ದಿನಾಂಕ: 13-12-2016 ರಂದು ರಾತ್ರಿ 11-30 ಗಂಟೆಗೆ ಪಿಯರ್ಾದಿ ಕೆ. ವೆಂಕಟೇಶ ತಂದೆ ಬಸಪ್ಪ
ಜಾ: ಕುರುಬರು ಉ: ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಅಧ್ಯಕ್ಷರು ನಗರ ಸಭೆ ಗಂಗಾವತಿ, ಸಾ: ಗಂಗಾವತಿ.ರವರು
ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿಯರ್ಯಾದಿ ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿಯು ತಮ್ಮ
ಮಗನ ಫೇಸ್ಬುಕ್ ನಲ್ಲಿ ನೋಡಲಾಗಿ ಗಂಗಾವತಿಯ ಸುನೀಲ್ ಎಸ್. ರಾಯ್ಕರ್ ಈತನು ತನ್ನ ಪೇಸ್ ಬುಕ್ ಸ್ಟೇಟಸ್
ನಲ್ಲಿ ದಿನಾಂಕ: 12-12-2016 ರಂದು ಸಂಜೆ 6-02 ಗಂಟೆಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ
ಇವರಿಗೆ ಕೊಲೆ ಬೆದರಿಕೆ ಹಾಗೂ ಕುರುಬ ಜಾತಿಯ ಬಗ್ಗೆ ಅವಾಚ್ಯವಾಗಿ ಅವಹೇಳನಕಾರಿ ಶಬ್ದಗಳನ್ನು ಬಳಸಿ
ಸ್ಟೇಟಸ್ ಹಾಕಿ ಕೋಮು ಭಾವನೆ ಕೆರಳಿಸುವ ರೀತಿಯಲ್ಲಿ ಹಾಕಿ ನಮ್ಮ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದರಿಂದ
ಈ ರೀತಿ ಕೃತ್ಯ ಎಸಗಿರುವ ಆರೋಪಿತನ ಮೇಲೆ ಸೂಕ್ತ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ
ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 143/2016 ಕಲಂ: 87 Karnataka Police
Act:.
ದಿನಾಂಕ:13-12-2016
ರಂದು 11-15 ಪಿಎಂಕ್ಕೆ ಪಿ.ಎಸ್.ಐ. ಕುಕನೂರ
ಠಾಣೆರವರು ಠಾಣೆಗೆ ಬಂದು ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ
ತರ್ಫೆ ಪಿರ್ಯಾದಿಯನ್ನು, ಮುದ್ದೆಮಾಲು ಹಾಗೂ ವಶಕ್ಕೆ ಪಡೆದ 5 ಜನ
ಆರೋಪಿತರನ್ನು ಹಾಜರಪಡಿಸಿ ವರದಿ ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ದಿನಾಂಕ:13-12-2016
ರಂದು 9.00 ಪಿಎಂಕ್ಕೆ ತಳಕಲ್ ಗ್ರಾಮದ ಕರಿಯಮ್ಮನ ಗುಡಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ
ಇಸ್ಪೀಟ್ ಜೂಜಾಟದ ನಡೆದ ಮಾಹಿತಿ ಬಂದ ಪ್ರಕಾರ ತಾವು ಮಾನ್ಯ ಸಿ.ಪಿ.ಐ.ಸಾಹೇಬರ ಮಾರ್ಗದರ್ಶನದಲ್ಲಿ ಇಬ್ಬರೂ ಪಂಚರ
ಸಮಕ್ಷಮ ಸಿಬ್ಬಂದಿಯೊಂದಿಗೆ 9-45 ಪಿಎಂಕ್ಕೆ ತಳಕಲ್ ಗ್ರಾಮದ
ಕರಿಯಮ್ಮನ ಗುಡಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರ
ಮೇಲೆ ದಾಳಿ ಮಾಡಿ, ಸದರಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಸಿಕ್ಕಿಬಿದ್ದ
ಆರೋಪಿತರಿಂದ ಹಾಗೂ ಜೂಜಾಟದ ಕಣದಿಂದ ಒಂದು ಟಾವೆಲ್, 52 ಇಸ್ಪೀಟ್
ಎಲೆಗಳು ಹಾಗೂ ಜೂಜಾಟದ ನಗದು ಹಣ 2700=00 ರೂ.ಗಳನ್ನು ಜಪ್ತ
ಪಡಿಸಿಕೊಂಡಿದ್ದು, ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು, ಕಾರಣ, ಸದರಿಯವರ ಮೇಲೆ
ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 283/2016 ಕಲಂ: 279, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ : 13-12-2016 ರಂದು ರಾತ್ರಿ 9-15 ಗಂಟೆಯ ಸುಮಾರಿಗೆ
ಫಿರ್ಯಾದಿದಾರರಾದ ಶ್ರೀ ದೊಡ್ಡಬಸಪ್ಪ ತಂದಿ ಚನ್ನಬಸಪ್ಪ ಇಟಗಿ ವಯಾ- 55 ವರ್ಷ ಜಾ- ಬೋವಿ ಉ-
ಕೂಲಕಸಬು ಸಾ- ಸಿದ್ದಾಪೂರ ತಾ- ಗಂಗಾವತಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು
ಅದರ ಸಾರಾಶಂವೆನೆಂದರೆ, ನಾನು ಕುಲಕಸಬು ಮಾಡಿಕೊಂಡು ಉಪಜೀವನ ಮಾಡುತ್ತೇನೆ. ನನ್ನ ತಂಗಿಯಾದ
ಯಲ್ಲಮ್ಮ ಗಂಡ ನಾರಾಯಣಪ್ಪ ಇಟಗಿ ವಯಾ- 48 ವರ್ಷ ಸಾ- ಸಿದ್ದಾಪೂರ ಇವರು ಕೂಲಿ ಕೆಲಸ
ಮಾಡಿಕೊಂಡಿದ್ದು, ಮತ್ತು ಆಯಾ ಕೆಲಸ ಮಾಡಿಕೊಂಡಿರುತ್ತಾಳೆ. ಇಂದು ದಿನಾಂಕ :13-12-2016 ರಂದು
ಮದ್ಯಾಹ್ನ 12-30 ಗಂಟೆಯಿಂದ ಮದ್ಯಾಹ್ನ 1-00 ಗಂಟೆಯ ಅವದಿಯಲ್ಲಿ ನಮ್ಮ ತಂಗಿ ಯಲ್ಲಮ್ಮ
ಇಕೆಯು ರಸ್ತೆ ದಾಟಲೆಂದು ಕಾರಟಗಿ- ಗಂಗಾವತಿ ರಸ್ತೆಯ ಪೂರ್ವ ಬದಿಗೆ ಈಳಿಗನೂರ ಕ್ರಾಸ್ ಹತ್ತಿರ
ರಸ್ತೆಯ ಪೂರ್ವಬದಿಯಲ್ಲಿ ನಿಂತುಕೊಂಡಿದ್ದಾಗ್ಗೆ ಕಾರಟಗಿ ಕಡೆಯಿಂದ ಒಬ್ಬ ಕೆ.ಎಸ್.ಆರ್.ಟಿ.ಸಿ.
ಬಸ್ ಚಾಲಕ ತನ್ನ ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆಯ ಪೂರ್ವ
ಬದಿಯಲ್ಲಿ ನಿಂತಿದ್ದ ಯಲ್ಲಮ್ಮ ಈಕೆಗೆ ಟಕ್ಕರ್ ಕೊಟ್ಟು ಅಪಘಾತಪಡಿಸಿದ ಇದರಿಂದ ಯಲ್ಲಮ್ಮ ಇಕೆಯು
ಕೆಳಗೆ ಬಿದ್ದಿದರಿಂದ ನಾನು ಮತ್ತು ನಮ್ಮ ಗ್ಯಾನೇಶ ನೋಡಿ ಹೊಗಿ ಎಬ್ಬಿಸಲು ಯಲ್ಲಮ್ಮ
ಇಕೆಗೆ ತಲೆಗೆ ಎದೆಗೆ ಕೈಗಳಿಗೆ ಭಾರಿ ಒಳಪೆಟ್ಟು ಮತ್ತು ಮೂಳೆ ಮೂರಿತವಾಗಿದ್ದು
ಅಪಘಾತಪಡಿಸಿದ ಬಸ್ ನಂಬರ್ ನೋಡಲು ಕೆ.ಎ- 1 7 / ಎಪ್- 1596 ಅಂತಾ ಇದ್ದು ಅಪಘಾತವಾದ
ನಂತರ ಬಸ್ ಚಾಲಕ ಬಸ್ಸನ್ನು ಸ್ವಲ್ಪ ಹೊತ್ತು ಬಸ್ಸನ್ನು ನಿಲ್ಲಿಸಿದ್ದು ನಾವು ನಮ್ಮ ಯಲ್ಲಮ್ಮಳಿಗೆ
ಚಿಕಿತ್ಸೆಗಾಗಿ ಮೊದಲು ಗಂಗಾವತಿಯ ಮಲ್ಲನಗೌಡ ಆಸ್ಪತ್ರೆಗೆ ಕರೆದುಕೊಂಡು ಹೊಗಿದ್ದು ನಂತರ ಹೆಚ್ಚಿನ
ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕಳುಹಿಸಿಕೊಟ್ಟು ಬರುವಷ್ಟರಲ್ಲಿ ಬಸ್ ಚಾಲಕ ಬಸ್ಸ ನಿಲ್ಲಿಸದೆ
ಹೊಗಿದ್ದು ಇರುತ್ತದೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment