1] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 03/2017 ಕಲಂ : 279, 338, 304(ಎ) ಐ.ಪಿ.ಸಿ:.
ದಿನಾಂಕ: 24-01-2017 ರಂದು ರಾತ್ರಿ ಆರೋಪಿ ನಂ. 01 ನೇದವನು ಮುಂಡರಗಿ ತಾಲೂಕಿನ
ಹಳ್ಳಿಕೇರಿ ಗ್ರಾಮದ ಡಾಬಾದಲ್ಲಿ ತಾನು ಮತ್ತು ತನ್ನ ಅಣ್ಣನಾದ ರವಿ ಹಾಗೂ ಪಿರ್ಯಾದಿದಾರ, ಈರಣ್ಣ ನರಗುಂದ
ಇವರೆಲ್ಲರೂ ಊಟ ಮಾಡಿದ್ದು, ನಂತರ ರಾತ್ರಿ 11-20 ಗಂಟೆ ಸುಮಾರು ಆರೋಪಿ ನಂ. 01 ನೇದವನು ಮೋಟಾರ್
ಸೈಕಲ್ ನಂ. ಕೆಎ-37/ವಾಯ್-6198 ನೇದ್ದರ ಹಿಂದುಗಡೆ ಸೀಟಿನಲ್ಲಿ ತನ್ನ ಅಣ್ಣನಾದ ರವಿ ಹಾಗೂ ಈರಣ್ಣನಿಗೆ
ಹತ್ತಿಸಿಕೊಂಡು ಬನ್ನಿಕೊಪ್ಪ ಕಡೆಗೆ ಹೋರಟಿದ್ದು, ಪಿರ್ಯಾದಿದಾರನು ಡಾಬಾದಲ್ಲಿ ಊಟ ಮಾಡಿದ ಬಿಲ್ ಕೊಟ್ಟು
ಅವರ ಹಿಂದೆಯೇ ತನ್ನ ಮೋಟಾರ್ ಸೈಕಲ್ ಮೇಲೆ ಹೊರಟಿದ್ದು ಅದೆ. ಸದರಿ ಆರೋಪಿ ನಂ. 01 ನೇದವನು ಮೋಟಾರ್
ಸೈಕಲ್ ನಂ. ಕೆಎ-37/ವಾಯ್-6198 ನೇದ್ದನ್ನು ಅತಿಜೋರಾಗಿ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ
ಚಲಾಯಿಸಿಕೊಂಡು ಎನ್.ಹೆಚ್.-63, ಕೊಪ್ಪಳ-ಗದಗ ರಸ್ತೆಯ ಮೇಲೆ ಹೊರಟಾಗ ರಾತ್ರಿ 11-30 ಗಂಟೆ ಸುಮಾರು
ಬನ್ನಿಕೊಪ್ಪದ ಹೆಚ್.ಪಿ. ಪೆಟ್ರೋಲ್ ಬಂಕ್ ಇನ್ನೂ 01 ½ ಕಿ.ಮೀ. ಅಂತರದಲ್ಲಿ ಇರುವಾಗ ಆರೋಪಿ ನಂ.
02 ನೇದವನು ತಾನು ಚಲಾಯಿಸುತಿದ್ದ ಟಾಟಾ ಏಸ್ ವಾಹನ ಸಂ. ಕೆಎ-26/ಎ-6574 ನೇದ್ದನ್ನು ಕೊಪ್ಪಳ ಕಡೆಯಿಂದ
ಬನ್ನಿಕೊಪ್ಪ ಕಡೆಗೆ ಅತಿ ಜೋರಾಗಿ ಮತ್ತು ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು
ಬಂದಿದ್ದು, ಎರಡು ವಾಹನಗಳ ಚಾಲಕರು ಒಬ್ಬರಿಗೊಬ್ಬರು ಸೈಡ್ ಕೊಡದೇ ಪರಸ್ಪರ ಮುಖಾಮುಖಿಯಾಗಿ ಡಿಕ್ಕಿ
ಹೊಡೆಸಿ ಅಪಘಾತಪಡಿಸಿರುತ್ತಾರೆ. ಇದರಿಂದಾಗಿ ಆರೋಪಿ ನಂ. 01 ಮತ್ತು ಆತನ ಅಣ್ಣ ರವಿ ಇಬ್ಬರೂ ಭಾರಿ
ಸ್ವರೂಪದಲ್ಲಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಈರಣ್ಣ ನರಗುಂದ ಮತ್ತು ಆರೋಪಿ ನಂ. 02 ನೇದವನಿಗೆ
ಭಾರಿ ಸ್ವರೂಪದ ಗಾಯಗಳಾಗಿರುತ್ತವೆ. ಆರೋಪಿ ನಂ. 01 ನೇದವನು ಚಲಾಯಿಸುತಿದ್ದ ಮೋಟಾರ್ ಸೈಕಲ್ ನಂ.
ಕೆಎ-37/ವಾಯ್-6198 ನೇದ್ದರ ಪೆಟ್ರೋಲ್ ಟ್ಯಾಂಕ್ ಒಡೆದು ಬೆಂಕಿ ಹತ್ತಿಕೊಂಡಿದ್ದು ಇರುತ್ತದೆ. ಈ
ಅಪಘಾತ ಜರುಗಲು ಕಾರಣರಾದ ಎರಡು ವಾಹನಗಳ ಚಾಲಕರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ
ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೇನು.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 11/2017 ಕಲಂ : 341, 323, 353, 384,
504, 506 ಐ.ಪಿ.ಸಿ:.
ದಿನಾಂಕ : 24-01-2017 ರಂದು ರಾತ್ರಿ
9-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮಹಾಂತಗೌಡ ತಂದಿ ಶಿವನಗೌಡ ಪಾಟೀಲ್
ಪಿ.ಡಿ.ಓ ಗ್ರಾಮ ಪಂಚಾಯತ್ ಕಾರ್ಯಾಲಯ ಬೇವಿನಾಳ ತಾ- ಗಂಗಾವತಿ ಫಿರ್ಯಾದಿಯನ್ನು
ಕೊಟ್ಟಿದ್ದು, ದಿನಾಂಕ : 24-1-2017 ರಂದು ಸುಮಾರು 7-00 ಗಂಟೆಯ ಸುಮಾರಿಗೆ
ಗ್ರಾಮ ಪಂಚಾಯತ್ ಕಛೇರಿಯಲ್ಲಿ ನಾನು ಹಾಗೂ ಕಾರ್ಯದರ್ಶಿ ಹಾಗೂ ಎಲ್ಲಾ
ಸಿಬ್ಬಂದಿಗಳು ಜನೇವರಿ 26 ರ ಗಣರಾಜ್ಯೋತ್ಸವ ಹಾಗೂ ಪ್ರಧಾನ ಮಂತ್ರಿ ಅವಾಸ್
ಯೋಜನೆಯ ಫಲಾನುಭವಿಗಳ ಆಯ್ಕೆಯ ಸಂಭಂದ ಕಾರ್ಯನಿರ್ವಹಿಸುತ್ತಿದ್ದಾಗ್ಗೆ.
ಶ್ರೀ ವೀರಭದ್ರಗೌಡ ತಂದಿ ಅಮರೇಗೌಡ ಆದಾಪೂರ್ ಸಾ- ನಾಗನಕಲ್ಲ ಇವರು ಏಕಾಏಕಿ
ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ನುಗ್ಗಿ ಏನಲೇ ಪಿಡಿಓ ಇಷ್ಟೋತ್ತಿನಲ್ಲಿ ಏನು ಸೆಂಟಾ ಕೆಲಸ
ಮಾಡುತ್ತಿಯಲೇ ಸೂಳೆ ಮಕ್ಕಳೆ ಅಂತಾ ನನಗೆ ಅವಾಛ್ಯ ಶಬ್ದಗಳಿಂದ ಬೈದಾಡಿ
ನನ್ನ ಅನುಮತಿ ಇಲ್ಲದೆ ತನ್ನ ಮೊಬೈಲ್ ಪೋನದಲ್ಲಿ ಛಾಯಾಚಿತ್ರ ತೆಗೆದು ನೀವು ಈ
ಸಮಯದಲ್ಲಿ ಯಾಕೆ ಕಾರ್ಯ ನಿರ್ವಹಿಸುತ್ತಿರುವಿರಿ ಎಂದು ಜೀವ ಬೆದರಿಕೆ ಹಾಕಿ
ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಅಲ್ಲದೆ ನನ್ನ ನೂಕಾಡಿ ಕೈಯಿಂದ ಹೊಡೆ ಬಡಿ
ಮಾಡಿದ್ದು ಅಲ್ಲದೆ ನನ್ನ ಟೇಬಲ್ ಮೇಲಿದ್ದ ಕಾಗದ ಪತ್ರಗಳನ್ನು
ಚಲ್ಲಾಪಿಲ್ಲಿ ಮಾಡಿ ಏನಲೇ ಸೂಳೇ ಮಕ್ಕಳೆ ನೀವು ಈ ಹೊತ್ತಿನಲ್ಲಿ ಕೆಲಸ ಏನು ಸೆಂಟಾ ಮಾಡಕತ್ತಿರಿ
ಅಂತಾ ಬೈದಾಡುತ್ತಿರುವಾಗ್ಗೆ ನಾನು ಗಣರಾಜ್ಯೋತ್ಸವದ ತಯಾರಿ ಮಾಡುತ್ತೇವೆ ಅಂತಾ ಹೇಳಿದ್ದಕ್ಕೆ
ಸದರಿಯವನು ನನಗೆ ಎದರು ಉತ್ತರ ಕೊಡುತ್ತಿನಲೇ ಅಂತಾ ಬೈದಾಡಿ ಕೈಯಿಂದ ಹೊಡೆ ಬಡಿ
ಮಾಡುತ್ತಿರುವಾಗ್ಗೆ ನಮ್ಮ ಪಂಚಾಯತ್ ಕಾರ್ಯಾಲಯದ ಸಿಬ್ಬಂದಿಗಳಾದ ಜಮೀಲ್ ಅಹ್ಮದ
ಕಾರ್ಯದರ್ಶಿ, ಯಮನೂರಪ್ಪ ತಂದಿ ಸೋಮಪ್ಪ, ಯಕ್ಬಾಲಸಾಬ ತಂದಿ ಇಮಾಮಸಾಬ, ಹನಮಂತಪ್ಪ
ತಂದಿ ಬಸಪ್ಪ, ಹಾಗೂ ದುರುಗಣ್ಣ ತಂದಿ ಭೀಮಣ್ಣ ಹಾಗೂ ಇತರರು ನೋಡಿ ಬಿಡಿಸಿದರು ಅವನು
ಅಷ್ಟಕ್ಕೆ ಸುಮ್ಮನೆ ಹೊಗದೆ ನೀವು ಗ್ರಾಮ ಪಂಚಾಯತಿಯಲ್ಲಿ ಅವ್ಯವಹಾರ
ಮಾಡಿದ್ದಿಯಾ, ನಿನ್ನನ್ನು ಒಂದು ಕೈ ನೋಡಿಕೊಳ್ಳುತ್ತೇನೆ. ನಾನು ಆರ್.ಟಿ.ಐ.
ಕಾರ್ಯಕರ್ತನಾಗಿರುತ್ತೇನೆ ಅಂತಾ ಬ್ಲಾಕ್ ಮೇಲ್ ಮಾಡಿ ನನಗೆ ಹಣ ಕೊಡು ಅಂತಾ
ಒತ್ತಾಯಿಸುವದು ಮತ್ತು ಪಿಡಿಸುವದು ಮಾಡುತ್ತಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ
ಗೊಂಡಿರುತ್ತಾರೆ.
0 comments:
Post a Comment