1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 221/2016 ಕಲಂ: 143, 147, 153, 295(ಎ) ಸಹಿತ
149 ಐ.ಪಿ.ಸಿ ಮತ್ತು KARNATAKA PREVENCTON OF DISTRUCTION AND LOSS PROPERTY
ACT 1992:.
ದಿನಾಂಕ: 10.12.2016 ರಂದು ರಾತ್ರಿ 8:30 ಗಂಟೆಗೆ ಫಿರ್ಯಾದಿದಾರರಾದ ಚನ್ನಪ್ಪ ಹೆಚ್.ಸಿ-40 ಕೊಪ್ಪಳ ನಗರ ಪೊಲೀಸ ಠಾಣೆ ರವರು ಫಿರ್ಯಾದಿಯನ್ನು ಹಾಜರು ಪಡಿಸಿದ್ದು, ಕೊಪ್ಪಳದಲ್ಲಿ ಹನುಮ ಮಾಲೆಯ ಶೋಭಾಯಾತ್ರೆ ಇರುವುದರಿಂದ ನನಗೆ ಮತ್ತು
ಠಾಣೆಯ ಸಿಬ್ಬಂದಿಗಳಾದ ಎ.ಎಸ್.ಐ. ರಾಮಣ್ಣ, ನಾಗಲಿಂಗಯ್ಯ, ನಾಗಪ್ಪ, ಹೆಚ್.ಸಿ- 07, ಪಿಸಿ-376, 177, 226, 172, ರವರುಗಳಿಗೆ ಬೆಳಿಗ್ಗೆ 9:00 ಗಂಟೆಗೆ ಕೊಪ್ಪಳ ನಗರದ ಯುಸುಫೀಯಾ ಮಸೀದಿ ಮುಂದೆ ಬಂದೋಬಸ್ತ ಕರ್ತವ್ಯಕ್ಕೆ ನೇಮಕ
ಮಾಡಿದ್ದರಿಂದ ನಾನು ಹಾಗೂ ಸಿಬ್ಬಂದಿಯವರಾದ ಎ.ಎಸ್.ಐ. ರಾಮಣ್ಣ, ನಾಗಲಿಂಗಯ್ಯ, ನಾಗಪ್ಪ, ಹೆಚ್.ಸಿ- 07, ಪಿಸಿ-376, 177, 226, 172 ಎಲ್ಲರೂ ಕೂಡಿ ಮಸೀದಿಯ ಮುಂದೆ ಬಂದೋಬಸ್ತ ಕರ್ತವ್ಯದಲ್ಲಿ ನಿರತರಾಗಿದ್ದೇವು. ಮದ್ಯಾಹ್ನ 3:30 ಗಂಟೆಯ ಸುಮಾರಿಗೆ ಜವಾಹರ ರೋಡ ಮುಖಾಂತರವಾಗಿ ಸುಮಾರು 100 ರಿಂದ 150 ಜನರು ಸೇರಿಕೊಂಡು ಹನುಮ ಶೋಭಾಯಾತ್ರೆಯಲ್ಲಿ ಭಾಗವಹಿಸಿ ಶ್ರೀಹನುಮಾನ್ ಭಾವ ಚಿತ್ರದ
ಮೆರವಣಿಗೆಯನ್ನು ಮಾಡುತ್ತಾ ತಮ್ಮ ಕೈಯಲ್ಲಿ ದೊಡ್ಡದಾದ ಕಟ್ಟಿಗೆಗೆ ಕಟ್ಟಿದ ಹಿಂದೂ
ಭಗವಾದ್ವಜಗಳನ್ನು ಹಿಡಿದುಕೊಂಡು ಅವುಗಳನ್ನು ಮೇಲಕ್ಕೆ ಎತ್ತಿ ತಿರುಗಿಸುತ್ತಾ ಯುಸುಫೀಯಾ ಮಸೀದಿ
ಮುಂದೆ ಕುಣಿದಾಡುತ್ತಾ ಬಂದು ಯುಸುಫೀಯಾ ಮಸೀದಿ ಮುಂದೆ ದಿನಾಂಕ: 12-12-16
ರಂದು ಆಚರಿಸುವ ಈದ್ ಮಿಲಾದ ಹಬ್ಬದ ಪ್ರಯುಕ್ತ ಕಟ್ಟಿದ್ದ ಮುಸ್ಲಿಂ
ದ್ವಜ ಹಾಗು ಬಂಟಿಂಗ್ಸ್ಗಳನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಭಗವಾದ್ವಜಗಳ ಮೂಲಕ
ಹರಿದು ಹಾಕಲು ಪ್ರಯತ್ನಿಸಿ ಮುಸ್ಲಿಂ ಭಾಂದವರ ಭಾವನೆಗಳಿಗೆ ಧಕ್ಕೆಯುಂಟಾಗುವಂತೆ ಮಾಡಿದ್ದು
ಇರುತ್ತದೆ. ಕಾರಣ ಈ ಘಟನೆಗೆ ಕಾರಣರಾದ 1] ದಾಮೋದರ ವರ್ಣೇಕರ, 2] ವೆಂಕಟೇಶ ಪವನ್ ಟೇಲರ್, ಶಾರದಾ ಟಾಕೀಜ ಹತ್ತಿರ, 3] ಗವಿಸಿದ್ದಪ್ಪ ಗದಗಿನಮಠ ಸಾ: ಗೌರಿ ಅಂಗಳ ಕೊಪ್ಪಳ, 4] ಕುಮಾರ @ ಕುಮ್ಯಾ ಈರಣ್ಣ ಬಂದನೂರು ಸಾ:
ಹಟಗಾರಪೇಟೆ, 5] ಭರತಕುಮಾರ ಹೊಟೇಲ್ ಮಾಲೀಕರು
ಶಾರದಾ ಟಾಕೀಜ ಹತ್ತಿರ ಕೊಪ್ಪಳ. 6] ಸಿದ್ದೇಶಕುಮಾರ ಹೊಟೇಲ್ ಮಾಲೀಕರು ಶಾರದಾ ಟಾಕೀಜ ಹತ್ತಿರ ಕೊಪ್ಪಳ. 7] ಆನಂದ ತಂದೆ ಸೋಮಪ್ಪ ತಳವಾರ ಸಾ: ಕುಂಬಾರ ಓಣಿ ಕೊಪ್ಪಳ. 8] ಸಂತೋಷ ಸೋಮಪ್ಪ ತಳವಾರ, ಸಾ: ಕುಂಬಾರ ಓಣಿ ಕೊಪ್ಪಳ. 9] ಶ್ರೀಕಾಂತ ಖಾನಾವಳಿ ವಿಕಾಸ ನಗರ ಕೊಪ್ಪಳ. 10] ವಿನಾಯಕ ತಂದೆ ಬೋಜಣ್ಣ ರೇಣುಕಾ ಪಾನಶಾಫ್ ಸ್ಟಾರ್ ಟಾಕೀಜ ಹತ್ತಿರ ಕೊಪ್ಪಳ, 11] ಪ್ರವೀಣ ತಂದೆ ಮುದಿಯಪ್ಪ ಕಿಡದಾಳ ಸಾ: ಪಲ್ಟಾನ್ ಓಣಿ ಕೊಪ್ಪಳ, 12]ರೇಣುಕಪ್ಪ ತಂದೆ ಮುದಿಯಪ್ಪ ಕಿಡದಾಳ, ಸಾ: ಪಲ್ಟಾನ್ ಓಣಿ ಕೊಪ್ಪಳ. 13] ಮಂಜು ಸಾ:ಪಲ್ಟಾನ್ ಓಣಿ ಕೊಪ್ಪಳ. 14] ಗೋಪಾಲ ವೆಂಕಟೇಶ್ವರ ಕಿರಾಣಿ ಅಂಗಡಿ ಹಸನ್ ರಸ್ತೆ, ಕೊಪ್ಪಳ, 15] ವೆಂಕಟೇಶ ನಾಯಕ್ ತಾಯಿ
ಯಂಕವ್ವ 16] ಮಂಜುನಾಥ ತಂದೆ ಶಿವಪ್ಪ
ದೇವರಾಜ ಅರಸ್ ಕಾಲೋನಿ, ಕೊಪ್ಪಳ, 17] ಗವಿಸಿದ್ದಪ್ಪ ಚಿನ್ನೂರು, ಕಿರಣ ಪೆಂಟರ್, ಕೊಪ್ಪಳ 18] ಪ್ರವೀಣ ಕಲಾಲ ಚಿಕನ್ ಶಾಪ್ ರಾಜಬಾಗ್ ದರ್ಗಾ ಹತ್ತಿರ ಕೊಪ್ಪಳ, 19] ಬಾಬು ಬಿಲಂಕರ್ ಸಾ: ಪಲ್ಟಾನ್ ಗಲ್ಲಿ, ಕೊಪ್ಪಳ, 20] ಶ್ರವಣಕುಮಾರ ತಂದೆ ಈರಣ್ಣ
ಬಂಡಾನವರ್, ಸಾ: ಹಟಗಾರ ಪೇಟೆ ಕೊಪ್ಪಳ, 21] ಮಲ್ಲಪ್ಪ ಹೂಗಾರ ಸಾ: ಬೆಂಕಿ ನಗರ, ಕೊಪ್ಪಳ , 22] ಉಮೇಶ ಜಿ. ಕುರ್ಡೇಕರ್, ಸಾ: ಕೊಪ್ಪಳ , 23] ಅಜಯ ಮಡಿವಾಳರ್ ಸಾ: ಬೆಂಕಿನಗರ, ಕೊಪ್ಪಳ , 24] ಮಂಜುನಾಥ ಅಬ್ಬಿಗೇರ್, ಸಾ: ಬಿ.ಇ.ಡಿ. ಕಾಲೇಜು ಹಿಂದೆ ಕೊಪ್ಪಳ, 25] ವಿರೇಶ ತಂದೆ ಪಂಪನಗೌಡ ಹಟಗಾರ ಪೇಟೆ ಕೊಪ್ಪಳ, 26] ಸಂತೋಷ ಲಮಾಣಿ, ಸಾ: ದಿವಟರ್ ಸರ್ಕಲ್, ಕೊಪ್ಪಳ, 27] ರಾಕೇಶ ಎಲೆಕ್ಟ್ರಿಕಲ್ ಶಾಪ್, ಪಾರಿಜಾತ ಹೊಟೆಲ್ ಹತ್ತಿರ ಕೊಪ್ಪಳ, 28] ಗವಿಸಿದ್ದಪ್ಪ ಜಂತಕಲ್ ಸಾ: ಪಲ್ಲೇದ ಓಣಿ, ಕೊಪ್ಪಳ, 29] ಮಲ್ಲಿಕಾರ್ಜುನ ಚಲುವಾದಿ, ಸಾ: ದೇವರಾಜ ಅರಸ್ ಕಾಲೋನಿ, ಕೊಪ್ಪಳ. 30] ಚಂದ್ರು ಎಂ.ಎಸ್.ಐ.ಎಲ್.
ಗೊಡೆನನಲ್ಲಿ ಕೆಲಸ ಸಾ: ಕೊಪ್ಪಳ, 31] ಅರುಣ ಗೊಂದಳಿ, ಗೌರಿಶಂಕರ ದೇವಸ್ಥಾನ
ಹತ್ತಿರ ಕೊಪ್ಪಳ, 32] ಶ್ರೀಶೈಲ ಸಾ; ದಿವಟರ ಸರ್ಕಲ್ ಹತ್ತಿರ ಕೊಪ್ಪಳ, ಹಾಗು ಇತರರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಸಂಚಾರಿ ಪೊಲೀಸ್
ಠಾಣೆ ಗಂಗಾವತಿ ಗುನ್ನೆ ನಂ: 34/2016
ಕಲಂ: 279, 338 ಐ.ಪಿ.ಸಿ.
ದಿ:10-12-2016 ರಂದು ರಾತ್ರಿ 08-35 ಪಿಎಂ ಗಂಟೆಗೆ ಫಿರ್ಯಾದಿದಾರರದ ಶರಣಯ್ಯಸ್ವಾಮಿ ತಂದೆ ಮಡಿವಾಳಯ್ಯಸ್ವಾಮಿ ಸಾ:ಗಂಗಾವತಿ ಇವರು ಫಿರ್ಯಾದಿ ನೀಡಿದ್ದು ದಿನಾಂಕ 09-12-2016 ರಂದು ರಾತ್ರಿ 9-10 ಸುಮಾರು ನಾನು ಮನೆಯಲ್ಲಿರುವಾಗ ನನ್ನ ಅಳಿಯನಾದ ಶಶಿಧರ ಇತನು ಪೋನ್ ಮಾಡಿ ನಾನು ಮೋಟಾರು ಸೈಕಲ್ಲನ್ನು ಸ್ಕಿಡ್ ಮಾಡಿದ್ದರಿಂದ ಮಾವನಾದ ಜಡೆಯ್ಯಸ್ವಾಮಿ ಇತನಿಗೆ ಎಡಕಾಲ ಚಪ್ಪೆಗೆ ಮತ್ತು ಗೆಜ್ಜೆಗೆ ಒಳಪೆಟ್ಟಾಗಿದೆ ಕೂಡಲೇ ತಾತನ ಮಠದ ಹತ್ತಿರದ ಕಾತರ್ಿಕ ಹೊಟೆಲ್ ಹತ್ತಿರ ಬಾ ಅಂತಾ ಹೇಳಿದನು ನಾನು ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ನಿಜ ಇದ್ದು ನನ್ನ ಅಣ್ಣ ಜಡೆಯ್ಯಸ್ವಾಮಿ ಇತನಿಗೆ ಏಳಲು ಆಗಲಿಲ್ಲಾ ನನ್ನ ಅಣ್ಣನಿಗೆ ವಿಚಾರಿಸಲಾಗಿ ಶಶಿಧರ ತಂದೆ ಬಸವರಾಜಸ್ವಾಮಿ ಸಾ : ಗಂಗಾವತಿ ಇತನು ನಮ್ಮ ಊರಿಗೆ ತನ್ನ ಸೈಕಲ್ಲ ಮೋಟಾರು ತಗೆದುಕೊಂಡು ಬಂದಿದ್ದನು ನಾನು ಗಂಗಾವತಿಗೆ ತಮ್ಮನ ಮನೆಗೆ ಬರುತ್ತೇನೆಂದು ಹೇಳಿದಾಗ ನನ್ನನ್ನು ತನ್ನ ಹಿರೊ ಎಚ್ ಎಫ್ ಡಿಲಕ್ಸ ಮೋ/ಸೈ ನಂ ಕೆ.ಎ. 37-ಎಕ್ಸ 1959 ನೇದ್ದರ ಹಿಂದೆ ಕೂಡಿಸಿಕೊಂಡು ಕಕ್ಕರಗೊಳದಿಂದ ಗಂಗಾವತಿಗೆ ಬಂದು ಕಂಪ್ಲಿ ಸರ್ಕಲ್ ಮೂಲಕ ತಾತನ ಮಠದ ಕಡೆಗೆ ಅತೀಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಹೊರಟು ಒಮ್ಮೆಲೆ ದುರುಗಮ್ಮನ ಗುಡಿ ಹತ್ತಿರ ಟರ್ನ ಮಾಡುವಾಗ ವೇಗದಲ್ಲಿದ್ದ ಮೋಟಾರು ಸೈಕಲ್ಲ ಒಮ್ಮೆಲೆ ಸ್ಕಿಡ್ ಆಗಿ ನಿಯಂತ್ರಣಗೊಳ್ಳದೇ ಕಾರ್ತಿಕ ಹೊಟೆಲ್ ಹತ್ತಿರ ಬಿದ್ದಿದ್ದು ಆಗ ನಾನು ಮತ್ತು ಶಶಿಧರ ರಸ್ತೆ ಮೇಲೆ ಬಿದ್ದೆವು ಅಲ್ಲಿದ್ದ ವೈರಮಣೀ ಸಾ : ಬಂಡೇ ಬಸಪ್ಪ ಕ್ಯಾಂಪ್ ಹಾಗೂ ಅಮರೇಶಪ್ಪ ಸಾ : ಬಸವನದುರ್ಗ ಇವರು ಸಹಾಯ ಮಾಡಿದರು ಅಂತಾ ತಿಳಿಸಿದನು. ನನ್ನ ಅಣ್ಣನಿಗೆ ಎಡಕಾಲ ಚಪ್ಪೆಗೆ ಮತ್ತು ಗೆಜ್ಜೆಗೆ ಭಾರಿ ಒಳಪೆಟ್ಟಾಗಿ ಬಾವು ಬಂದಿದ್ದರಿಂದ ನಾನು ಕೂಡಲೇ ಯಾವುದೋ ಒಂದು ಅಟೋದಲ್ಲಿ ಹತ್ತಿಸಿಕೊಂಡು ಡಾ : ಮಲ್ಲನಗೌಡ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಕೆ ಮಾಡಿದೆನು.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 220/2016
ಕಲಂ: 454,
457, 380 ಐ.ಪಿ.ಸಿ:
ದಿನಾಂಕ: 10-12-2016
ರಂದು ರಾತ್ರಿ 8-00 ಗಂಟೆಗೆ
ಫಿರ್ಯಾದಿದಾರರಾದ ಮಲ್ಲಿಕಾರ್ಜುನ ತಂದೆ ಶಂಕ್ರಪ್ಪ ಗಾಣಿಗೇರ ಸಾ: ಅಮೀನಪುರ ಓಣಿ ಸ್ಟೇಷನ್ ಫಿರ್ಯಾದಿದಾರರು
ದಿನಾಂಕ: 09-12-2016
ರಂದು ಸಂಜೆ 6-45 ಗಂಟೆಯಿಂದ ದಿನಾಂಕ: 10-12-2016 ರ ಅವಧಿಯಲ್ಲಿ ತಮ್ಮಸಂಬಂದಿಕರ ಮಧುವೆ ಕುರಿತು ನರಗುಂದಕ್ಕೆ ಹೋಗಿದ್ದಾಗ ಯಾರೋ ಕಳ್ಳರು
ಫಿರ್ಯಾದಿದಾರರ ಮನೆಯ ಬೀಗ ಮುರಿದು ಮನೆಯ ಹಾಲ್ ನಲ್ಲಿದ್ದ ಅಲ್ಮಾರವನ್ನು ಮೀಟಿ ತೆರೆದು
ಅಲ್ಮಾರದಲ್ಲಿದ್ದ ಒಟ್ಟು ಬಂಗಾರ ಅಂತೂ 29.5 ಗ್ರಾಂ ಮತ್ತು ಬೆಳ್ಳಿ ಅಂತೂ 650 ಗ್ರಾಂ ಹಾಗೂ ನಗದು ಹಣ ರೂ 30000 ಬೆಲೆಬಾಳುವುದನ್ನು ಯಾರೋ
ಕಳ್ಳರು ಕಳ್ಳತನ ಮಾಢಿಕೊಂಡು ಹೋಗಿದ್ದು ಇರುತ್ತದೆ. ಪ್ರಕರಣ ದಾಖಾಲು ಮಾಢಿಕೊಂಡು ತನಿಖೆ
ಕೈಗೊಂಡೇನು.
4] ಕುಕನೂರ ಪೊಲೀಸ್
ಠಾಣೆ ಗುನ್ನೆ ನಂ: 140/2016
ಕಲಂ 143, 147, 504, 341, 506, 323, 355 ಸಹಿತ 149 ಐ.ಪಿ.ಸಿ. ಮತ್ತು 3(1)(x) SC/ ST. Act. 1989.
ದಿನಾಂಕ:10-12-2016 ರಂದು 10.30 ಪಿಎಂಕ್ಕೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಿಂದ ಪೋನ್ ಮೂಲಕ
ಜಗಳದಲ್ಲಿ ದುಃಖಾಪಾತಗೊಂಡು ದಾಖಲಾದ ಬಗ್ಗೆ ಎಂ.ಎಲ್.ಸಿ.ಮಾಹಿತಿ ತಿಳಿಸಿದ್ದು, ಆಸ್ಪತ್ರೆಗೆ ಬೇಟಿ
ನೀಡಿ ಗಾಯಾಳುಗಳನ್ನು ಪರಿಶೀಲಿಸಿದ್ದು 11.55 ಪಿ.ಎಂ.ಕ್ಕೆ ಫಿರ್ಯಾದಿದಾರರು ಹಾಜರಪಡಿಸಿದ ಲಿಖಿತ
ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ಫಿರ್ಯಾದಿ ಮತ್ತು ಶರಣಪ್ಪ ತಮ್ಮೂರ ದ್ಯಾಮವ್ವನ
ಗುಡಿ ಹತ್ತಿರ ಬಂದಾಗ ತಮ್ಮೂರಿನ ಹಿರಿಯರು ಆರೋಪಿ ಬೀಮರಡ್ಡಿರವರೊಂದಿಗೆ ಮಾತುಕತೆ ಮಾಡುತ್ತಿದ್ದು
ಆಗ ಮುಂಡರಗಿಯ ಇತರೆ ಆರೋಪಿತರು ಬಂದು ಭೀಮರಡ್ಡಿಗೆ ಕರೆದು ನೀನು ಯಾವುದೇ ಕಾರಣಕ್ಕೂ ಕೇಸ ವಾಪಾಸ್ಸು
ತೆಗೆದುಕೊಳ್ಳಬೇಡ ಈ ಬೊಸುಡಿ ಮಕ್ಕಳು ಏನು ಮಾಡಿಕೊಳ್ಳುತ್ತಾರೆ ಮಾಡಿಕೊಳ್ಳಲಿ ಅಂತಾ ಅವಾಚ್ಯವಾಗಿ
ಮಾತನಾಡಿ ಆರೋಪಿತರು ಮಹೇಂದ್ರ, ಬಸವರಾಜ, ಸಿದ್ದಪ್ಪರವರಿಗೆ ಅಡ್ಡಗಟ್ಟಿ ನಿಲ್ಲಿಸಿ ಏನಲೇ ಬೊಸುಡಿ
ಮಕ್ಕಳೇ ಅಂತಾ ಅವಾಚ್ಯವಾಗಿ ಬೈಯ್ದಾಡಿ ನಿಮ್ಮನ್ನು ಇಲ್ಲಿಯೇ ಹೂತುಹಾಕುತ್ತೇವೆ ಅಂತಾ ಅನ್ನುತ್ತಾ
ಕೈಯಿಂದ ಬಡಿಯ ಹತ್ತಿದಾಗ ಫಿರ್ಯಾದಿ ಮತ್ತು ಶರಣಪ್ಪ ಜಗಳ ಬಿಡಿಸಲು ಹೋಗಿದ್ದು ಆರೋಪಿತರು ಹೊಲೆಯ ಸೂಳೆ
ಮಕ್ಕಳೇ ಎಸ್.ಪಿ.ಸಾಹೇಬರ ಆಪೀಸಿಗೆ ಹೋಗಿ ಬೀಮರಡ್ಡಿ ಮೇಲೆ ಕಂಪ್ಲೇಟ್ ಮಾಡುತ್ತಿರೇನೆಲೇ ಬ್ಯಾಗರ ನನ್ನ
ಮಕ್ಕಳಾ ನಿಮ್ಮನ್ನು ಸುಮ್ಮನೇ ಬಿಡಬಾರದು ಜೀವ ಸಹಿತ ಹೂತು ಹಾಕಬೇಕು ಅಂತಾ ಜಾತಿ ನಿಂದನೆ ಮಾಡಿ ಫಿರ್ಯಾದಿದಾರರಿಗೆ
ಆರೋಪಿತರಿಗೆ ಕೈಯಿಂದ ಹೊಡೆಯ ಹತ್ತಿದರು. ಅಷ್ಟರಲ್ಲಿ ರೇಣುಕಾ ಕಾಡಪ್ಪನವರು ಹೊರಟಾಗ ಅವರಿಗೂ ಸಹ ಆರೋಪಿತರು
ಮುಂದೆ ಹೋಗದಂತೆ ಅಡ್ಡಗಟ್ಟಿ ಸುತ್ತುವರೆದು ನಿಲ್ಲಿಸಿ ಏನಲೇ ಬೊಸುಡಿ ಕೃಷಿ ಪತ್ತಿನ ಸಂಘದ ಗೋದಾಮ
ಖಾಲಿ ಮಾಡಿಸುತ್ತಿ ನಿನ್ನ ಸೊಕ್ಕು ಜಾಸ್ತಿಯಾಗಿದೆ ಅಂತಾ ಬೈಯ್ದಾಡಿ ಪ್ರೇಮಿಲವ್ವಳು ತನ್ನಕಾಲಲ್ಲಿಯ
ಚಪ್ಪಲಿಯಿಂದ ರೇಣುಕಾಳ ತಲೆಗೆ ಬಡಿದಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ
ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
0 comments:
Post a Comment