Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, December 19, 2016

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 246/16 ಕಲಂ 87 Karnataka Police Act:.
ದಿ :18.12.2016  ರಂದು 06.00 ಪಿ.ಎಮ್ ಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಮಂಗಳಾಪುರ ಗ್ರಾಮದ ಹೊರತಟ್ನಾಳ ರಸ್ತೆಯ ಹಿರೆಹಳ್ಳ ದಂಡೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 06 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್,ಐ ರವರು  ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಪಂಚರ ಸಮಕ್ಷಮ ದಾಳಿ ಮಾಡಿದ್ದು 04 ಜನರು ಸಿಕ್ಕಿಬಿದ್ದಿದ್ದು, 2 ಜನರು ಓಡಿ ಹೋಗಿದ್ದು, ಸಿಕ್ಕಿಬಿದ್ದವರಿಂದ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ-1250=00 ರೂ, 52 ಇಸ್ಪೇಟ್ ಎಲೆ, ಒಂದು ಹಾಳೆಯ ಚೀಲ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಸಿಕ್ಕ 04 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಹೀಗೆ ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
2] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ: 117/16 ಕಲಂ. 87 Karnataka Police Act:.

ಫಿರ್ಯಾಧಿದಾರರಾದ ಶ್ರೀ ಶಂಕರಪ್ಪ ಎಲ್. ಪಿ.ಎಸ್. ಅಳವಂಡಿ ಪೊಲೀಸ್ ಠಾಣೆ ರವರು, ಸಿ.ಪಿ.. ಸಾಹೇಬರು ಕೊಪ್ಪಳ ಗ್ರಾಮೀಣ ವೃತ್ತ ಹಾಗೂ ಸಿಬ್ಬಂದಿ, ಪಂಚರು ಕೂಡಿಕೊಂಡು ಇಂದು ದಿನಾಂಕ: 18-12-2016 ರಂದು ಸಾಯಂಕಾಲ 5-10 ಗಂಟೆಗೆ ಠಾಣಾ ವ್ಯಾಪ್ತಿಯ ಮುಲರ್ಾಪುರ ಸೀಮಾದ ಬಸವರಾಜ ಹಿರೇಮಠ ಸಾ: ಮುಲರ್ಾಪುರ ಇವರ ಹೊಲದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಹಣವನ್ನು ಕಟ್ಟಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟವನ್ನು ಆಡುತ್ತಿರುವಾಗ ದಾಳಿ ಮಾಡಿದ್ದು, 07 ಜನ ಆರೋಪಿತರು ಸಿಕ್ಕಿದ್ದು, ಸಿಕ್ಕ ಆರೋಪಿತರಿಂದ ಜೂಜಾಟಕ್ಕೆ ಬಳಸಿದ ನಗದು ಹಣ ರೂ. 40,400=00 ಗಳನ್ನು, 52 ಇಸ್ಪೇಟ್ ಎಲೆಗಳನ್ನು, ಹಾಗೂ ಒಂದು ಪ್ಲಾಸ್ಟೀಕ್ ಬರ್ಕಾವನ್ನು ಜಪ್ತ ಮಾಡಿ ಸ್ಥಳದಲ್ಲಿ ಪಂಚನಾಮೆಯನ್ನು ತಯಾರಿಸಿ ವಾಪಾಸ್ ಠಾಣೆಗೆ ಸಂಜೆ 7-20 ಗಂಟೆಗೆ ಬಂದು ಒಂದು ವರದಿಯನ್ನು, ಮೂಲ ಪಂಚನಾಮೆ ಮತ್ತು ಮುದ್ದೇಮಾಲನ್ನು ಹಾಗೂ ಆರೋಪಿತರನ್ನು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008