Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, December 12, 2016

1] ಕೂಕನೂರು ಪೊಲೀಸ್ ಠಾಣೆ ಗುನ್ನೆ ನಂ: 140/2016 ಕಲಂ:  143,147,504,341,506,323,355,149 IPC ; SC AND THE ST  (PREVENTION OF ATTROCITIES) ACT, 1989 U/s 3(1)(10) )
ಫಿರ್ಯಾದಿ ಭೀಮಪ್ಪ ಹುಚ್ಚಪ್ಪ ಚಲವಾದಿ ಸಾ: ಚಿಕೇನಕೊಪ್ಪ ತಾ: ಯಲಬುರ್ಗಾ ಮತ್ತು ಶರಣಪ್ಪ ತಮ್ಮೂರ ದ್ಯಾಮವ್ವನ ಗುಡಿ ಹತ್ತಿರ ಬಂದಾಗ ತಮ್ಮೂರಿನ ಹಿರಿಯರು ಆರೋಪಿ ಬೀಮರಡ್ಡಿರವರೊಂದಿಗೆ ಮಾತುಕತೆ ಮಾಡುತ್ತಿದ್ದು ಆಗ ಮುಂಡರಗಿಯ ಇತರೆ ಆರೋಪಿತರು ಬಂದು ಭೀಮರಡ್ಡಿಗೆ ಕರೆದು ನೀನು ಯಾವುದೇ ಕಾರಣಕ್ಕೂ ಕೇಸ ವಾಪಾಸ್ಸು ತೆಗೆದುಕೊಳ್ಳಬೇಡ ಈ ಬೊಸುಡಿ ಮಕ್ಕಳು ಏನು ಮಾಡಿಕೊಳ್ಳುತ್ತಾರೆ ಮಾಡಿಕೊಳ್ಳಲಿ ಅಂತಾ ಅವಾಚ್ಯವಾಗಿ ಮಾತನಾಡಿ ಆರೋಪಿತರು ಮಹೇಂದ್ರ, ಬಸವರಾಜ, ಸಿದ್ದಪ್ಪರವರಿಗೆ ಅಡ್ಡಗಟ್ಟಿ ನಿಲ್ಲಿಸಿ ಏನಲೇ ಬೊಸುಡಿ ಮಕ್ಕಳೇ ಅಂತಾ ಅವಾಚ್ಯವಾಗಿ ಬೈಯ್ದಾಡಿ ನಿಮ್ಮನ್ನು ಇಲ್ಲಿಯೇ ಹೂತುಹಾಕುತ್ತೇವೆ ಅಂತಾ ಅನ್ನುತ್ತಾ ಕೈಯಿಂದ ಬಡಿಯ ಹತ್ತಿದಾಗ ಫಿರ್ಯಾದಿ ಮತ್ತು ಶರಣಪ್ಪ ಜಗಳ ಬಿಡಿಸಲು ಹೋಗಿದ್ದು ಆರೋಪಿತರು ಹೊಲೆಯ ಸೂಳೆ ಮಕ್ಕಳೇ ಎಸ್.ಪಿ.ಸಾಹೇಬರ ಆಪೀಸಿಗೆ ಹೋಗಿ ಬೀಮರಡ್ಡಿ ಮೇಲೆ ಕಂಪ್ಲೇಟ್ ಮಾಡುತ್ತಿರೇನೆಲೇ ಬ್ಯಾಗರ ನನ್ನ ಮಕ್ಕಳಾ ನಿಮ್ಮನ್ನು ಸುಮ್ಮನೇ ಬಿಡಬಾರದು ಜೀವ ಸಹಿತ ಹೂತು ಹಾಕಬೇಕು ಅಂತಾ ಜಾತಿ ನಿಂದನೆ ಮಾಡಿ ಫಿರ್ಯಾದಿದಾರರಿಗೆ ಆರೋಪಿತರಿಗೆ ಕೈಯಿಂದ ಹೊಡೆಯ ಹತ್ತಿದರು. ಅಷ್ಟರಲ್ಲಿ ರೇಣುಕಾ ಕಾಡಪ್ಪನವರು ಹೊರಟಾಗ ಅವರಿಗೂ ಸಹ ಆರೋಪಿತರು ಮುಂದೆ ಹೋಗದಂತೆ ಅಡ್ಡಗಟ್ಟಿ ಸುತ್ತುವರೆದು ನಿಲ್ಲಿಸಿ ಏನಲೇ ಬೊಸುಡಿ ಕೃಷಿ ಪತ್ತಿನ ಸಂಘದ ಗೋದಾಮ ಖಾಲಿ ಮಾಡಿಸುತ್ತಿ ನಿನ್ನ ಸೊಕ್ಕು ಜಾಸ್ತಿಯಾಗಿದೆ ಅಂತಾ ಬೈಯ್ದಾಡಿ ಪ್ರೇಮಿಲವ್ವಳು ತನ್ನಕಾಲಲ್ಲಿಯ ಚಪ್ಪಲಿಯಿಂದ ರೇಣುಕಾಳ ತಲೆಗೆ ಬಡಿದಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕೂಕನೂರು ಪೊಲೀಸ್ ಠಾಣೆ ಗುನ್ನೆ ನಂ: 141/2016 ಕಲಂ: 323, 354,504, 506 ಸಹಿತ 34 ಐಪಿಸಿ.
ದಿನಾಂಕ:11-12-2016 ರಂದು 4-30 ಪಿಎಂಕ್ಕೆ ಪಿರ್ಯಾದಿ ಶರಣಬಸವ ತಂದೆ ರಾಮಣ್ಣ ಹುಡೇದ ವಯಾ: 18 ವರ್ಷ, ಜಾ:ಉಪ್ಪಾರ, ಉ:ವಿದ್ಯಾಭ್ಯಾಸ ಸಾ:ಕವಳಕೇರಿ, ತಾ:ಯಲಬುರ್ಗಾ ಇತನು ತನ್ನ ಮನೆಯ ಮುಂದಿನ ಅಂಗಳದಲ್ಲಿದ್ದಾಗ ನಿಂತುಕೊಂಡಿದ್ದಾಗ ಆರೋಪಿತರೆಲ್ಲರೂ 1] ಶಿವಕುಮಾರ ತಂದೆ ಹನುಮಪ್ಪ ಮುದ್ಲಾಪುರ 2). ವಿರೇಶ ತಂದೆ ಹನುಮಪ್ಪ ಮುದ್ಲಾಪುರ 3). ಶರಣಪ್ಪ ತಂದೆ ರಾಮಣ್ಣ ಮುದ್ಲಾಪುರ 4).  ಶಂಕ್ರಮ್ಮ ತಂದೆ ಭೀಮಪ್ಪ ಮುದ್ಲಾಪುರ ಎಲ್ಲರೂ ಸಾ : ಕವಳಕೇರಿ ಕೂಡಿಕೊಂಡು ಹೋಗಿ ‘ಏನಲೇ ಬೋಸುಡಿ ಮಗನೇ ಊರಲ್ಲಿ ಇಸ್ಪೀಟ್ ಆಡುವ ಬಗ್ಗೆ ನೀನು ಮತ್ತು ನಿಮ್ಮ ಮನೆಯವರು ಪೊಲೀಸರಿಗೆ ಮಾಹಿತಿ ತಿಳಿಸುತ್ತೀರಾ, ನಿಮ್ಮ ಸೊಕ್ಕು ಜಾಸ್ತಿಯಾಗಿದೆ’ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿ ಆಗ ಪಿರ್ಯಾದಿದಾರನ ತಾಯಿ ರೇಣುಕವ್ವ ಮತ್ತು ಆತನ ಅಕ್ಕಳಾದ ಗಂಗಮ್ಮ ಇಬ್ಬರೂ ಕೂಡಿ ಪಿರ್ಯಾದಿದಾರನನ್ನು ಜಗಳದಿಂದ ಬಿಡಿಸಿಕೊಳ್ಳಲು ಹೋದಾಗ  ಅವರಿಗೂ ಸಹ ಹೊಡೆ ಬಡಿ ಮಾಡಿ ಪಿರ್ಯಾದಿದಾರರಿಗೆ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 296/2016 ಕಲಂ: 323, 324, 504,  ರೆ.ವಿ. 34 ಐಪಿಸಿ.
ದಿನಾಂಕ: 11-12-2016 ರಂದು ಸಾಯಂಕಾಲ 3-00 ಗಂಟೆಗೆ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಕಂದಕೂರಪ್ಪ ತಂದೆ ಹಿರೇಹುಲಗಪ್ಪ ಹಿರೇಮನಿ ವಯಾ: 42 ವರ್ಷ ಜಾತಿ: ಹಿಂದೂ ಮಾದಿಗ ಉ: ಕೂಲಿ ಕೆಲಸ ಸಾ: ಕಂದಕೂರು ಇವರ ಹೇಳಿಕೆ ಪಡೆದುಕೊಂಡು ಬಂದಿದ್ದು ಅದರ ಸಾರಾಂಶವೆನೆಂದರೆ,  ನಾನು ಈಗ್ಗೆ ಸುಮಾರು 10 ವರ್ಷಗಳ ಹಿಂದೆ ಬೆಂಗಳೂರಿಗೆ ದುಡಿಯಲು ಹೋಗಿದ್ದು ಆ ವೇಳೆಯಲ್ಲಿ ನಮ್ಮೂರಿನ ಹನಮಪ್ಪ ತಂದೆ ಕುಂಟೆಪ್ಪ ಪೂಜಾರ ಇತನು ಸಹ ಬೆಂಗಳೂರಿಗೆ ದುಡಿಯಲು ಬಂದಿದ್ದು,  ನಂತರ ಸುಮಾರು 5-6 ತಿಂಗಳ ನಂತರ ನನಗೆ ಬೆಂಗಳೂರಿನಲ್ಲಿ ಕೆಲಸ ಮಾಡಲು ಅಲ್ಲಿನ ವಾತಾವರಣ ಸರಿ ಹೊಂದದೇ ಕೆಲಸ ಮಾಡಲು ಆಗದೇ ಇದ್ದದ್ದರಿಂದ ನಾನು ಅಲ್ಲಿಂದ ವಾಪಾಸ್ ಊರಿಗೆ ಬಂದು ಪುನಃ ಸಿಂಧನೂರು ತಾಲೂಕಿನ ಬಸಾಪೂರ ಗ್ರಾಮಕ್ಕೆ ನೀರಾವರಿ ಕಡೆಗೆ ಹೋಗಿ ಅಲ್ಲಿ ಕೂಲಿ ನಾಲಿ ಮಾಡುತ್ತಾ ಅಲ್ಲಿಯೇ ವಾಸವಾಗಿರುತ್ತೇನೆ. ನಿನ್ನೆ ದಿವಸ ದಿನಾಂಕ: 10-12-2016 ರಂದು ನನ್ನ ತಂದೆಯಾದ ಹಿರೇಹುಲಗಪ್ಪ ಇತನು ತೀರಿಕೊಂಡಿದ್ದರಿಂದ ನಾನು ಬಸಾಪೂರ ಗ್ರಾಮದಿಂದ ಕಂದಕೂರು ಗ್ರಾಮಕ್ಕೆ ಬಂದಿದ್ದೇನು. ಆಗ ನಮ್ಮೂರ  ಹನಮಪ್ಪ ತಂದೆ ಕುಂಟೆಪ್ಪ ಪೂಜಾರ  ಇತನ ಸಂಬಂಧಿಕರಾದ 1] ಕುಂಟೆಪ್ಪ ತಂದೆ ಕುಂಟೆಪ್ಪ ಪೂಜಾರ 2] ಭೀಮಶೇಪ್ಪ ತಂದೆ ಬಸಪ್ಪ ಪೂಜಾರ ರವರು ಬಂದು ನನಗೆ ನಿನು ಈಗ್ಗೆ ಸುಮಾರು 10 ವರ್ಷಗಳ ಹಿಂದೆ ಬೆಂಗಳೂರಿಗೆ ದುಡಿಯಲು ಹೋದಾಗ ಹನಮಪ್ಪ ತಂದೆ ಕುಂಟೆಪ್ಪ ಪೂಜಾರ  ಇತನು ಸಹ ಬೆಂಗಳೂರಿಗೆ ದುಡಿಯಲು ಹೋಗಿದ್ದು ಆದರೆ ನೀನು ವಾಪಾಸ್ ಊರಿಗೆ ಬಂದರೂ ಸಹ ಆತನು ಇಲ್ಲಿಯವರೆಗೆ ಊರಿಗೆ ಬಂದಿರುವದಿಲ್ಲ ಆತನ ಬಗ್ಗೆ ಏನು ಮಾಹಿತಿ ಇದೆ ಹೇಳು ಅಂತಾ ನನಗೆ ಕೇಳಿದ್ದು ಅದಕ್ಕೆ ನಾನು ನಾನು ಬೆಂಗಳೂರಿನಿಂದ ಬಂದ ನಂತರ ಆತನಿಗೂ ನನಗೂ ಯಾವುದೇ ಸಂಪರ್ಕ ಇಲ್ಲ, ಆತನ ಬಗ್ಗೆ ನನಗೆ ಏನು ಗೊತ್ತಿಲ್ಲ ಅಂತಾ ಹೇಳಿದ್ದು ಈ ಬಗ್ಗೆ ಜಗಳ ಮಾಡಿ ಹೊಡೆ ಬಡಿ ಮಾಡಿ ದುಖಾ:ಪತ್ ಗೊಳಿಸಿದ್ದು ಇರುತ್ತದೆ ಅಂತಾ ಮುಂತಾಗಿ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008