Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, December 20, 2016

1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 292/16 ಕಲಂ 379 ಐ.ಪಿ.ಸಿ:.

ದಿನಾಂಕ 19-12-2016 ರಂದು ರಾತ್ರಿ 8-00 ಗಂಟೆಗೆ ಎನ್.ಶಿವಕೃಷ್ಣ ತಂದೆ ಪ್ರಸಾದರಾವ್ ನರಸಾಪುರ ವಯಸ್ಸು 29 ವರ್ಷ ಜಾ:ಮಡಿವಾಳ :ಲಾರಿ ಮಾಲೀಕರು ಸಾ: ವಡ್ಡರಹಟ್ಟಿ ಗದ್ವಾಲ್ ಕ್ಯಾಂಪ್ ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಫಿರ್ಯಾದಿದಾರರ ಅಶೋಕ ಲೇಲ್ಯಾಂಡ್ ಕಂಪನಿಯ ಲಾರಿ ನಂ. A.P.-21/Y-2319 ನೇದ್ದನ್ನು ಗಂಗಾವತಿ ನಗರದ .ಪಿ.ಎಂ.ಸಿ. ಯಲ್ಲಿ ನಿಲ್ಲಿಸಿದ್ದು, ದಿನಾಂಕ 10-12-2016 ರಂದು ಬೆಳಗಿನ ಜಾವ 05-00 .ಎಂ. ದಿಂದ 08-00 .ಎಂ. ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಸದರಿ ಲಾರಿ ನಂ. ನಂ. ..-21/-2319 ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿ ಅದನ್ನು ಹೊಸಪೇಟೆಯ ಅಂಡರ್ ಗ್ರೌಂಡದಲ್ಲಿ ಬಿಟ್ಟು ಹೋಗಿ, ಸದರಿ ಲಾರಿಯಲ್ಲಿಂದ (01) 06 ಟೈರ್ಗಳು ಎಂ.ಆರ್.ಎಫ್. ಕಂಪನಿಯವು ಡಿಸ್ಕ್ ಸಮೇತ ಒಟ್ಟು ಅಂ.ಕಿ.ರೂ. 1,53,000-00. (02) ಪವರ್ ಲೈನ್ ಕಂಪನಿಯ 02 ಬ್ಯಾಟರಿಗಳು ರೂ.10,000-00. (03) 01 ವಾಟರ್ ಪ್ರೂಫ್ ತಾಡಪಾಲು ರೂ.18,000-00. (04) ಜಾಕ್ & ಜಾಕ್ ರಾಡ್ ಅಂ.ಕಿ.ರೂ. 5,000-00. ಹೀಗೆ ಒಟ್ಟು ಅಂ.ಕಿ.ರೂ. 1,86,000-00 ಬೆಲೆ ಬಾಳುವವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008