ದಿನಾಂಕ:
18-12-2016 ರಂದು ಸಾಯಂಕಾಲ 6-20 ಗಂಟೆ ಸುಮಾರಿಗೆ ಗಾಯಾಳು ನೂರುದ್ದೀನ್ ಮತ್ತು ಆತನ ಸ್ನೇಹಿತನಾದ
ಸಂಗಪ್ಪ ಗುತ್ತಿ ಇಬ್ಬರೂ ಕೂಡಿಕೊಂಡು ಕುಕನೂರು-ಗುದ್ನೆಪ್ಪಮಠ ರಸ್ತೆಯ ಎಡಬದಿ ನಡೆದುಕೊಂಡು ಗುದ್ನೇಶ್ವರ
ಜಾತ್ರೆಗೆ ಹೋರಟಿದ್ದಾಗ ನವೋದಯ ಶಾಲೆಯ ಹತ್ತಿರ ಮೋಟಾರ್ ಸೈಕಲ್ ಚಾಲಕನು ದ್ಯಾಂಪುರ ಕಡೆಯಿಂದ ಗುದ್ನೆಪ್ಪಮಠ
ಕಡೆಗೆ ಅತೀಜೋರಾಗಿ ಮತ್ತು ಬೇಜವಾಬ್ದಾರಿತನದಿಂದ ಚಲಾಯಿಸಿಕೊಂಡು ಬಂದು ನೂರುದ್ದೀನ್ ಇತನಿಗೆ ಹಿಂದುಗಡೆಯಿಂದ
ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದು, ಇದರಿಂದಾಗಿ ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಸದರಿ
ಅಪಘಾತಪಡಿಸಿದ ಮೋಟಾರ್ ಸೈಕಲ್ ಚಾಲಕ ನಾಗರಾಜ ಉಳವತ್ತಿ ಇವನ ವಿರುದ್ದ ಕಾನೂನು ಕ್ರಮ ಜರುಗಿಸಿರಿ ಅಂತಾ
ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 225/16 ಕಲಂ. 143, 147, 148, 324, 326, 504, 506 ಸಹಿತ 149
ಐ.ಪಿ.ಸಿ:
ದಿನಾಂಕ: 22.12.2016 ರಂದು ಮದ್ಯಾನ 2:00 ಗಂಟೆಗೆ ಫಿರ್ಯಾದಿದಾರರಾದ
ಶ್ರೀ ದಸ್ತಗೀರ ತಂದೆ ಖಾಸಿಂಸಾಬ ಕೂಕನೂರ ಸಾ: ಪಲ್ಟಾನ್ ಗಲ್ಲಿ ಕೊಪ್ಪಳ ರವರು ಫಿರ್ಯಾದಿಯನ್ನು ಹಾಜರುಪಡಿಸಿದ್ದು
ಸಾರಾಂಶವೇನೆಂದರೆ, ದಿನಾಂಕ: 17.12.2016 ಸಾಯಂಕಾಲ 6:00 ಗಂಟೆಗೆ ನಾನು ಹಾಗೂ ನನ್ನ ತಮ್ಮ ಖಲೀಲ್
ಇಬ್ಬರೂ ಕೂಡಿಕೊಂಡು ಪಲ್ಟಾನ್ ಓಣಿಯ ಜಂಡಾ ಕಟ್ಟೆಯ ಹತ್ತಿರ ನಿಂತುಕೊಂಡಿದ್ದಾಗ ಅಲ್ಲಿ ಕೆಲವು ಹೆಣ್ಣುಮಕ್ಕಳು
ಬೈದಾಡುವ ಶಬ್ದಕೇಳಿ ಅಲ್ಲಿ ನೋಡಲು ಕೆಲವು ಯುವಕರು ಹುಡಿಗಿಯರನ್ನು ಚುಡಾಯಿಸುವುದು ಮತ್ತು ಅವರ ಹಿಂದೆ
ಹೋಗುವುದು ಮಾಡುತ್ತಿದ್ದು ಆಗ ನನ್ನ ತಮ್ಮ ಖಲೀಲ್ ಇತನು ಆ ಯುವಕರ ಹತ್ತಿರ ಹೋಗಿ ಈ ರೀತಿ ಹುಡುಗಿಯರಿಗೆ
ಚುಡಾಯಿಸುವುದು ತಪ್ಪು ಇನ್ನೊಮ್ಮೆ ನಮ್ಮ ಓಣಿಯಲ್ಲಿ
ತಿರುಗಾಡಿದರೇ ನಿಮ್ಮ ವಿರುದ್ದ ಪೊಲೀಸ ಠಾಣೆಗೆ ಕಂಪ್ಲೇಂಟ್ ಕೊಡುತ್ತೇನೆ ಅಂತಾ ಹೇಳಿಕಳುಹಿಸಿದನು.ನಂತರ
ರಾತ್ರಿ 8:30 ಗಂಟೆಯ ಸುಮಾರಿಗೆ ನಾನು ಹಾಗೂ ನನ್ನ ತಮ್ಮ ಖಲೀಲ್, ಫಿರೋಜ್, ಸದ್ದಾಂ 04 ಜನರು ಕೂಡಿಕೊಂಡು
ಗವಿಶಿದ್ದೇಶ್ವರ ಮೈದಾನದಲ್ಲಿ ಕುಳಿತುಕೊಂಡಿದ್ದಾಗ ಬೆಳಿಗ್ಗೆ ಹುಡುಗಿಯರಿಗೆ ಚುಡಾಯಿಸಿದ ಹುಡುಗರು
ಮತ್ತು ಇತರೆ ಸುಮಾರು 08 ಜನರು ತಮ್ಮ ಕೈಯಲ್ಲಿ ಕಬ್ಬಿಣದ ರಾಡು, ಕಟ್ಟಿಗೆ, ಪಂಚ್, ಚಾಕು ಸಮೇತ ಹಿಡಿದುಕೊಂಡು ನಮ್ಮ ಹತ್ತಿರ ಬಂದು ಅದರಲ್ಲಿದ್ದ ಒಬ್ಬ ಅಶ್ರಫ್
ಹುಸೇನಿ ತಂದೆ ಮಾಜಿದ್ ಹುಸೇನಿ ಇವನು ಕೈಯಲ್ಲಿ ಕಬ್ಬಿಣದ ಪಂಚ್ ಹಾಕಿಕೊಂಡು ಎನಲೇ ಮಗನೆ ಹೆಣ್ಣುಮಕ್ಕಳ
ಮುಂದೆ ದೊಡ್ಡ ಹಿರೋ ಆಗಲು ಹೋಗುತೀಯೆನು ಅಂತಾ ಹೇಳಿ ಪಂಚ್ ನಿಂದ ನನ್ನ ತಮ್ಮ ಖಲೀಲ್ ಇತನ ಎಡಗಡೆ ದವಡೆಗೆ
ನಾಲ್ಕುಬಾರಿ ಹೊಡೆದನು. ಅವನ ಹಿಂದೆ ಇದ್ದ ಇನ್ನೊಬ್ಬರು ನನ್ನ ತಮ್ಮನಿಗೆ ಗಟ್ಟಿಯಾಗಿ ಹಿಡಿದುಕೊಂಡರು
ಮತ್ತು ಇನ್ನೊಬ್ಬ ಮುಶ್ರಫ್ ಹುಸೇನಿ [ಮುಷ್ಷಿ] ತಂದೆ ಮಾಜೀದ್ ಹುಸೇನಿ ಇವನು ಕಾಲಿನಿಂದ ನನ್ನ ತಮ್ಮನ
ಹೊಟ್ಟೆಗೆ ಹೊಡೆದು ಎ ಸೂಳೆಮಗನೆ ನಮಗೆ ಕಂಪ್ಲೇಂಟ್ ಕೊಡ್ತಿನಂತ ಹೆದರಿಸ್ತಿಯ ಇವತ್ತು ನಿನಗೆ ಮುಗಿಸುತ್ತೇನೆ
ಎಂದು ಹೇಳಿ ಕಟ್ಟಿಗೆಯಿಂದ ನನ್ನ ಕಾಲುಗಳಿಗೆ ಹೊಡೆದನು. ನಂತರ ಅವನ ಬಳಿಯಿದ್ದ ಚಾಕು ತೆಗೆದು ನನ್ನ
ತಮ್ಮನ ಹೊಟ್ಟೆಗೆ ತಿವಿಯಲು ಬಂದನು. ಆಗ ನನ್ನ ತಮ್ಮ ಚೀರಾಡಲು ಅಲ್ಲಿಯೇ ಇದ್ದ ಫಿರೋಜ್ ಇತನು ಬಿಡಿಸಲು
ಬಂದಿದ್ದು ಅವನಿಗೂ ಸಹ ಅವರು ಹೊಡೆದು ನಮ್ಮ ನಡುವೆ ಬರಬೇಡಾ ನಾವು ಯಾರು ಎಂದು ನಿನಗೆ ಗೊತ್ತಿಲ್ಲಾ
ಅಂತಾ ಎಳೆದಾಡಿ ಅವನ ಕೈಗೆ ಚಾಕುವಿನಿಂದ ಹೊಡೆದರು. ಅವರ ಹಿಂದೆ ಬಂದ ಖಾಸಿಂ, ಸೋನು, ಶಫೀ, ಮತ್ತು
ಇತರರು ನನ್ನ ತಮ್ಮನಿಗೆ ಬಿಡಿಸಲು ಬಂದ ನನಗೆ ಹಾಗೂ ಫಿರೋಜ್, ಸದ್ದಾಂ ಇವರಿಗೆ ಅವಾಚ್ಯ ಶಬ್ದಗಳಿಂದ
ಬೈಯುತ್ತಾ ಹೆದರಿಸಿದರು. ಅಷ್ಟರಲ್ಲಿ ಖಾಸಿಂ ಎನ್ನುವಾತ ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಸದ್ದಾಂ
ಇತನಿಗೆ ಕುತ್ತಿಗೆಯ ಸ್ವಲ್ಪ ಮೇಲೆ ಹೊಡೆದನು. ಅಷ್ಟರಲ್ಲಿ ಮೈದಾನದಲ್ಲಿದ್ದ ಜನರು ಬಂದು ನೋಡಿ ಜಗಳ
ಬಿಡಿಸಿದರು. ಆಗ ಗಾಯಗೊಂಡ ನನ್ನ ತಮ್ಮ ಖಲೀಲ್ ಹಾಗೂ ಫಿರೋಜ್, ಸದ್ದಾಂ ಇವರಿಗೆ ಖಾಸಗಿ ಆಸ್ಪತ್ರೆಗೆ
ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿದೇನು. ನಂತರ ಅವರಿಗೆ ತಮಗಾದ ಗಾಯಗಳು ನೋವಾಗಿದ್ದರಿಂದ
ಅವರನ್ನು ದಿನಾಂಕ: 20.12.2016 ರಂದು ಜಿಲ್ಲಾ ಆಸ್ಪತ್ರೆ ಕೊಪ್ಪಳಕ್ಕೆ ಕರೆದುಕೊಂಡು ಬಂದು ಚಿಕಿತ್ಸೆ
ಕೊಡಿಸಿದೇನು. ನಂತರ ನನ್ನ ತಮ್ಮ ಖಲೀಲ್ ಇತನಿಗೆ ದವಡೆಯ
ಎಲುಬು ಮುರಿದಿರುವ ಕಾರಣ ಹೆಚ್ಚಿನ ಚಿಕಿತ್ಸೆ ಕುರಿತು ಧಾರವಾಡದ ಎಸ.ಡಿ.ಎಮ್ ಆಸ್ಪತ್ರೆಗೆ ದಾಖಲು
ಮಾಡಿ ಮತ್ತು ಘಟನೆಯ ಬಗ್ಗೆ ಮನೆಯಲ್ಲಿ ವಿಚಾರಿಸಿ ತಡವಾಗಿ ದೂರು ನೀಡಲು ಬಂದಿದ್ದು ಇರುತ್ತದೆ. ಪ್ರಕರಣ
ದಾಖಲಿಸಿ ಕೈಗೊಂಡಿದ್ದು ಇರುತ್ತದೆ.
0 comments:
Post a Comment