಶ ಕವಲೂರು ಸಾ;ಲಕ್ಕುಂಡಿರವರ 407 ವಾಹನ ನಂ.ಕೆ.ಎ.26 ಎ 5712 ನೇದ್ದನ್ನು ಬಾಡಿಗೆ ಮಾಡಿಕೊಂಡು ಅದರಲ್ಲಿ ಎಲ್ಲರೊಂದಿಗೆ ಹೊರಟಾಗ ಬೆಳಿಗ್ಗೆ 8.20 ಗಂಟೆಗೆ ಅದರ ಚಾಲಕ ಚೆನ್ನಬಸವ ಗುಂಜಳ ಈತನು ವಾಹನವನ್ನು ಅತೀವೇಗವಾಗಿ ಮತ್ತು ತನ್ನ ಮುಂದೆ ಹೊರಟ ಲಾರಿ ನಂ. ಎ.ಪಿ.16 ಟಿ.ಡಬ್ಯೂ.3672 ನೇದ್ದನ್ನು ಗಮನಿಸದೇ ಅಲಕ್ಷ್ಯತನದಿಂದ ಲಾರಿಗೆ ಹಿಂದೆ ಟಕ್ಕರು ಕೊಟ್ಟು ಅಪಘಾತ ಮಾಡಿದಾಗ 407 ವಾಹನದಲ್ಲಿದ್ದ 14 ಜನರಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗೊಳಿಸಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 313/2016 ಕಲಂ: 279, 337 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:. 

ಗಾಯಾಳು ದುರುಗೇಶ ತಂದೆ ಶಿವಪ್ಪ ಮೋತಿಕಟ್ಟಿ, ವಯಸ್ಸು 29 ವರ್ಷ, ಜಾತಿ: ನಾಯಕ ಉ: ಕೂಲಿ ಕೆಲಸ ಸಾ: ಹನುಮನಹಳ್ಳಿ ತಾ: ಗಂಗಾವತಿ.  ದಿನಾಂಕ:- 06-11-2016 ರಂದು ಸಂಜೆ 6:45 ಗಂಟೆಯ ಸುಮಾರಿಗೆ ನಾನು ನೀರನ್ನು ತೆಗೆದುಕೊಂಡು ನನ್ನ ಮನೆಯ ಹತ್ತಿರ ರಸ್ತೆಯ ಎಡಗಡೆ ಬಾಜು ಹೋಗುತ್ತಿರುವಾಗ ನನ್ನ ಹಿಂಭಾಗ ಅಂದರೆ ಸಾಣಾಪೂರು ಕಡೆಯಿಂದ ಒಂದು ಲಾರಿಯ ಚಾಲಕನು ತನ್ನ ಲಾರಿಯನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ ನನಗೆ ಟಕ್ಕರ್ ಕೊಟ್ಟಿದ್ದು,  ಲಾರಿಯಲ್ಲಿದ್ದ ಹಗ್ಗವು ಹೊರಗಡೆ ನೇತಾಡುತ್ತಿದ್ದರಿಂದ ಆ ಹಗ್ಗವು ನನ್ನ ಕಾಲಿಗೆ ಸುತ್ತಿಕೊಂಡು ಎಳೆದುಕೊಂಡು ಮುಂದಕ್ಕೆ ಹೋಗಿದ್ದು, ಇದರಿಂದ ನಾನು ಜೋರಾಗಿ ಕೂಗಾಡಲು ಲಾರಿ ಚಾಲಕನು ಲಾರಿಯನ್ನು ನಿಲ್ಲಿಸಿದ್ದು, ಇದರಿಂದ ನನ್ನ ಎಡಗಡೆ ಚಪ್ಪೆಗೆ ಒಳಪೆಟ್ಟಾಯಿತು. ಆಗ ಅಲ್ಲಿದ್ದ ನನ್ನ ತಮ್ಮನಾದ ಹಂಪಣ್ಣ-26 ವರ್ಷ ಇವನು ಓಡಿ ಬಂದು ನನ್ನನ್ನು ಎಬ್ಬಿಸಿ ಪಕ್ಕಕ್ಕೆ ಕೂಡ್ರಿಸಿದ್ದು, ನೋಡಲಾಗಿ ಅಪಘಾತ ಮಾಡಿದ ಲಾರಿ ನಂಬರ್: ಕೆ.ಎ-01/ ಡಿ-8595 ಅಂತಾ ಇದ್ದು, ಲಾರಿ ಚಾಲಕನು ಲಾರಿಯನ್ನು ಬಿಟ್ಟು ಅಲ್ಲಿಂದ ಓಡಿ ಹೋದನು. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008