ದಿನಾಂಕ : 20-12-2016 ರಂದು ಬೆಳಗ್ಗೆ 11-00 ಗಂಟೆಯ ಸುಮಾರಿಗೆ
ಫಿರ್ಯಾದಿದಾರರಾದ ಶ್ರೀ ವಿರೇಶ ತಂದಿ ಮಲ್ಲಪ್ಪ ಹೊಳಗುಂದಿ ವಯಾ- 32 ಲಿಖಿತ
ಫಿರ್ಯಾದಿಯನ್ನು ಕೊಟ್ಟಿದ್ದು ಅದರ ನಮ್ಮ ಅಜ್ಜನಾದ ದೊಡ್ಡ ಈರಪ್ಪ ತಂದಿ ತಮ್ಮಣ್ಣ ಇವರ ಹೆಸರಿನಲ್ಲಿ ಗುಂಡೂರ್ ಸೀಮಾದಲ್ಲಿ ಜಮೀನು ಸರ್ವೆ ನಂ- 173 ಕ್ಷೇತ್ರ 2 ಎಕರೆ ಜಮೀನು ಇದ್ದು ಸದರ್ ಜಮೀನಿನ ಪೈಕಿ 1 ಎಕರೆ ಜಮೀನನ್ನು ನಮಗೆ ಗೊತ್ತಾಗದ ಹಾಗೆ ಸನ್- 2000 ನೇ ಸಾಲಿನಲ್ಲಿ ನೆಟ್ಟಕಂಟೆಮ್ಮ ಗಂಡ ಶಂಕ್ರಪ್ಪ ಜಟಕಾ ಸಾ- ದೇಸಾಯಿಕ್ಯಾಂಪ್ ಇವರ ಹೆಸರಿನಲ್ಲಿ ಪಹಣಿ ಮಾಡಿಸಿಕೊಂಡಿರುತ್ತಾರೆ. ನಂತರ ನಂತರ ನಮಗೆ ಗೊತ್ತಾಗಿದ್ದರಿಂದ ಈ ಬಗ್ಗೆ ನಾವು ಮಾನ್ಯ ಉಪ ವಿಭಾಗಾಧೀಕಾರಿಗಳು ಕೊಪ್ಪಳ ರವರಲ್ಲಿ ದಾವೆ ಮಾಡಿ ಸದರ್ ಜಮೀನಿನ ಬಗ್ಗೆ ವಿಚಾರಣೆಯಾಗಿ ಮಾನ್ಯ .ಎ.ಸಿ. ಕೊರ್ಟಿನಲ್ಲಿ ನಮ್ಮಂತೆ ಆಗಿರುತ್ತದೆ. ಸದರ್ ಜಮೀನಿನ ಬಗ್ಗೆ ಮಾನ್ಯ ತಹಸಿಲ್ದಾರರು ಗಂಗಾವತಿ ರವರು ನಮ್ಮ ಜಮೀನನ್ನು ದಿನಾಂಕ : 09-8-2016 ರಂದು ಕಬ್ಜಾ ಕೊಡಿಸಿದ್ದರಿಂದ ನಾವು ಸದರ್ ನಮ್ಮ ಜಮೀನಿನಲ್ಲಿ ಭತ್ತದ ನಾಟಿ ಮಾಡಿದ್ದೇವು.ನಂತರ ನಾವು ಅದಕ್ಕೆ ಗೊಬ್ಬರ, ಕ್ರಿಮಿನಾಶಕ ಕಳೆವು ತೆಗೆಯಿಸಿ ನಾವೇ ಭತ್ತವನ್ನು ಬೆಳೆಸಿದ್ದೇವು ಈಗ ಸದರ್ ಭತ್ತ ಕಟಾವಿಗೆ ಬಂದಿದ್ದರಿಂದ ಸದರ್ ಭತ್ತದ ಕಟಾವಿನ ಸಲುವಾಗಿ ಆರೋಪಿತರಾದ 1) ಚಿರಂಜಿವಿ ತಂದಿ ಹನಮಂತಪ್ಪ ವಯಾ- 50 ವರ್ಷ ಜಾ- ಮಾದಿಗ ಸಾ- ದೇಸಾಯಿಕ್ಯಾಂಪ್ 2) ಹನಮಂತಪ್ಪ @ ಹನಮೇಶ ತಂದಿ ಶಂಕ್ರಪ್ಪ ನೆಟ್ಟಿಕಂಟಿ ವಯಾ-25 ವರ್ಷ ಜಾ- ಮಾದಿಗ ಸಾ- ದೇಸಾಯಕ್ಯಾಂಪ್ 3) ರಾಮಾಂಜನೇಯಲು ತಂದಿ ಹನಮಂತಪ್ಪ ವಯಾ-40 ವರ್ಷ ಜಾ-ಮಾದಿಗ ಸಾ- ದೇಸಾಯಕ್ಯಾಂಪ್ 4) ಸಣ್ಣಹುಲಗಪ್ಪ ತಂದಿ ಈರಣ್ಣ ವಯಾ-38 ವರ್ಷ ಜಾ- ಮಾದಿಗ ಸಾ- ದೇಸಾಯಿಕ್ಯಾಂಪ್ 5) ಮಾರುತಿ ತಾಯಿ ಲಕ್ಷ್ಮಿ ಟೆಂಗಿನಕಾಯಿ ವಯಾ- 26 ವರ್ಷ ಸಾ- ದೇಸಾಯಿಕ್ಯಾಂಪ್ ಹಾಗೂ ಇತರರು ಸೇರಿಕೊಂಡು ಬಂದು ಈ ಜಮೀನು ನಮ್ಮದು ಅಂತಾ ದಿನಾಂಕ : 12-12-2016 ರಂದು ಸಾಯಂಕಾಲ ನಮ್ಮ ಹೊಲದ ಹತ್ತಿರ ಬಂದು ಈ ಜಮೀನುದಲ್ಲಿ ಬೆಳದ ಭತ್ತ ನಮ್ಮದು ಅಂತಾ ನಮಗೆ ಬೈದಾಡಿ ಹೊಗಿದ್ದರು. ನಂತರ ನಾವು ಈ ಬಗ್ಗೆ ಹಿರಿಯರಾದ ಕಾಶೀಮ ತಂದಿ ನಾರಾಯಣಪ್ಪ ಕೊನಕಂಡ್ಲ ವಯಾ-34 ಜಾ- ಮಾದಿಗ ಕೃಷ್ಟಪ್ಪ ತಂದಿ ಮಾರೇಪ್ಪ, ವಯಾ- 48 ವರ್ಷ ಸಾ- ಶ್ರೀರಾಮನಗರ ಇವರ ಸಮಕ್ಷಮದಲ್ಲಿ ವಿಚಾರಿಸಿದ್ದೇವು. ದಿನಾಂಕ : 19-12-2016 ರಂದು ನಾನು ಮತ್ತು ನಮ್ಮ ಸಹೋದರ ಚಿದಾನಂದಪ್ಪ ಕೂಡಿ ರಾತ್ರಿ- 8-30 ಗಂಟೆಯ ಸುಮಾರಿಗೆ ನಮ್ಮ ಹೊಲದಿಂದ ಮನೆಗೆ ಊಟ ಮಾಡಲೆಂದು ಮನಗೆ ಬಂದಿದ್ದೇವು. ನಾವು ಮನೆಗೆ ಬಂದ ಸಮಯ ನೋಡಿ ಮೇಲ್ಕಂಡ ಆರೋಪಿತರು ನಮ್ಮ ಹೊಲಕ್ಕೆ ಹೊಗಿ ನಮ್ಮ ಹೊಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ಹೊಲದಲ್ಲಿ ಬೆಳೆದ ಭತ್ತವನ್ನು ಕ್ಯೋಯ್ದು ಟ್ರ್ಯಾಕ್ಟರ್ದಲ್ಲಿ ಭತ್ತದ ಹುಲ್ಲನ್ನು ಏರಿಕೊಂಡುಹೊಗುತ್ತಿದ್ದಾಗ್ಗೆ ದಿನಾಂಕ : 20-12-2016 ರಂದು ಬೆಳಗಿನ ಜಾವಾ -03-00 ಗಂಟೆಯ ಸುಮಾರಿಗೆ ನಮ್ಮ ಪಕ್ಕದ ಜಮೀನಿನ
ಮಾಲೀಕರಾದ ಮಲ್ಲಪ್ಪ ತಂದಿ ಸಿದ್ದಪ್ಪ ಸಾ- ಗುಂಡೂರ್ ಕ್ಯಾಂಪ್, ಲಕ್ಷ್ಮಪ್ಪ ತಂದಿ ಸಿದ್ದಪ್ಪ ಸಾ-
ಗುಂಡೂರ್ ಕ್ಯಾಂಪ್ ಇವರು ನೋಡಿ ನಮಗೆ ತಿಳಿಸಿದ್ದರಿಂದ ನಾನು ಮತ್ತು ತಮ್ಮ ಚಿದಾನಂದಪ್ಪ ಹಾಗೂ ನಮ್ಮೂರಿನ ಕಾಶೀಮಪ್ಪ , ನಾರಾಯಣಪ್ಪ ಹೊಗಿ
ನೋಡುಷ್ಟರಲ್ಲಿ ಮೇಲ್ಕಂಡ ಆರೋಪಿತರು ನಮ್ಮ ಹೊಲದಲ್ಲಿ ಬೆಳೆದ ಭತ್ತ ಸುಮಾರು 25,000=00 ರೂ. ಬೆಲೆಬಾಳುವದನ್ನು ಕಳ್ಳತನದಿಂದ
ಕ್ಯೊಯ್ದುಕೊಂಡು ಹೊಗಿದ್ದು,ಇರುತ್ತದೆ. ಗುನ್ನೆ ದಾಖಲು ಮಾಡಿಕೊಂಡಿದ್ದು
ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 288/16 ಕಲಂ. 87 Karnataka Police Act.
ದಿನಾಂಕ:-21-12-2016 ರಂದು ಮದ್ಯಾಹ್ನ 14-35 ಗಂಟೆಗೆ ಮೋನಯ್ಯ ಎ.ಎಸ್.ಐ ಕಾರಟಗಿ
ರವರು ಒಂದು ಮಟ್ಕಾ ಜೂಜಾಟ ದಾಳಿ ಪಂಚನಾಮೆ, ಮಾನ್ಯ ನ್ಯಾಯಾಲಯದ
ಪರವಾನಿಗೆಯೊಂದಿಗೆ ವರದಿಯನ್ನು ಹಾಜರುಪಡಿಸಿದ್ದು ಸದ್ರಿ ವರದಿಯಲ್ಲಿ ಇಂದು ದಿನಾಂಕ:-21-12-2016 ರಂದು ಮದ್ಯಾಹ್ನ 12-50 ಗಂಟೆಯ ಸುಮಾರಿಗೆ ಆರೋಪಿತನು
ಸಿದ್ದಾಪೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ
ಪಡೆದುಕೊಂಡು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಎ.ಎಸ್.ಐ ಮತ್ತು ಸಿಬ್ಬಂದಿವರು ದಾಳಿ ಮಾಡಿ
ಹಿಡಿದುಕೊಂಡು ಆರೋಪಿತನಿಂದ ರೂ.1940/-ಗಳನ್ನು ಮತ್ತು ಮಟ್ಕಾ ಪಟ್ಟಿ
ಹಾಗು ಒಂದು ಬಾಲ್ ಪೆನ್ನು ಜಪ್ತ ಮಾಡಿಕೊಂಡು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
0 comments:
Post a Comment