ದಿ :25.12.2016 ರಂದು 11-00 ಎ.ಎಮ್ ಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಶ್ರೀ ಹಮ್ಮಿಗೇಶ್ವರ ದೇವಾಲಯದ
ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 07 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ
ತೊಡಗಿದ್ದಾಗ ಪಿ.ಎಸ್,ಐ ರವರು ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಪಂಚರ ಸಮಕ್ಷಮ ದಾಳಿ
ಮಾಡಿದ್ದು 07 ಜನರು ಸಿಕ್ಕಿಬಿದ್ದಿದ್ದು, ಸದರಿಯವರಿಂದ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ. 1370=00 ರೂ, 52 ಇಸ್ಪೇಟ್ ಎಲೆ, ಒಂದು ಹಾಳೆಯ ಚೀಲ ಇವುಗಳನ್ನು
ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಸಿಕ್ಕ 07 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಹೀಗೆ ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ
ಜರುಗಿಸಿದ್ದು ಇರುತ್ತದೆ.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 150/16 ಕಲಂ 87 Karnataka Police Act.
ದಿನಾಂಕ:25-12-2016 ರಂದು 4-30 ಪಿಎಂಕ್ಕೆ ಪಿ.ಎಸ್.ಐ. ಕುಕನೂರ ಠಾಣೆರವರು ಠಾಣೆಗೆ ಬಂದು ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ ತರ್ಫೆ ಪಿರ್ಯಾದಿಯನ್ನು, ಮುದ್ದೆಮಾಲು ಹಾಗೂ ವಶಕ್ಕೆ ಪಡೆದ 4 ಜನ ಆರೋಪಿತರನ್ನು ಹಾಜರಪಡಿಸಿ ವರದಿ ನೀಡಿದ್ದು, ದಿನಾಂಕ:25-12-2016 ರಂದು 2.30 ಪಿಎಂಕ್ಕೆ
ಬಳಗೇರಿ ಗ್ರಾಮದ ಬಳ್ಳೇಶ್ವರ ಗುಡಿ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದ ನಡೆದ ಮಾಹಿತಿ ಬಂದ ಪ್ರಕಾರ ತಾವು ಮಾನ್ಯ ಸಿ.ಪಿ.ಐ.ಸಾಹೇಬರ
ಮಾರ್ಗದರ್ಶನದಲ್ಲಿ ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 3-15 ಪಿಎಂಕ್ಕೆ ಬಳಗೇರಿ ಗ್ರಾಮದ ಬಳ್ಳೇಶ್ವರ ಗುಡಿ ಪಕ್ಕದ ಸಾರ್ವಜನಿಕ
ಸ್ಥಳದಲ್ಲಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, ಸದರಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಸಿಕ್ಕಿಬಿದ್ದ ಆರೋಪಿತರಿಂದ ಹಾಗೂ ಜೂಜಾಟದ ಕಣದಿಂದ ಒಂದು ಟಾವೆಲ್, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 1480=00 ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ: 86/16 ಕಲಂ 20(ಬಿ)(2)(ಬಿ) ಎನ.ಡಿ.ಪಿ.ಎಸ್. ಕಾಯ್ದೆ 1985.
ಆರೋಪಿ ದುರುಗಪ್ಪ ಹರಿಜನ ಇವನು ಮರಕಟ್ ಗ್ರಾಮದಲ್ಲಿ ತನ್ನ ಮನೆಯ
ಮುಂದೆ ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡಲು ಗಾಂಜಾ ಗಿಡಗಳನ್ನು
ಬೆಳಸಿದ್ದು ದಿನಾಂಕ: 25.12.2016 ರಂದು ಪಿಎಸ್ಐ ಯಲಬುರ್ಗಾ ರವರಿಗೆ ಈ ಬಗ್ಗೆ ಖಚಿತ ಮಾಹಿತಿ ಬಂದ
ಮೇರೆಗೆ ಪಿಎಸ್ಐ ರವರು ಮತ್ತು ಬೇವೂರ ಠಾಣೆಯ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ಬಾತ್ಮಿ ಪ್ರಕಾರ
ಮರಕಟ್ ಗ್ರಾಮದಲ್ಲಿ ಆರೋಫಿತನು ತನ್ನ ಮನೆಯ ಮುಂದೆ ಬೇಳೆಸಿದ ಗಾಂಜಾ ಗಿಡಿಗಳು ಪಂಚರ ಸಮಕ್ಷಮ ಕಿತ್ತಿದ್ದು
ಅವುಗಳು ತೂಕ 2 ಕೆ.ಜಿ 10 ಗ್ರಾಂ, ಇದ್ದು ಅ.ಕಿ.
5000/- ರೂ, ಕಿಮ್ಮತ್ತಿನ ಗಾಂಜಾ ಗಿಡಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ
ಕೈಗೊಂಡಿದ್ದು ಇರುತ್ತದೆ.
0 comments:
Post a Comment