ದಿನಾಂಕ: 23-12-2016 ರಂದು ಮದ್ಯಾಹ್ನ
03-05 ಗಂಟೆಯ ಸುಮಾರಿಗೆ ಹಿರೇಮ್ಯಾಗೇರಿ ಸೀಮಾದ ಶರಣಪ್ಪ ತಂದೆ ಬಸವಂತಪ್ಪ ಉಳ್ಳಾಗಡ್ಡಿ ಈವರ
ಹೊಲದ ಹತ್ತಿರ ಸಾರ್ವಜನಿಕ ಸ್ಥಳ ನಾಲಾದಲ್ಲಿ (ಸರುವು) ನಲ್ಲಿ ಆರೋಪಿತರೆಲ್ಲರೂ ಕೂಡಿಕೊಂಡು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ಮಾಡಿ ಹಿಡಿದಿದ್ದು 4 ಜನರು ಸಿಕ್ಕಿ ಬಿದ್ದಿದ್ದು 03 ಜನ ಆರೋಪಿತರು ಓಡಿ ಹೋಗಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 720=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು, ಒಂದು ಪ್ಲಾಸ್ಟೀಕ ಬರ್ಕಾ
ಸಿಕ್ಕಿದ್ದು
ಇರುತ್ತದೆ. ಇದಕ್ಕೆ ಮೂಲ ಇಸ್ಪೀಟ ದಾಳಿ ಪಂಚನಾಮೆಯನ್ನು ಲಗತ್ತಿಸಿ ನಿವೇದಿಸಿಕೊಳ್ಳಲಾಗಿದೆ.
2] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ: 120/16 ಕಲಂ 78(3) Karnataka Police Act.
ದಿನಾಂಕ:
23-12-2016 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಆರೋಪಿತನು ಬೆಟಗೇರಿ ಗ್ರಾಮದ ಬಿ.ಎಸ್.ಎನ್.ಎಲ್
ದೂರವಾಣಿ ಕೇಂದ್ರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ನಿರತನಾಗಿದ್ದಾಗ, ಪಿಯರ್ಾದಿದಾರರು
ತಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ ಮಟಕಾ ಜೂಜಾಟದ ದಾಳಿ ಮಾಡಿ, ಮಟಕಾ ಜೂಜಾಟದಲ್ಲಿ ನಿರತನಾಗಿದ್ದ
ಆರೋಪಿತನಿಂದ ಮಟಕಾ ಜೂಜಾಟದ ಸಾಮಗ್ರಿಗಳನ್ನು ಹಾಗೂ ನಗದು ಹಣ 900=00 ರೂ.ಗಳನ್ನು ಜಪ್ತ ಮಾಡಿಕೊಂಡು
ಪಂಚನಾಮೆಯನ್ನು ಪೂರೈಸಿಕೊಂಡು, ನಂತರ ಆರೋಪಿತನಿಗೆ ಮಟಕಾ ನಂಬರ ಬರೆದ ಪಟ್ಟಿಯನ್ನು ಯಾರಿಗೆ ಕೋಡುತ್ತಿಯಾ
ಅಂತಾ ವಿಚಾರಿಸಿದಾಗ ಪಟ್ಟಿಯನ್ನು ತನ್ನ ಹತ್ತಿರವೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದು ಇರುತ್ತದೆ.
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 335/2016 ಕಲಂ 9(B)(1)(b) ಸ್ಪೋಟಕ ವಸ್ತುಗಳ
ಕಾಯ್ದೆ 1884:
ದಿನಾಂಕ:- 23-12-2016 ರಂದು ಸಂಜೆ 6:30 ಗಂಟೆಗೆ ಶ್ರೀ ಪ್ರಕಾಶ
ಮಾಳಿ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಸ್ವಂತ ಫಿರ್ಯಾದಿಯೊಂದಿಗೆ ಮೂಲ ಪಂಚನಾಮೆ, ಆರೋಪಿ,
ಮುದ್ದೇಮಾಲನ್ನು ಸಲ್ಲಿಸಿದ್ದು, ದಿನಾಂಕ:- 23-12-2016 ರಂದು ಠಾಣೆ ವ್ಯಾಪ್ತಿಯ ವೆಂಕಟಗಿರಿ ಗ್ರಾಮದ
ಸರಕಾರಿ ಜಮೀನು ಸರ್ವೆ ನಂ: 24 ರಲ್ಲಿ ಕ್ವಾರಿಯನ್ನು ಗುತ್ತಿಗೆ ಮಾಡುವ ಕಮಲ್ ಕುಮಾರ ಇವರು ಮಾಹಿತಿ
ನೀಡಿದ ಪ್ರಕಾರ ಸದರಿ ಕ್ವಾರಿಯಲ್ಲಿ ಅನಧಿಕೃತವಾಗಿ ಇಬ್ಬರು ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ
ಸ್ಪೋಟಕ ವಸ್ತುಗಳನ್ನು ಉಪಯೋಗಿಸಿ ಕಲ್ಲುಗಳನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಅಂತಾ ನೀಡಿದ ಮಾಹಿತಿ
ಮೇರೆಗೆ ಕಮಲಕುಮಾರ ಹಾಗೂ ಸಿಬ್ಬಂದಿ ಮತ್ತು ಪಂಚರೊಂದಿಗೆ ಸಂಜೆ 4:30 ಗಂಟೆಗೆ ಸ್ಥಳದ ಮೇಲೆ ದಾಳಿ
ಮಾಡಿ ಸ್ಪೋಟಕ ವಸ್ತುಗಳನ್ನು ಇಟ್ಟುಕೊಂಡಿದ್ದಂತಹ [1] ಪರಸಪ್ಪ ತಂದೆ ಫಕೀರಪ್ಪ ಬುನ್ನಟ್ಟಿ, 42 ವರ್ಷ ಜಾತಿ: ನಾಯಕ, ಉ: ಒಕ್ಕಲತನ ಸಾ: ಉಡುಮಕಲ್
ತಾ: ಗಂಗಾವತಿ [2] ಹನುಮೇಶ ತಂದೆ ಫಕೀರಪ್ಪ ಹಿರೆಕುರುಬರ, 25 ವರ್ಷ ಜಾತಿ: ಕುರುಬರ, ಉ: ಒಕ್ಕಲತನ
ಸಾ: ವೆಂಕಟಗಿರಿ, ತಾ: ಗಂಗಾವತಿ ಇವರನ್ನು ಹಿಡಿದು ಅವರಿಂದ ಸುಮಾರು 3 ಕೆ.ಜಿ. ಯಷ್ಟು ಅಮೋನಿಯಮ್
ನೈಟ್ರೀಟ್ ಹಾಗೂ ಒಂದು ಹಿಡಿಯಷ್ಟು ಜಿಲಿಟಿನ್ ವೈರ್ ಹಾಗೂ 3 ಸಲಿಕೆಗಳು, 3 ಸುತ್ತಿಗೆಗಳು, 3 ಕಬ್ಬಿಣದ
ಹಾರಿಗಳು ಮತ್ತು ಟ್ರಾಕ್ಟರ್ ನಂಬರ್ ಕೆ.ಎ-37/ಟಿ.ಬಿ-1499 ಹಾಗೂ ಟ್ರಾಲಿ ನಂ: ಕೆ.ಎ-37/ಟಿ.ಬಿ-1500
ಸಿಕ್ಕಿದ್ದು ಸದರಿ ಇಬ್ಬರು ವ್ಯಕ್ತಿಯಗಳ ಅವರ ಹತ್ತಿರ ಸಿಕ್ಕ ಸ್ಪೋಟಕ ವಸ್ತುಗಳ ಬಗ್ಗೆ ಯಾವುದಾದರೂ
ಅಧಿಕೃತವಾದ ಪರವಾನಿಗೆ ಅಥವಾ ದಾಖಲಾತಿ ವಿಚಾರಿಸಲು ಅವರು ತಮ್ಮ ಹತ್ತಿರ ಯಾವುದೇ ಅಧಿಕೃತ ಪರವಾನಿಗೆ
ಇರುವುದಿಲ್ಲಾ. ಇವುಗಳನ್ನು ಅನಧಿಕೃತವಾಗಿ ಉಪಯೋಗಿಸುತ್ತಿರುವುದಾಗಿ ತಿಳಿಸಿದರು. ಪ್ರಕರಣ ದಾಖಲು
ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 107/2016 ಕಲಂ: 279, 304(ಎ), 283 ಐ.ಪಿ.ಸಿ:.
ದಿನಾಂಕ: 23-12-2016 ರಂದು
ಸಾಯಾಂಕಾಲ 19-30 ಗಂಟೆಗೆ ಆರೋಪಿ ಮಂಜುನಾಥ @ ಮಂಜಪ್ಪ ಈತನು ತನ್ನ ಹೊಂಡಾ ಶೈನ್ ಮೋಟಾರ್ ಸೈಕಲ್ ಚೆಸ್ಸಿ
ನಂ: ME4JC36JDET041659, ಹಾಗೂ ಇಂಜನ್ ನಂ: JC36ET7070018 ನೇದ್ದನ್ನು ಅತೀವೇಗ ಹಾಗೂ ಆಲಕ್ಷತನದಿಂದ
ನಡೆಸಿಕೊಂಡು ಹನಮಸಾಗರದ ಕುಷ್ಟಗಿ ಸರ್ಕಲ್ ಈಚೆ ಕುಷ್ಟಗಿ ಕಡೆಗೆ ಲಾರಿ ಚಾಲಕನು ತನ್ನ ಲಾರಿ ನಂ: ಎ.ಪಿ-04/ವಾಯ್-2708
ನೇದ್ದನ್ನು ರಸ್ತೆಯ ಎಡಬದಿಗೆ ಅರ್ಧ ರೋಡಿನಲ್ಲಿ ಲಾರಿ ನಿಂತಿದ್ದು, ಅದಕ್ಕೆ ಯಾವುದೇ ಲೈಟ್ ವಗೈರೆ
ಹಾಕದೇ ನಿಲ್ಲಿಸಿದ್ದು, ಹಾಗೂ ಯಾವುದೇ ಮುನ್ಸೂಚನೆ, ಸುರಕ್ಷತಾ ಕ್ರಮಗಳಮನ್ನು ಕೈಗೊಳ್ಳದೇ ರಸ್ತೆಯಲ್ಲಿ
ನಿಲ್ಲಿಸಿ ಹೋಗಿದ್ದು, ಹಿಂದಿನಿಂದ ಮಂಜುನಾಥ @ ಮಂಜಪ್ಪನು ತನ್ನ ಮೋಟಾರ್ ಸೈಕಲ್ಲನ್ನು ಅತೀವೇಗ ಹಾಗೂ
ಆಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯಲ್ಲಿ ನಿಲ್ಲಿಸಿದ ಲಾರಿಯನ್ನು ಗಮನಿಸದೇ ಹಿಂದಿನಿಂದ ಲಾರಿಗೆ
ಟಕ್ಕರಕೊಟ್ಟು ಅಪಘಾತಪಡಿಸಿ ರೋಡಿನಲ್ಲಿ ಬಿದ್ದಿದ್ದು, ಆತನಿಗೆ ಎದೆಗೆ ಹಾಗೂ ಬಾಯಿಗೆ ಪೆಟ್ಟಾಗಿದ್ದು,
ನಾಲಿಗೆ ಕಚ್ಚಿ ಗಾಯವಾಗಿದ್ದು, ಮಾತನಾಡುವ ಸ್ಥಿತಿಯಲ್ಲಿರಲಿಲ್ಲ, ನಂತರ ಮಂಜುನಾಥ @ ಮಂಜಪ್ಪನನ್ನು
ಫಿರ್ಯಾದಿ ಹಾಗೂ ಫಿರ್ಯಾದಿಯ ಮಗ ಪರಸಪ್ಪನು ಕೂಡಿ ಒಂದು ಖಾಸಗಿ ವಾಹನದಲ್ಲಿ ಹನಮಸಾಗರ ಸರಕಾರಿ ಆಸ್ಪತ್ರೆಗೆ
ಕರೆದುಕೊಂಡು ಹೋಗಿ ಅಲ್ಲಿ ವೈಧ್ಯರು ಇಲ್ಲದ ಕಾರಣ ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಮಂಜುನಾಥ @ ಮಂಜಪ್ಪನನ್ನು
ಆಸ್ಪತ್ರೆಗೆ ಸೇರಿಕೆ ಮಾಡಲು ವೈಧ್ಯರು ಪರೀಕ್ಷಿಸಿ ಮಂಜುನಾಥ @ ಮಂಜಪ್ಪ ಮೃತಪಟ್ಟಿರುತ್ತಾನೆ ಅಂತಾ
ತಿಳಿಸಿದ್ದು, ನಂತರ ಫಿರ್ಯಾದಿದಾರರು ತಮ್ಮ ಮಗನನ್ನು ಅಲ್ಲಿಯೇ ಬಿಟ್ಟು ಠಾಣೆಗೆ ಬಂದಿದ್ದು, ಕಾರಣ
ಲಾರಿಯನ್ನು ರಸ್ತೆಯಲ್ಲಿ ನಿಲ್ಲಿಸಿ ಅದಕ್ಕೆ ನಿಲುಗಡೆಯ ಲೈಟ್ ಹಾಕದೇ ರಸ್ತೆ ನಿಯಮಗಳನ್ನು ಪಾಲಿಸದೇ
ನಿಲ್ಲಿಸಿದ ಮತ್ತು ಮಂಜುನಾಥ @ ಮಂಜಪ್ಪನು ತನ್ನ ವಾಹನವನ್ನು ಅತೀವೇಗ ಹಾಗೂ ಆಲಕ್ಷತನದಿಂದ ನಡೆಸಿ
ಅಪಘಾತ ಪಡಿಸಿ ಮೃತಪಟ್ಟಿದ್ದು ಇವರಿಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ
ಫಿರ್ಯಾದಿ ಅದೆ.
0 comments:
Post a Comment