ದಿನಾಂಕ:
07-12-2016 ರಂದು ಬೆಳಿಗ್ಗೆ 07-45 ಗಂಟೆಗೆ
ಶಿವಲೀಲಾ.
ವಿ. ತೋಟಗಿ ಸಹ ಶಿಕ್ಷಕಿ ಸ.ಹಿ.ಪ್ರಾ.ಶಾಲೆ ಹಿರೇನಂದಿಹಾಳ ಇವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸದರ
ಪಿರ್ಯಾದಿ ಸಾರಾಂಶವೆನೆಂದರೆ, ಫಿರ್ಯಾದಿದಾರರು ಸನ್ 2010 ನೇ ಸಾಲಿನಿಂದ ಹಿರೇನಂದಿಹಾಳ ಗ್ರಾಮದ ಸ.ಹಿ.ಪ್ರಾ. ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಆರೋಪಿತನಾದ ವೀರೇಶ ಕಲ್ಗುಡಿ ಸಾ.ಹಿರೇನಂದಿಹಾಳ ಈತನು ಕಳೆದ ಎರಡು ವರ್ಷಗಳಿಂದ ಫಿರ್ಯಾದಿದಾರರಿಗೆ
ತೊಂದರೆ ಕೊಡುತ್ತಿದ್ದು, ದಿನಾಂಕ.
03-12-2016 ರಂದು ಬೆಳಿಗ್ಗೆ 8-30 ಗಂಟೆಗೆ ಫಿರ್ಯಾದಿದಾರರು ಶಾಲೆಗೆ ಹೋಗುತ್ತಿದ್ದಾಗ ಶಾಲೆಯಿಂದ ಸ್ವಲ್ಪ
ದೂರದಲ್ಲಿ ಆರೋಪಿತನು ಫಿರ್ಯಾದಿದಾರರಿಗೆ ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ದು ಹಾಗೂ ದೈಹಿಕ
ಹಲ್ಲೆ ಮಾಡಿದ್ದು ಅಲ್ಲದೇ ಸದರಿ ಆರೋಪಿತನು ಫಿರ್ಯಾದಿದಾರರಿಗೆ ಹಲವಾರು ಬಾರಿ ಜೀವ ಬೆದರಿಕೆ
ಹಾಕಿದ್ದು ಹಾಗೂ ಅವರನ್ನು ಹಿಂಬಾಲಿಸುತ್ತಿದ್ದುದು ಇರುತ್ತದೆ ಅಂತಾ ಮುಂತಾಗಿ ನೀಡಿದ ಲಿಖಿತ
ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕ್ರಮ ಕೈಗೊಂಡಿದ್ದು
ಇರುತ್ತದೆ.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 219/2016
ಕಲಂ: 454, 457, 380 ಐ.ಪಿ.ಸಿ:.
ದಿನಾಂಕ 07-12-2016 ರಂದು ಸಾಯಂಕಾಲ 06-30 ಗಂಟೆಗೆ ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ಪಿರ್ಯಾಧಿ ಸಲ್ಲಿಸಿದ್ದು
ಸಾರಾಂಶವೇನೆಂದರೆ ತಮ್ಮ ಕುಟುಂಬ ಸಮೇತ ಹುಲಿಗೆಮ್ಮ ದೇವಸ್ಥಾನಕ್ಕೆ ದೇವತಾ ಕಾರ್ಯ ಕುರಿತು ತಮ್ಮ
ಮನೆಗೆ ಕೀಲಿಯನ್ನು ಹಾಕಿಕೊಂಡು ಹೋಗಿದ್ದು ಇಂದು ದಿನಾಂಕ : 07-12-2016
ರಂದು ಬೆಳಿಗ್ಗೆ 09-00 ಗಂಟೆ ಸುಮಾರಿಗೆ ನಮ್ಮ ಮನೆಯ ಮಾಲೀಕರಾದ ಮುದಿಯಪ್ಪ ಮುರಡಿಯವರು ನನಗೆ ಫೋನ್ ಮಾಡಿ ನಿಮ್ಮ
ಮನೆಯ ಮುಂದಿನ ಬಾಗಿಲಿಗೆ ಹಾಕಿದ ಕೀಲಿ ಮುರಿದಿರುತ್ತದೆ. ನೀವು ಬರ್ರಿ ಅಂತಾ ತಿಳಿಸಿದ ಮೇರೆಗೆ
ನಾನು ಹಾಗೂ ನನ್ನ ತಾಯಿ ತಂಗಿಯರು ಹುಲಿಗೇಮ್ಮ ದೇವಸ್ಥಾನದಿಂದ ವಾಪಸ್ ಬಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನೋಡಲು ನಮ್ಮ ಮನೆಯ ಮುಂದಿನ ಬಾಗಿಲಿಗೆ ಹಾಕಿದ ಕೀಲಿ
ಕೈ ಮುರಿದು ಕೆಳಗೆ ಬಿದ್ದಿತ್ತು. ನಾನು ಗಾಭರಿಯಾಗಿ ಮನೆಯ ಒಳಗೆ ಹೋಗಿ ನೋಡಲು ಮನೆಯ ರೂಮನಲ್ಲಿ
ಇಟ್ಟಿದ್ದ, ಅಲ್ಮಾರದ ಬಾಗಿಲು
ತೆರೆದುಕೊಂಡಿದ್ದು, ನೋಡಲು ಅದರಲ್ಲಿಯ
ಕೆಲ ವಸ್ತುಗಳು ಚಲ್ಲಾ-ಪಿಲ್ಲಿಯಾಗಿದ್ದವು. ನಂತರ ನಾನು ನೋಡಲು ಅಲ್ಮಾರದಲ್ಲಿಟ್ಟಿದ್ದ ಮನೆ
ಮಾರಾಟ ಮಾಡಿ ಬಂದಿದ್ದ ನಗದು ಹಣ 1 ಲಕ್ಷ 30 ಸಾವಿರ ರೂಪಾಯಿ, ಬಂಗಾರ ಹಾಗೂ ಬೆಳ್ಳಿಯ ಆಭರಣಗಳು ಸೇರಿ ಅಂ.ಕಿ 3,31,900=00 ರೂ ಬಾಳುವ ವಸ್ತುಗಳನ್ನು ನಿನ್ನೆ
ದಿನಾಂಕ : 06-12-2016 ರ ಸಾಯಂಕಾಲ 05-00 ಗಂಟೆಯಿಂದ ಇಂದು ದಿನಾಂಕ : 07-12-2016
ಬೆಳಿಗ್ಗೆ 09-00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ನಮ್ಮ ಮನೆಯ ಬಾಗಿಲಿಗೆ ಹಾಕಿದ
ಕೀಲಿಯನ್ನು ಮುರಿದು. ಒಳಗೆ ಪ್ರವೇಶ ಮಾಡಿ ಅಲ್ಮಾರದಲ್ಲಿಟ್ಟಿದ್ದ ಮೇಲ್ಕಂಡ ವಸ್ತುಗಳನ್ನು ಕಳುವು
ಮಾಡಿಕೊಂಡು ಹೋಗಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 330/2016
ಕಲಂ: 279, 337, 338 ಐ.ಪಿ.ಸಿ:.
ದಿನಾಂಕ. 07-12-2016 ರಂದು 1-00 ಪಿ.ಎಂ.ಕ್ಕೆ ಫಿರ್ಯಾದಿದಾರರಾದ
ವೆಂಕಟೇಶ ತಂ/ ಕೃಷ್ಣಪ್ಪ ಅಧಿಕಾರಿ ವಯಾ 33 ವರ್ಷ, ದಿನಾಂಕ. 07-12-2016 ರಂದು ಬೆಳಿಗ್ಗೆ
11-00 ಗಂಟೆ ಸುಮಾರಿಗೆ ನಾನು ಕನಕಗಿರಿಯ ಕನಕಾಚಪತಿ ದೇವಸ್ಥಾನದಲ್ಲಿ ನನ್ನ ಮೋಟಾರ ಸೈಕಲ್ ಪೂಜೆ ಮಾಡಿಸಿಕೊಂಡು
ಬರಬೇಕೆಂದು ನಮ್ಮೂರಿನಿಂದ ಕನಕಗಿರಿಗೆ ಹೋಗುತ್ತಿರುವಾಗ ಗಂಗಾವತಿ ಕನಕಗಿರಿ ರಸ್ತೆಯ ಮೇಲೆ ಗುರಮ್ಮ
ಕ್ಯಾಂಪ ಹತ್ತಿರ ನನ್ನ ಮುಂದೆ ಹೀರೊ ಹೊಂಡಾ ಮೋಟಾರ ಸೈಕಲ್ ನಂ. ಕೆ.ಎ.37/ಜೆ.5760 ನೇದ್ದರ ಸವಾರನು
ಕನಕಗಿರಿ ಕಡೆಗೆ ಹೊರಟಿದ್ದು, ಆತನ ಮುಂದೆ ಎದುರಿಗೆ ಕನಕಗಿರಿ ಕಡೆಯಿಂದ ಒಂದು ಆಟೋ ನಂ. ಕೆ.ಎ.36/8944
ಬರುತ್ತಿತ್ತು, ಆ ಆಟೋದ ಹಿಂದೆ ಟಿ.ವಿ.ಎಸ್.ಸ್ಟಾರ ಸಿಟಿ ಮೋಟಾರ ಸೈಕಲ್ ನಂ. ಕೆ.ಎ.37/ಯು.1375 ನೇದ್ದರ
ಸವಾರನು ಮೋಟಾರ ಸೈಕಲನ್ನು ಅತಿವೇಗವಾಗಿ ತೀವ್ರ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಆಟೋವನ್ನು ಓವರಟೇಕ್
ಮಾಡಿ ಒಮ್ಮೇಲೆ ರಾಂಗ್ ಸೈಡಿನಲ್ಲಿ ರಸ್ತೆಯ ಮೇಲೆ ಬಂದು ಹಿರೋ ಹೊಂಡಾ ಮೋಟಾರ ಸೈಕಲ್ ಎದುರಿಗೆ ಬಂದು
ಮೋಟಾರ ಸೈಕಲ್ ಡಿಕ್ಕಿ ಕೊಟ್ಟು ಅಪಘಾತ ಮಾಡಿದನು. ಆಗ ಮೋಟಾರ ಸೈಕಲ್ ಸವಾರರಿಬ್ಬರು ಮೋಟಾರ ಸೈಕಲ್
ಸಮೇತ ಕೆಳಗೆ ಆಟೋದ ಮುಂದೆ ಬಿದ್ದಾಗ ಆಟೋ ಚಾಲಕನು ಇವರಿಗೆ ಡಿಕ್ಕಿ ಕೊಡುತ್ತದೆ ಎಂದು ಒಮ್ಮೇಲೆ ಬ್ರೇಕ್
ಹಾಕಿ ಬಲಗಡೆಗೆ ತಿರುಗಿಸಿದ್ದರಿಂದ ಆಟೋವನ್ನು ರಸ್ತೆಯ ಪಕ್ಕದಲ್ಲಿ ತಗ್ಗಿನಲ್ಲಿ ಹೋಗಿ ಬಿದ್ದಿರುತ್ತದೆ.
ಈ ಅಪಘಾತದಲ್ಲಿ ಹಿರೋಹೊಂಡಾ ಮೋಟಾರ ಸೈಕಲ್ ಮೇಲೆ ಹೊರಟಿದ್ದ ಭೀಮಣ್ಣ ತಂ/ ಅಂಬರೇಶ ಈಸನಾಳ ಸಾ. ಹೆರೂರ
ಇವರಿಗೆ ತಲೆಗೆ ಬಾರಿಗಾಯವಾಗಿರುತ್ತದೆ. ಟಿ.ವಿ.ಎಸ್. ಸ್ಟಾರ ಸಿಟಿ ಮೋಟಾರ ಸೈಕಲ್ ಸವಾರನಿಗೆ ಹನಮಂತಪ್ಪ
ತಂ/ ಜಂಬಣ್ಣ ಸುಣಗಾರ ಸಾ. ಸಿದ್ದಾಪುರ ಇವರಿಗೆ ಗದ್ದದ ಕೆಳಗೆ ರಕ್ತಗಾಯವಾಗಿದ್ದು, ಬಾಯಿಗೆ
ಪೆಟ್ಟಾಗಿದ್ದು ಬಲಕಿವಿಗೆ ಗಾಯವಾಗಿರುತ್ತದೆ. ಹಾಗೂ ಆಟೋ ಚಾಲಕ ವಿನೋದ ತಂ/ ಜಡೇಶ ಅಧಿಕಾರಿ ಸಾ. ಶರಣಬಸವೇಶ್ವರ
ನಗರ ಇವನಿಗೆ ಎಡಗಾಲ ಪಾದಕ್ಕೆ ರಕ್ತಗಾಯವಾಗಿರುತ್ತದೆ. ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು
ಇರುತ್ತದೆ.
0 comments:
Post a Comment