Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, November 11, 2016

1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 280/2016 ಕಲಂ:279, 337, 338 ಐ.ಪಿ.ಸಿ.
ಫಿರ್ಯಾಧಿ ಸುಭಾಸ ತಂದೆ ಸಿದ್ದಪ್ಪ ಮುಕ್ಕಣ್ಣನ್ನವರ ಸಾ:ನವನಗರ ಹುನಗುಂದ ಜಿ:ಬಾಗಲಕೋಟ ಇವರು ತನ್ನ ವಯಕ್ತಿಕ ಕೆಲಸದ ನಿಮಿತ್ಯ ಕಾರ ನಂ. ಕೆ..29.ಎನ್.1054  ನೇದ್ದರಲ್ಲಿ  ಅದರ ಚಾಲಕನಾದ ವಿರೇಶ ಸಾ: ಓಂ ಶಾಂತಿ ನಗರ ಹುನಗುಂದ ರವರು ಸದರ ಕಾರನ ಚಾಲಕರಿದ್ದು ಬಿಜಾಪೂರ-ಹೊಸಪೇಟ ಎನ್.ಹೆಚ್.50 ರೋಡ ದೋಟಿಹಾಳ ಕ್ರಾಸ ಹತ್ತಿರ ನಮ್ಮ ಕಾರ ಚಾಲಕನು ಕಾರನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಕ್ರಾಸ ಇರುವುದನ್ನು ಗಮನಿಸದೇ ಹೊರಟು ಕುಷ್ಟಗಿ ಕಡೆಯಿಂದ ಟಾಟಾ ಎ.ಸಿ.. ವಾಹನದ ಚಾಲಕನು ಸಹ ತನ್ನ ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಕ್ರಾಸದಲ್ಲಿ ಹುನಗುಂದ ಕಡೆಯಿಂದ ಬರುವ ವಾಹನವನ್ನು ನೋಡದೇ ಹೋಗುತ್ತಿರುವಾಗ ಎರಡು ವಾಹನಗಳ ಚಾಲಕರು ಮುಖಾ ಮುಖಿ ಟಕ್ಕರಕೊಟ್ಟು ಅಪಘಾತವಾಗಿದ್ದು ಸದರಿ ಅಪಘಾತದಲ್ಲಿ ನನಗೆ ಎಡಗಡೆ ಹಣೆಗೆ ರಕ್ತಗಾಯವಾಗಿದ್ದು, ಬಲಗಡೆಗೆ ಎದೆಗೆ ಒಳಪೆಟ್ಟಾಗಿದ್ದು ಇರುತ್ತದೆ. ನಂತರ ನಮ್ಮ ಕಾರಿನ ಚಾಲಕನಾದ ವಿರೇಶನಿಗೆ ನೋಡಲು ಆತನಿಗೆ ತಲೆಗೆ, ಎದೆಗೆ ಒಳಪೆಟ್ಟುಗಳಾಗಿದ್ದು, ಟಾಟಾ ಎ.ಸಿ.ಇ ವಾಹನವು ಓಳಮಗ್ಗಲಾಗಿ ಬಿದ್ದಿದ್ದು, ಅದರ ನಂಬರ ನೋಡಲು ಕೆ.-37--305 ಅಂತಾ ಇದ್ದು ಅದರ ಚಾಲಕನನ್ನು ವಿಚಾರಿಸಿಲು ತನ್ನ ಹೆಸರು ಯಂಕಪ್ಪ ಸಾ: ಗೋತಗಿ ತಾ: ಕುಷ್ಟಗಿ ಅಂತಾ ಹೇಳಿದ್ದು ಈತನಿಗೆ ನೋಡಲು ಎಡಗಡೆ ತುಟಿಯ, ಮತ್ತು ಬಾಯಿಯ ಹತ್ತಿರ ರಕ್ತಗಾಯವಾಗಿದ್ದು, ಎಡ ಕಿವಿಯ ಮೇಲೆ ಅರಿದು ಭಾರಿ ರಕ್ತಗಾಯವಾಗಿದ್ದು, ಎಡಗೈ ಮೊಣಕೈ ಹತ್ತಿರ ತೆರಚಿದ ಗಾಯ, ಮತ್ತು ಬಲಗಾಲು ಪಾದದ ಹತ್ತಿರ ರಕ್ತಗಾಯವಾಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾಧಿ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 281/2016 ಕಲಂ: 420, 465, 466, 467, 468, 471, 477 ಸಹಿತ 34 ಐ.ಪಿ.ಸಿ  

ಪಿರ್ಯಾದಿದಾರರಾದ ಶಿವಪ್ಪ ತಂದೆ ಸಂಗಪ್ಪ ತಾಳಿಕೋಟಿ ಸಾ.ತಾವರಗೇರಾ ತಾ:ಕುಷ್ಟಗಿ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ಪಿರ್ಯಾದಿಯ ಸಾರಾಂಶವೇನೆಂದರೆ, ಕುಷ್ಟಗಿ ಸೀಮಾದ ಸರ್ವೇ ನಂ-108/1, 10 ಎಕರೆ 27 ಗುಂಟೆ ಈ ಜಮೀನನ್ನು ದಿನಾಂಕ:30-03-2015 ರಂದು ನ್ಯಾಯಾಲಯದಲ್ಲಿ ನನ್ನ ಹೆಸರಿನಲ್ಲಿ ಫೋರ್ಜರಿ ಸಹಿ ಮಾಡಿ ಈ.ಪಿ. ಹಾಕಿದ್ದು ನಂತರ 24-04-2015 ರಂದು ನನ್ನ ಹೆಸರಿನಲ್ಲೊಂದು ಮೆಮೋ ಹಾಕಿಕೊಂಡು ನಾನು ದುಡ್ಡನ್ನು ವಾಪಾಸು ಪಡೆದ ಹಾಗೆ ದಾಖಲಾತಿ ಸೃಷ್ಠಿಸಿ ಅದಕ್ಕೆ ಕೂಡಾ ತಾವೇ ನನ್ನ ನಕಲಿ ರುಜು ಮಾಡಿರುತ್ತಾಗ್ ಈ .ಫ್ ಗೆ ಸಂಬದಪಟ್ಟ ದಾಖಲಾತಿಗೆ ತಾವೇ ಕೊಟ್ಟಿ ಸಹಿಮಾಡಿ ಭೂಮಾಲಿಕರ ಜೊತೆ ಶಾಮೀಲಾಗಿ ತಮಗೆ ಅನುಕೂಲಕರ ರೀತಿಯಲ್ಲಿ ಜಮಿನನ್ನು ನೊಂದಣಿ ಮಾಡಿಸಿಕೊಂಡಿರುತ್ತಾರೆ 2013 ರಲ್ಲಿ ಮಾಡಿಸಿದ ದಾವೆ ಮತ್ತು ರಾಜಿ ಪತ್ರ ಹಾಗು 2015 ರ ಇ.ಪಿ ರದ್ದತಿ ಮೆಮೊ ಈ ಎರಡೂ ಸಾಲಿನ ನನಗೆ ಸಂಬಂದ ದಾಖಲೆಗಳನ್ನು ಕೈ ಬರಹ ತಘ್ನರಿಗೆ ಪರಿಶೀಲನೆಗಾಗಿ ಬೆಂಗಳೂರಿನ ಟ್ರುಥ್ ಲ್ಯಾಬ್ ಗೆ ನಾನೇ ಕಳುಹಿಸಿಕೊಟ್ಟೆ ವರದಿಯಲ್ಲಿ ರಾಜಿ ಪತ್ರದ ದಾಖಲೆಯಲ್ಲಿರುವ ಸಹಿಗಳು ಹಾಗು ಇ.ಪಿ ರದ್ದತಿ ಪತ್ರದ ದಾಖಲೆಗಳಲ್ಲಿರುವ ಸಹಿಯಲ್ಲಿ ವೆತ್ಯಾಸವಿದೆ ಇ.ಫ್ ರದ್ದತಿಯಲ್ಲಿರುವ ಸಹಿಗಳು ಕೊಟ್ಟಿ ಸಹಿ ಎಂದು ಧೃಡಿಕರಿಸಿ ವರದಿ ನೀಡಿರುತ್ತಾರೆ ನನ್ನ ಅಳಿಯ ವಕಿಲನಾದ ಶರಣಪ್ಪ ಮುದ್ದಲಗುಂದಿ ಹಾಗು ಇವರ ಸಂಭದಿಕರಾದ ವೀರನಗೌಡ ತಂ/ಮಲ್ಲಿಕಾರ್ಜುನಗೌಡ ಪಾಟೀಲ ಸಾ/ಸಂಗನಾಳ ತಾ/ಯಲಬುರ್ಗಾ ಹಾಗು ಪರ್ವತರೆಡ್ಡಿ ತಂ/ಮಲ್ಲಿಕಾರ್ಜುನಗೌಡ ಪಾಟೀಲ ಸಾ/ಕೊಪ್ಪಳ ಈ ಇಬ್ಬರು ಸೇರಿಕೊಂಡು ನಾನು ಹಣವನ್ನು ನಗದಾಗಿ ಪಡೆದುಕೊಂಡಿರುವೆ ಎಂದು ಮಾನ್ಯ ನ್ಯಾಯಾಲಯಕ್ಕೆ ಅಫಿಡೆವಿಟ್ ಕೊಟ್ಟು ಹಾಗು ಖರೀದಿ ಪತ್ರದಲ್ಲಿ ಈ ಇಬ್ಬರೇ ಮುಖ್ಯ ಸಾಕ್ಷಿದಾರರಾಗಿ ಈ ಜಮೀನನ್ನು ನೊಂದಣಿ ಮಾಡಿಸಿಕೊಟ್ಟಿರುತ್ತಾರೆ ಈ ಎಲ್ಲಾ ಘಟನೆಯ ಹಿಂದೆ ಈ ಮೂವರ ಒಂದನೇ ಶರಣಪ್ಪ ತಂ/ಸೋಮಪ್ಪ ಮುದ್ದಲಗುಂದಿ ಎರಡನೇ ವೀರನಗೌಡ ಪಾಟೀಲ, ಮೂರನೇ ಪರ್ವತರೆಡ್ಡಿ ಪಾಟೀಲ ಇವರ ಕೈವಾಡವಿದ್ದು ನನಗೆ ಕೋಟ್ಯಂತರ ರೂಪಾಯಿ ವಂಚನೆಮಾಡಿದ್ದಲ್ಲದೇ ನನ್ನ ವಿರುದ್ದ ಇಲ್ಲಸಲ್ಲದ ಅಫಿಡೆವಿಟ್ ನೀಡಿ ನ್ಯಾಯಲಯವನ್ನೂ ಕೂಡ ತಪ್ಪು ದಾರಿಗೆ ಎಳೆದಿದ್ದಾರೆ  ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008