ದಿ :24.12.2016 ರಂದು 4.00 ಪಿ.ಎಮ್ ಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಹಿರೇಸೂಳಿಕೇರಿ ಗ್ರಾಮ ಸೀಮಾದ
ಗುಡ್ಡದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 07 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ
ತೊಡಗಿದ್ದಾಗ ಪಿ.ಎಸ್,ಐ ರವರು ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಪಂಚರ ಸಮಕ್ಷಮ
ದಾಳಿ ಮಾಡಿದ್ದು 04 ಜನರು ಸಿಕ್ಕಿಬಿದ್ದಿದ್ದು, 03 ಜನರು ಓಡಿ ಹೋಗಿದ್ದು, ಸಿಕ್ಕಿಬಿದ್ದವರಿಂದ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ. 1750=00 ರೂ, 52 ಇಸ್ಪೇಟ್ ಎಲೆ, ಒಂದು ಹಾಳೆಯ ಚೀಲ ಇವುಗಳನ್ನು
ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಸಿಕ್ಕ 04 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಹೀಗೆ ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ
ಜರುಗಿಸಿದ್ದು ಇರುತ್ತದೆ.
2] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 211/16 ಕಲಂ 143, 147, 148, 456, 363, 323, 506(2), 511 ಸಹಿತ
149 ಐ.ಪಿ.ಸಿ:.
ದಿನಾಂಕ 24-12-2016 ರಂದು
ರಾತ್ರಿ 9-30 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರನ್ನು ಹಾಜರ ಪಡಿಸಿದ್ದು
ಅದರ ಸಾರಾಂಶವೆನೆಂದರೆ, ದಿನಾಂಕ: 22-12-2016 ರಂದು ರಾತ್ರಿ ವೇಳೆ ಫಿರ್ಯಾದಿದಾರರು ಕಾಸನಕಂಡಿ ಗ್ರಾಮದ
ಸೀಮಾದಲ್ಲಿರುವ ಶ್ರೀ ಹೆಚ್.ಆರ್.ಚೆನ್ನಕೇಶವ ಫಾರ್ಮಹೌಸದಲ್ಲಿ ಕಾವಲು ಕಾಯತ್ತಿರುವಾಗ ದಿನಾಂಕ 23/12/2016
ರಂದು ಮದ್ಯರಾತ್ರಿ 2-00 ಗಂಟೆಯಿಂದ 3-00 ಗಂಟೆಯ ಅವದಿಯಲ್ಲಿ ಸುಮಾರು 15 ರಿಂದ
20 ಜನರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕೈಯಲ್ಲಿ ಚಾಕು ಬಡಿಗೆ ಮಾರಕಾಸ್ತ್ರಗಳನ್ನು ಹಿಡಿದುಕೊಂಡು
ಸದರ ಫಾರ್ಮ ಹೌಸಿಗೆ ಬಂದು ಫಿರ್ಯಾದಿದಾರರಿಗೆ ಬೇರೆಕಡೆಗೆ ಗಮನ ಸೆಳೆದು ಕೆಲವರು ಫಿರ್ಯಾದಿದಾರನಿಗೆ
ಹಿಂದಿನಿಂದ ಬಂದು ಹಿಡಿದು ಮಾತನಾಡದಂತೆ ಬಾಯಿ ಮುಚ್ಚಿ ಕೈಗಳನ್ನು ಹಗ್ಗದಿಂದ ಕಟ್ಟಿ ಸದರ ಫಾರ್ಮ ಹೌಸದಲ್ಲಿಯ
ರೂಮಗಳಲ್ಲಿ ಹೊಕ್ಕು ಹುಡುಕಾಡಿದ್ದು ಏನು ಸಿಗದ್ದಕ್ಕೆ ನಂತರ ಫಿರ್ಯಾದಿಗೆ ಹಣ, ಬಂಗಾರ ಎಲ್ಲಟ್ಟಿರುವಿರಿ
ಎಂದು ಕಿರಿ, ಕಿರಿ ಮಾಡಿ ಫಿರ್ಯಾದಿಗೆ ಕೈ ಯಿಂದ ಹೊಡಿ ಬಡಿ ಮಾಡಿದ್ದು ಅಲ್ಲದೆ, ಅಲ್ಲಿಂದ ಫಿರ್ಯಾದಿಗೆ
ಸುಮಾರು ಒಂದು ಕಿ: ಮೀಟರ ದೂರದವರೆಗೆ ಕರೆದುಕೊಂಡು ಹೋಗಿ ಅಲ್ಲಿ ಅವನಿಗೆ ನಾವು ಬಂದ ಬಗ್ಗೆ
ನೀನು ಯಾರಿಗಾದರೂ ಹೇಳಿದರೆ ನಿನಗೆ ಬಿಡುವದಿಲ್ಲ ಸಾಯಿಸುತ್ತೇವೆ ಎಂದು ಜೀವದ ಬೇದರಿಕೆ ಹಾಕಿ ಹೋಗಿರುತ್ತಾರೆ.
ಪ್ರಕರರಣ ದಾಖಲ್ ಮಾಡಿಕೊಂಡು ತನಿಖೆ ಕೈ ಗೊಳ್ಳಲಾಗಿದೆ.
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 303/16 ಕಲಂ 379 ಐ.ಪಿ.ಸಿ:
ದಿನಾಂಕ: 24-12-2016 ರಂದು ರಾತ್ರಿ 8-45 ಗಂಟೆಗೆ ಕುಷ್ಟಗಿ ಪಿ.ಎಸ್.ಐ ಠಾಣೆಗೆ
ಹಾಜರಾಗಿ ತಮ್ಮದೊಂದು ವರದಿ, ಹಾಗೂ ಜಪ್ತಿ ಪಂಚನಾಮೆ ಒಂದು ಗ್ರಾನೈಟ್ ಕಲ್ಲು ಲೋಡ್ ಇದ್ದ ಒಪನ್ ಟವರಸ್ ಲಾರಿ ನಂ: ಕೆ.ಎ-25/ಸಿ-2799 ನೇದ್ದನ್ನು ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ತಾವು ಮತ್ತು ಠಾಣೆಯ ಸಿಬ್ಬಂದಿಯವರಾದ ಪಿ.ಸಿ-109,
ಅಮರೇಶ ಪಿ.ಸಿ-116, ಸಂಗಮೇಶ ಪಿ.ಸಿ-117 ಶ್ರೀಧರ ಮತ್ತು ಪಿ.ಸಿ-161 ಪ್ರಶಾಂತ ಮತ್ತು ಪಿಸಿ-24 ಬಸವರಾಜ
ರವರನ್ನು ಹಾಗೂ ಪಂಚರಾದ 1] ಮಲ್ಲೇಶಗೌಡ ತಂದೆ ಚನ್ನನಗೌಡ ಪೊಲೀಸ್ ಪಾಟೀಲ್ ವಯಾ: 65 ವರ್ಷ ಜಾತಿ:
ಲಿಂಗಾಯತ ಉ:ಟೇಲರ್ ಕೆಲಸ ಸಾ: ಹಳೇ ಬಜಾರ ಕುಷ್ಟಗಿ 2] ಮಹ್ಮದ ರಫಿಕ್ ತಂದೆ ಖಾಸಿಂಸಾಬ ಗೈಬಣ್ಣನವರ
ವಯಾ: 25 ವರ್ಷ ಜಾತಿ: ಮುಸ್ಲಿಂ ಉ: ಡ್ರೈವರ ಕೆಲಸ ಸಾ: ಮುಲ್ಲಾರ ಓಣಿ ಕುಷ್ಟಗಿ ರವರನ್ನು ಬರಮಾಡಿಕೊಂಡು
ಅವರಿಗೆ ಬಾತ್ಮಿ ವಿಷಯ ತಿಳಿಸಿ ನಂತರ ಎಲ್ಲರೂ ಕೂಡಿ ನಮ್ಮ ಸರ್ಕಾರಿ ಜೀಪ ನಂ. ಕೆ.ಎ-37 ಜಿ-292 ನೇದ್ದರಲ್ಲಿ
ಅಡವಿಭಾವಿ ಸೀಮಾದಲ್ಲಿ ಹೋಗಿ ಕಾಯುತ್ತಾ ನಿಂತಾಗ ರಾತ್ರಿ 7-30 ಗಂಟೆ ಸುಮಾರಿಗೆ ಒಂದು ಲಾರಿಯು ಮೆಣಸಗೇರಿ
ತಾಂಡಾ ಕಡೆಯಿಂದ ಬಂದಿದ್ದು ಆಗ ನಾವು ರಸ್ತೆಯಲ್ಲಿ ಹೋಗಿ ಸದರಿ ಲಾರಿಗೆ ಕೈ ಮಾಡಿ ನಿಲ್ಲಿಸಲಾಗಿ ಸದರಿ
ಲಾರಿ ಚಾಲಕನು ಲಾರಿಯನ್ನು ನಮಗಿಂತ ಸುಮಾರು 100 ಮೀಟರ್ ದೂರದಲ್ಲಿಯೇ ನಿಲ್ಲಿಸಿ ಲಾರಿಯಿಂದ
ಇಳಿದು ಕತ್ತಲಲ್ಲಿ ಓಡಿ ಹೋದನು. ಆಗ ನಾವು ಸದರಿ ಲಾರಿಯ ಹತ್ತಿರ ಹೋಗಿ ನೋಡಲಾಗಿ ಇದು ಓಪನ್ ಟವರಸ್
ಲಾರಿಯಾಗಿದ್ದು ಸದರಿ ಲಾರಿಯಲ್ಲಿ 2 ಗ್ರಾನೈಟ್ ಕಲ್ಲುಗಳ ಲೋಡ ಇದ್ದು ಸದರಿ ಲಾರಿಯ ನಂ: ಕೆ.ಎ-25/ಸಿ-2799
ಇದ್ದು ಲಾರಿಯ ಮುಂದೆ ಮಾಲತೇಶ ಅಂತಾ ಇಂಗ್ಲೀಷ ಅಕ್ಷರದಲ್ಲಿ ಬರೆದಿದ್ದು ಲಾರಿಯು ಚಾಕಲೇಟ್ ಮತ್ತು
ಹಳದಿ ಬಣ್ಣದ್ದು ಇರುತ್ತದೆ. ಸದರಿ ಲಾರಿಯಲ್ಲಿದ್ದ ಗ್ರಾನೈಟ್ ಕಲ್ಲುಗಳನ್ನು ಪರಿಶೀಲಿಸಿ ನೋಡಲಾಗಿ
ಮೊದಲನೇ ಕಲ್ಲು ಸುಮಾರು 1 ½ ಮೀಟರ್ ಅಗಲ, ಸುಮಾರು 2 ಮೀಟರ್ ಉದ್ದ, ಸುಮಾರು 1 ½ ಮೀಟರ್ ಎತ್ತರ ಇರುತ್ತದೆ.
ಇದರ ಅಂ. ಕಿ. ಅಂದಾಜು ಕಿಮ್ಮತ್ತು 15,000=00 ರೂ. ಗಳಾಗಬಹುದು. ಎರಡನೇ ಗ್ರಾನೈಟ್ ಕಲ್ಲನ್ನು ಪರಿಶೀಲಿಸಿ
ನೋಡಲಾಗಿ ಸುಮಾರು ಸುಮಾರು 1 ½ ಮೀಟರ್ ಅಗಲ, ಸುಮಾರು 3 ಮೀಟರ್ ಉದ್ದ, ಸುಮಾರು 1 ½ ಮೀಟರ್ ಎತ್ತರ
ಇರುತ್ತದೆ. ಇದರ ಅಂ. ಕಿ. ಅಂದಾಜು ಕಿಮ್ಮತ್ತು 20,000=00 ರೂ. ಗಳಾಗಬಹುದು. ಸದರಿ ಲಾರಿಯ ಚಾಲಕನು
ಗ್ರಾನೈಟ್ ಕಲ್ಲುಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾಗ ನಮ್ಮನ್ನು ನೋಡಿ ಲಾರಿಯನ್ನು ಅಲ್ಲಿಯೇ
ಬಿಟ್ಟು ಓಡಿ ಹೋಗಿದ್ದು ನಂತರ ಸದರಿ ಲಾರಿಯನ್ನು ಅದರಲ್ಲಿನ ಗ್ರಾನೈಟ್ ಕಲ್ಲುಗಳ ಸಮೇತ
ಇಂದು ದಿನಾಂಕ: 24-12-2016 ರಂದು ರಾತ್ರಿ 7-45 ಗಂಟೆಯಿಂದ 8-15 ಗಂಟೆಯವರೆಗೆ ವಿವರವಾದ ಪಂಚನಾಮೆಯನ್ನು
ತಯಾರಿಸಿಕೊಂಡು ಜಪ್ತುಮಾಡಿಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದೆ.
0 comments:
Post a Comment