1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 288/16 ಕಲಂ 143,
147, 148, 323, 324, 341, 395, 436, 504, 506 ಸಹಿತ 149 ಐ.ಪಿ.ಸಿ.
ಇಂದು ದಿನಾಂಕ
14-12-2016 ರಂದು 1430 ಗಂಟೆಗೆ ಖಾಜಾಸಾಬ ತಂ. ಮುಸ್ತಫಾ
ವಯಸ್ಸು 45 ವರ್ಷ ಸಾ. 26 ನೇ ವಾರ್ಡ ಹೆಚ್.ಆರ್.ಎಸ್ ಕಾಲೊನಿ, ಗಂಗಾವತಿ ರವರು ತಮ್ಮದೊಂದು
ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ 11-12-2016 ರವಿವಾರ ರಾತ್ರಿ 8-00 ಗಂಟೆಗೆ
ಫಿರ್ಯಾದಿದಾರರು ಚಂದ್ರಪ್ಪ ಆಸ್ಪತ್ರೆಗೆ ಮತ್ತು ಔಷಧಿ
ಸಲುವಾಗಿ ಹೋದಾಗ ನನಗೆ ಏಕಾಏಕಿ ಈ ಕೆಳಗೆ ತೋರಿಸಿರುವ ವ್ಯಕ್ತಿಗಳು ನನ್ನನ್ನು ತಡೆದು ರಾಡಿನಿಂದ
ಬಡೆದು ನನ್ನ ದ್ವಿಚಕ್ರ ವಾಹನ ಸಂಖ್ಯೆ: ಕೆಎ37ಎಬಿ6108 ಸುಟ್ಟು ಆಸ್ಪತ್ರೇ ಚಿಕಿತ್ಸೆಗೆ ಹಾಗೂ ಔಷಧಿ
ಸಲುವಾಗಿ ಇಟ್ಟುಕೊಂಡಿದ್ದ ನನ್ನ ಜೇಬಿನಲ್ಲಿದ್ದ 10 ಸಾವಿರ ರೂಪಾಯಿಗಳನ್ನು ವೆಂಕಟೇಶ ತಂ. ಆಂಜನೇಯ ಸಾ. ಹೊಸಳ್ಳಿ ಇತನು ತೆಗೆದುಕೊಂಡು ಕೊರಳಿನಲ್ಲಿರುವಂತಹ
10 ಗ್ರಾಂ ಬಂಗಾರದ ಚೈನನ್ನು ಕಿತ್ತುಕೊಂಡು ಮಾರಕಾಸ್ತ್ರಗಳಿಂದ ಕಬ್ಬಿಣದ ರಾಡುಗಳಿಂದ ಹೊಡೆದು ಮೊಬೈಲ್
ತೆಗೆದುಕೊಂಡು ಹಾಗೂ ಅವಾಚ್ಯ ಶಬ್ಧಗಳಿಂದ ಲೇ ಸಾಬ ಸುಳೆಮಗನೆ ನಿನಗೆ ತುಂಡು ತುಂಡಾಗಿ ಮುಗಿಸಿ ನಿನಗೆ
ತುಂಡು ತುಂಡಾಗಿ ಕತ್ತರಿಸುತ್ತೇನೆ ಎಂದು ಹೇಳಿದ್ದು, ನಾನು ಅಲ್ಲಿಂದ ನನ್ನ ಜೀವ ಉಳಿಸಿಕೊಂಡು ಓಡಿ
ಹೋಗಿರುತ್ತೇನೆ. 01) ವೆಂಕಟೇಶ ತಂ. ಆಂಜನೇಯ ಸಾ.
ಹೊಸಳ್ಳಿ ಹಾಗೂ ಇನ್ನಿತರ 100 ರಿಂದ 150 ಜನರ ಗುಂಪು ಏಕಾಎಕಿ ದಾಳಿ ಮಾಡಿ ಧಾಂದಲೆ ಮಾಡಿ ಭಯದ ವಾತಾವರಣ
ಸೃಷ್ಟಿ ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ. ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿ
ಫಿರ್ಯಾದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
2] ಕೂಕನೂರ ಪೊಲೀಸ್ ಠಾಣೆ ಗುನ್ನೆ ನಂ: 144/16 ಕಲಂ. 87
Karnataka Police Act.
ದಿನಾಂಕ:14-12-2016
ರಂದು 4-00 ಪಿಎಂಕ್ಕೆ ತಳಕಲ್ ಗ್ರಾಮದ ದುರ್ಗಮ್ಮ ಗುಡಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್
ಜೂಜಾಟದ ನಡೆದ ಮಾಹಿತಿ ಬಂದ ಪ್ರಕಾರ ಪಿ.ಎಸ್.ಐ. ಕೂಕನೂರು ಠಾಣೆ ಹಾಗೂ ಸಿಬ್ಬಂದಿಯವರು ಇಬ್ಬರೂ ಪಂಚರ
ಸಮಕ್ಷಮ ಸಿಬ್ಬಂದಿಯೊಂದಿಗೆ 5-00 ಪಿಎಂಕ್ಕೆ ತಳಕಲ್ ಗ್ರಾಮದ ದುರ್ಗಮ್ಮನ ಗುಡಿ ಮುಂದಿನ ಸಾರ್ವಜನಿಕ
ಸ್ಥಳದಲ್ಲಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, ಸದರಿ ಆರೋಪಿತರನ್ನು ವಶಕ್ಕೆ
ಪಡೆದುಕೊಂಡಿದ್ದು, ಸಿಕ್ಕಿಬಿದ್ದ ಆರೋಪಿತರಿಂದ ಹಾಗೂ ಜೂಜಾಟದ ಕಣದಿಂದ ಒಂದು ಪ್ಲಾಸ್ಟೀಕ್ ಬರ್ಕಾ,
52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 16,000=00 ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ
ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು, ಕಾರಣ, ಸದರಿಯವರ ಮೇಲೆ
ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 224/16 ಕಲಂ 379 ಐ.ಪಿ.ಸಿ.
ದಿನಾಂಕ
14-12-2016 ರಂದು ಸಂಜೆ 6-30 ಗಂಟೆಗೆ ಫಿರ್ಯಾಧಿದಾರರಾದ
ಅನೀಲ್ ತಂದೆ ಪಾಂಡುರಂಗಸಾ ಹಬೀಬ್ ಸಾ: ಶ್ರೀರಾಮ ಕಾಲೋನಿ ಭಾಗ್ಯನಗರ ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ
ಸಾರಾಂಶವೇನೆಂದರೆ. ದಿನಾಂಕ 17-10-216 ರಂದು ¸ಸಂಜೆ 5-30 ಗಂಟೆಯ ಸುಮಾರಿಗೆ ತನ್ನ ಹೆಸರಿನಲ್ಲಿರುವ
ಹಿರೋ ಹೆಚ್ ಎಫ್ ಡಿಲಕ್ಸ್ ಮೋಟಾರ ಸೈಕಲ್ ನಂ KA 37 Y 5408 ನೇದ್ದನ್ನು ಭಾಗ್ಯ ನಗರ ರೈಲ್ವೆ ಗೇಟ್
ಹತ್ತಿರ ಗುಪ್ತಾ ಅಪಾರ್ಟಮೆಂಟ್ ಎದುರಿಗೆ ನಿಲ್ಲಿಸಿ ತಮ್ಮ ಅಂಗಡಿಗೆ ಹೋಗಿ ತನ್ನ ಕೆಲಸವನ್ನ ಮುಗಿಸಿಕೊಂಡು
ವಾಪಸು ಸಂಜೆ 6-30 ಗಂಟೆಯ ಸುಮಾರಿಗೆ ಬಂದು ನೋಡಿದಾಗ ತನ್ನ ಮೊಟಾರ ಸೈಕಲ್ ಕಾಣಲಿಲ್ಲಾ, ನಂತರ ತಾನು
ಗಾಭರಯಾಗಿ ಸುತ್ತಾಮುತ್ತಾ ಹುಡುಕಾಡಿದರೂ ಕಾಣಲಿಲ್ಲಾ, ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು,
ಇರುತ್ತದೆ ಅಂತಾ ನೀಡಿದ ಫಿರ್ಯಾಧಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment