ಇಂದು ದಿನಾಂಕ 20-12-2016 ರಂದು 13-30 ಗಂಟೆಗೆ ಶ್ರೀ ಅನೀಲ್ ಕುಮಾರ ತಂದೆ ಮಾಣಿಕ್ರಾವ್
ಕುಲಕರ್ಣಿ ವ್ಯವಸ್ಥಾಪಕರು ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ, ಕೃಷಿ ಅಭಿವೃದ್ದಿ ಶಾಖೆ, ಸಿ.ಬಿ.ಎಸ್.
ಗಂಜ್, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾಧಿ ನೀಡಿದ್ದು ಅದರ ಸಾರಂಶವೇನೆಂದರೆ, ಗಂಗಾವತಿ
ತಾಲೂಕಿನ ಈಳಿಗನೂರು ಗ್ರಾಮದ ಸರ್ವೆ ನಂ. 147/2 ವಿಸ್ತೀರ್ಣ 01 ಎಕರೆ 35 ಗುಂಟೆ ಕೃಷಿ ಭೂಮಿಯು ಆರೋಪಿ
ನಂ. 02 ಕೆ.ಸಾಂಭಶಿವರಾವ್ ಇವರ ಹೆಸರಿನಲ್ಲಿದ್ದು, ಸದರಿ ಆಸ್ತಿಯ ಮೇಲೆ ಕೆ.ಸಾಂಭಶಿವರಾವ್ ಇವರು ತಮ್ಮ
ಪತ್ನಿಯೊಂದಿಗೆ ಕಾರಟಗಿಯ ಎಸ್.ಬಿ.ಎಂ. ಶಾಖೆಯಲ್ಲಿ ಸಾಲ ಪಡೆದುಕೊಂಡು ಸಾಲದ ಹಣವನ್ನು ಕಟ್ಟದೆ ಭೂಮಿಯನ್ನು
ಆರೋಪಿ ನಂ. 01 ಮಹ್ಮದ ಆರೀಫ್ ಇವರಿಗೆ ಮಾರಾಟ ಮಾಡಿದ್ದು, ಮಹ್ಮದ ಆರೀಫ್ ಇತನು ದಿನಾಂಕ
27-05-2011 ಮತ್ತು ದಿನಾಂಕ 09-07-2011 ರಂದು ಏಟಿಎಲ್ ಮತ್ತು ಏಸಿಸಿ (ಬೆಳೆಸಾಲ)ಗಳನ್ನು ಕಿಸಾನ್
ಕ್ರೆಡಿಟ್ ಕಾರ್ಡ ಹಾಗೂ ಬೆಳೆ ಸಾಲ ಮುಖಾಂತರ ಕ್ರಮವಾಗಿ ರೂ.1,96,000-00 ಮತ್ತು ರೂ.
28,000-00 ಸಾಲದ ರೂಪವಾಗಿ ಈಳಿಗನೂರು ಗ್ರಾಮದ ಸವರ್ೆ ನಂ. 147/2 ವಿಸ್ತೀರ್ಣ 01 ಎಕರೆ 35 ಗುಂಟೆ
ಕೃಷಿ ಭೂಮಿಯನ್ನು ಬ್ಯಾಂಕಿಗೆ ವತ್ತಿ ಇಟ್ಟು ಪಡೆದುಕೊಂಡಿದ್ದು ಇರುತ್ತದೆ. ಆರೋಪಿ ನಂ. 02 ಕೆ.ಸಾಂಭಶಿವರಾವ್
ಇತನು ಕಾರಟಗಿ ಬ್ಯಾಂಕಿನಲ್ಲಿ ಸದರಿ ಭೂಮಿಯ ಮೇಲೆ ಸಾಲ ಪಡೆದುಕೊಂಡ ಬಗ್ಗೆ ಪಹಣಿ ಪತ್ರಿಕೆಯಲ್ಲಿ ನಮೂದು
ಮಾಡಿದ್ದು, ನಂತರ ಆರೋಪಿತರಿಬ್ಬರು ಕೂಡಿಕೊಂಡು ಬ್ಯಾಂಕ್ಗಳಿಗೆ ನಂಬಿಕೆ ದ್ರೋಹವೆಸಗಿ ಮೋಸ ಮಾಡುವ
ಉದ್ದೇಶದಿಂದ ಪಹಣಿ ಪತ್ರಿಕೆಯಲ್ಲಿ ಕಾರಟಗಿ ಬ್ಯಾಂಕಿನಲ್ಲಿ ಪಡೆದ ಸಾಲದ ಬಗ್ಗೆ ಪಹಣಿ ಪತ್ರಿಕೆಯಲ್ಲಿ
ಬರದಂತೆ ನೋಡಿಕೊಂಡು ಗಂಗಾವತಿಯ ಎಸ್.ಬಿ.ಎಸ್. ಎ.ಡಿ.ಬಿ. ಬ್ಯಾಂಕಿನಲ್ಲಿ ಸಾಲ ಪಡೆದುಕೊಂಡು ಬ್ಯಾಂಕಿಗೆ
ನಂಬಿಕೆ ದ್ರೋಹವೆಸಗಿ ಮೋಸ ಮಾಡಿರುತ್ತಾರೆ ಅಂತಾ ನೀಡಿದ ಸಾರಾಂಶದ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 182/16 ಕಲಂ. 279 337 338 ಐಪಿಸಿ.
ಇಂದು ದಿನಾಂಕ 20-12-2016 ರಂದು ರಾತ್ರಿ 8-00 ಗಂಟೆಗೆ ಶ್ರೀ ಅಮರೇಶ ತಂದೆ ಮರಿಸ್ವಾಮಿ ಬೂದಗುಂಪಾ
ವಯ.30 ವರ್ಷ ಜಾ.ವೈಶ್ಯ ಉ.ವ್ಯಾಪಾರ ಸಾ.ಬರಗೂರ ತಾ.ಗಂಗಾವತಿ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ಫಿರ್ಯಾಧಿ
ನೀಡಿದ್ದು ಅದರಲ್ಲಿ ತಮ್ಮ ಜೊತೆಯಲ್ಲಿ ತಮ್ಮ ಚಿಕ್ಕಪ್ಪನಾದ ಭೀಮಯ್ಯರವರನ್ನು ಕರೆದುಕೊಂಡು ದಿನಾಂಕ
20-12-2016 ರಂದು ಸಂಜೆ 5-00 ಗಂಟೆಗೆ ತಮ್ಮ ಸ್ವಗ್ರಾಮ ಬರಗೂರದಿಂದ ಕುಷ್ಟಗಿಗೆ ಹೊರಟಿದ್ದು ಕನಕಗಿರಿಯನ್ನು
ದಾಟಿಕೊಂಡು ಕನಕಾಪುರ ಕ್ರಾಸ್ ಹತ್ತಿರ ತಮ್ಮ ಮೋ/ಸೈ ನ್ನು ನಿಧಾನವಾಗಿ ಚಲಾಯಿಸಿದ್ದು ಈ ವೇಳೆಯಲ್ಲಿ
ಸಾಯಂಕಾಲ 6-00 ಗಂಟೆಯ ಸುಮಾರಿಗೆ ಹಿಂದಿನಿಂದ ಬಂದ ಹೆಚ್.ಎಫ್ ಡೀಲಕ್ಸ ಮೋಟರ್ ಸೈಕಲ್ ಸಂ. ಕೆ.ಎ.37
ವೈ-2901 ನೇದ್ದರ ಚಾಲಕನು ತನ್ನ ಮೊಟರ್ ಸೈಕಲ್ನ್ನು ಅತಿವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು
ಹಿಂದಿನಿಂದ ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದು ಇಬ್ಬರಿಗೂ ಗಾಯಗಳಾಗಿದ್ದು ಕಾರಣ ಅಪಘಾತಪಡಿಸಿದ ಹೆಚ್.ಎಫ್
ಡೀಲಕ್ಸ ಮೋಟರ್ ಸೈಕಲ್ ಸಂ. ಕೆ.ಎ.37 ವೈ-2901 ನೇದ್ದರ ಚಾಲಕ ರಾಮಣ್ಣ ತಂದೆ ಕರಿಯಪ್ಪ ಪ್ರಧಾನಿ ವಯ.40
ವರ್ಷ ಜಾ.ನಾಯಕ ಉ.ಒಕ್ಕಲುತನ ಸಾ.ಗಂಗನಾಳ ಈತನ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳುವಂತೆ
ಮುಂತಾಗಿ ನೀಡಿದ ಫಿರ್ಯಾಧಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment