1] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 105/16 ಕಲಂ 87 Karnataka Police Act:.
ದಿನಾಂಕ: 16-12-2016 ರಂದು ಸಾಯಂಕಾಲ
16-00 ಗಂಟೆಗೆ ಠಾಣೆಯಲ್ಲಿದ್ದಾಗ ಕೊಡ್ತಗೇರಿ ಗ್ರಾಮದಲ್ಲಿ ಸಮುಧಾಯದ ಗುಡಿಯ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ
ಬಂದ ಮೇರೆಗೆ ಪಿ.ಎಸ್.ಐ. ರವರು ಇಬ್ಬರು ಪಂಚರನ್ನು
ಕರೆಯಿಸಿ ಠಾಣೆಯಲ್ಲಿದ್ದ ಸಿಬ್ಬಂದಿ ಶಾಂತಪ್ಪ ಎ.ಎಸ್.ಐ. ಹೆಚ್.ಸಿ-11,
83, ಪಿ.ಸಿ-126, 162, 168, 223, 244 ರವರೊಂದಿಗೆ ಹೊರಟು ಹನಮನಾಳ,
ರಂಗಾಪೂರ ದಿಂದ ಕೊಡ್ತಗೇರಿ ಗ್ರಾಮ ತಲುಪಿ ದ್ಯಾಮವ್ವನ ಗುಡಿಯ ಹತ್ತಿರ ಜೀಪ್ ಮತ್ತು ಮೋಟಾರ ಸೈಕಲ
ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಸಮುದಾಯದ ಭವನದ ಹಿಂದೆ ಮರೆಗೆ ನಿಂತು ನೋಡಲಾಗಿ ಜನರು ದುಂಡಾಗಿ
ಕುಳಿತುಕೊಂಡು,
ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವರರನ್ನು ಪಂಚರ ಸಮಕ್ಷಮ ದಾಳಿ ಮಾಡಲು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ 8 ಜನ ಆರೋಪಿತರು
ಸಿಕ್ಕಿ ಬಿದಿದ್ದು. ಇಬ್ಬರು ಆರೋಪಿತರು ಓಡಿ ಹೋಗಿದ್ದು ಸದರಿ ಆರೋಪಿತರು ಜೂಜಾಟಕ್ಕೆ ಉಪಯೋಗಿಸಿದ್ದ
52 ಸ್ಪೇಟ್ ಎಲೆಗಳು ಹಾಗೂ 2590/- ರೂಪಾಯಿಗಳು ನಗದು ಹಣ ಹಾಗೂ ಒಂದು ಪ್ಲಾಸ್ಟಿಕ್ ಚಾಪೆ ಸಿಕ್ಕಿಬಿದಿದ್ದು
ಇಸ್ಪೆಟ್ ಜೂಜಾಟದ ದಾಳಿ ಪಂಚನಾಮೆಯನ್ನು ಜರುಗಿಸಿ ಹಾಗೂ 8 ಜನ ಆರೋಪಿತರು ಮುದ್ದೆಮಾಲು ಸಮೇತ ವಾಪಾಸ್
ಠಾಣೆಗೆ ಬಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 289/16 ಕಲಂ. 143, 147, 148, 323, 324, 506 ಸಹಿತ 149 ಐ.ಪಿ.ಸಿ
ಮತ್ತು 3(1)(10) ಎಸ್.ಸಿ/ಎಸ್.ಟಿ ಕಾಯ್ದೆ:.
ದಿನಾಂಕ 16-12-2016 ರಂದು ಮಧ್ಯಾಹ್ನ 12-30 ಗಂಟೆಗೆ ಪಾಮಪ್ಪ ತಂದೆ ದುರುಗಪ್ಪ ಕಾಳಿ ವಯಸ್ಸು
60 ವರ್ಷ ಜಾ: ಮಾದಿಗ ಸಾ: 18 ನೇ ವಾರ್ಡ್ ಗಾಂದಿನಗರ ಗಂಗಾವತಿ. ರವರು ಠಾಣೆಗೆ ಬಂದು ತಮ್ಮದೊಂದು
ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ 11-12-2016 ರಂದು ಮಧ್ಯಾಹ್ನ 12-00 ಗಂಟೆಯ
ಸುಮಾರಿಗೆ ಫಿರ್ಯಾಧಿದಾರರ ತಮ್ಮನ ಮಗನಾದ ಪಂಪಾವತಿ ಕಾಳಿ ಇವರು ವಡ್ಡರ ಓಣಿಯಲ್ಲಿ ಬರುತ್ತಿರುವಾಗ
ಏಕಾ ಏಕಿ ಬಂದ ಸುಮಾರು 55- ರಿಂದ 60 ಜನ ಮುಸ್ಲಿಂರು ಕಟ್ಟಿಗೆ ಮತ್ತು ಬಡಿಗೆಗಳಿಂದ ಪಂಪಾವತಿ ಕಾಳಿ
ಇವನಿಗೆ ಇವನು ಮುಸ್ಲಿಂ ವಿರೋದಿ ಅಂತಾ ಹೇಳಿ ಆರೋಪಿತರು ಎಲ್ಲರೂ ಸೇರಿ ಹೊಡೆ-ಬಡೆ ಮಾಡಿ ರಕ್ತಗಾಯ
ಮಾಡಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
3] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 290/16 ಕಲಂ. 3 & 7 ಇ.ಸಿ. ಕಾಯ್ದೆ:
ದಿನಾಂಕ: 16-12-2016 ರಂದು 19-00 ಗಂಟೆಗೆ ಶ್ರೀಮತಿ ನಂದಾ ಪಲ್ಲೇದ, ಆಹಾರ ನಿರೀಕ್ಷಕರು, ತಹಶೀಲ್ ಕಾರ್ಯಾಲಯ
ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿಯನ್ನು
ಪಂಚನಾಮೆಯೊಂದಿಗೆ ಹಾಜರ ಪಡಿಸಿದ್ದು ಅದರ ಸಾರಂಶವೇನೆಂದರೆ, ಗಂಗಾವತಿ ನಗರದ ಗಾಳೆಮ್ಮ ಕ್ಯಾಂಪ್,
ಹಿರೇಜಂತಕಲ್ ದಲ್ಲಿ ಆರೋಪಿ ಶ್ರೀಮತಿ ಮುಮತಾಜ ಗಂಡ ಮಹಬೂಬಸಾಬ ಸಾ: ಗಾಳೆಮ್ಮ ಕ್ಯಾಂಪ್,
ಹಿರೇಜಂತಕಲ್, ಗಂಗಾವತಿ ಇವರು ತಮ್ಮ ಮನೆಯಲ್ಲಿ ಆಕ್ರಮವಾಗಿ ಸಾರ್ವಜನಿಕರಿಗೆ ಪಡಿತರ ವ್ಯವಸ್ಥೆಯಲ್ಲಿ ವಿತರಣೆ ಮಾಡುವ
ಅಕ್ಕಿ, ತಾಳೆ ಎಣ್ಣಿ ಮತ್ತು ಉಪ್ಪು ಸಂಗ್ರಹಣೆ ಮಾಡಿರುವುದನ್ನು ಪಂಚರ ಸಮಕ್ಷಮದಲ್ಲಿ ಸದರಿಯವರ
ಮನೆಯಲ್ಲಿ ದಿನಾಂಕ 15-12-2016 ರಂದು ದಾಳಿ ಮಾಡಿ ಸದರಿ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಣೆ
ಮಾಡಿರುವಂತಹ [01] ಅಂ. 25 ಕೆ.ಜಿ. ತೂಕದ 28 ಅಕ್ಕಿ ಚೀಲಗಳು.
ಒಟ್ಟು 07 ಕ್ವಿಂಟಲ್ ಮೊತ್ತ ರೂ. 19,600-00. [02] 04
ಡಬ್ಬಿ
ತಾಳೆ ಎಣ್ಣೆ (40 ಲೀಟರ್). ಒಟ್ಟು ಮೊತ್ತ ರೂ. 1,000-00
[03]
25 ಕೆ.ಜಿ. ತೂಕದ 04 ಪಾಕೇಟ್ ಉಪ್ಪು. ಕಿ.ರೂ.200-00. ಹೀಗೆ ಒಟ್ಟು ಅಂ.ಕಿ.ರೂ. 20,800-00 ಬೆಲೆ ಬಾಳುವ ಪಡಿತರ ಅಕ್ಕಿ, ತಾಳೆ ಎಣ್ಣಿ ಮತ್ತು ಉಪ್ಪು
ಇವುಗಳನ್ನು ದಿನಾಂಕ 15-12-2016 ರಂದು 13-30 ಗಂಟೆಯಿಂದ 15-00 ಗಂಟೆಯವರೆಗೆ ಜಪ್ತಿ ಪಡಿಸಿ ಸದರಿ
ಧಾನ್ಯವನ್ನು ಕೆ.ಎಫ್.ಸಿ.ಎಸ್.ಸಿ. ಗೋದಾಮಿಗೆ ಸಾಗಿಸಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment