Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, November 14, 2016

1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 285/2016 ಕಲಂ:279, 304(ಎ) ಐ.ಪಿ.ಸಿ.
ದಿನಾಂಕ :-13-11-2016 ರಂದು ಮದ್ಯಾಹ್ನ 2-45 ಗಂಟೆಗೆ ಫಿರ್ಯಾದಿ ಬಾಲಾಜಿ ತಂದೆ ಫಕೀರಪ್ಪ ವಡ್ಡರ ವಯ: 45 ವರ್ಷ ಜಾತಿ: ಭೋವಿ ಉ: ಗೌಂಡಿ ಕೆಲಸ ಸಾ: ಬಿಜಕಲ್ ಹಾ:ವ: ದೋಟಿಹಾಳ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದಿಯ ಸಾರಾಂಸವೆನೆಂದರೆ, ಇಂದು ಮದ್ಯಾಹ್ನ 12-30 ಗಂಟೆಯ ಸುಮಾರಿಗೆ ಪಿರ್ಯಾದಿ ತನ್ನ ಮಗನನ್ನು ಮಾತನಾಡಿಸಿಕೊಂಡು ಬರಲು ನನ್ನ ಹೆಂಡತಿಯಾದ ಜಯಶ್ರೀ ಈಕೆಯನ್ನು ಬುತ್ತಿಯನ್ನು ಕೊಟ್ಟು ಬರಲು ಹೋಗುವ ಸಲುವಾಗಿ  ಬಿಜಕಲ್ ಗ್ರಾಮದ ನನ್ನ  ಸಂಬಂದಿಕನಾದ ಹನಮಪ್ಪ ವಡ್ಡರ ಇತನನ್ನು ಕರೆದು ನನ್ನ ಹೆಂಡತಿಯಾದ ಜಯಶ್ರೀ ಮತ್ತು ಮಗಳಾದ ವಾಣಿ ಈಕೆಯನ್ನು ಬೇವೂರಿಗೆ ಕರೆದುಕೊಂಡು ಹೋಗಿ ತನ್ನ ಮಗನಾದ ಕನಕಮೂರ್ತಿಯನ್ನು ಮಾತನಾಡಿಸಿಕೊಂಡು  ಬರುವ ಸಲುವಾಗಿ ಪಿರ್ಯಾದಿಯು ಹೊಸ ಹಿರೋ ಸ್ಪ್ಲೆಂಡರ್ ಪ್ಲಸ್  ಮೋ.ಸೈ. ಚೆಸ್ಸಿ ನಂ : MBLHA10CGGHH72917  ಮತ್ತು ಇಂಜೀನ್ ನಂ : HA10ERGHH63871 ನೇದ್ದನ್ನು  ತೆಗೆದುಕೊಂಡು ಹೋಗಿ ಬರುವಂತೆ ಹೇಳಿ ಮದ್ಯಾಹ್ನ 12-30 ಗಂಟೆಗೆ ದೋಟಿಹಾಳದಿಂದ ಕಳುಹಿಸಿ ಕೊಟ್ಟಿದ್ದು. ನಂತರ  ಪಿರ್ಯಾದಿಗೆ ತನ್ನ ತಮ್ಮನಾದ ಸಣ್ಣಹನಮಂತ @ ಮಾರುತಿ  ಇತನು  01-00 ಗಂಟೆಯ ಸುಮಾರಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ಹನಮಪ್ಪ ವಡ್ಡರ ಇತನು ಅತ್ತಿಗೆಯಾದ  ಜಯಶ್ರೀ ಮತ್ತು ಮಗಳಾದ ವಾಣಿಯನ್ನು ಕರೆದುಕೊಂಡು ಬೇವೂರಿಗೆ ಹೋಗುತ್ತಿರುವಾಗ ಹನಮಪ್ಪನು ಮೋ.ಸೈ ನ್ನು ಬಿಜಕಲ್ ಮತ್ತು ಟಕ್ಕಳಕಿ ಮದ್ಯದಲ್ಲಿ ಬಿಜಕಲ್ ಸೀಮಾದ ಮಂಟಯ್ಯಸ್ವಾಮಿ ಸಾ : ಟಕ್ಕಳಕಿ ಇವರ ಹೊಲದ ಹತ್ತಿರ ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿದ್ದಕೊಂಡು ರೋಡನಲ್ಲಿರುವ ತೆಗ್ಗನ್ನು ನೋಡದೇ ನಡೆಯಿಸಿದ್ದರಿಂದ ಹಿಂದೆ ಕುಳಿತ ಜಯಶ್ರೀ ಪುಟಿದು ರೋಡನಲ್ಲಿ ಮೋ.ಸೈ. ದಿಂದ ಕೆಳಗೆ ಬಿದ್ದು ಅಪಘಾತವಾಗಿದ್ದು ಸದರಿ ಅಪಘಾತದಿಂದ ಜಯಶ್ರೀ ಈಕೆಗೆ ಹಣೆಗೆ, ಮೂಗಿಗೆ,  ಭಾರಿ ರಕ್ತಗಾಯವಾಗಿ ಕಿವಿಯಿಂದ ರಕ್ತ ಬರುತ್ತಿದ್ದು ಆಕೆಯನ್ನು ಚಿಕಿತ್ಸೆ ಕುರಿತು ಕುಷ್ಟಗಿಯ ಸರ್ಕಾರಿ ಆಸ್ಪತ್ರೆಗೆ 108 ಅಂಬುಲೇನ್ಸ ನಲ್ಲಿ ಕರೆದುಕೊಂಡು ಹೋಗುತ್ತಿದ್ದೇವೆ ಅಂತಾ ಪೋನ್ ಮೂಲಕ ತಿಳಿದ್ದರಿಂದ ನಾನು ಕೂಡಲೇ  ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಷಯ ನಿಜವಿರುತ್ತದೆ. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಚಿಕತ್ಸೆ ಫಲಕಾರಿಯಾಗದೇ ನನ್ನ ಹೆಂಡತಿಯಾದ ಜಯಶ್ರೀ ಇಂದು ಮದ್ಯಾಹ್ನ 01-45 ಗಂಟೆ ಸುಮಾರಿಗೆ  ಮೃತಪಟ್ಟಿದ್ದು.  ಸದರಿ ಮೋ.ಸೈ ಚೆಸ್ಸಿ ನಂ :  MBLHA10CGGHH72917  ಮತ್ತು ಇಂಜೀನ್ ನಂ : HA10ERGHH63871 ನೇದ್ದವನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008