Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, December 10, 2016

1] ಕೂಕನೂರು ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ: 136/2016 ಕಲಂ: 87 Karnataka Police Act.
ದಿನಾಂಕ:09-12-2016 ರಂದು 3.30 ಪಿಎಂಕ್ಕೆ ಕೂಕನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕವಳಕೇರಾ ಗ್ರಾಮದ ಮಸೀದಿ ಮುಂದಿನ ಬಯಲು ಜಾಗೆಯಲ್ಲಿ ಇಸ್ಪೀಟ್ ಜೂಜಾಟದ ನಡೆದ ಮಾಹಿತಿ ಬಂದ ಪ್ರಕಾರ ಪಿ.ಎಸ್.. ಕುಕನೂರರವರು ಹಾಗೂ ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 4-45 ಪಿಎಂಕ್ಕೆ ಕವಳಕೇರಾ ಗ್ರಾಮದ ಮಸೀದಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, 1] ಶರಣಪ್ಪ ತಂದೆ ಸಿದ್ರಾಮಪ್ಪ ಆಡೀನ್, ಸಾ:ಕವಳಕೇರಾ, 2] ಭೀಮಪ್ಪ ತಂದೆ ಶಂಕ್ರಪ್ಪ ಸಂಗನಾಳ, ಸಾ:ಕವಳಕೇರಾ,3] ಸಣ್ಣೆಪ್ಪ ತಂದೆ ಬುಡ್ಡಪ್ಪ ನರೆಗಲ್, ಸಾ:ಕವಳಕೇರಾ,4] ದೇವಪ್ಪ ತಂದೆ ವೀರಪ್ಪ ಕಡದಳ್ಳಿ, ಸಾ:ತೊಂಡಿಹಾಳ, 5] ಕೆಂಚಪ್ಪ ತಂದೆ ರಾಮಪ್ಪ ಮುದ್ಲಾಪೂರ, ಸಾ:ಕವಳಕೇರಾ, 6] ಹನುಮಪ್ಪ ತಂದೆ ಹುಲಗಪ್ಪ ಮಾದರ, ಸಾ: ಕವಳಕೇರಾ, 7] ಈರಪ್ಪ ತಂದೆ ಹನುಮಪ್ಪ ಮಾದರ, ಸಾ:ಕದ್ರಳ್ಳಿ, 8] ಶೇಖಪ್ಪ ತಂದೆ ಬಾಲಪ್ಪ ಹರಿಜನ, ಸಾ:ಕವಳಕೇರಾ, ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಸಿಕ್ಕಿಬಿದ್ದ ಆರೋಪಿತರಿಂದ ಹಾಗೂ ಜೂಜಾಟದ ಕಣದಿಂದ ಒಂದು ಪ್ಲಾಸ್ಟಿಕ್ ಬರಕಾ, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 3400=00 ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 281/2016 ಕಲಂ: 78 (3)  Karnataka Police Act.
ದಿನಾಂಕ 09-12-2016 ರಂದು ಸಾಯಂಕಾಲ 5-30 ಗಂಟೆಯ ಸುಮಾರಿಗೆ  ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಳ್ಕಿಹಾಳ ಗ್ರಾಮದಲ್ಲಿ ಅಗಸಿ ಮುಂದೆ ಸಾರ್ವಜನಿಕರ ಸ್ಥಳದಲ್ಲಿ ಮಟಕಾ ಜೂಜಾಟ ತೊಡಗಿದ್ದ ಆರೋಪಿತನ ಮೇಲೆ ಪಿ.ಎಸ್.ಕಾರಟಗಿ ಠಾಣೆ ರವರು ಮತ್ತು ಸಿಬ್ಬಂದಿವರು ಪಂಚರ ಸಮಕ್ಷದಲ್ಲಿ ದಾಳಿ ಮಾಡಿದಾಗ ಆರೋಪಿ 1 ದೇವರಾಜ ತಂದಿ ಲಿಂಗಪ್ಪ ಆಗೋಲಿ ವಯಾ-24ವರ್ಷ ಜಾ.ಲಿಂಗಾಯತ ಉ-ಕಿರಾಣಿ ಅಂಗಡಿ ಸಾ. ಹುಳ್ಕಿಹಾಳ ಇತನು ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದವನ ಕಡೆಯಿಂದ ರೂ. 840=00 ಗಳನ್ನು ಮತ್ತು ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಆರೋಪಿ ನಂ 1 ಈತನು ತಾನು ಬರೆದ ಪಟ್ಟಿ ಮತ್ತು ಹಣವನ್ನು ಆರೋಪಿ ನಂ 2 ಸಂಗಯ್ಯಸ್ವಾಮಿ ರಡ್ಡೆರ ಓಣಿ ಕನಕಗಿರಿ ತಾ. ಗಂಗಾವತಿ ಈತನಿಗೆ ಕೊಡುವುದಾಗಿ ಒಪ್ಪಿಕೊಂಡಿದ್ದು ಇರುತ್ತದೆ. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 295/2016 ಕಲಂ: 279, 337, 338 .ಪಿ.ಸಿ.
ದಿನಾಂಕ: 09-12-2016 ರಂದು ಮದ್ಯಾಹ್ನ 1-45 ಗಂಟೆಗೆ ಮಂಜುನಾಥ ತಂದೆ ಪರಶುರಾಮ ಬುರಲಿ ವಯಾ: 22 ವರ್ಷ ಜಾತಿ: ಕುರುಬರು ಉ: ಲಾರಿ ನಂ: ಕೆ.ಎ-28/ಸಿ-2499 ನೇದ್ದರ ಚಾಲಕ ಸಾ: ಬೆಕಮದಿನ್ನಿ ತಾ: ಹುನಗುಂದ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸದರ ಪಿರ್ಯಾದಿಯ ಸಾರಾಂಶವೆನೆಂದರೆ, ಫಿರ್ಯಾದಿದಾರರು ನಿನ್ನೆ ದಿನಾಂಕ: 08-12-2016 ರಂದು ಲೋಕಾಪೂರದಿಂದ ಕಡಿ ಲೋಡ ಮಾಡಿಕೊಂಡು ಹೊಸಪೇಟೆ ಹತ್ತಿರ ಜಿಂದಾಲ್ ಗೆ ತೆಗೆದುಕೊಂಡು ಹೋಗುವ ಸಲುವಾಗಿ ಕುಷ್ಟಗಿ ಮಾರ್ಗವಾಗಿ ಬರುತ್ತಿರುವಾಗ ರಾತ್ರಿ 11-45  ಗಂಟೆಯ ಸುಮಾರಿಗೆ ಕ್ಯಾದಿಗುಪ್ಪಾ ಕ್ರಾಸ್ ನಲ್ಲಿ ರಸ್ತೆಯ ಪಕ್ಕದಲ್ಲಿ ನಮ್ಮ ಲಾರಿಯನ್ನು ನಿಲ್ಲಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಚೆಕ್ ಪೊಸ್ಟ ನಲ್ಲಿ ನಮ್ಮ ಲಾರಿಯ ಟಪಾಲುಗಳನ್ನು ತೋರಿಸಿ ಬರುವ ಸಲುವಾಗಿ ಹೋಗಿದ್ದಾಗ ನಮ್ಮ ಲಾರಿಯ ಹಿಂದೆ ಒಂದು ಲಾರಿಯ ಚಾಲಕನು ತನ್ನ ಲಾರಿಯನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಮ್ಮ ಲಾರಿಯ ಹಿಂದಿನ ಬಲಗಡೆ ಬಾಡಿಗೆ ಟಕ್ಕರ ಕೊಟ್ಟನು. ಇದರಿಂದ ನಮ್ಮ ಲಾರಿಯ ಹಿಂದಿನ ಬಲಗಡೆ ಭಾಗ ಜಖಂಗೊಂಡಿದ್ದು ಇತ್ತು. ನಂತರ ನಮ್ಮ ಲಾರಿಗೆ ಟಕ್ಕರ ಮಾಡಿದ ಲಾರಿ ನಂಬರ ನೋಡಲಾಗಿ ಎ.ಪಿ-02/ಯು-1818 ಅಂತಾ ಇದ್ದು ಅದರ ಚಾಲಕನನ್ನು ವಿಚಾರಿಸಲಾಗಿ ಆತನ ಹೆಸರು ಖಾಜಾಹುಸೇನ ತಂದೆ ಶೇಕ್ಷಾವಲಿ ವಯಾ: 48 ವರ್ಷ ಜಾತಿ: ಮುಸ್ಲಿಂ ಸಾ: ಮುಲ್ಲಾರ ಪೇಟೆ ಬಳ್ಳಾರಿ ಅಂತಾ ತಿಳಿಸಿದ್ದು ಆತನಿಗೆ ಯಾವುದೇ ಗಾಯವಾಗಿರಲಿಲ್ಲ. ನಂತರ ಅದರಲ್ಲಿದ್ದ ಕ್ಲೀನರ್ ನನ್ನು ವಿಚಾರಿಸಲಾಗಿ ಆತನ ಹೆಸರು ಶೇಖಬಾಷಾ ತಂದೆ ಶೇಖವಲಿ ಶೇಖ ವಯಾ: 45 ವರ್ಷ ಜಾತಿ: ಮುಸ್ಲಿಂ ಉ: ಕ್ಲೀನರ್ ಕೆಲಸ ಸಾ: ಮುಂಡರಗಿ ತಾ: ಜಿಲ್ಲಾ: ಬಳ್ಳಾರಿ ಅಂತಾ ಹೇಳಿದ್ದು ಆತನಿಗೆ ಬಲಗಾಲ ಮೊಣಕಾಲ ಕೆಳಗೆ ರಕ್ತಗಾಯವಾಗಿ ಮುರಿದಂತಾಗಿದ್ದು ಅಂತಾ ತಿಳಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 331/2016 ಕಲಂ 323, 324, 504, 506 ಸಹಿತ 34 ಐ.ಪಿ.ಸಿ.  ಮತ್ತು 3(1)(x) SC/ ST. Act. 1989.
ದಿನಾಂಕ:- 09-12-2016 ರಂದು ರಾತ್ರಿ 10:00 ಗಂಟೆಗೆ ಫಿರ್ಯಾದಿದಾರರಾದ ಮಹೇಶ ತಂದೆ ತಿಮ್ಮಪ್ಪ ವಯಸ್ಸು: 25 ವರ್ಷ ಜಾತಿ: ಮಾದಿಗ, ಉ: ಕೂಲಿಕೆಲಸ ಸಾ: 4ನೇ ವಾರ್ಡ ರಾಘವೇಂದ್ರ ಕಾಲೋನಿ ಶ್ರೀರಾಮನಗರ, ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ನುಡಿ ಹೇಳೀಕೆ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ." ನಿನ್ನೆ ದಿನಾಂಕ: 08-12-2016 ರಂದು ಶ್ರೀರಾಮನಗರ ಗ್ರಾಮದಲ್ಲಿ ಶ್ರೀ ಸುಬ್ರಮಣ್ಯಂ ದೇವರ ಜಾತ್ರೆಯ ಸಮಯದಲ್ಲಿ ಒಬ್ಬ ವ್ಯಕ್ತಿ ವಿವಿಧ ಸಾಮಾನುಗಳನ್ನು ಇಟ್ಟುಕೊಂಡು ಅವುಗಳಿಗೆ ಗುರಿ ಇಟ್ಟು ಹೊಡೆದರೆ ಹಣ ಕೊಡುವದಾಗಿ ಹೇಳುತ್ತಾ ಆಟ ಆಡಿಸುತ್ತಿದ್ದನು. ಜನರು ಆಟವನ್ನು ಆಡುತ್ತಿದ್ದು ನಾನು ಹೋಗಿ ನೋಡುತ್ತಾ ನಿಂತಿದ್ದೆನು. ಆಟದಲ್ಲಿ ನಮ್ಮೂರ ಮುದುಕಪ್ಪ ತಂದೆ ಈರಪ್ಪ @ ದೇವಪ್ಪ 40 ವರ್ಷ ಜಾತಿ: ಗಂಗಾಮತ, : ಕೂಲಿಕೆಲಸ ಸಾ: ಶ್ರೀರಾಮನಗರ ಈತನು ಸಹ ಹಣ ಕಟ್ಟಿ ಆಟವಾಡುತ್ತಿದ್ದನು. ಅಷ್ಟರಲ್ಲಿ ಅಂದರೆ ರಾತ್ರಿ 9:00 ಗಂಟೆಯ ಸುಮಾರಿಗೆ ಆಟ ಆಡಿಸುತ್ತಿದ್ದ ವ್ಯಕ್ತಿಯು ಒಮ್ಮಲೇ ತನ್ನ ಅಂಗಡಿಯನ್ನು ಬಂದು ಮಾಡಿ ಸಾಮಾನುಗಳನ್ನು ತಗೆದುಕೊಂಡು ಹೊರಟು ಹೋದನು. ಇದರಿಂದ ಅಲ್ಲಿದ್ದ ನನ್ನನ್ನು ನೋಡಿ ಮುದುಕಪ್ಪನು  ಲೇ ಮಾದಿಗ ಸೂಳೆ ಮಗನೇ ನೀನು ಅಂಗಡಿಯವನಿಗೆ ಏನು ಹೇಳಿದಿಯಾ ನಾನು ಆಟದಲ್ಲಿ ಬಹಾಳ ಹಣ ಕಳೆದುಕೊಂಡಿದ್ದೇನೆ ಅವನು ಯಾಕೆ ಅಂಗಡಿ ತಗೆದುಕೊಂಡು ಹೋದ ಅಂತಾ ಬಾಯಿ ಬಂದಂತೆ ಜಾತಿ ಎತ್ತಿ ಬೈದಾಡಹತ್ತಿದನು. ಆಗ ನಾನು ಅಂಗಡಿಯವನಿಗೆ ಏನು ಹೇಳಿಲ್ಲಾ ಅಂತಾ ಹೇಳಿದರೂ ಸಹ ಕೇಳದೇ ನಾನು ಆಟದಲ್ಲಿ ಕಳೆದುಕೊಂಡ ಹಣವನ್ನು ನೀನು ಕೊಡಲೇ ಎಂದು ಅಲ್ಲಿಯೇ ಬಿದ್ದಿದ್ದ ಒಂದು ಕಟ್ಟಿಗೆಯನ್ನು ತಗೆದುಕೊಂಡು ನನ್ನ ತಲೆಗೆ ಹೊಡೆದನು. ಇದರಿಂದ ನನಗೆ ರಕ್ತ ಗಾಯವಾಗಿದ್ದು ಆಗ ಅಲ್ಲಿದ್ದ ಲಕ್ಷ್ಮಪ್ಪ ತಂದೆ ತಿಮ್ಮಪ್ಪ ಈತನು ಬಂದು ಜಗಳ ಬಿಡಿಸಿದನು. ನಂತರ ನನಗೆ ಶ್ರೀರಾಮನಗರ ಸಮುಧಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು ನಾನು ರಾತ್ರಿ ಆಸ್ಪತ್ರೆಯಲ್ಲಿ ದಾಖಲಾಗಿ ಇಂದು ದಿನಾಂಕ: 09-12-2016 ರಂದು ಬೆಳಿಗ್ಗೆ 11:00 ಗಂಟೆಗೆ ಮನೆಗೆ ಹೋದೆನು. ಮನೆಯಲ್ಲಿ ವಿಶ್ರಾಂತಿ ಪಡೆಯುವಾಗ ಸಂಜೆ 4:00 ಗಂಟೆಯ ಸುಮಾರಿಗೆ ಪುನ: ಮುದುಕಪ್ಪ ಈತನು ತನ್ನೊಂದಿಗೆ ಹುಸೇನಪ್ಪ ತಂದೆ ಈರಪ್ಪ ವಯಸು: 35 ವರ್ಷ ಜಾತಿ: ಗಂಗಾಮತ, ಸಾ: ಶ್ರೀರಾಮನಗರ ಈತನನ್ನು ಸಂಗಡ ಕರೆದುಕೊಂಡು ಮನೆಯ ಹತ್ತಿರ ಬಂದು ನನಗೆ ಲೇ ಮಾದಿಗ ಸೂಳೇ ಮಗನೇ ನಿನ್ನೆ ದಿವಸ ನೀನು ಉಳಿದುಕೊಂಡಿದ್ದಿಯಾ ನಿನಗೆ ಇವತ್ತು ಜೀವ ಸಹಿತ ಬಿಡುವದಿಲ್ಲ ಜಗಳ ಮಾಡಿರುತ್ತಾರೆ ಅಂತಾ ಮುಂತಾಗಿ ನೀಡಿದ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008