ದಿನಾಂಕ:12.12.2016 ರಂದು ಸಾಯಂಕಾಲ 6:00
ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಹಾಜರು ಪಡಿಸಿದ್ದು
ಸಾರಾಂಶವೇನೆಂದರೆ,ಇಂದು ದಿನಾಂಕ: 12.12.2016 ರಂದು
ಬೆಳಿಗ್ಗೆ 7:30 ಗಂಟೆಯ ಸುಮಾರಿಗೆ ತಮ್ಮಮನೆಯ ಮುಂದೆ ನಿಲ್ಲಿಸಿದ್ದು ತಮ್ಮ ಮಾಲೀಕತ್ವದ
ಹೊರೋಹೊಂಡಾ ಮೋ.ಸೈ ನಂ:ಕೆ.ಎ-37/ಎಸ.-2045 ನೇದ್ದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು
ಹೋಗಿದ್ದು ಇರುತ್ತದೆ. ಕಾರಣ ಕಳುವಾದ ಮೋ.ಸೈ ಮತ್ತು ಕಳುಮಾಡಿದ ಕಳ್ಳರನ್ನು ಪತ್ತೆ ಮಾಡಿದ ಕಾನೂನು
ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ
ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 333/2016 ಕಲಂ: 279, 337, 338 ಐಪಿಸಿ.
ದಿನಾಂಕ. 12-12-2016 ರಂದು 6:00 ಪಿ.ಎಂ.ಕ್ಕೆ ಫಿರ್ಯಾದಿದಾರರಾದ
ಶಿವರಾಜ ತಂದೆ ರಾಮಣ್ಣ ಸಾಟೆ, ದಿನಾಂಕ:- 12-12-2016 ರಂದು ಆನೇಗುಂದಿಯ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ
ನಮ್ಮ ಸಂಬಂಧಿಕರ ಜವಳದ ಕಾರ್ಯಕ್ರಮ ಇದ್ದುದರಿಂದ ನಾನು ಹಾಗೂ ನಮ್ಮ ಸಂಬಂಧಿಕರುಗಳು ಕೂಡಿಕೊಂಡು ಬೆಳಿಗ್ಗೆ
10:00 ಗಂಟೆಯ ಸುಮಾರಿಗೆ ಆಶೋಕ ಲೈಲ್ಯಾಂಡ್ ಮಿನಿ ಗೂಡ್ಸ ವಾಹನ ನಂಬರ್: ಕೆ.ಎ-37/ ಎ-4823 ನೇದ್ದರಲ್ಲಿ
ಗಂಗಾವತಿಯಿಂದ ಆನೇಗುಂದಿಗೆ ಹೋಗಿದ್ದೆವು. ಕಾರ್ಯಕ್ರಮ ಮುಗಿದ ನಂತರ ವಾಪಸ್ ಗಂಗಾವತಿಗೆ ಬರುತ್ತಿರುವಾಗ
ನಮ್ಮಲ್ಲಿ ಕೆಲವರು ಭಜನೆ ಮಾಡುತ್ತಾ ನಡೆದುಕೊಂಡು ಬರುತ್ತಿದ್ದು, ಇನ್ನೂ ಕೆಲವರು ಸಾಮಾನುಗಳನ್ನು
ವಾಹನದಲ್ಲಿ ಇಟ್ಟುಕೊಂಡು ಕುಳಿತು ಬರುತ್ತಿದ್ದರು. ನಮ್ಮ ವಾಹನ ಮುಂದೆ ಮುಂದೆ ನಿಧಾನವಾಗಿ ಹೋಗುತ್ತಿದ್ದು,
ಭಜನೆ ಮಾಡುವವರು ಹಿಂಭಾಗದಲ್ಲಿ ಬರುತ್ತಿದ್ದರು. ನಮ್ಮ ವಾಹನವನ್ನು ಚಾಲಕ ರವಿ ತಂದೆ ಶರಣಪ್ಪ ಸಾ:
ಆರಾಳ ಈತನು ನಡೆಯಿಸುತ್ತಿದ್ದನು. ಸಂಜೆ 4:30 ಗಂಟೆಯ ಸುಮಾರಿಗೆ ಆನೇಗುಂದಿ-ಗಂಗಾವತಿ
ಮುಖ್ಯ ರಸ್ತೆಯಲ್ಲಿ ಕೃಷ್ಣಾಪೂರು ಡಗ್ಗಿ ಹತ್ತಿರ ಬರುತ್ತಿರುವಾಗ ನಮ್ಮ ಹಿಂಭಾಗದಿಂದ ಅಂದರೆ ಆನೇಗುಂದಿ
ಕಡೆಯಿಂದ ಮಾರುತಿ ಸುಜುಕಿ ರಿಟ್ಜ್ ಕಾರ ನಂಬರ್: ಕೆ.ಎ-37/ ಎಂ-5325 ರ ಚಾಲಕ ಆನಂದ
ಕೆಲೋಜಿ ಸಾ: ಗಂಗಾವತಿ ಈತನು ತನ್ನ ಕಾರನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು
ಬಂದಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ ಮೊದಲಿಗೆ ನಮ್ಮ ವಾಹನದ ಹಿಂಭಾಗದಲ್ಲಿ ಭಜನೆ ಮಾಡುತ್ತಾ
ನಡೆದುಕೊಂಡು ಬರುತ್ತಿದ್ದ (1) ಸರೀತಾ ಗಂಡ ಆನಂದ, 20 ವರ್ಷ (2) ಯಲ್ಲಮ್ಮ ಗಂಡ ರಾಜೇಶ, 38 ವರ್ಷ
(3) ಸಕ್ಕಮ್ಮ @ ಶಕುಂತಲಮ್ಮ ಗಂಡ ಬಾಬುರಾವ್ @ ಡಾಕಪ್ಪ, 58 ವರ್ಷ (4) ಗಣೇಶ ತಂದೆ ಪರಶುರಾಮ,
25 ವರ್ಷ (5) ನೀತಾ @ ರೇಷ್ಮ ಗಂಡ ಲಕ್ಷ್ಮಣ, 27 ವರ್ಷ ಎಲ್ಲರೂ ಜಾತಿ: ಗೌಳಿ ಸಾ: ಗುಂಡಮ್ಮ ಕ್ಯಾಂಪ್-ಗಂಗಾವತಿ
ಇವರುಗಳಿಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದ್ದು, ನಂತರ ನಮ್ಮ ವಾಹನದ ಹಿಂಭಾಗಕ್ಕೆ ಬಂದು ಟಕ್ಕರ್ ಕೊಟ್ಟು
ಅಪಘಾತ ಮಾಡಿದ್ದು, ಭಜನೆ ಮಾಡುವವರು ಮತ್ತು ಹನದಲ್ಲಿದ್ದಂತಹ (6) ವಿನೋದ ತಂದೆ ಕೃಷ್ಣಪ್ಪ,
17 ವರ್ಷ (7) ಅಂಜಲಿ ತಂದೆ ರಮೇಶ, 17 ವರ್ಷ (8) ಸತೀಶ ತಂದೆ ರಮೇಶ, 15 ವರ್ಷ (9) ಸ್ವಪ್ನಾ ತಂದೆ
ಕೃಷ್ಣ, 15 ವರ್ಷ (10) ರೋಹಿತ ತಂದೆ ಶೀನು, 10 ವರ್ಷ (11) ಭವಾನಿ ತಂದೆ ಸಂತೋಷ, 7 ವರ್ಷ ಎಲ್ಲರೂ
ಜಾತಿ: ಗೌಳಿ ಸಾ: ಗುಂಡಮ್ಮ ಕ್ಯಾಂಪ್-ಗಂಗಾವತಿ ಇವರುಗಳಿಗೆ ತೀವ್ರ ಹಾಗೂ ಸಾದಾ ಸ್ವರೂಪದ ಗಾಯಗಳಾಗಿದ್ದವು.
ನಂತರ ಗಾಯಗೊಂಡವರನ್ನು ಗಂಗಾವತಿಯ ಶ್ರೀ ಮಲ್ಲಿಕಾರ್ಜುನ ನರ್ಸಿಂಗ್ ಹೋಮ್ ನಲ್ಲಿ ದಾಖಲು ಮಾಡಿದ್ದು
ಇರುತ್ತದೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment